ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

June 2, 2008 - 4:43pm — hpn

Godfrey Rego ಎಂಬುವರು ಸಂಪದ ಸಮುದಾಯಕ್ಕೆ ಬರೆದ ಪತ್ರದಲ್ಲಿ ಹೀಗೆ ಕೇಳಿದ್ದಾರೆ:

"ರಬೀಂದ್ರನಾಥ ಟಾಗೂರರ

'Where the mind is without fear and the head is held high;
Where knowledge is free;

ಕವನವನ್ನು ಕನ್ನಡಕ್ಕೆ ಅನುವಾದ ಮಾಡಿದ ಬಿ. ಎಂ. ಶ್ರೀ "ಇಂಗ್ಲಿಷ್ ಗೀತೆಗಳು" ಎಂಬ ಪುಸ್ತಕದಲ್ಲಿ ಹೊರತಂದಿದ್ದರು. ಕವನದ ಸಾಲುಗಳು ಹೀಗಿವೆ:

“ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ…”

ಇದರ ಪೂರ್ಣ ಆವೃತ್ತಿ ಸಿಗಬಹುದೆ?"

(ಎಡಿಟ್) ಜೂನ್ ೬, ೨೦೦೮: ಮೇಲಿನ ಕನ್ನಡ ಅನುವಾದ ಕೆಳಗಿನ ಪ್ರತಿಕ್ರಿಯೆಯಲ್ಲಿ ನರೇಂದ್ರರು ತಿಳಿಸಿರುವಂತೆ ಎಂ ಎನ್ ಕಾಮತರದ್ದು.

ಸಂಪದಿಗರಿಗೆ ಪೂರ್ಣ ಕವನ ತಿಳಿದಿದ್ದರೆ ಪ್ರತಿಕ್ರಿಯೆ ಮೂಲಕ ತಿಳಿಸುತ್ತಾರೆ ಎಂದು ಆಶ್ವಾಸನೆ ಗಾಡ್ಫ್ರಿಯವರಿಗೆ ಕೊಟ್ಟಿದ್ದೀನಿ. ಸುಳ್ಳಾಗಿಸಬೇಡಿ ಮತ್ತೇ! Smiling

  • ಮಾಹಿತಿ ಫಲಕ
~.~
  • Login or register to post comments
  • 469 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 7:16pm — hpn

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

hpn's picture

ಮಾನ್ಯ ನರೇಂದ್ರ ಪೈ ಇದಕ್ಕುತ್ತರವನ್ನು ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ವಂದನೆಗಳು!

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ|

ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ||

ಎಲ್ಲಿ ಮನೆಯೊಕ್ಕಟ್ಟು, ಸಂಸಾರ ನೆಲೆಗಟ್ಟು|

ಧೂಳೊಡೆಯದಿಹುದೊ ತಾನಾನಾಡಿನಲ್ಲಿ||

ಎಲ್ಲಿ ಸತ್ಯಗಂಧ ನೆಲೆಯಿಂದ ಸವಿವಾತು|

ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ||

ಎಲ್ಲಿ ದಣಿವಿರದ ಸಾಧನೆಯು ಸಫಲತೆ ಕಡೆಗೆ|

ತೋಳ ನೀಡಿಹುದೊ ತಾನಾನಾಡಿನಲ್ಲಿ||

ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು|

ಕಾಲರೂಢಿಯ ಮರಳೊಳಿಂಗಿ ಕೆಡದಲ್ಲಿ||

ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ|

ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ||

ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ|

ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ||

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2008 - 8:15pm — hamsanandi

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

hamsanandi's picture

ಇದನ್ನು ಎನ್.ಎಸ್.ಎಲ್ ಕೂಡ ಬರೆದಿದಾರೆ ಅನ್ನಿಸುತ್ತೆ (ನನಗೆ ಈ ಮೂಲದ ವಿಷಯ ಗೊತ್ತಿರಲಿಲ್ಲ ಈ ತನಕ)...

ಎಲ್ಲಿ ಅರಿವಿಗೆ ಇರದೋ ಬೇಲಿ
ಎಲ್ಲಿ ಇರದೋ ಭಯದ ಗಾಳಿ
ಇಂತಾ ನೆಲವಾವುದು ಹೇಳಿ
ಸ್ವರ್ಗವನು ಒದರಿದರೂ ದೂಡಿ..

ಹಸಿದಂಥ ಕೂಸಿರರ ನಾಡು
...
...

ಎಂದು ಮುಂತಾಗಿ ಏನೋ ಬರುತ್ತೆ ಅಂತ ನೆನಪು.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 10:43pm — shreedn (not verified)

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

shreedn's picture

Elli satyadagaadha neleyiNda savimaathu.... sathyagaNdha alla, savivaathu alla ansatte....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 10:47pm — shreedn (not verified)

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

shreedn's picture

Mattu, idu BM SHREEyavara anuvaadavena? NA DA SHETTYyavara parichaya yaarigaadru iddalli keLabahudu, avra hatra complete details ive.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 11:18pm — hpn

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

hpn's picture

ಶ್ರೀ, ನೀವು ಬರೆದಿರೋ ಕಂಗ್ಲಿಷ್ ಓದೋಕೆ ಸ್ವಲ್ಪ ಸಮಯ ಹಿಡೀತು! ಸಂಪದದಲ್ಲಿ ಕಂಗ್ಲೀಷಿನಲ್ಲಿ ಬರೆಯೋ ಹಾಗಿಲ್ರಿ. Smiling

ಅನುವಾದ ಬಿ ಎಂ ಶ್ರೀಯವರದ್ದಿರಲಿಕ್ಕಿಲ್ಲ. ಹೆಚ್ಚಿನ ಮಾಹಿತಿ ನನಗೆ ಬಂದ ಇ-ಮೇಯ್ಲ್ ನಲ್ಲಿದೆ. ಒಮ್ಮೆ ನೋಡಿ ಇಲ್ಲಿ ಪ್ರತಿಕ್ರಿಯೆ ಹಾಕುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2008 - 10:24am — narendra

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

narendra's picture

ಈ ಅನುವಾದ ಶ್ರೀ ಎಂ.ಎನ್ ಕಾಮತರದ್ದು. ಸವಿವಾತು ಎಂಬ ಶಬ್ದ ತಪ್ಪು ಇರಲಾರದು. ಇನ್ನೊಂದು ಕಡೆ `ಕಾಳರೂಢಿಯ' ಎಂದು ಅಚ್ಚಾಗಿದ್ದನ್ನು ಕೂಡ ಅನುಮಾನದಿಂದಲೇ ಕಾಲರೂಢಿ ಎಂದು ತಿಳಿದಿದ್ದೇನೆ. ಪ್ರತಿ ಎರಡನೆಯ ಸಾಲಿನಲ್ಲಿ ತಿಳಿವು, ಧೂಳು, ತೋಳು ಮತ್ತು ಸಲ್ಲಲಿತ, ಸುವಿಶಾಲತೆ,ಪಾಲಿಸೈ ಬರುವುದನ್ನು ಗಮನಿಸಬಹುದು. ನಾನು ಮಾಡಿದ ಬದಲಾವಣೆ ಕೂಡ ತಪ್ಪಿರಬಹುದು. ಈ ಅನುವಾದ ಛಂದೋಬದ್ಧವಾಗಿದೆ ಅನಿಸುತ್ತದೆ, ಹಾಗಾಗಿ ಶಬ್ದದ ಬಳಕೆಯಲ್ಲಿ ತೋರಿಕೆಗೆ ಕಂಡ `ಸರಿ' ನಿಜವಾದ ಸರಿಯಿರಬೇಕಾದುದೇನಿಲ್ಲ. ಇಂಗ್ಲೀಷ್ ಕವನವನ್ನು ಇಲ್ಲಿ upload ಮಾಡುತ್ತೇನೆ, ಆಗ ಈ ಅನುವಾದದ ನಿಜವಾದ ಸೌಂದರ್ಯ ನಮ್ಮ ಗಮನಕ್ಕೆ ಬರುತ್ತದೆ. ಪದದ ಅರ್ಥ, ಸಾಂದರ್ಭಿಕವಾಗಿ ಅದು ಸ್ಫುರಿಸುವ ಪರಿಕಲ್ಪನೆ ಮತ್ತು ಶಬ್ದದ ಧ್ವನಿ ಎಲ್ಲವನ್ನೂ ಗಮನಿಸಿ ಈ ಅನುವಾದ ನಡೆದಿದೆ. ಇದಕ್ಕಾಗಿ ಶ್ರೀ ಎಂ.ಎನ್.ಕಾಮತರಿಗೆ ನಮ್ಮ ಅಭಿನಂದನೆ ಸಲ್ಲಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2008 - 7:09pm — narendra

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

narendra's picture

ಹೀಗೇ ಸುಮ್ಮನೆ ಕುತೂಹಲಕ್ಕೆ ಈ ಇಂಗ್ಲೀಷ್ ಕವನ ಮತ್ತು ಅದರ ಕನ್ನಡ ಅನುವಾದವನ್ನು ಒಮ್ಮೆ ಜೊತೆ ಜೊತೆಯಾಗಿ ಓದಿ, ಅದರದ್ದೇ ಆದ ಒಂದು ಸೊಗಸು ಇಂಥ ಓದಿಗೆ ಇದೆ ಎನ್ನುವುದನ್ನು ಮನಗಾಣುವಿರಿ...

Where the mind is without fear and the head is held high
Where knowledge is free
Where the world has not been broken up into
fragments by narrow domestic walls
Where words come out from the depth of truth
Where tireless striving stretches its arms towards perfection
Where the clear stream of reason has not lost its
Way into the dreary desert sand of the dead habit
Where the mind is led forward by thee into ever
widening thought and action
Into that heaven of freedom, my father, let my Country awake!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 3:31am — hamsanandi

ಉ: ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ

hamsanandi's picture

ತ್ರಿವೇಣಿಯವರ ತುಳಸಿವನದಲ್ಲಿ, ಎಚ್.ಎಸ್.ವೆಂಕಟೇಶಮೂರ್ತಿ ಅವರ ಅನುವಾದ ನೋಡಬಹುದು:

ಎಲ್ಲಿ ಅರಿವಿಗೆ ಇರದೋ ಬೇಲಿ .... : http://www.tulasivana.com/?p=315

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುರದ ಪಾಪಿಗಳು
  • ಪ್ರಿಯಹಿತವಚನ
  • ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)
  • ಪ್ರೇಮದ ಓಲೆ
  • ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು....!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)
  • ’ಸೇಂಟ್ ಲೂಯಿ, ಗೇಟ್ವೆ ಆರ್ಚ್’ !
  • ಒಮ್ಮೆ ಮನೆಗೆ ಬಂದುಬಿಡು.
  • ‘ವಿನಾ ದೈನ್ಯೇನ ಜೀವನಂ..ಅನಾಯಾಸೇನ ಮರಣಂ!’
  • ಲ೦ಡನ್ ಪ್ರವಾಸಕಥನ ಭಾಗ ೧೪: ಒ೦ದಿಷ್ಟು ಚೂರು ಪಾರು--ಅಡುಗೆ
  • ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು
  • ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

ಇತ್ತೀಚಿನ ಪ್ರತಿಕ್ರಿಯೆಗಳು

  • keerthi2kiran
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 2:29pm
  • keerthi2kiran
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 2:27pm
  • ಸಂಗನಗೌಡ
    ಉ: Typical ನಲ್ಲನ ಒಲುಮೆಯಳಲು
    August 20, 2008 - 2:06pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 50 ಅತಿಥಿಗಳು ಆನ್ಲೈನ್ ಇರುವರು.


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator