ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಲೇಖಕರು ಹಾಗೂ ಅವರ ‘ಚರಿತ್ರೆ’ಗಳು

June 7, 2008 - 10:24am — uniquesupri

ಆತ್ಮಕಥೆಗಳು ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡತೊಡಗಿವೆ. ನಮ್ಮದೇ ನಾಡಿನಲ್ಲಿ ಈ ಆತ್ಮಕಥೆಗಳು ಬೇರೆಲ್ಲಾ ಸಾಹಿತ್ಯಕ್ಕಿಂತ ಹೆಚ್ಚಿನ ಪ್ರಚಾರ ಪಡೆದದ್ದನ್ನು ಕಂಡಿದ್ದೇವೆ. ಎಚ್.ವಿಶ್ವನಾಥ್‌ರ ಆತ್ಮಕತೆ ‘ಹಳ್ಳಿ ಹಕ್ಕಿ ಹಾಡು’ ಅವರ ‘ಆತ್ಮಕಥನ’ಕ್ಕಿಂತ ಹೆಚ್ಚಾಗಿ ಬೇರೆ ವಿಷಯಕ್ಕೆ ಸುದ್ದಿಯಾದದ್ದನ್ನು ಕಂಡು ನಾವು ಅಸಹ್ಯಪಟ್ಟುಕೊಂಡಿದ್ದೇವೆ. ಭಾರತ ಮೂಲದ ಆಂಗ್ಲ ಲೇಖಕ ವಿ.ಎಸ್.ನೈಪಾಲ್‌ರ ಜೀವನ ಚರಿತ್ರೆ ಬಿಡುಗಡೆಯಾದಾಗಲೂ ಭಾರೀ ಸುದ್ದಿಯಾಗಿತ್ತು. ಆತ ತನ್ನ ಹೆಂಡತಿಯನ್ನು ಹಿಂಸಿಸುತ್ತಿದ್ದ, ಆತನೊಬ್ಬ ಸ್ಯಾಡಿಸ್ಟ್ ಆಗಿದ್ದ ಎಂಬುದಾಗಿ ಪತ್ರಿಕೆಗಳು ಹೊತ್ತುತಂದ ಸುದ್ದಿಯನ್ನು ಓದಿ ಗಂಟಲು ಒಣಗುವವರೆಗೆ ಚರ್ಚಿಸಿ, ಘರ್ಜಿಸಿ ತಣ್ಣಗೆ ನೀರು ಕುಡಿದು ನಿರಾಳವಾಗಿದ್ದೇವೆ. ಇತ್ತೀಚೆಗೆ ಪ್ರಕಟವಾದ ಬ್ರೆಜಿಲ್‌ನ ಲೇಖಕ ಪಾಲೋ ಕೋಯ್ಲೊನ ಜೀವನ ಚರಿತ್ರೆ ಮೆಲ್ಲಗೆ ಅಲೆಗಳನ್ನೆಬ್ಬಿಸುತ್ತಿದೆ.

‘ದಿ ಆಲ್ಕೆಮಿಸ್ಟ್’ ಎಂಬ ಒಂದೇ ಪುಸ್ತಕದಿಂದ ಜಗತ್ಪ್ರಸಿದ್ಧನಾದ ಕೋಯ್ಲೊ ಬರೆದದ್ದೆಲ್ಲಾ ತನ್ನ ಮಾತೃಭಾಷೆ ಬ್ರೆಜಿಲ್ಲಿಯನ್‌ನಲ್ಲಿಯೇ. ಆತನ ಪುಸ್ತಕಗಳು ಜಗತ್ತಿನ ನಲವತ್ತು ಭಾಷೆಗಳಿಗೆ ತರ್ಜುಮೆಯಾಗಿ ಸುಮಾರು ನೂರೈವತ್ತು ದೇಶಗಳಲ್ಲಿ ಮಾರಾಟವಾಗುತ್ತಿವೆ ಎಂದರೆ ಆತನ ಪ್ರಸಿದ್ಧಿಯನ್ನು ಊಹಿಸಿ. ‘ವೆರೋನಿಕಾ ಡಿಸೈಡ್ಸ್ ಟು ಡೈ’ (ವೆರೋನಿಕಾ ಸಾಯಲು ನಿರ್ಧರಿಸಿದಳು) ಕೃತಿಯೇ ಮುನ್ನೂರು ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿದೆಯಂತೆ! ಇಂಥ ಲೇಖಕ ಚಿಕ್ಕಂದಿನಲ್ಲಿ ಹುಚ್ಚಾಸ್ಪತ್ರೆಯಲ್ಲಿದ್ದ, ವಿಪರೀತದ ಲೈಂಗಿಕ ಪ್ರಯೋಗಗಳನ್ನು ಮಾಡಿದ್ದ, ಸಲಿಂಗಕಾಮಿಯಾಗಿದ್ದ, ಅನಾರ್ಕಿಸ್ಟ್ ಆಗಿದ್ದ ಎಂಬ ಸಂಗತಿಗಳು  ಮೊರಾಯಿಸ್  ಎಂಬ ಬ್ರೆಜಿಲ್ ಲೇಖಕ ಬರೆಯುತ್ತಿರುವ ಆತನ ಜೀವನಚರಿತ್ರೆಯಲ್ಲಿ ದಾಖಲಾಗಿವೆಯಂತೆ! ಜಗತ್ತಿನ ಪ್ರಸಿದ್ಧ ಲೇಖಕನಾಗಬೇಕು ಎಂಬ ಏಕೈಕ ಆಸೆಯನ್ನು ಹೊಂದಿದ್ದ ಕೋಯ್ಲೊ ಅದಕ್ಕಾಗಿ ಮಾಟವನ್ನೂ ಮಾಡಿಸಿದ್ದ ಎನ್ನಲಾಗಿದೆ. ಮೊರಾಯಿಸ್‌ಗೆ ನೀಡಿರುವ ಸುಮಾರು ಇನ್ನೂರು ಖಾಸಗಿ ಡೈರಿ ಹಾಗೂ ಟೇಪುಗಳಲ್ಲಿ ಆತನ ವರ್ಣರಂಜಿತ ಇತಿಹಾಸದ ವಿವರಣೆಯಿದೆಯಂತೆ. ಅವುಗಳನ್ನು ಆಧರಿಸಿ ಮೊರಾಯಿಸ್ ಸುಮಾರು ಆರುನೂರು ಚಿಲ್ಲರೆ ಪುಟಗಳ "O Mago" ("The Wizard") ಎಂಬ ಹೆಸರಿನ ಜೀವನಚರಿತ್ರೆಯನ್ನು ಬರೆದಿದ್ದಾನಂತೆ.

ಬ್ರಿಜಿಲ್ಲಿನಲ್ಲಿ ಮಿಲಿಟರಿ ಸರ್ವಾಧಿಕಾರವಿರುವಾಗ ಅನಾರ್ಕಿಸ್ಟ್ ಚಿಂತನೆಯ ಬೆನ್ನು ಹತ್ತಿ ಅದನ್ನು ಪ್ರಚುರಪಡಿಸುವುದಕ್ಕಾಗಿ ಒಂದು ರಹಸ್ಯ ಸಂಸ್ಥೆಯನ್ನು ಹುಟ್ಟು ಹಾಕುವ ಪ್ರಯತ್ನದಲ್ಲಿ ಮಿಲಿಟರಿ ಆಡಳಿತದ ಕೆಂಗಣ್ಣಿಗೆ ಗುರಿಯಾದ ಕೋಯ್ಲೊ ಸೆರೆಮನೆವಾಸವನ್ನೂ ಕಾಣಬೇಕಾಯಿತು. ಸೆರೆಮನೆವಾಸದ ಸಮಯದಲ್ಲಿ ಆತನಿಗೆ ಚಿತ್ರ ಹಿಂಸೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ನಿಜಕ್ಕೂ ಲೇಖಕರ ವಯಕ್ತಿಕ ಬದುಕು ಅಷ್ಟು ವರ್ಣರಂಜಿತವಾಗಿರುತ್ತದೆಯೋ ಅಥವಾ ಜೀವನಚರಿತ್ರೆಯೂ ಅವರ ಪುಸ್ತಕಗಳ ಹಾಗೆಯೇ ಬಿಕರಿಯಾಗಲಿ ಎಂದು ಸತ್ಯಕ್ಕೆ ದೂರಾದ ಮಸಾಲೆ ಮಾಹಿತಿಗಳನ್ನು ಸೇರಿಸುತ್ತಾರೋ?

  • ಪ್ರಚಲಿತ
~.~
  • Login or register to post comments
  • 418 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 7, 2008 - 11:02am — gururajkodkani

ಉ: ಲೇಖಕರು ಹಾಗೂ ಅವರ ‘ಚರಿತ್ರೆ’ಗಳು

gururajkodkani's picture

ಗುಱುಱಾಜ
www.kannadaguru.blogspot.com

ನಿಜ ಸುಪ್ರೀತ್ ,ನನಗೂ ಕೆಲವೊಮ್ಮೆ ಈ ಸ೦ದೇಹ ಬ೦ದಿದೆ.ಆತ್ಮಚರಿತ್ರೆಯ ಪುಸ್ತಕಗಳೂ ಕೆಲವೊಮ್ಮೆ ಈ ತರಹದ ಸ೦ಶಯಗಳನ್ನು ಉ೦ಟುಮಾಡುತ್ತವೆ.ತಾವು ಪ್ರೋತಿಮಾ ಬೇಡಿಯ ಜೀವನ ಚರಿತ್ರೆ "ಟೈ೦ ಪಾಸ್ "ಓದಿದರೆ ಗೊತ್ತಾಗುತ್ತದೆ.ನನಗೇ ತು೦ಬಾ ಇಷ್ಟವಾದ ಆತ್ಮಚರಿತ್ರೆಯೆ೦ದರೇ ಸಿದ್ದಲಿ೦ಗಯ್ಯನವರ "ಊರು ಕೇರಿ ".ಮೇಲ್ನೋಟಕ್ಕೆ ಹಾಸ್ಯ ಎನಿಸಿದರೂ, ನಗಿಸುತ್ತಲೇ ದಲಿತರ ಆಗಿನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸುವ ಅವರ ಶೈಲಿ ತು೦ಬಾ ಇಷ್ಟವಾಗುತ್ತದೆ.ಸ್ವತ: ದಲಿತರ ಕಷ್ಟಗಳ ಬಗ್ಗೆ ಒತ್ತಿ ಹೇಳಿರದಿದ್ದರೂ ಒದುಗರಿಗೆ ತಾನಾಗಿಯೇ ಅರ್ಥವಾಗುವ ಸಿದ್ದಲಿ೦ಗಯ್ಯನವರ ಶೈಲಿ ಮೆಚ್ಚುವ೦ತಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 12:51pm — uniquesupri

ಉ: ಲೇಖಕರು ಹಾಗೂ ಅವರ ‘ಚರಿತ್ರೆ’ಗಳು

uniquesupri's picture

ಹೂಂ, ನನ್ನ ಬಳಿಯೂ ಸಿದ್ಧಲಿಂಗಯ್ಯನವರ ಊರು ಕೇರಿ ಪುಸ್ತಕವಿದೆ. ಓದಲು ಸಾಧ್ಯವಾಗಿರಲಿಲ್ಲ. ನೀವು ಈಗ ಹೇಳಿದ್ದು ಕೇಳಿದರೆ ಅದನ್ನು ಈಗಲೇ ಕುಳಿತು ಓದಿ ಮುಗಿಸಬೇಕು ಅನ್ನಿಸುತ್ತಿದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂತನ
  • ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?
  • ಆಷ್ಟ್ರೇಲಿಯನ್ನರು: ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣರು
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ಚಲುವ ಕನ್ನಡ ಕಸ್ತೂರಿ
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 129 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator