ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ

ಅಮ್ಮಜಿಖಷೆಸ್ಸ ಖನಮ ಒಜಿ

May 12, 2008 - 6:32pm — rameshbalaganchi

ಅಕ್ಕರೆಯ ಸ್ನೇಹಿತರೆ,
ಸುಮಾರು ದಿನಗಳ ಹಿಂದೆಯೇ ನಾನು ಮಿತಾಕ್ಷರದ ಗುಟ್ಟು ಬಯಲು ಮಾಡುತ್ತೇನೆಂದಿದ್ದೆ. ಆದರೆ ವ್ಯಕ್ತಿಗತ ಮತ್ತು ವೃತ್ತಿಪರ ಕಾರಣಗಳಿಂದ ಬರೆಯುವುದು ತಡವಾಯ್ತು. ಕಾದು ಬೇಸತ್ತ ಎಲ್ಲರ ಕ್ಷಮೆ ಕೋರಿ.........
ಮಿತಾಕ್ಷರ ಒಂದು ಕೃತಕ ಭಾಷೆಯಾದರೂ ಉಪಯುಕ್ತ ಭಾಷೆ. ಆದ್ದರಿಂದಲೇ ಹೆಚ್ಚಿನ ಜನಕ್ಕೆ ಗೊತ್ತಿಲ್ಲದಿದ್ದರೂ ಕರ್ನಾಟಕದ ಅಲ್ಲಲ್ಲಿ ಇದರ ಬಳಕೆ ಕಂಡುಬಂದಿದೆ. ಈ ಬರಹದ ಮುಖ್ಯ ಉದ್ದೇಶ ಇದರ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಾದರೂ ನಮ್ಮ ಕೆಲವು ಕುಟುಂಬದವರಲ್ಲದೆ ಇನ್ನೂ ಯಾರಿಗೆ ಈ ಭಾಷೆ ತಿಳಿದೆದೆಯೆನ್ನುವುದನ್ನು ಅರಿತುಕೊಳ್ಳುವ ತವಕ.
ಇರಲಿ ವಿಷಯಕ್ಕೆ ಬರೋಣ. ಇದರ ಸೂತ್ರ ಹೀಗಿದೆ. ಅಕೌ ಖಗೌ ಘನಶ್ಚೈವ, ಚಟೌ ತಪೌ ನಮೇ ಜಡೆ. ಯಶೌ ರಷೌ ಲಸಸ್ಚೈವ ಹವಾಳಾಕ್ಷಿ ಬದಾ ಯಣ.
ಮೇಲಿನ ವರ್ಣಗಳನ್ನು ಜೋಡಿಮಾಡಿರುವ ಉದ್ದೇಶ ತಿಳಿಯಿತಲ್ಲವೆ! ಅ ವರ್ಣವು ಕ ವರ್ಣವನ್ನು ಮತ್ತು ಕ ವರ್ಣವು ಅ ವರ್ಣವನ್ನೂ ಸ್ಥಾನಂತರಗೊಳಿಸುತ್ತವೆ.( ಹಾಗಾಗಿ ಕ್ರಮವಾಗಿ ಅ, ಆ, ಇ, ಈ = ಕ, ಕಾ, ಕಿ, ಕೀ.... ) ಇದೇ ಧಾಟಿಯಲ್ಲಿ ಖ=ಗ, ಚ=ಟ, ತ=ಪ, ನ=ಮ,ಜ=ಡ, ಯ=ಶ, ರ=ಷ, ಲ=ಸ, ಹ=ವ, ಳ=ಕ್ಷ, ಬ=ದ, ಯ=ಣ
(ಘ=ನ ಅನ್ನುವುದು ಸುಮ್ಮನೆ ಇದನ್ನು ಸುಲಭವಾಗಿ ಕಲಿಯುವವರನ್ನು ಹಾದಿತಪ್ಪಿಸುವ ಸಲುವಾಗಿ ಅಷ್ಟೆ!)
ಮತ್ತೆ ಇನ್ನೊಂದು ನಿಯಮವೆಂದರೆ ಯ=ಶ ಮತ್ತು ಯ=ಣ ಇರುವುದರಿಂದ ಶ=ಣ ಅನ್ನುವ ಸಮೀಕರಣ ಇಲ್ಲಿ ಅನ್ವಯವಾಗುವುದಿಲ್ಲ.
ವಿಪಶ್ಶನ= ಹಿತಯ್ಯಮ (ಹಿತಣ್ಣಮ ಅಲ್ಲ.) ಅಯ್ಯಾ= ಕಶ್ಶಾ( ಕಣ್ಣಾ ಅಲ್ಲ),
ಇದರಲ್ಲಿ ಪದಗಳ ಮೊದಲಲ್ಲಿ ಮಾತ್ರವಲ್ಲದೆ ನಡುವಿನಲ್ಲೂ ಸ್ವರವರ್ಣಗಳು ಬರುವುದು ಇಲ್ಲಿಯ ವೈಶಿಷ್ಟ್ಯ ಕೆಲವರಿಗೆ ಕಷ್ಟವೂ ಹೌದು.
ಉದಾಹರಣೆಗೆ:- ಚಿಕ್ಕಪ್ಪ ಅನ್ನುವುದನ್ನು ಟೈಪ್ ಮಾಡಿ ತೋರಿಸುವುದು ಸಾದ್ಯವಿಲ್ಲ. ಚಿ=ಟಿ, ಕ್ಕ= ಅ ಕ್ಕೆ ಅವತ್ತು( ಕೈಬರಹದಲ್ಲಿ ಬರೆಯಬಹುದು- ಮತ್ತು ಉಚ್ಚರಿಸಬಹುದು) ಪ್ಪ=ತ್ತ
ಮೇಲಿನ ನಿಯಮಗಳ ಅನ್ವಯ ಮೊದಮೊದಲು ಕಷ್ಟಸಾಧ್ಯವೆನಿಸಿದರೂ ಆಮೇಲೆ ಬಹಳ ಸುಲಭವೆನಿಸುತ್ತದೆ.
ಅಭ್ಯಾಸಕ್ಕಾಗಿ ಕೆಲವು ಉದಾಹರಣೆಗಳು:-
ಅಪ್ಪ=ಕತ್ತ, ಅತ್ತೆ=ಕಪ್ಪೆ Smiling, ಕೋತಿ= ಓಪಿ, ಮುಂಗುಸಿ =ನುಂಖುಲಿ
ಕೆಲವು ಪದಗಳು ಪ್ರಾರಂಭದಲ್ಲಿ ಕಷ್ಟವೆನ್ನಿಸಿದರೂ ನಂತರ tonguetwisterಗಳಂತೆ ನಾಲಿಗೆಯನ್ನು ನುರಿಯುತ್ತವೆ.
ಜ್ಞ ಎಂಬ ಸಂಯುಕ್ತಾಕ್ಷರವನ್ನು ಗ್ನ ಎಂದೇ ಪರಿಗಣಿಸಲಾಗುತ್ತದೆ. ಹಾಗೆಯೇ ವಟರ್‌ಸುಳಿಯ ಬದಲು ರೇಫ (ರ-ಕಾರ)ವಾಗಿ ಪರಿವರ್ತಿಸಲಾಗಿದೆ)
ಜ್ಞಾನ = ಖ್ಮಾಮ, ಗೃಹಸ್ಥ = ಖ್ಷವಲ್ಫ.
ಅಭ್ಯಾಸಕ್ಕಾಗಿ ಇನ್ನೂ ಕೆಲವು ಉದಾಹರಣೆಗಳು
ಕಮಿಲುಪಿಬೆ ಶಾಓ ಕಿಂಬು
ಮೀಮೇಮೇ ಮಮ್ಮಹಕ್ಷೆಂಬು
ನಾಶಬಾ ಸೋಅಬಿಂಬ
ಮಮಖಾಖೇ ದಂಬಹಕ್ಷೆಂಬು
ಕಾವಾ ಕೆಂಫ ನಭುಷ ಶಾಪಮೆ
ಒಸ್ಸುವುಜುಖಿ ಕೊನ್ನೆ ಮಮ್ಮ ವಾಖೇ ಲುನ್ನಮೆ

ಲುಷಿಶುಹ ಲೋಮೆಶು ಲೂಲಿಬೆ ಮಿಮ್ಮಬೇ ತಷಿನಕ್ಷ
ಕಿಮ್ಶಾಷ ಅಮಲಿಖೋ ಮೀಮು ವೋಬಷೆ ಪಕ್ಷನಕ್ಷ
ತೂಷ್ಯಟಂಬಿಷ ಷಡಾ ವಾಇಬ ಮಿಮ್ಮಶ ನೊಖಹಮು ಅಂಜ ಳಯ
ಮಾ ಐಬಿ ಮೀಮೇ ಲೆಷೆನಮೆ
ಪದ್ದಿ ಮಮ್ಮ ಕತ್ತಿಒ ಕೊನ್ನೆ ವಾಖೇ ಲುನ್ನಮೆ.
ಇಷ್ಟು ಸಾಕೆನ್ನಿಸುತ್ತಿದೆ. ಪ್ರಯತ್ನಿಸಿ. ಸಂತೋಷವಾದರೆ ಖುಷಿಪಡಿ ಕಷ್ಟವಾದರೆ ಕೈಬಿಡಿ.

  • ಜ್ಞಾನವಾಹಿನಿ
~.~
  • Login or register to post comments
  • 1154 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 12, 2008 - 10:12pm — ಶ್ರೀನಿಧಿ

ಉ: ಅಮ್ಮಜಿಖಷೆಸ್ಸ ಖನಮ ಒಜಿ

ಶ್ರೀನಿಧಿ's picture

ಇದು cryptography ಅಲ್ಲಿ ಸಬ್ಸ್ಟಿಟ್ಯೂಷನ್ ಸೈಫರ್ (substitution cipher) ಅನ್ನುತಾರೆ. ಇದು ಮೊದಲ ನೋಟಕ್ಕೆ ಕಷ್ಟ ಅನ್ನಿಸಿದರೂ ಸಾಕಷ್ಟು ಮಿತಾಕ್ಷರಳು ಸಿಕ್ಕರೆ ಬಿಡಿಸುವುದು ಸುಲಭ. frequency analysis - ಯಾವ ಅಕ್ಷರ ಹೆಚ್ಚು ಬರುತ್ತದೋ ಅದು ಸಾಮಾನ್ಯವಾಗಿ ಮಿತಾಕ್ಷರದಲ್ಲಿಯೂ ಹೆಚ್ಚು ಕಂಡುಬರುತ್ತದೆ. ಇದು ಗುಟ್ಟು ಒಡೆಯಬೇಕೆಂದಿದ್ದವರು ಮಾಡುವ ಮೊದಲನೆಯ ಪ್ರಯತ್ನ. ಉದಾಹರಣೆಗೆ ಇಂಗ್ಲಿಷ್ನಲ್ಲಿ e=r (rot13) ಆದರೆ e ಇದ್ದಲ್ಲೆಲ್ಲಾ r ಕಾಣಿಸುತ್ತದೆ. ಇದು ಸಿಕ್ಕರೆ ಸಾಕು ಗುಟ್ಟು ಒಡೆಯಲು.
ಕನ್ನಡದಲ್ಲಿ ಒತ್ತಕ್ಷರಗಗಳು ಬರುವುದರಿಂದ ಗುಟ್ಟು ಒಡೆಯುವುದು ಸ್ವಲ್ಪ ಕಷ್ಟ ಆಗುತ್ತದೆ ಆದರೆ ಸಾಧ್ಯ. ನಮ್ಮ ಭಾಷೆಗಳಲ್ಲೂ ಇರುವ ಈ ಗುಟ್ಟು ಭಾಷೆ ( Smiling ) ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ.

ಲಿಂಕುಗಳು ಇಲ್ಲಿವೆ

http://en.wikipedia.org/wiki/Substitution_cipher
http://en.wikipedia.org/wiki/Caesar_cipher

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 11:12pm — hpn

ಉ: ಅಮ್ಮಜಿಖಷೆಸ್ಸ ಖನಮ ಒಜಿ

hpn's picture

ಸೀಝರ್ ಸಿಫರ್ ಕೂಡ substitution cipher ಅಲ್ವಾ? (Ceaser Cipher)

Julius Ceaser ಸಂದೇಶ ಕಳಿಸೋದಕ್ಕೆ ಇದನ್ನು ಉಪಯೋಗಿಸುತ್ತಿದ್ದನಂತೆ! Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 9:52pm — ಶ್ರೀನಿಧಿ

ಉ: ಅಮ್ಮಜಿಖಷೆಸ್ಸ ಖನಮ ಒಜಿ

ಶ್ರೀನಿಧಿ's picture

ಹೌದು! ಅದೂ ಒಂದು substitution cipher. ರೂಲ್ ಬೇರೆ ಅಷ್ಟೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 8:59am — madhava

ಉ: ಅಮ್ಮಜಿಖಷೆಸ್ಸ ಖನಮ ಒಜಿ

madhava's picture

ಪುಂದಾ ಭಮ್ಣಹಾಬಖಕ್ಷು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 11:31am — Shivakumar.Revadi

ಉ: ಅಮ್ಮಜಿಖಷೆಸ್ಸ ಖನಮ ಒಜಿ

Shivakumar.Revadi's picture

ಮೀಹು ಓಚ್ಚಿಷೋ ನಿಪಾಳಷಿ ಅಸಿಶಸು ಪುಂದಾ ಪನಾಲೆಶಾಖಿಬೆ ಕಾಬಷೆ ಕಿಬಮ್ಮು ನಾಪ ಮಾಜಸು ಕಿದ್ದಷಾಬಷೂ ದೇಉ, ನಪ್ಪು ನಾಪಮಾಜುಹಬಷಿಂಬ ನಾಪ್ರ ಕಿಬಷ ನೇಸೆ ವಿಜಿಪ ಲಾಬಿಲ ದವುಬು.

ಮಮ್ಮಿ........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 11:36am — mahesha

ಉ: ಅಮ್ಮಜಿಖಷೆಸ್ಸ ಖನಮ ಒಜಿ

mahesha's picture

ಇಲ್ಲಿ ಮಿತಾಕ್ಷರ ಹೇಗಾಯ್ತು...?

ನನ್ನಿ => ಮಮ್ಮಿ ಆಯ್ತು.. ಎನಿತು ಅಕ್ಕರವಿದ್ದವೋ, ಅನಿತೇ ಇವೆ!!

ಅದ ಸರಿ.. ಈ ಬಾಸೆಯನ್ನ ಉಲಿಯೋದು ಏನ್ ಸಲೀಸಾ? ಒಳ್ಳೇ ಸಂಸ್ಕೃತ ಇದ್ದ ಹಾಗೆ ಇದೆ! Smiling

ಆದ್ರೂ ಗುಟ್ಟಾಗಿ ಏನಾರ ಬರೆಯಕ್ಕೆ ಚನ್ನಾಗಿದೆ!!

ನನ್ನಿ ರೀ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 11:52am — madhava_hs

ಉ: ಅಮ್ಮಜಿಖಷೆಸ್ಸ ಖನಮ ಒಜಿ

madhava_hs's picture

ಹರೇ ಪ್ರಕಟನಾಗು !

ಇದು ಕನ್ನಡೇತರ ಭಾಷೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 1:31pm — Shivakumar.Revadi

ಉ: ಅಮ್ಮಜಿಖಷೆಸ್ಸ ಖನಮ ಒಜಿ

Shivakumar.Revadi's picture

ಹಂಸಾನಂದಿಯವರೆ....ನಿಮ್ಮ ಬರಹ ತುಂಬಾ ಚೆನ್ನಾಗಿದೆ.
ಈಗ ನನ್ನ ತಲೆಹರಟೆ :
ನೀವು ಮತ್ತು ರಮೇಶ ಬಳಗಂಚಿಯವರು ನಮ್ಮ ಗುಪ್ತಚರ ಇಲಾಖೆಗೆ ಮತ್ತಷ್ಟು ಕೆಲಸಾ ಕೋಡೊ ಹಂಗ ಕಾಣ್ಸತ್ತ. ಈಗಾಗಲೇ ಉಗ್ರರ ಕೋಡ್‍ಗಳನ್ನು ಡಿಕೋಡ್ ಮಾಡಾಕ ತಿಣುಕಾಡ್ತಿರೋ ಈ ಮಂದಿಗೆ ನಿಮ್ಮ ಈ ಮಿತಾಕ್ಷರಿಗಳು ಮತ್ತು ಕಪಟಯಾದಿ ಸೂತ್ರಗಳು (ಈ ತರಹದವು ನಿಮ್ಮಿಬ್ಬರ ಬತ್ತಳಿಕೆಯಲ್ಲಿ ಇನ್ನೂ ಎಷ್ಟಿವೆಯೋ ಎನೋ) "ನೀರಿಳಿಯ ಗಂಟಲೋಳ್ ಕಡುಬಂ ತುರುಕಿದಂತಾಯ್ತು"

ನನ್ನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 1:51pm — rameshbalaganchi

ಉ: ಅಮ್ಮಜಿಖಷೆಸ್ಸ ಖನಮ ಒಜಿ

rameshbalaganchi's picture

ಪ್ರೀತಿಯ ಶಿವಕುಮಾರ್,
ಮೊದಲಿಗೆ ನೀವು ಹಂಸಾನಂದಿಯವರಿಗೆ ಹೇಳಬೇಕಾದ ವಿಷಯವನ್ನು ಅವರ ಬರಹಕ್ಕೆ ಬದಲಾಗಿ ನನ್ನ ಬರಹಕ್ಕ್ಕೆ ಪ್ರತಿಕ್ರಿಯೆಯಾಗಿ ಹಾಕಿದ್ದೀರಿ. Smiling
ನನ್ನ ಹೆಸರು - - - "ಬಳಗಂಚಿ" ಅಲ್ಲ, "ಬಾಳಗಂಚಿ"
ನಿಮ್ಮ "ತಲೆಹರಟೆಗೆ" ಉತ್ತರ.
ಭಯೋತ್ಪಾದಕರು ಇತ್ಯಾದಿ. . . . . .
ಹೀಗೂ ಯೋಚನೆ ಮಾಡಬಹುದಲ್ಲ!! ನನ್ನನ್ನೂ ಮತ್ತು ಹಂಸಾನಂದಿಯವರನ್ನು ನಮ್ಮ ಈಗಿನ ಕೆಲಸ ಬಿಡಿಸಿ ಇಂಟೆಲಿಜೆನ್ಸ್ ಖಾತೆಗೆ ವರ್ಗಾಯಿಸಿದರೆ ಮತ್ತೊಂದು ಕೆಲಸದ ರುಚಿ ಕೂಡ ನೋಡಬಹುದೇನೋ. ಅಥವಾ ನಮ್ಮ ನಿವೃತ್ತಿಯನಂತರ ಅಲ್ಲಿಗೆ ಕರೆಸಿಕೊಳ್ಳಬಹುದೇನೋ.
"ನೀರಿಳಿಯದ. . . . . . . ಇತ್ಯಾದಿ.
ನಿಮ್ಮ ಹುನ್ನಾರ ಏನು? ಈ ಮಾತಾಡಿ ಜನ ಕಡುಬು ತಿನ್ನದಂತೆ ಮಾಡುವುದೋ? ಅಥವಾ ನೀವು ಏನೇ ತಿಂದರೂ ಅಗಿಯುವುದಿಲ್ಲವೆ? ಅಥವಾ ಹಲ್ಲಿಲ್ಲವೆ? ನೀವು ಈಗಾಗಲೇ ಯಾವುದಾದರೂ ಕಡುಬನ್ನು ನುಂಗಿದ್ದರೆ ಇತ್ತೀಚಿನ ಕಡುಬು ಮೊದಲಿನ ಕಡುಬನ್ನು ತಳ್ಳಿ ನಿಮ್ಮ ಹೊಟ್ಟೆ ಸೇರಿಸಿರುತ್ತದೆ. ಯೋಚಿಸಬೇಡಿ.Smiling

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 14, 2008 - 5:59pm — Shivakumar.Revadi

ಉ: ಅಮ್ಮಜಿಖಷೆಸ್ಸ ಖನಮ ಒಜಿ

Shivakumar.Revadi's picture

ಬಾಳಗಂಚಿಯವರೆ ಈ ನೀರಿಳಿಯದ ಗಂಟಲು ನಮ್ಮ ಗುಪ್ತಚರ ಇಲಾಖೆಯನ್ನುದ್ದೆಸಿಸಿದ್ದು.
ನನ್ನಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಮ್ಮಜಿಖಷೆಸ್ಸ ಖನಮ ಒಜಿ
  • ಏಕಾಕ್ಷರೀ
  • ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ
  • ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
  • ಕನ್ನಡಂಗಳ್: ಪದ್ಯ ಹೀಗಿದೆ
Syndicate content

ಲೇಖಕರು

rameshbalaganchi's picture

ಪೂರ್ಣ ಹೆಸರು
Ramesh Balaganchi

ಪರಿಚಯ

ನಾನು ಸರಳ ಮನುಷ್ಯ. ಬೆಂಗಳೂರಿನಲ್ಲಿ ಸಂಸ್ಕೃತ ಆನರ್ಸ್ ಮಾಡಿ 1979 ರಿಂದ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನ ಕೆಲಸ ಮಾಡುತ್ತಿದ್ದೇನೆ. ಭಾಷಾ ಕಲಿಕೆ, ಪಕ್ಷಿವೀಕ್ಷಣೆ ತುಂಬಾ ಇಷ್ಟದ ಹವ್ಯಾಸಗಳು. ಇತ್ತೀಚೆಗೆ ಕಂಪ್ಯೂಟರ್ ಬಳಸಲು ಕಲಿಯುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .
  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator