ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ

May 15, 2008 - 2:03am — manjunath s reddy
 ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ

ನಡೆಯುತ್ತಾ ಇರುವಾಗ ಇಡ್ತಿರೊ ಪ್ರತಿಯೊಂದು ಹೆಜ್ಜೆಯೂ ಸಹ ಯಾವ ಕಾರಣಕ್ಕಾಗಿ ಅಂತ ಗೊತ್ತಿಲ್ದೇನೆ ನಡಿತಾನೆ ಇದೀನಿ . ದುನಿಯಾ, ಮುಂಗಾರು ಮಳೆ ನಂತರ ಹೊಸ ಅಲೆಯ [ಕೊಲೆಯ] ಹೆಸರಿನಲ್ಲಿ ಬರ್ತಿರೋ ಕನ್ನಡ ಸಿನಿಮಾಗಳ ಥರಾ. ಉದ್ದೇಶಾನೆ ಇಲ್ಲಾ ಆದ್ರೂನು ನಡೀತಾನೆ ಇದೀನಿ. ಕಾಲೇಜು ಮುಗೀತು, ಸಿನಿಮಾ ನೋಡ್ತಾ ಇರೋವಾಗ ಮುಂದೇನಾಗುತ್ತೆ ಅಂತ ಭವಿಷ್ಯದ ಕಡೆ ಯೋಚನೆ ಮಾಡ್ತಾ , ಸಿನಿಮಾ ಮುಗಿದ ಮೇಲೆ ಸಿನಿಮಾದಲ್ಲಿ ಏನಾಯ್ತು ಅಂತ ಭೂತ ಕಾಲದ ಕುರಿತು ಯೋಚನೆ ಮಾಡೋಥರಾ ಆಗಿದೆ ನನ್ನ ಪರಿಸ್ಥಿತಿ.ಭೂತದ [ಕಾಲದ ಬಗ್ಗೆ ಅಲ್ಲ] ಮಾತು ಬಂದಾಗಲೆಲ್ಲಾ ನಮ್ಮ ಸಿನಿಮಾದಲ್ಲಿರೊ ಭೂತಗಳ ಬಗ್ಗೆ ನನಗಿರೊ ಒಂದು ಪ್ರಶ್ನೆ ಏನಪ್ಪಾ ಅಂತಂದರೆಯಾಕೆ ಭೂತ್ ಗಳು[ ಎಲೆಕ್ಷನ್ ಭೂತ್ ಗಳಲ್ಲಾ] ಸದಾ ಹಿಂದೇನೆ ಬರ್ತಾವೆ. ಭಯಾ ಪಡಿಸ್ಬೇಕು ಅಂತಿದ್ದರೆ ಭವಿಷ್ಯ ಅಂದರೆ ಮುಂದೆಯಿಂದ ಬರಬಹುದಲ್ವಾ. ಬಹುಶ: ಭವಿಷ್ಯ ಅಮೂರ್ತದ ಗುಂಪಿಗೆ ಸೇರಿಸ್ಬಿಟ್ಟಿರೊದ್ರಿಂದ ಭೂತಕ್ಕೆ ಮೂರ್ತದ ಕಲ್ಪನೆ ಕೊಡೋದಿಕ್ಕಂತಲೇ ಇರಬೇಕು ಕಾಲಕ್ಕೂ ಮುರ್ತಕ್ಕೂ ಸಂಕೇತವಾಗಿ ಭೂತ್ ನಾತ್ ಯಾವಾಗಲೂ ಹಿಂದೆಯಿಂದಲೇ ಎಂಟ್ರಿ ಕೊಡ್ತಾನೆ. ಕ್ಷಮಿಸ್ಬೇಕು ಐಟಿ ಯುಗದಲ್ಲಿ ಕನ್ನಡದಲ್ಲಿ ಕೈಲಾಸಂ ನವರಿಂದ ನಾಮಕರಣವಾಗಿರೊ ಈ ಕಂಗ್ಲೀಷ್ ಪದಗಳು ಯಾವ್ ಲೈಸನ್ಸು, ಎಂಟ್ರಿ ಟಿಕೆಟ್ಟು ಇಲ್ದೆನೆ ಒಳಗಡೆ ನುಗ್ತಾ ಇರ್ತಾವೆ ನಮ್ ಇಂಡಿಯನ್ ಆರ್ಟ್ ಗ್ಯಾಲರಿಗೆ ಆವಾಗಾವಗ ಜನ ನುಗ್ಗಿದಂತೆ. ಈ ರೀತಿ ಆಗ್ಬಿಟ್ಟಿದೆ ಕಾಲೇಜ್ನ್ ಹಾಜರಾತಿಯ ಕೊನೆಯ ದಿನದಿಂದ ಆರಂಭವಾದ ನನ್ನ ದಿನಚರಿಯ ದಿನಗಳಲ್ಲಿಯ ಯೋಚನಾ ಲಹರಿ.ಹುಟ್ನಿಂದ ಹಾರ್ಟಿಸ್ಟ್ ಆಗಿ ಮಧ್ಯಂತರದಲ್ಲಿ ಆರ್ಟಿಸ್ಟ್ ಆಗೋಣ ಅಂತ ಆರ್ಟ್ ಕಾಲೇಜುಗ[ಘ]ಳಿಗೆ ಸೇರಿ...[ ಎಲ್ಲಾ ಕಾಲೇಜುಗಳಿಗೆ ಒಂದೇ ಸರ್ತಿ ಸೇರ್ಲಿಲ್ಲಾ ಒಂದಾದ ಮೇಲೆ ಒಂದು].ಕಾಲೇಜುಗಳಲ್ಲಿ ಎಂಟು ವರ್ಷ ಮಾಡಿದ ಓ ರಾಟ ಕ್ಷಮಿಸಿ ಹೋರಾಟ [ಈಗಿನ ಎಲೆಕ್ಷನ್ ಹೋರಾಟದ ತರಾ ಅಲ್ಲಾ ] ಇದು 'ನನ್ನ' ಮತ್ತು 'ನನಗೆ' ಮಧ್ಯ ನಡೆದ ಭೀಕರ ಹೋರಾಟದಲ್ಲಿ ಕ್ಲೈಮ್ಯಾಕ್ಸ್ ಭಾಗದ ಫಲಿತಾಂಶ ಏನಂದರೆ 'ಖಾಲಿ'ಯಾಗಿ ಓಡಾಡ್ತಿರೋದ್ರಿಂದ, ಆರ್ಟಿಸ್ಟ್ ಆಗಲು ಮಾಡುವ ಪ್ರಯತ್ನದ ಭಾಗ2[ ಮುಂಬರಲಿರುವ ಜೋಗಿ ಭಾಗ2 ಅಲ್ಲಾ] ಆರಂಭವಾಗಿದೆ ಅಂತ ಎಂಡ್ ನಲ್ಲಿ ಹೆಡ್ ಲೈನ್ ಕೊಡೋ ಪರಿಸ್ಥಿತಿ ಬಂದಿದೆ. ಈ ಹೆಡ್ ಲೈನ್ ಕೊಡೊದಿಕ್ಕೆ 'ಹೆಡ್'ನ ಅವಶ್ಯಕತೆ ಜಾಸ್ತಿ ಇದೆ ಅನ್ನೋ ವಿಷಯ ನನಗೆ ನನ್ನ "ಹೆಡ್'ನಿಂದ ಯೋಚನೆ ಮಾಡಿದಾಗಲೇ ತೋಚಿದ್ದು.ಅದೇ ಟೈಮಿಗೆ ಇನ್ನೊಂದು ಯೋಚನೆ ಬಂತು, ಈಗಿನ ನನ್ನ ಖಾಲಿ ಖಾಲಿ ಖಯಾಲಿಗಳೆನ್ನೆಲ್ಲಾ ಬರೆಯೋದಿಕ್ಕೆ ಖಾಲಿ ಹೆಡ್ ನಿಂದ ಹೇಗೆ ಸಾಧ್ಯ ಅಂತ.ಈ ಯೋಚನೆಗೆ ದಿ ಎಂಡ್ ಅಂತ ಹೇಳಿ ಹೊಸ ರೀತಿಯ ಸಿನಿಮಾ ಮಾಡ್ತಾ ಇದೀವಿ ಅಂತ ಹೇಳಿ ಹೊಸಾ 'ರೀಲ್'ನಲ್ಲಿ ಹಳೇ ರಿಯಲ್ ನ ತೋರಿಸೋ ಕನ್ನಡದ ಸಿನಿಮಾಗಳ ರೀತಿಯಲ್ಲೇ ನನ್ನ ಯೋಜನೆಗಳು ಯೋಚನೆಗಳಾಗ್ತ ಇವೆ. ನನ್ನ ಹಿಂದಿನ ಎಂಟು ವರ್ಷದ ಹೋ[ಓ]ರಾಟದಲ್ಲಿ 'ನಾನು' 'ನನ್ನ' ಜೊತೆ ಯುದ್ಧ ಮಾಡಿದ್ದೇನೆ ಅಂತ ಅನ್ಕೊಂಡು ಇದನ್ನ ಬರೆಯೋದಿಕ್ಕೆ ಶುರು ಮಾಡಿದ್ರೆ ಪಕ್ಷಾಂತರೀ ರಾಜಕಾರಣಿಗಳಿಗೆ ಓಟು ಹಾಕುವಷ್ಟೇ ಕಷ್ಟ ಆಗುತ್ತದೆ. ನನ್ನ ಹೋರಾಟದಲ್ಲಿ ನಾನು ಮಾಡಿದ್ದು ನನ್ನ ವಿರುದ್ಧ ಗೆಲ್ಲಬೇಕೆಂಬ ಹಠದಿಂದ 'ನಾನು' ಸದಾ 'ನನ್ನನ್ನು' ಟೀಕಿಸುತ್ತಾ ಕೊನೆಗೆ 'ನನ್ನ' ಪರವಾಗಿಯೇ ಕೆಲಸಾ ಮಾಡ್ತಾ ಬರೀತಾ ಇದೀನಿ. ಎಲ್ಲಾ 'ಹೆಡ್' ಲೀಲೆ. ಅಟ್ ಪ್ರೆಸೆಂಟ್ ಯೋಚನೆ ಏನಪ್ಪಾ ಅಂದರೆ ಎಂಟು ವರ್ಷ ಓದಿದ್ರೂ ಸಹ ನಾನೇಕೆ 'ಖಾಲಿ'ಯಾಗಿ ಓಡಾಡ್ತ ಇದೀನಿ. ಈಗ ಭೂತದಲ್ಲಿರೊ ಆಗಿನ ವರ್ತಮಾನದಲ್ಲಿ , ಈಗ ವರ್ತಮಾನವಾಗಿರೊ ಆಗಿನ ಭವಿಷ್ಯದಲ್ಲಿ ಮಾಡಬೇಕೆಂದು ಮೂರ್ತವಾಗುತ್ತವೆಯೆಂಬ ಅಮೂರ್ತ ಕಲ್ಪನೆಗಳನ್ನು . ಆದರೆ ಆಗಿನ ಅಮೂರ್ತಗಳನ್ನು ಹುಡ್ಕೊಂಡು ಈ ವರ್ತಮಾನಕ್ಕೆ ಬಂದ್ರೆ ಅಮೂರ್ತಗಳು ಈಗಿನ ಭೂತಕಾಲದ ಮೂರ್ತಗಳಾಗಿವೆ . ಹೌದು ನಾನ್ಯಾಕೆ ಈ ಮೂರ್ತ ಅಮೂರ್ತ ವೆಂಬ ನಮ್ ಕಲೆಯ ಪದ ಬಳಕೆಯನ್ನೇ ಹೆಚ್ಹು ಮೂರ್ತ ಗೊಳಿಸ್ತಾಇದ್ದೀನಿ. ಬಹುಶ: ಈಗಿನ ನಮ್ ಕಲಾವಿದರ ರಾಜಕಾರಣದ ಗಾಳಿ ನನಗೂ ಸೋಕಿರಬೇಕು. ಈ ಕಲಾವಿದರ ರಾಜಕಾರಣ ಯಾವುದಪ್ಪಾ ಅಂದರೆ ಕಲೆಯ ಕುರಿತೇ ಮಾತಾಡ್ಬೇಕು, ಕಲೆಯ ಮೂಲಕವೇ ಮಾತಾಡಬೇಕು, ಕಲೆ ಸರ್ವಾಂತರ್ಯಾಮಿ ಆಗಿರುವುದ್ರಿಂದ ಕಲೆಯ ವಿಷಯಾನೆ ಬರೀಬೇಕು ಎನ್ನುವ ರಾಜಕಾರಣ. "ಕಲೆಯಿಂದ, ಕಲೆಗಾಗಿ, ಕಲೆಗೋಸ್ಕರ". ನಮ್ಮ ಸಂವಿಧಾನದ ಧ್ಯೇಯ ವಾಕ್ಯವನ್ನು ಕಲೆಯ ಸೄಜನಶೀಲ ಅಭಿವ್ಯಕ್ತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮುಕ್ತವಾಗಿ ಬಳಸಬಹುದೆಂಬ ಧೈರ್ಯದಿಂದ 'ಯಿಂದ', 'ಗಾಗಿ', 'ಗೋಸ್ಕರ' ಗಳನ್ನು ಬಳಸುತ್ತಿದ್ದೇನೆ. ಇಷ್ಟೆಲ್ಲಾ ಹೆಡ್ ನಿಂದ ಬಂದಿದ್ದನ್ನು ಹೆಡ್ 'ಮುಖಾ'ಂತರ ಓದಿದ ಹೆಡ್ ನಲ್ಲಿ 'ಕ್ರಿಯೇಟಿವ್ ಖಾಲಿ' ತನ ಕ್ರಿಯೇಟ್ ಆದರೆ ಕನ್ನಡ ಸಿನಿಮಾ ಶತದಿನ ಓಡಿದಷ್ಟೇ [ಥಿಯೇಟರ್ನಿಂದ ಅಲ್ಲಾ] ಖುಷಿ ಈ ಖಾಲಿಯಾಗಿ ಓಡಾಡಿಕೊಂಡು ಕಾಲಿ ಖಯಾಲಿಗಳನ್ನ ಬರೆದಿರೋ 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ ಸಾರ್ಥಕವಾದಂತೆ.

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 305 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ
  • ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?
  • ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ
  • ' ಖಾಲಿ' ಮೂರ್ತ ರೂಪ
  • ಹೊಸವರ್ಷದ ಶುಭಾಷಯ - ಹೀಗೂ ಹೇಳಬಹುದೇ?
Syndicate content

ಲೇಖಕರು

manjunath s reddy's picture

ಪೂರ್ಣ ಹೆಸರು
manjunath s reddy

ಪರಿಚಯ

am a visual art student,art director in movies, adds, tele movies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 148 ಅತಿಥಿಗಳು ಆನ್ಲೈನ್ ಇರುವರು.


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator