ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

June 12, 2008 - 10:08pm — hpn

ಬೆಳಗಾಗಿ ನ್ಯೂಸ್ ಓದೋವಾಗ ಒಂದು ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆಯ ವೆಬ್ಸೈಟಿನ ಸುದ್ದಿಯೊಂದು ಹೀಗಿತ್ತು:

"India is emerging as a destination for high value R&D alongside the lower value manufacturing and clinical trial work for western pharmaceutical giants, says a study by US based academic Vivek Wadhwa."

"ಕ್ಲಿನಿಕಲ್ ಟ್ರಯಲ್" ನಡೆಸಲು ಭಾರತ ದೇಶ ನೆಲೆಯಾಗಿರುವುದು "emerging" ಅಥವ "high value" ಅನ್ನೋ ಪದಗಳ ಜೊತೆ ಮೂಡುವುದೇ ಸರಿಯಿಲ್ಲ. ಒಂದೊಮ್ಮೆ ಮೂಡಿದರೆ 'ಎಮರ್ಜಿಂಗ್' ಮತ್ತು 'ಹೈ ವ್ಯಾಲ್ಯೂ' ಎನ್ನುವುದು ಯಾರಿಗೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ! ಭಾರತ ಹೀಗೊಂದು "ಕ್ಲಿನಿಕಲ್ ಟ್ರಯಲ್" ಅಥವ ಹೊಂದಿಕೊಂಡಂತೆ "R&D" ನೆಲೆಯಾಗಿರುವುದು ಇಲ್ಲಿ ದುಡ್ಡು ಕೊಟ್ಟು ಪ್ರಯೋಗಗಳಿಗೆ ಬೇಕಾದುದನ್ನೆಲ್ಲವನ್ನೂ ಹೆಚ್ಚಿನ ತಲೆನೋವಿಲ್ಲದೆ ರೆಡಿಮಾಡಬಹುದಾಗಿರುವುದರಿಂದ ಅಷ್ಟೆ. ಪ್ರಯೋಗಕ್ಕೆ ಒಪ್ಪುವ ಬಡ ಪೇಶೆಂಟುಗಳು ಸಿಗುತ್ತಾರೆ. ಏನು ನಡೆಯುತ್ತಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳದ ತಲೆಕೆಡಿಸಿಕೊಳ್ಳಬೇಕಾದವರು ಸಿಗುತ್ತಾರೆ. ತಮ್ಮ ಸ್ವಾರ್ಥಕ್ಕೆ ಯಾವುದೋ ಹೊಸ ಡ್ರಗ್ಗುಗಳನ್ನ ಏನೂ ಹಿಂಜರಿಕೆಯಿಲ್ಲದೇ ಬರೆದುಕೊಡುವ ಡಾಕ್ಟರರು ಸಿಗುತ್ತಾರೆ. ಡ್ರಗ್ ಕಂಪೆನಿಗಳ ಲಾಬಿ ಅಲ್ಲಿಲ್ಲಿ ಹೊರಬಂದ ದನಿಯನ್ನು ಹತ್ತಿಕ್ಕುವಷ್ಟು ಕ್ಷಮತೆಯುಳ್ಳದ್ದಾಗಿದೆ. ಹೀಗಿರುವಾಗ ಭಾರತದಲ್ಲಿ ಇವೆಲ್ಲ ನಡೆಯುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ.

ಪ್ರಯೋಗಗಳು ನಡೆವ ದೇಶದಲ್ಲೇ ತಮ್ಮ ರಿಸರ್ಚ್ ಕೂಡ ನಡೆಯುವುದರಿಂದ, ಡ್ರಗ್ ಮಾರ್ಕೆಟ್ಟಿನ ಎಡವಟ್ಟು ಸ್ಥಿತಿಯಲ್ಲಿರುವ ಭಾರತಕ್ಕೆ ಇನ್ನೂ ಎಡವಟ್ಟಾಗಿರುವ ಇದರ ಎಕಾನಮಿಗೆ ಆಶಾಕಿರಣವೆಂಬಂತೆ ರಿಸರ್ಚ್ ಸೆಂಟರುಗಳು ಸುಮಾರು ತಲೆ ಎತ್ತುತ್ತಿರುವುದು. ಇಲ್ಲಿ ಇನ್ನೆಲ್ಲೂ ಸಿಗದ ಬುದ್ಧಿವಂತರು ಸಿಗುತ್ತಾರೆ ಎಂಬ ಕಾರಣದಿಂದ ರಿಸರ್ಚ್ ಸೆಂಟರುಗಳು ಬರುತ್ತಿದೆ ಎಂದು ಮೀಡಿಯದವರು ಪ್ರೊಜೆಕ್ಟ್ ಮಾಡಿದರೆ ಅದು ನಂಬಲಸಾಧ್ಯ.

ಅದು ಹೋಗಲಿ, ನಾವು ಯಾವ ಭಾರತೀಯ ಕಂಪೆನಿಗಳ ಬಗ್ಗೆ ಹೆಮ್ಮೆ ಪಡುತ್ತಿದ್ದೇವೆ ಎಂದು ನೋಡಲು ಹೋದರೆ ಪ್ರತಿಯೊಂದೂ ಮಲ್ಟಿನ್ಯಾಶನಲ್. ಮೂಲ ಯಾವ ದೇಶದ್ದಾದರೇನು, ಕಂಪೆನಿಯೊಂದಕ್ಕೆ ದೇಶೀಯ ನಂಟು ಅದರ ಬೆಳವಣಿಗೆಯೊಂದಿಗೇ ನಶಿಸುತ್ತಹೋಗುತ್ತಿರುತ್ತದೆ. ನಿನ್ನೆ ತಾನೆ ಭಾರತದ ಅತಿ ದೊಡ್ಡ ಡ್ರಗ್ ಕಂಪೆನಿಗಳಲ್ಲೊಂದಾದ "Ranbaxy" ಜಪಾನಿನ 'Daiichi' ಕಂಪೆನಿಗೆ ಹೆಚ್ಚು ಕಡಿಮೆ ಮಾರಾಟವೇ ಆಗಿಹೋಗಿದೆ. ಇಷ್ಟು ದಿನ ಅಪ್ಪಿ ತಪ್ಪಿ 'ನಮ್ಮ ದೇಶದ ಕಂಪೆನಿ' ಎಂದುಕೊಂಡು ಬೆಂಬಲ ನೀಡಿದವರಿಗೆ ಪಂಗನಾಮ.

ಮೇಲಿನ ಐ ಬಿ ಎನ್ ಲೈ ವ್ ಲೇಖನದಲ್ಲೇ ಇದ್ದ ಈ ಪ್ಯಾರಾ ನೋಡಿ:

But as Indian companies have the most experience in selling generic drugs that meet FDA standards, India is playing a bigger role for western companies in drug research and development and could soon emerge as a major powerhouse in its own right.

ಇದರಷ್ಟು ಗಾಬರಿ ಹುಟ್ಟಿಸುವಷ್ಟು ಸುದ್ದಿ ಬೇರೊಂದಿಲ್ಲ. ಆದರೂ ಹೆಮ್ಮೆ ಮೂಡಿಸುವಂತೆ ಬರೆದಿರುವ ಇದರ ಹಿಂದಿನ ಸತ್ಯ, ನಿಜಸ್ಥಿತಿ ಜನರಿಗೆ ತಿಳಿದರಷ್ಟೇ ಉಳಿವು.

(ಇದೇ ವಿಷಯಕ್ಕೆ ಅಂದರೆ ಮಲ್ಟಿನ್ಯಾಶನ್ನುಗಳ ದೊಂಬರಾಟಕ್ಕೆ ಸಂಬಂಧಪಟ್ಟಂತೆ ಡಾ|| ಎಸ್ ಕಕ್ಕಿಲಾಯ ಬರೆದಿರುವ ಒಂದು ಬಹಳ ಉತ್ತಮವಾದ ಲೇಖನ ಇಲ್ಲಿದೆ ಓದಿ)

  • ಪ್ರಚಲಿತ
~.~
  • Login or register to post comments
  • 672 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2008 - 11:23pm — shylaswamy

ಉ: ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

shylaswamy's picture

ಶ್ರೀಯುತ hpn ಅವರೆ,
ನಿಮ್ಮ ಈ ಲೇಖನ ಓದಿ ಆತಂಕ ಹೆಚ್ಚುತ್ತಿದೆ ಮಾನವ ಇನ್ಸುಲಿನ್ ಬಗ್ಗೆಯೂ ಓದಿದಾಗ tension ಆಯಿತು. ಆಯಸ್ಸೊಂದಿದ್ದ ಹೊರತು ಈ ಔಶದಿಗಳನ್ನುಪಯೋಗಿಸಿ ಬದುಕುವುದು ಭಾರತೀಯರ ಪಾಲಿಗೆ ಕಷ್ಟಸಾಧ್ಯವೇ ಆಗಿದೆ. ದೇವರೇ ನಮ್ಮ ಜನರನ್ನು ಕಾಪಾಡಬೇಕು. ಇಂತಹ ವಿಚಾರಗಳನ್ನು ಬೆಳಕಿಗೆ ತರುವಲ್ಲಿ ತಮ್ಮ ಪ್ರಯತ್ನ ನಿಜಕ್ಕೂ ಉಪಯೋಗಕಾರಿ. ಇದಕ್ಕಾಗಿ ತಮಗೆ ಧನ್ಯವಾದಗಳು.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 8:27am — ahankari

ಉ: ನಿಜಸ್ಥಿತಿ ಮರೆಮಾಚುವ ಹೆಮ್ಮೆಯ ಸಂಗತಿ

ahankari's picture

ನನ್ನದೇ ಆದ ಪ್ರಸಂಗ ನೆನಪು ಬರ್ತಾ ಇದೆ , ಅಗಿನ್ನು ನಾನು ಕೆಲಸ ಸೇರಿದ್ದೆ , Induction ಪ್ರೊಗ್ರಾಂ ಅಲ್ಲಿ ಮ್ಯಾನೇಜರ್ ಕೇಳಿದ್ದ , "What do you think , why so many MNC's want to have an office in India" , ನನ್ನ ಸರದಿ ಬಂದಾಗ ನಾನು ಹೇಳಿದ್ದು " just because of reduced cost of work ". ಪಾಪ ಒಪ್ಕೊಳ್ಳೋದು ಕಷ್ಟ ಆಗಿತ್ತು ಅವ್ರಿಗೆ. ನಮ್ಮ IQ, knowledge ಗಳ ಜೊತೆ ಇದೂ ಒಂದು ರೀಸನ್ ಅಂಥ ಬುರುಡೇ ಬಿಟ್ಟಿದ್ರು .........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಲೇಜು ಹುಡುಗರ ಕವನಗಳು
  • ಭಾರತದ ಬಡವರ ಮೇಲೆ ಹೊಸ ಔಷಧಗಳ ಪ್ರಯೋಗ
  • ಕನ್ನಡಕ್ಕಿಂದು ಬೇಕಾಗಿರುವುದು...
  • ಪ್ರಜಾವಾಣಿಯಲ್ಲಿ ನಾ ಕಸ್ತೂರಿಯವರ ಬಗ್ಗೆ ಲೇಖನ
  • ರಶೀಧರ 'ಬ್ಲಾಗಂಬರಿ'
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 241 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator