ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

June 17, 2008 - 12:14am — manjunath s reddy
ದಶಾವತಾರಂ

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

ನಾಡಿನ ಹೆಮ್ಮೆಯ? ಪತ್ರಿಕೆ ಎಂದು ಹೇಳಿಕೊಳ್ಳುವ ಪತ್ರಿಕೆಯ ಸಿನಿಮಾ ವಿಮರ್ಶೆಯಲ್ಲಿ ದಶಾವತಾರಂ ನ ವಿಮರ್ಶೆಯಲ್ಲಿ 'ಆ' ವಿಮರ್ಶಕನ ವಿಮರ್ಶೆ ಕುರಿತು 'ಈ' ವಿಮರ್ಶೆ.

ಒಬ್ಬ ಪ್ರತಿಬಾನ್ವಿತ ನಟ, ಕಥೆಗಾರ, ನಿರ್ದೇಶಕ, ತಂತ್ರಜ್ನ ಸಿನಿಮಾವನ್ನು ವಿಮರ್ಶಿಸುವಾಗ, ವಿಮರ್ಶಕನಿಗಿರಬೇಕಾದ ಸೂಕ್ಷ್ಮ ಗ್ರಹಿಕೆ ಇಲ್ಲವಾದಾಗ ಮಾತ್ರ ಪ್ರತಿಭೆಗೆ 'ಕ್ಲಾಸ್'ಎಂಬ ಗ್ರೇಡ್ ಕೊಡುವ 'ವಿಮರ್ಶೆ'..?ಗಳನ್ನು ನಾಡಿನ
'ಹೆಮ್ಮೆ'..?ಯ ಪತ್ರಿಕೆಗಳಲ್ಲಿ ಕಾಣಬಹುದೇನೊ.

ಬಹುಶ: ಈ 'ಥರ್ಡ್' ಕ್ಲಾಸಿಗೆ ಸೇರಿದ ಜನರಿಂದ ಮಾತ್ರ ಯಾವುದೇ ಸಿನಿಮಾವನ್ನು ನೂರು ದಿನಗಳು ಪೂರೈಸುವಂತೆ ಮಾಡುವ ಸಾಮರ್ಥ್ಯ ಇರುವುದು ಎನ್ನುವ ವಿಷಯವನ್ನು ಈ 'ಕ್ಲಾಸ್' ವಿಮರ್ಶಕರು ಮರೆತಂತಿದೆ.
ಅದ್ರಲ್ಲೂ ಕಳೆದೆರೆಡು ಸಿನಿಮಾಗಳಿಂದ ಈ ಥರ್ಡ್ 'ಕ್ಲಾಸ್' ಅಬಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದ್ದ ಕಮಲ್ ಈ ಬಾರಿ ಅಲ್ಲೂ ಕಮಾಲ್ ಮಾಡಿ ಗೆದ್ದಿರುವುದು ಸಂತೋಷದ ವಿಷಯ.

ಸಿನಿಮಾ ಎಂಬುದೇ ಒಂದು ರೀತಿಯ 'ಮೇಕ್'ಅಪ್. ಅದರಲ್ಲೂ ಗಿಮಿಕ್ ನಂತಹ ಸೂಕ್ಷ್ಮಗಳನ್ನು ಹುಡುಕುವುದು ಈ ನಮ್ಮ 'ಹೆಮ್ಮೆ'ಯ ವಿಮರ್ಶಕ?ರಿಂದ ಮಾತ್ರ ಸಾದ್ಯವೇನೊ.ತಾಂತ್ರಿಕ ಹಾಗು ಖರ್ಚು ವೆಚ್ಚಗಳಿಂದ "ಅದ್ಬುತ" ಚಿತ್ರವನ್ನು ನಿರೀಕ್ಷಿಸುವ ವಿಮರ್ಶಕರಿಂದ ಒಂದು ನಿರ್ಮಿತ ಸಿನಿಮಾದಲ್ಲಿ 'ರೂಪು' ಪಡೆಯುವ 'ಮೂಲದ್ರವ್ಯ'ದ ಗ್ರಹಿಕೆ ನಿರೀಕ್ಷಿಸುವುದು ಯಾವಾಗ? ಅಕ್ಷಿಪಟಲದ ಮೇಲೆ ಮೂಡುವ ಚಿತ್ರವನ್ನು ತನ್ನ ಇಂದ್ರಿಯಾನುಬವಗಳಿಗೆ ಕೊಡುವ ಪ್ರಚೋದನೆಗಳಿಂದ ವಂಚಿತರನ್ನಾಗಿ ಮಾಡಿ ಅಕ್ಷಿಪಟಲದ ಮೂಡುವ ಪ್ರತಿಬಿಂಬವನ್ನು ಕುರಿತು ಮಾತಾಡುವ ಬರೆಯುವ ಈ ವಿಮರ್ಶಕರಿಗೆ, ಸಿನಿಮಾ ಎಂಬ ತಾಂತ್ರಿಕ ದ್ರುಶ್ಯ ಭಾಷೆಯು ಅವರಲ್ಲಿರುವ ಸಿದ್ದಮಾನದಂಡವೆಂಬ ಕನ್ನಡಕ ಕಳಚಿ ಗ್ರಹಿಸಿದಾಗ ಮಾತ್ರ ಸಿನಿಮಾದಲ್ಲಿರುವ ಸೂಕ್ಷ್ಮ ವಿಷಯಗಳು ಅನುಭವಕ್ಕೆ ಬರುತ್ತವೆ.

ಉದಾ;ಈ ವಿಮರ್ಶಕರು ಕಥೆ ವಿವರಿಸುವ(ಬಹುಶ: ಅದನ್ನೆ ಅವರು ವಿಮರ್ಶೆ ಎಂದು ತಿಳಿದಿದ್ದಾರೇನೊ) ಸಮಯದಲ್ಲಿ ಒಂದು ವಾಕ್ಯ ಹೇಳುತ್ತಾರೆ"ಸಣ್ಣದೊಂದು ಚಾಕೊಲೇಟಿನಂತಿರುವ 'ಆ' ಜೈವಿಕ ಅಸ್ತ್ರ ಕೊರಿಯರ್ ನಿಂದ ವಿಮಾನ ಏರುತ್ತದೆ".ಕಥಾಂಶವೇನೊ ಇಷ್ಟೇ ಇರಬಹುದು(ಅವರ ದ್ರುಷ್ಟಿಯಲ್ಲಿ) ಆದ್ರೆ ಜೈವಿಕ ಅಸ್ತ್ರದ ಬಗ್ಗೆ ಇನ್ನೂ ನಮ್ಮ ಬಹುತೇಕ ಭಾರತದಲ್ಲಿನ ಜನರಿಗೆ "ಅಸ್ತ್ರ" ಹಾಗು ಅದರ "ಪರಿಣಾಮ"ಗಳ ಕುರಿತು ಅರಿವಿಲ್ಲದ ಸಮಯದಲ್ಲಿ, 'ಸೂಕ್ಷ್ಮವಾಗಿ' ಹಾಗು 'ಸರಳವಾಗಿ' ವಿವರಿಸುವಲ್ಲಿ ಒಬ್ಬ ಜವಾಬ್ದಾರಿಯುತ ಕ್ಸಥೆಗಾರ ಹಾಗು ಕಲಾವಿದನಾಗಿ ಕಮಲ್ ಗೆದ್ದಿರುವುದನ್ನು ಥಿಯೇಟರ್ ನಿಂದ ಹೊರಬಂದ ಪ್ರೇಕ್ಷಕ ಮತ್ತೊಬ್ಬ ಪ್ರೇಕ್ಷಕನೊಂದಿಗೆ ಚರ್ಚಿಸುವಾಗ ಕಾಣಬಹುದು.

ಆದ್ರೆ ನಮ್ಮ'ಈ' ವಿಮರ್ಶಕರಿಗೆ ಈ ಸೂಕ್ಷ್ಮ ವಿಷಯ ಬರೀ "ಆ" ಅಷ್ಟೇ.

ಮತ್ತೊಂದು ಉದಾ: ಜೈವಿಕ ಅಸ್ತ್ರ ಕದಿಯುವ ಕಮಲ್ , ಅವನನ್ನು ಹಿಡಿಯಲು ಸಿ.ಐ.ಎ ಏಜಂಟ್ ಬೆನ್ನು ಬೀಳುತ್ತಾನೆ.ಅಲ್ಲಿಂದ ಆRಅಂಭವಾಗುತ್ತದೆ ಕಳ್ಳ ಪೋಲೀಸ್ ಆಟ.ಕಥೆಯೇನೊ ಇಷ್ಟೇ (?)ಆದರೆ ಇಲ್ಲಿ ವಿಭಿನ್ನ ಪಾತ್ರಗಳ ಮೂಲಕ ಭಾರತದ (ಕೆಲವು) ಅಧಿಕಾರಿಗಳಲ್ಲಿರುವ ಅಸಡ್ಡೆ, ಧರ್ಮ, ಭಾಷೆ ಎಂಬ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಅತ್ಯಂತ ಜಾಣ್ಮೆಯಿಂದ"ಯಾರಿಗು ನೋವಾಗದಂತೆ"ಹಾಸ್ಯಲೇಪನದೊಂದಿಗೆ ತೀಕ್ಷ್ಣವಾಗಿ ಹೇಳುವುದರ ಮೂಲಕ ತಾನೊಬ್ಬ ಜವಾಬ್ದಾರಿಯುತ ಕಥೆಗಾರ ಎಂದು ನಿರೂಪಿಸುತ್ತಾನೆ.

ಗ್ರಾಫಿಕ್ಸ್ ಗುಂಗು ಹಿಡಿಸಲ್ಲ ಎಂದು ಹೇಳುತ್ತಾ ಸುನಾಮಿಯ ಗ್ರಾಫಿಕ್ಸ್ ನ ದ್ರುಶ್ಯ ವೈಭವಕ್ಕೆ ಮಾತ್ರ ಸೀಮಿತವಾದ ಇವರ ದ್ರುಶ್ಯ ಗ್ರಹಿಕೆ ಸೀಮಿತವಾದ ದ್ರುಶ್ಯಗಳನ್ನು ಮಾತ್ರ 'ಹೊಗಳುತ್ತಾರೆ'?.ಆ ದ್ರುಷ್ಟಿಕೋನದಿಂದ ನೋಡುವುದಾದರೆ ಬಹುತೇಕ ಸಿನಿಮಾವು ಗ್ರಾಫಿಕ್ಸ್ ನಿಂದಲೇ ನಿರ್ಮಾಣವಾದರೂ ಅದು ಅರಿವಿಗೆ ಬರುವುದಿಲ್ಲವೆಂದರೆ ಆ ದ್ರುಶ್ಯಗಳು ಅಷ್ಟು ಉತ್ತಮವಾಗಿ ಮೂಡಿಬಂದಿದೆ ಎಂದೇ ಅರ್ಥವಲ್ಲವೇ.

ಸಿನಿಮಾ ಪರದೆಯ ಮೇಲೆ ನಡೆಯುವ ವಿಚಾರಗಳನ್ನು ಗ್ರಹಿಸದೆ,
' ಮೇಕಪ್ ನಿಂದಲೇ ಗಿಮಿಕ್ ಮಾಡಲು ಹೋಗಿದ್ದಾರೆ. ಈ ರೀತಿ ಮಾಡುವುದಿದ್ದರೆ ಹತ್ತೇನು?ಸಿನಿಮಾದ ಎಲ್ಲಾ ಪಾತ್ರಗಳನ್ನು ಒಬ್ಬನೇ ನಿಭಾಯಿಸಿ ನೀರು ಕುಡಿಯಬಹುದು.ಅದಕ್ಕೆ ಕಮಲ್ ಹಾಸನ್ ಅವರೇ ಬೇಕಿರಲಿಲ್ಲ. ದಾಖಲೆಗಾಗಿ ಇಂಥದ್ದನ್ನು ಮಾಡಿದರೆ ಹೇಗಿರುತ್ತದೆಯೊ ಹಾಗಿದೆ ಈ ಅವತಾರ.'

ಎಂದು ಬರೆಯುವುದರ ಮೂಲಕ, ಕಮಲ್ ರ ಪ್ರತಿಭೆಯನ್ನು ಗುರುತಿಸಲಾಗದ ತಾವು ಎಂಥ ದಡ್ಡರೆಂದು ತಾವೇ ತೋರಿಸಿಕೊಂಡಿದ್ದಾರೆ.

ದಾಖಲೆಯ ವಿಷಯಕ್ಕೆ ಬಂದರೆ ಅವರ ಹೆಸರಲ್ಲಿರುವ ದಾಖಲೆಗಳನ್ನು ಮುರಿಯಲು ಇನ್ನೊಬ್ಬ ಕಮಲ್ ಹಾಸನ್ ಹುಟ್ಟಿಬರಬೇಕೆ ಹೊರತು ಈಗಿನ ತಲೆಮಾರಿಗೆಲ್ಲಾ ಅದು ಕನಸಿನ ಮಾತೆ ಸರಿ.
ನಲವತ್ತು ಚಿಲ್ಲರೆ ವಯಸ್ಸಿನಲ್ಲಿ ಬರೀ ನಟನೆಯನ್ನು ಮಾತ್ರ ಮಾಡುವ ಶಾರುಖ್ ನನ್ನು ಹೊಗಳುವ ಮಂದಿಗೆ, ಐವತ್ತೈದರ ಗಡಿ ದಾಟಿದ್ದರೂ ಇನ್ನೂ ಚಿರಯುವಕನಂತೆ ನಟನೆ,ಕಥೆ,ನಿರ್ದೇಶನ ಎಂದು ಪ್ರಯೋಗಾತ್ಮಕ ಸ್ಪರ್ಧೆಗೆ ಇಳಿದಿರುವ ಕಮಲ್ ಅರ್ಥವಾಗುವುದಾದರು ಹೇಗೆ. ಈ ವಿಮರ್ಶಕ ಬರೆದಂತೆ ಒಬ್ಬ ಚಿತ್ರಕಥೆಗಾರನಿಗೆ ಎನು ಹೇಳಬೇಕು ಎನ್ನುವುದು ಗೊತ್ತಾಗದಾಗ ಈ ರೀತಿಯಾಗುತ್ತದೆ , ಎನ್ನುವುದು ಸರಿಯಲ್ಲ. ಯಾಕೆಂದರೆ ಕಮಲ್ ಗೆ ಗೊತ್ತಿದೆ ತಾನೇನು ಹೇಳುತ್ತಿದ್ದೇನೆಂದು. ಅದು ಇವರಿಗೆ ಅರ್ಥವಾದರೆ ಸಾಕು.

ತನ್ನ ನಟನಾ ವೃತ್ತಿಯ ಅನುಭವದಿಂದ ಮಾತ್ರ ಕಮಲ್ ಗೆ ಧರ್ಮದ ವಿಷಯದಲ್ಲಿ ಎಲ್ಲೂ ಪ್ರಚೋದನೆಗೆ ಒಳಗಾಗದಂತೆ 12ನೆಯ ಶತಮಾನದಲ್ಲಿ ನಡೆದಿರಬಹುದಾದ ಶೈವರಿಗೂ ಮತ್ತು ವೈಷ್ಣವರಿಗೂ ನಡೆದಂತಹ ಗಲಭೆ(?)ಗಳನ್ನು ಕಲೆಯ ಅಭಿವ್ಯಕ್ತಿಯೊಳಗೆ ತರಲು ಸಾದ್ಯವಾಗಿರುವುದು.

ಒಂದು ವಿಶಿಷ್ಠ ಕಥೆಯ ನಿರೂಪಣೆಯಲ್ಲಿ ನೋಡುವ ಪ್ರೇಕ್ಷಕನಿಗೆ ಕಥೆಯ ಪಾತ್ರದಲ್ಲಿ ಕಾಣುವ ವ್ಯಕ್ತಿ ವಾಸ್ತವವಾಗಿ ನಟಿಸುತ್ತಿದ್ದಾನೆ ಎಂಬ ಅನುಭವ ನೀಡುತ್ತಲೇ ಅದು ಕಥೆಯ ಪಾತ್ರವೂ ಹೌದು ಎಂದು ನಂಬಿಸುವ ಕಮಲ್ ದಶಾವತಾರಂ ರಿಯಲ್ ಕಥೆಯಲ್ಲ ನಿಜ, ಆದ್ರೆ ನಿಜವಾದ ಸಿನಿಮಾ ಪರಿಭಾಷೆಯ "ಮ್ಯಾಜಿಕ್ ರಿಯಾಲಿಸಂ" ಅಂಶಗಳನ್ನು ಹೊಂದಿರುವ ಅದ್ಭುತ ಸಿನಿಮಾ ಎಂದು ಸಾದಿಸಿ ತೋರಿಸಿದ್ದಾನೆ .

ನಿಜವಾಗಿಯೂ " ಹ್ಯಾಟ್ಸಪ್ ಟು ಹಿಮ್".

  • ಸಿನೆಮಾ ವಿಮರ್ಶೆ
~.~
  • Login or register to post comments
  • 603 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 17, 2008 - 12:03pm — mahesha

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

mahesha's picture

ಇದು ಮೊದಲ ದಿನವೇ ಮಂಡ್ಯದಲ್ಲೂ ಬಿಡುಗಡೆ ಆಗಿದೆ...!!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 12:16pm — vikashegde

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

vikashegde's picture

ಮಂಡ್ಯದಲ್ಲಿ ಮೊದಲ ದಿನವೇ 'ಸ್ಪೈಡರ್ ಮನ್' ಕೂಡ ಬಿಡುಗಡೆ ಆಗಿತ್ತು ಬಿಡ್ರಿ Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 12:34pm — gururajkodkani

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

gururajkodkani's picture

ಗುಱುಱಾಜ
www.kannadaguru.blogspot.com

ನಿಮ್ಮ ಮಾತು ನಿಜ ಮ೦ಜು , ಈ ವಿಮರ್ಶಕ ಪುಣ್ಯಾತ್ಮ "ಪ್ರೀತಿ ಏಕೆ ಭೂಮಿ ಮೇಲಿದೆ " ಚಿತ್ರದ ಬಗ್ಗೆ ಹೊಗಳಿ ಬರೆದುದನ್ನು ನೋಡಿ,ಚಿತ್ರ ನೋಡಿ ನಾನು ಹುಚ್ಚಾಸ್ಪತ್ರೆ ಸೇರುವುದೊ೦ದೇ ಬಾಕಿ.ಅಲ್ಲದೇ "ಗಾಳಿಪಟ"ಚಿತ್ರದ ವಿಮರ್ಶೆಯೂ ತು೦ಬಾ ಕೆಟ್ಟದಾಗಿ ಬರೆದಿದ್ದರು. ಈ ವಿಮರ್ಶಕ ನಿಜವಾಗಿಯೂ ಚಿತ್ರಗಳನ್ನು ನೋಡಿರುತ್ತಾನಾ ಅಥವಾ ಅವರಿವರ ಮಾತು ಕೇಳಿ ಬರೆಯುತ್ತಾನಾ ಎ೦ದು ಸ೦ಶಯ ಬರುವಷ್ಟರ ಮಟ್ಟಿಗೆ ಬರೆಯುತ್ತಾನಲ್ಲವೇ..?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 4:18pm — madhava_hs

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

madhava_hs's picture

ಕ್ಲಾಸು, ಪಾಸು, ನಪಾಸು ಎಲ್ಲ ಓಕೆ.

ಆದ್ರೆ ಕನ್ನಡ ಪತ್ರಿಕೇಲಿ ತಮಿಳು ಸಿನಿಮಾ ವಿಮರ್ಶೆ ಯಾಕೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 4:19pm — madhava_hs

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

madhava_hs's picture

ಕ್ಲಾಸು, ಮಾಸು, ಪಾಸು, ನಪಾಸು ಎಲ್ಲ ಓಕೆ.

ಆದ್ರೆ ಕನ್ನಡ ಪತ್ರಿಕೇಲಿ ತಮಿಳು ಸಿನಿಮಾ ವಿಮರ್ಶೆ ಯಾಕೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 4:23pm — vikashegde

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

vikashegde's picture

ಕನ್ನಡಿಗ್ರು ಇಸ್ವಮಾನವ್ರು.

ನಮ್ದೊಂದನ್ನು ಬಿಟ್ಟು ಉಳ್ದಿದ್ದೆಲ್ಲಾ ನೋಡ್ತಾರೆ, ಮೆಚ್ತಾರೆ, ಮಾತಾಡ್ತಾರೆ.
ಕೇಳಿದರೆ ಕಲೆಗೆ, ಮನರಂಜನೆಗೆ ಭಾಷೆಯ ಹಂಗಿರಬಾರದು ಅಂತಾರೆ Smiling

ಅದ್ರಲ್ಲೂ ಕಮಲಾಸನ್ನು ಅಂದ್ಮೇಲೆ... ಇರ್ಲಿ ಬಿಡ್ರಿ... ಮಾತಾಡೋ ವಿಸ್ಯನೇ ಇದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 19, 2008 - 5:11pm — ಸಂಗನಗೌಡ

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

ಸಂಗನಗೌಡ's picture

ಡಬ್ ಆಗಿದ್ದರೂ ಚಿಂತೆಯಿಲ್ಲ, ಸಿನಿಮಾ ಕನ್ನಡದಲ್ಲಿದ್ದಿದ್ದರೆ.. ನೋಡೋಕೆ, ತಿಳಿದುಕೊಳ್ಳೋಕೆ ಚೆನ್ನಾಗಿರೋದು... Sad

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 9:45am — manjunath s reddy

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

manjunath s reddy's picture

ನಿಜ ನೀವು ಹೇಳಿದ ಹಾಗೆ 'ಇಲ್ಲಿ'?ಯವರಿಗೆ ಇಲ್ಲಿಯದನ್ನು ಬಿಟ್ಟು ಬೇರೆ ಎಲ್ಲವು ಇಷ್ಟವಾಗುತ್ತದೆ.ಆದರೆ ಆ ರೀತಿಯ ಸನ್ನಿವೇಶ ಸ್ರುಷ್ಟಿಸಿದವರು ಇಲ್ಲಿಯವರೆ ಅಲ್ಲವೆ....!ಗೆದ್ದೆತ್ತಿನ ಬಾಲ ಹಿಡಿದು ಪ್ರೇಕ್ಷಕನನ್ನು ಥಿಯೇಟರ್ ನಿಂದ ಓಡಿಸ್ತಾ ಇರೋದು ಯಾರು..... 'ಇಲ್ಲಿ'?ಯವರೆ ಅಲ್ಲವೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 8:57am — manjunath s reddy

ಉ: ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

manjunath s reddy's picture

ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....
  • ನಿರ್ಮುಕ್ತ.ಕಾಂ: ಮುಕ್ತ ಚಿಂತನೆಯ ತಾಣ
  • ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ಇಬ್ಬರು ’ಹೀರೊ’ ಒಂದು ಸಿನಿಮಾ, ”ಸೈಕೊ”
Syndicate content

ಲೇಖಕರು

manjunath s reddy's picture

ಪೂರ್ಣ ಹೆಸರು
ಮಂಜುನಾಥ್ ಸೋ ರೆಡ್ಡಿ

ಪರಿಚಯ

ದ್ರುಶ್ಯ ಕಲಾ ವೀಕ್ಷಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 131 ಅತಿಥಿಗಳು ಆನ್ಲೈನ್ ಇರುವರು.


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator