ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ವ್ಯಾಘ್ರನ ತ್ಯಾಗ

June 11, 2008 - 5:10pm — shylaswamy

ವ್ಯಾಘ್ರನ ತ್ಯಾಗ
ಈಗ್ಗೆ ೧೦ ಅಥವಾ ೧೨ ವರ್ಷಗಳ ಕೆಳಗೆ ನನ್ನ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಕನ್ನಡ ಮಾಸ್ಟರ್ ಒಬ್ಬರು ರಾಗವಾಗಿ ಪುಣ್ಯಕೋಟಿಯ ಕಥೆಯನ್ನು ಹಾಡಿಸುತ್ತಿದ್ದರು. ಅದರಲ್ಲಿ ಬಂದ ಸಾಲುಗಳು,
“ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು.”
ಈ ಸಾಲುಗಳು ನನ್ನ ಮನವ ಕಲಕಿತು. ಹೀಗೆ ಪುಣ್ಯಕೋಟಿಯನ್ನುಳಿಸಿ ತನ್ನ ಪ್ರಾಣವ ತೆತ್ತ ಹುಲಿಯ ಬಗ್ಗೆ ನನಗೆ ಒಂದು ಗೌರವ ಭಾವ ಹುಟ್ಟಿತು. ಹೀಗಾಗಿ ಒಂದು ರೂಪಕ ತಯಾರು ಮಾಡಿ ನನ್ನ ಮಕ್ಕಳ ಕೈಲಿ ಮಾಡಿಸಿದ್ದೆ.ಅದನ್ನೆ ಇಲ್ಲಿ “ವ್ಯಾಘ್ರನ ತ್ಯಾಗ” ಎಂಬ ಹೆಸರಿನಲ್ಲಿ ಕಳಿಸಿದ್ದೇನೆ.
ಅಂಕ ೧
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದಿ
ತ್ಯಾಗ ಮಾಡಿ ಪ್ರಾಣಬಿಟ್ಟ
ಒಂದು ವ್ಯಾಘ್ರನ ಕಥೆಯಿದು.
ಹಾರಿ ನೆಗೆದು ಪ್ರಾಣ ತೊರೆದ
ಅರ್ಬುದಾನೆಂದೆಂಬ ವ್ಯಾಘ್ರನ
ತ್ಯಾಗ ಭಾವವ ಬಿಡಿಸಿ ಹೇಳುವ
ಒಂದು ಸುಂದರ ಕಥೆಯಿದು.
ವ್ಯಾಘ್ರ ರಾಜನ ವಂಶ ಬೆಳೆದು
ತನ್ನ ಅಜ್ಜನ ಸ್ಮರಿಸಿ ನಿಂದು
ಕಾಡಲಲೆದು ಆಡಿ ಬರುತಿರೆ
ಅಲ್ಲಿ ಬಂದಿತು ಕರುವದು.
ಬಂದ ಕರುವು ಹುಲಿಯ ನೋಡಿ
ಭಯದಿ ಬಳಲಿ ಕಾಲು ನಡುಗಿ
ಕರುಳು ಮಿಡಿವ ಕೂಗು ಹಾಕಿ
ಕುಸಿಯಿತಲ್ಲೇ ನೆಲದಲಿ.
“ಯಾರು ನೀನು ಹೇಳು ಕರುವೆ
ಏಕೆ ಹೀಗೆ ನಡುಗುತಿರುವೆ?
ಹೆದರಬೇಡ ಹೇಳು ಬೇಗ
ಅರ್ಬುದನ ಮೊಮ್ಮಗನು ನಾ.
ನಿನ್ನ ವಂಶದ ಗೋವನುಳಿಸಿ
ತನ್ನ ಪ್ರಾಣವ ತೆತ್ತನಲ್ಲ
ಕ್ರೂರ ವದನದ ಬೆಣ್ಣೆ ಮನಸಿನ
ಅರ್ಬುದನು ನನ್ನಜ್ಜನು.”
ಕುಸಿದ ಕರುವು ಮೆಲ್ಲನೇಳುತ
ದೈನ್ಯದಿಂದ ಬಾಗಿ ನಿಂತು
ಹೆಬ್ಬುಲಿಗೆ ತಾ ನಮನ ಮಾಡಿ
ತನ್ನ ಕಥೆಯನು ಹೇಳಿತು.
“ನಿನ್ನ ತಾತನು ಉಳಿಸಿದಂಥ
ಪುಣ್ಯಕೋಟಿಯ ವಂಶದಿಂದ
ಜನಿಸಿ ಬಂದ ಕರುವು ನಾನು
ಎನ್ನ ಕೊಲ್ಲದೆ ಬಿಡುವೆಯಾ?”
ಹುಲಿ:- ಪುಣ್ಯಕೋಟಿಯನ್ನು ಉಳಿಸಿದ ಆದಿನ ನನ್ನಜ್ಜನ ವರೆಗೆ ಕರಾಳದಿನ. ಬಂಡೆಯೊಳಗಿನ ಸಿಹಿನೀರಿನ ಬುಗ್ಗೆಯಂತೆ ಆಭೀಕರ ರೂಪದೊಳಗೆ ಬೆಣ್ಣೆಯಂತೆ ಕರಗುವ ಮನಸು. ಇದು ನನ್ನಜ್ಜನ ಸ್ವಭಾವ. ಓಹ್! ಈಸ್ವಭಾವವೇ ಅಲ್ಲವೇ ನನ್ನಜ್ಜನ ಬದುಕಿಗೇ ಮುಳ್ಳಾದುದು. ನಿನ್ನಜ್ಜಿಯಂತು ತನ್ನ ಕಂದನ ಅರಸಿ ಸಂಭ್ರಮದಿಂದ ದೊಡ್ಡಿಗೆ ತೆರಳಿದಳು. ಆದರೆ….ಆದರೆ…… ನನ್ನಜ್ಜ…
ಕರು:- ಏನಾಯಿತು ನಿನ್ನಜ್ಜನಿಗೆ?ಏನಾಯಿತು? ದಯವಿಟ್ಟು ಹೇಳು. ಅಳದೇ ಹೇಳು.
ಹುಲಿ:- ಹಸಿವಿನಿಂದ ಕಂಗಾಲಾಗಿದ್ದಾಗಲೂ ಕರುಣಾಮಯಿಯಾಗಿ ನಿನ್ನಜ್ಜಿಯನ್ನು ಬದುಕಲು ಬಿಟ್ಟ ನನ್ನಜ್ಜನಿಗೆ ಬಂದ ಬಿರುದು ಖೂಳವ್ಯಾಘ್ರನೆಂದು. ಜನರ ಬಾಯಲ್ಲಿಂದು ನಿನ್ನ ಅಜ್ಜಿಯು ದೇವಿಯಾದಳು. ನನ್ನ ಅಜ್ಜನು ಕ್ರೂರಿಯಾದನು. ಅವನ ತ್ಯಾಗ ಯಾರಿಗೂ ತಿಳಿಯಲೇ ಇಲ್ಲ.
ಕರು:- ಯಾವ ತ್ಯಾಗ? ಹೇಳುವೆಯಾ ನಿನ್ನಜ್ಜನ ಕಥೆಯಾ? ನನಗೆ ಕೇಳುವ ಕುತೂಹಲವಾಗುತ್ತಿದೆ.
ಅಂಕ ೨
Flash back
ಅರ್ಬುದ:-ಎನ್ನ ಒಡಹುಟ್ಟಕ್ಕ ನೀನು. ನಿನ್ನ ಕೊಂದು ನಾನೇನ ಪಡೆವೆನು? ಓಹ್! ವಿಧಿಯೆ ಏನಿದು ನನ್ನ ವಿಚಿತ್ರ ಸ್ಥಿತಿ? ನಿನ್ನ ಕೊಲ್ಲಲಾರೆನು. ಕೊಲ್ಲದೇ ಇರಲಾರೆನು. ಹುಲಿ ನಾನು ಹಸಿದರೆ ಹುಲ್ಲು ತಿನ್ನಲಾರೆನು ಓಹ್! ದೇವರೆ ನನ್ನನ್ನು ಏಕೆ ಮಾಂಸಾಹಾರಿಯಾಗಿ ಹುಟ್ಟಿಸಿದೆ?..... ಹಸಿವು ….. ಹಸಿವು ಓಹ್ ಏನು ಮಾಡಲಿ? ಈಗ ನಾನೇನು ಮಾಡಲಿ? ನನ್ನಂತೆಯೇ ಜೀವವಿರುವ ಇನ್ನೊಂದು ಪ್ರಾಣಿಯನ್ನು ಕೊಂದು ತಿಂದೇ ನನ್ನ ಹಸಿವನ್ನು ನೀಗಿಸಿಕೊಳ್ಳಬೇಕೆ ನಾನು. ಬೇರೆ ದಾರಿಯೇ ಇಲ್ಲವೇ?
ಪುಣ್ಯಕೋಟಿ:- ಏಕೆ ಹೀಗೆ ಪರಿತಪಿಸಿರುವೆ ವ್ಯಾಘ್ರರಾಜ? ನಾನು ಹಿಂದಿರುಗಿ ಬರುವೆ, ನಿನ್ನ ಆಹಾರವಾಗುವೆ ಎಂದು ವಚನವಿತ್ತೇ ತೆರಳಿದ್ದೆನಲ್ಲ. ನೀನು ನನ್ನನ್ನು ತಿಂದರೂ ತಪ್ಪು ನಿನ್ನದಾಗುವುದಿಲ್ಲ. ಮಿಡತೆಯನ್ನು ಕಪ್ಪೆ, ಕಪ್ಪೆಯನ್ನು ಹಾವು, ಹಾವನ್ನು ಗಿಡುಗ ಹೀಗೆ ಒಂದನ್ನೊಂದು ತಿನ್ನುತ್ತಾ ಹೋಗುವುದುತಾನೆ ವಿಧಿ ನಿಯಮ. ಆ ನಿಯಮವು ನನ್ನನ್ನು ನೀನು ತಿನ್ನುವುದರ ಮೂಲಕವೇ ಮುಂದುವರೆಯ ಬೇಕೆಂಬುದೇ ಆಗಿರುವಾಗ ಸುಮ್ಮನೆ ಚಿಂತಿಸುವುದರಲ್ಲಿ ಅರ್ಥವಿಲ್ಲ ವ್ಯಾಘ್ರರಾಜ.
ಅರ್ಬುದ:-“ನನ್ನ ಗೊಂದಲ ತಿಳಿಯಲಾರೆ
ನನ್ನ ಭಾವನೆ ಅರಿಯಲಾರೆ
ಕೊಲ್ಲಲಾರೆನು ಇನ್ನು ನಾನು
ಯಾವ ಜೀವದ ಸೆಲೆಯನೂ.
ತೆರಳು ನೀನು ಮನೆಯ ಕಡೆಗೆ
ನಿನ್ನ ಕಂದನು ಇರುವ ಎಡೆಗೆ,”
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.
ಅಂಕ ೩
[ಹುಲಿಯ ಕಥೆ ಕೇಳುತ್ತಾ ಕರು ಹುಲಿಯ ಪಕ್ಕದಲ್ಲೇ ಕುಳಿತಿದೆ]
ಹುಲಿ:- ಇಂಥ ಅರ್ಬುದನ ಮೊಮ್ಮಗ ನಾನು. ಅರೆ! ಇದೇನು? ಭಯ ತೊರೆದು ಮಂತ್ರಮುಗ್ಧನಾಗಿ ಕಥೆ ಕೇಳುತ್ತಾ ಕುಳಿತುಬಿಟ್ಟೆಯಲ್ಲ. ಓಹೋ! ಅರ್ಬುದನ ಮೊಮ್ಮಗ ಅವನಜ್ಜನಂತೆಯೇ ಇರಬಹುದು ಎಂದುಕೊಂಡೆಯಾ? ನನ್ನಜ್ಜ ಹಸಿದ ವೇಳೆಯಲ್ಲೂ ಸಿಕ್ಕ ಬೇಟೆಯ ಹಿಂದಿರುಗಿಸಿ ಕಳಿಸುವ, ತನ್ನ ಬಳಿಗೆ ಮತ್ತೆ ಬರುವುದೆಂಬ ವಿಶ್ವಾಸವನ್ನಿಟ್ಟಿದ್ದ ದೊಡ್ಡ ಮನಸಿನವ, ಕೊಟ್ಟ ಮಾತಂತೆ ತಿರುಗಿ ಬಂದ ಹಸುವನ್ನು ಕಂಡು ಆ ಹಸುವಿನ ಸತ್ಯಕ್ಕೆ ಬೆರಗಾಗಿ, ಮರುಗಿ ಆ ಹಸುವಿಗೆ ಜೀವದಾನ ಮಾಡಿ ತನ್ನ ಹಸಿವಿಗಾಗಿ ಇನ್ನೊಂದು ಜೀವಿಯ ಹತ್ಯೆ ಮಾಡಲಾರದೇ ಹಾರಿ ಬಿದ್ದು ಸತ್ತ. ಹೌದು! ಅವನು ಪರರಲ್ಲಿ ಅದರಲ್ಲೂ ವೈರಿಯಲ್ಲಿ ವಿಶ್ವಾಸ ತೋರಿದ. ವೈರಿಯ ಮಗುವಿಗಾಗಿ ಮರುಕ ತೋರಿದ. ವೈರಿಯಲ್ಲಿರುವ ಸದ್ಗುಣವನ್ನು ಮೆಚ್ಚಿದ. ಹಿರಿಯ ವಿಶಾಲ ಮನೋಭಾವದವನಾಗಿದ್ದ. ಅಂದು ತಾನು ಅಳವಡಿಸಿಕೊಂಡ ಜೀವನ ಮೌಲ್ಯಕ್ಕಾಗಿ ಜೀವವನ್ನೇ ಬಿಟ್ಟ. ಕೊನೆಗವನಿಗೆ ಸಿಕ್ಕಿದ್ದೇನು? ಸಾವು! ಖೂಳವ್ಯಾಘ್ರನೆಂಬ ಬಿರುದು! ಇಲ್ಲ ಕರುವೇ ಇಲ್ಲ. ನನಗೆ ನನ್ನ ಬದುಕು ದೊಡ್ಡದ್ದು. ಬಲಶಾಲಿಯೇ ಬದುಕಬಲ್ಲ ಈಜಗತ್ತಿನಲ್ಲಿ. ಹುಲಿ ಹುಲಿಯಂತೆಯೇ ಕರು ಕರುವಿನಂತೆಯೇ ಇರಬೇಕು.ಇದೇ ಜೀವ ನಿಯಮ, ಇದೇ ಲೋಕ ನಿಯಮ.
ಕರು:- ಕೊಲ್ಲಬೇಡ ನನ್ನನ್ನು. ನಿನ್ನ ದಮ್ಮಯ್ಯ ಎನ್ನುತ್ತೇನೆ. ನಿನ್ನ ಕಾಲಿಗೆ ಎರಗುತ್ತೇನೆ. ನಿನ್ನ ಶಕ್ತಿಯ ಮುಂದೆ ನಾನು ಅತಿ ಸಾಮಾನ್ಯನು. ನಿನ್ನಜ್ಜನಲ್ಲಿದ್ದ ಕರುಣೆ ನಿನ್ನಲ್ಲಿಲ್ಲದಾಯಿತೆ? ನಿನ್ನ ಅಜ್ಜನ ರಕ್ತವೇ ಅಲ್ಲವೇ ನಿನ್ನಲ್ಲೂ ಹರಿಯುತ್ತಿರುವುದು? ದಯೆಯೇ ದರ್ಮದ ಮೂಲವಲ್ಲವೇ?
ಹುಲಿ:- ದಯೆ? ಕರುಣೆ? ಇಲ್ಲಿ ನೆರೆದಿರುವ ಬುದ್ಧಿವಂತರನ್ನೇ ಕೇಳುತ್ತೇನೆ ನಾನು ಏನು ಮಾಡಲಿ ಎಂದು?
ಅಣ್ಣಗಳಿರಾ ಅಕ್ಕಗಳಿರಾ
ನೀಡಿರೆನಗೆ ಸಲಹೆಯೊಂದ
ಯಾವ ಹಾದಿ ತುಳಿದು ನಾನು
ಧನ್ಯನಾಗಲಿ ಈದಿನ?
ವಿಧಿಯ ನಿಯಮವ ಮೀರಿ ನಾನು
ನನ್ನ ಅಜ್ಜನ ಹಾದಿ ತುಳಿದು
ಅಳಿವುದೊಂದೇ ದಾರಿಯೆಂದು
ನನ್ನ ಕಥೆಯಾ ಮುಗಿಸಲೇ?
ಅಥವಾ
ವಿಧಿಯ ನಿಯಮಕೆ ಹೊಂದಿಕೊಂಡು
ಎನ್ನ ಉಳಿವಿಗೆ ಕರುವ ತಿಂದು
ಇದುವೆ ಬದುಕಿನ ರೀತಿಯೆಂದು
ಲೋಕಕೆಲ್ಲಾ ಸಾರಲೇ?
================================

  • ಶಿಶು ಸಾಹಿತ್ಯ
~.~
  • Login or register to post comments
  • 658 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2008 - 3:34am — hamsanandi

ಉ: ವ್ಯಾಘ್ರನ ತ್ಯಾಗ

hamsanandi's picture

ಬಹಳ ಚೆನ್ನಾಗಿದೆ!
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:08am — sumanajois

ಉ: ವ್ಯಾಘ್ರನ ತ್ಯಾಗ

sumanajois's picture

ಶೈಲಜಾ ಮಿಸ್!!! ಸ್ಕೂಲ್ ಬಿಟ್ಟು ಇಷ್ಟ್ ವರ್ಷ ಆದ್ಮೇಲೆ ನಿಮ್ಮನ್ನ ಸಂಪದದಲ್ಲಿ ನೋಡಿ ತುಂಬಾ ಖುಷಿ ಆಯ್ತು.. ನಂಗಂತೂ ನಾವು ಮಾಡಿದ್ದು ಯಾವ್ದೋ ನಾಟಕದ್ದು ಹಾಡು ನೆನಪಾಯ್ತು... ನಿಮ್ದೆ direction... "ಕತ್ತಲೆಯ ರಾಜ್ಯದಲಿ ಕಡ್ಡಿ ಗೀರಿದೆ ನಾನು ಪುಟ್ಟ ಸೂರ್ಯನ ಹುಡುಕಿ ತೆಗೆಯಲೆಂದು..." Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 10:58am — shylaswamy

ಉ:

shylaswamy's picture

ಪ್ರೀತಿಯ ಸುಮನ,
ನನಗೆ ನಂಬಕ್ಕೆ ಆಗ್ತಾ ಇಲ್ಲ. ನೀನು ಹೀಗೆ ನನಗೆ ಸಿಗಬಹುದು ಅಂತ. ನನಗೆ ಎಷ್ಟು ಖುಶಿಯಾಗ್ತಾ ಇದೆ ಗೊತ್ತಾ? ನಾನಂತು expect ಮಾಡಿರಲಿಲ್ಲ? ನೀನು ಎಲ್ಲಿದೀಯ ಏನು ಮಾಡ್ತಾ ಇದೀಯ ಅನ್ನೋದಕ್ಕೆಲ್ಲ ನನಗೆ mail ಮಾಡು. ನನ್ನ ಮೈಲ್ ID shylakumaraswamy.NOSPAM@NOSPAMgmail.com
ಹೌದು ನೀನು ಹೇಳಿದ ನಾಟಕ ಸಮರನೀತಿ ನೀನು ಸುಮ ಶುಭ ಎಲ್ಲಾ ಹಾಡಿದ್ರಿ ಅಲ್ವ? ತೆಜಸ್ವಿ ಸೂತ್ರಧಾರನ ಪಾತ್ರ ಮಾಡಿದ್ದ.
Any way ತುಂಬಾ thanks ಕಣೆ ಪುಟ.
ನಿನ್ನ ಮಿಸ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 9:37pm — hpn

ಉ: ವ್ಯಾಘ್ರನ ತ್ಯಾಗ

hpn's picture

ಈ ಮಾತುಕತೆ ನೋಡಿ ಖುಷಿಯಾಯ್ತು Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:04pm — shylaswamy

ಉ: ವ್ಯಾಘ್ರನ ತ್ಯಾಗ

shylaswamy's picture

ಶ್ರೀಯುತ hpn ಅವರೆ,
ನಿಮಗೆ ಯಾವ ಮಾತುಕಥೆ ಖುಷಿ ಕೊಡ್ತು? ನನ್ನ ಮತ್ತು ಸುಮನನ ಮಾತುಕಥೆನಾ? ಅಥವಾ ಹುಲಿ ಕರು ಮಾತುಕಥೆನಾ?
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಶೈಲಾಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 11:13pm — hpn

ಉ: ವ್ಯಾಘ್ರನ ತ್ಯಾಗ

hpn's picture

ಮೊದಲನೆಯದು, ಹೌದು.

ವಿಷಯಕ್ಕೆ ದೂರವಾದ ಪ್ರತಿಕ್ರಿಯೆ ಹಾಕಿದೆ, ಕ್ಷಮೆಯಿರಲಿ. ಮೇಲಿನದನ್ನು ಓದಿ ಒಂದಷ್ಟು ಹೊತ್ತು ಸಂಪದದಲ್ಲಿ ಶಿವಮೊಗ್ಗದಿಂದ ಯಾರು ಯಾರು ಎಂದು ನೆನಪಿಸಿಕೊಳ್ಳುತ್ತಿದ್ದೆ. ಸುಮಾರು ಹೆಸರುಗಳು ನೆನಪಾದವು Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 9:45am — sumanajois

ಉ: ವ್ಯಾಘ್ರನ ತ್ಯಾಗ

sumanajois's picture

ತುಂಬಾ ಥ್ಯಾಂಕ್ಸ್ ಸಂಪದಕ್ಕೆ.. ಮತ್ತೆ ನಾಡಿಗರಿಗೆ... ನಂ ಮಿಸ್ ನ ಹುಡುಕ್ಕೊಟ್ಟಿದ್ದಿಕ್ಕೆ...
ಶಿವಮೊಗ್ಗದವ್ರು ಯಾರ್‍ಯಾರಿದಾರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 11:34am — veena

ಉ: ವ್ಯಾಘ್ರನ ತ್ಯಾಗ

veena's picture

veena

ನಾನು ಶಿವಮೊಗ್ಗದವಳೆ. ಮತ್ತು ಯಾವ ಊರಿಗೇ ಹೋದರೂ ನನಗೆ ಶಿವಮೊಗ್ಗದಲ್ಲಿ ಸಿಗುವ ಸಂತೋಷ, ಮಾನಸಿಕ ನೆಮ್ಮದಿ ಸಿಗುವುದಿಲ್ಲ. ಧಾರವಾಡದಲ್ಲಿರುತ್ತ ಏಳೆಂಟು ವರ್ಷವಾದರೂ ಏನೋ ಪರಕೀಯ ಭಾವನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೋವಿನ ಹಾಡು
  • ನೀನು ನಿನ್ನ.....
  • "ನಾನು-ನೀನು
  • ಪುಣ್ಯಕೋಟಿ ಎಂಬ ಹುಲಿಯು.....
  • ನಂಜುಳ್ಳೆ ಹೇಳಿದ್ದು
Syndicate content

ಲೇಖಕರು

shylaswamy's picture

ಪೂರ್ಣ ಹೆಸರು
shylaswamy

ಪರಿಚಯ

ನಾನು ಶಿವಮೊಗ್ಗಾದಲ್ಲಿ ವಾಸ ಮಾಡುತ್ತಿರುವ ಗೃಹಿಣಿ. ದೀರ್ಘಕಾಲ ಶಿಕ್ಷಕಿಯಾಗಿ ಈಗ ಸ್ವಯಂ ನಿವೃತ್ತಿಹೊಂದಿ ಮನೆಯಲ್ಲಿದ್ದೇನೆ. ನನ್ನ ಆಸಕ್ತಿಯ ಕ್ಷೇತ್ರಗಳೆಂದರೆ, ಸಂಗೀತ, ಸಾಹಿತ್ಯ ಮತ್ತು ನಾಟಕ. ನಾನು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಹೆಚ್ಚಾಗಿ ಬರೆದಿರುವುದು ಮತ್ತು ನಿರ್ದೇಶಿಸಿರುವುದು ಮಕ್ಕಳ ನಾಟಕಗಳನ್ನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 111 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator