ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ

ದಾವೂದ್ ಇಬ್ರಾಹಿಂ ಬಂಧನ......ನಂತರ

May 12, 2008 - 9:18am — csomsekraiah

ಪಾಕಿಸ್ಥಾನದ ನಾಯಕರು ತಲೆ ರೋಸಿ ಹೋಗಿದ್ದರು ,ರಾಷ್ಟ್ರದಲ್ಲಿ ದಿನ ನಿತ್ಯವೆನ್ನುವಂತೆ ಬಾಂಬು ದಾಳಿಗಳು , ಮಾದಕ ದ್ರವ್ಯಗಳ , ಆಯುಧಗಳ , ಅಳತೆ ಇಲ್ಲದ ಕಳ್ಳ ಸಾಗಾಣಿಕೆ ಇದು ಹೀಗೆಯೇ ಮುಂದುವರಿದರೆ ರಾಷ್ಟ್ರವೂ ಉಳಿಯುವುದಿಲ್ಲ ,ಪ್ರಪಂಚದ ದೃಷ್ಟಿಯಲ್ಲಿ ದೇಶದ ಘನತೆಯೂ ಮಣ್ಣೂಗೂಡುತ್ತದೆ , ಎಂಬುದು ಅವರಿಗೆ ಸ್ಪಷ್ಟವಾಯಿತು .

ಇದೆಲ್ಲದರ ಮೂಲವನ್ನು ಪತ್ತೆ ಹಚ್ಚಲು ಅವರು ಒಂದು ರಹಸ್ಯ ತನಿಖೆ ಆರಂಭಿಸಿದರು ,ಫಲಿತಾಂಶ ಅವರನ್ನು ದಂಗುಬಡಿಸಿತ್ತು ,ಈ ವಿದ್ರೋಹಿ ಚಟುವಟಿಕೆಗಳಲ್ಲಿ ಪಾಕೀಸ್ಥಾನೀ ರಾಷ್ಟ್ರೀಯರ ಸಂಖ್ಯೆ ತುಂಬಾ ಕಡಿಮೆ ಇತ್ತು . ಬಹುತೇಕರು ಪಾಕೀಸ್ಥಾನದಲ್ಲಿ ಆಶ್ರಯ ಪಡೆದಿದ್ದ ವಿದೇಶೀಯರೇ ಆಗಿದ್ದರು .ಅದರಲ್ಲೂ ದಾವೂದ್ ಇಬ್ರಾಹಿಂ ಎಂಬ ಭಾರತೀಯ ಮೂಲದ ವ್ಯಕ್ತಿಯದೇ ಕಾನೂನು ಬಾಹಿರ ಚಟುವಟಿಕೆಗಳ ಸಿಂಹ ಪಾಲು ಇರುವುದು ಅವರಿಗೆ ಮನವರಿಕೆಯಾಯಿತು .

ಇದನ್ನು ಪರಿಹರಿಸಿಕೊಳ್ಳಲು ಅವರು ಧೃಢ ನಿರ್ಧಾರ ಮಾಡಿದರು ದಾವೂದ್ ನನ್ನು ಬಂಧಿಸಿ ಜೈಲಿನಲ್ಲಿಟ್ಟರು .ಮಾಮೂಲಿನಂತೆ ಅಲ್ಲಲ್ಲಿ ಗಲಭೆಕೋರರ , ಗೂಂಡಾಗಳ ಗಲಾಟೆಗಳು ನಡೆದವಾದರೂ ಸರ್ಕಾರ ಅದಕ್ಕೆ ಸೊಪ್ಪು ಹಾಕಲಿಲ್ಲ . ಅವರಲ್ಲಿ ಬುದ್ದಿವಂತ ಮುತ್ಸದ್ದಿಯೊಬ್ಬ , ಈ ತಲೆ ನೋವನ್ನು ತಾವು ಅನುಭವಿಸುವುದಕ್ಕಿಂತಾ ಭಾರತಕ್ಕೇ ವರ್ಗಾಯಿಸುವುದು ಬುದ್ದಿವಂತಿಕೆ ಎಂದು ಸಲಹೆ ನೀಡಿದ .

’ಹೀಗೆ ಹೀಗೆ ದಾವೂದ್ ನನ್ನು ಬಂಧಿಸಿದ್ದೇವೆ , ಕೋರ್ಟಿಗೆ ಹಾಜರು ಪಡಿಸಲು ನಮ್ಮ ನೆಲದಲ್ಲಿ ಅವನ ಅಪರಾಧಗಳು ಕಾಣಿಸುತ್ತಿಲ್ಲ ,ಭಾರತದಲ್ಲಿ ಅವನ ವಿರುದ್ದ ಉಗ್ರ ಸ್ವರೂಪದ ಅಪರಾಧದ ದಾಖಲೆಗಳಿವೆಯೆಂದು ತಿಳಿದು ಬಂದಿದೆ, ಭಾರತ ಕೋರುವುದಾದರೆ ಭಾರತಕ್ಕೆ ಅವನನ್ನು ಹಸ್ತಾಂತರಿಸುತ್ತೇವೆ ’ಎಂಬ ಅರ್ಥದ ಸಂದೇಶ ಭಾರತೀಯ ವಿದೇಶಾಂಗ ಇಲಾಖೆಗೆ ಬಂದು ತಲುಪಿದಾಗ , ಇಡೀ ದೇಶ ಕುಣಿದು ಕುಪ್ಪಳೀಸುವುದೊಂದೇ ಬಾಕಿ ಇತ್ತು .ನೆರೆಯ ರಾಷ್ಟ್ರಕ್ಕೆ ಇಂತಹ ಸದ್ಬುದ್ದಿಯನ್ನು ಕೊಟ್ಟ ಆ ಭಗವಂತನನ್ನು ಎಷ್ಟು ಕೊಂಡಾಡಿದರೂ ತೀರದಾಗಿತ್ತು .

ಸತತ ಸಂಪರ್ಕದ ನಂತರ ದಾವೂದನ ಹಸ್ತಾಂತರದ ದಿನ ನಿಗದಿಯಾಗಿಯೇ ಬಿಟ್ಟಿತು , ಅವನನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತಂದ ಪಾಕಿಸ್ಥಾನದ ಭದ್ರತಾ ಅಧಿಕಾರಿಗಳು , ವಿದ್ಯುಕ್ತವಾಗಿ ಅವನನ್ನು ಭಾರತೀಯ ಅಪರಾಧ ತನಿಖಾ ದಳಕ್ಕೆ ಹಸ್ತಾಂತರ ಮಾಡಿ, ಅವನನ್ನು ಒಪ್ಪಿಸಿದ ದಾಖಲೆಗಳಿಗೆ ಸಹಿ ಪಡೆದು ಹೋದರು .

ಅತ್ಯಂತ ಬಿಗಿ ಭದ್ರತೆಯೊಡನೆ ಅವನನ್ನು ದೆಹಲಿಯ ಜೈಲಿನಲ್ಲಿಡಲಾಯಿತು . ಮಹಾ ರಾಷ್ಟ್ರ ಪೋಲೀಸರು ಮುಂಬಯಿಯಲ್ಲಿಯೇ ಅವನ ಪಾತಕ ಜಗತ್ತು ವಿಸ್ತೃತವಾಗಿರುವುದರಿಂದ ಮುಂಬೈ ಪೋಲೀಸರ ವಶಕ್ಕೆ ಅವನನ್ನು ನೀಡಲು ಕೋರಿಕೆ ಸಲ್ಲಿಸಿದರು . ನಂತರ ಅನೇಕ ರಾಜ್ಯಗಳು ತನಿಖೆಗಾಗಿ ಅವನನ್ನು ವಶಕ್ಕೆ ಪಡೆಯಲು ಅರ್ಜಿಗಳನ್ನು ಸಲ್ಲಿಸಿದವು . ಅವನ ಬಂಧನ ಮಾನವ ಹಕ್ಕುಗಳಿಗನುಗುಣವಾಗಿ ನಡೆದಿದೆಯೇ? ಜೈಲಿನಲ್ಲಿ ಅವನನ್ನು ನಡೆಸಿಕೊಳ್ಳುತ್ತಿರುವ ರೀತಿ ಸಮರ್ಪಕವಾಗಿದೆಯೇ ? ಎಂದೆಲ್ಲಾ ಭಾರತೀಯ ಒಳ್ಳೆಯ ಮನಸ್ಸುಗಳು ತನಿಖೆಯನ್ನು ಆರಂಭಿಸಿದವು, ಇದೆಲ್ಲದರಿಂದ ತಲೆ ಚಿಟ್ಟು ಹಿಡಿದ ಕೇಂದ್ರ ಸರ್ಕಾರ ಅವನಿಗಾಗಿ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ , ಎಲ್ಲರ ಅಹವಾಲುಗಳನ್ನು ಆ ನ್ಯಾಯಲಯಕ್ಕೆ ಸಲ್ಲಿಸುವಂತೆ ಸೂಚಿಸಿ ಕೈ ತೊಳೆದುಕೊಂಡಿತು . ಅಷ್ಟರಲ್ಲಿ ರಾಷ್ಟ್ರದ ಸುಪ್ರಸಿದ್ದ ವಕೀಲರೊಬ್ಬರು ಅವನ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು , ಯಥಾ ಪ್ರಕಾರ ಭಾರತೀಯ ತನಿಖಾ ಸಂಸ್ಥೆಗಳು ಇದನ್ನು ಬಲವಾಗಿ ವಿರೋಧಿಸಿ ವಾದ ಮಂಡಿಸಿದರು .

ಎಲ್ಲವನ್ನೂ ಆಲಿಸಿದ ನ್ಯಾಯಾಲಯ ದಾವೂದ್ ಇಬ್ರಾಹಿಮ್ ನ ಅಪರಾಧಗಳು ಮೇಲು ನೋಟಕ್ಕೆ ಸಾಬೀತಾಗಿರುವುದರಿಂದ , ಅವನ ಕೃತ್ಯಗಳು ರಾಷ್ಟ್ರ ವಿದ್ರೋಹದ ಪರಿಧಿಯಲ್ಲಿ ಬರುವುದರಿಂದ ಜಾಮೀನು ಸಾಧ್ಯವಿಲ್ಲವೆಂದು ತೀರ್ಪು ನೀಡಿತು .

ನಂತರ ಅವನ ಅಂತಸ್ತಿಗನುಗುಣವಾಗಿ , ವಿಶೇಷ ಜೈಲನ್ನು ನಿರ್ಮಿಸಿ , ಎಲ್ಲಾ ವಿಧವಾದ ಸಕಲ ಸವಲತ್ತುಗಳೊಡನೆ ಅವನ ಜೈಲಿನ ದಿನಗಳು ಕಳೆದು ಹೋಗಲು ಎಲ್ಲಾ ಏರ್ಪಾಟುಗಳೂ ನಡೆದವು . ವರ್ಷಾನುಗಟ್ಟಲೆ ಕೇಸು ನಡೆದರೂ ತನಿಖಾ ಸಂಸ್ಥೆಗಳಿಗೆ ಅವನ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ದಾಖಲೆಗಳ ಅಭಾವದಿಂದ ಆರೋಪ ಪಟ್ಟಿ ಸಲ್ಲಿಸಲು ಅವರು ವಿಫಲರಾದರು .ಕೆಲವು ಉತ್ಸಾಹಿ ಯುವ ಅಧಿಕಾರಿಗಳು ಅವನ ಮೇಲೆ ದಾಖಲಾಗಿದ್ದ ಅಪರಾಧಗಳಿಗೆ ಸಂಬಂಧಪಟ್ಟ ಫೈಲುಗಳನ್ನು ಪಡೆಯಲು ಅನೇಕ ಕಛೇರಿಗಳಿಗೆ ಎಡತಾಕಿದರಾದರೂ ಆಶ್ಚರ್ಯಕಾರಕವಾಗಿ ಅನೇಕ ಫೈಲುಗಳು ಕಾಣೆಯಾಗಿದ್ದುದು ಅವರ ಉತ್ಸಾಹಕ್ಕೆ ತಣ್ಣೀರು ಬೀಳಲು ಕಾರಣವಾಯಿತು .

ಈ ವೇಳೆಗೆ ಅನವಶ್ಯಕವಾಗಿ ವ್ಯಕ್ತಿಯೊಬ್ಬನನ್ನು ಬಂಧನದಲ್ಲಿ ಮುಂದುವರಿಸುವುದನ್ನು ಪ್ರತಿಭಟಿಸಿದ ಭಾರತೀಯ ಚಿಂತನಶೀಲ ಮನಸ್ಸುಗಳು , ಅವನ ಬಿಡುಗಡೆಗೆ ಗಲಭೆ ಶುರು ಮಾಡಿದವು . ಕೋರ್ಟುಗಳು ತನಿಖಾಧಿಕಾರಿಗಳಿಗೆ ಛೀಮಾರಿ ಹಾಕಿದ್ದೇ ಬಂತು ,ಅಧಿಕಾರಿಗಳು ನ್ಯಾಯಾಲಯದಿಂದ ಉಗಿಸಿಕೊಂಡು ,ಏನೂ ಆಗಿಲ್ಲವೆಂಬಂತೆ ಹೊರ ಬಂದು ಮುಗುಳ್ನಕ್ಕರು . ಯಥಾ ಪ್ರಕಾರ ಅಪರಾಧ ಸಾಬೀತು ಪಡಿಸಲು ವಿಫಲರಾದ ಅಧಿಕಾರಶಾಹಿಯನ್ನು ತೆಗಳಿದ ನ್ಯಾಯಾಲಯ ಆಪಾದನೆಗಳು ಸ್ಥಿರಪಡದ ಕಾರಣವನ್ನು ಕೊಟ್ಟು ದಾವೂದನನ್ನು ಬಿಡುಗಡೆ ಮಾಡಿತು .

ಅವನು ಜೈಲಿನಿಂದ ಹೊರ ಬರುವ ದಿನ ಸಾವಿರಾರು ಅಭಿಮಾನಿಗಳು ಹಾರ ತುರಾಯಿಯೊಂದಿಗೆ ಅವನನ್ನು ಸ್ವಾಗತಿಸಲು ಕಾದಿದ್ದರು , ಮುಂದೆ ಯಥಾ ಪ್ರಕಾರ ಭಾರತೀಯ ಪ್ರಜೆಯಾಗಿದ್ದ ಇಬ್ರಾಹಿಂ ಸಾಹೇಬರು ಚುನಾವಣೆಗೂ ನಿಂತು ಗೆದ್ದೂ ಬಂದರು; ಕೇಂದ್ರದಲ್ಲಿ ಮಂತ್ರಿಯೂ ಆದರು . ಅವರ ಮೊದಲಿನ ಎಲ್ಲ ದಂಧೆಗಳೂ ಈಗ ಗೌರವಯುತವಾಗಿ, ನಿರಾತಂಕವಾಗಿ ಝಡ್ + ಭದ್ರತೆಯೊಡನೆ ಸಾಗುತ್ತಲೇ ಇವೆ, ಇಬ್ರಾಹಿಂ ಸಾಹೇಬರು ಮೀಸೆಯ ಆಡಿಯಲ್ಲಿ ನಗುತ್ತಲೇ ಇದ್ದಾರೆ . ( ಈ ಲೇಖನ ಸಿದ್ದವಾಗಿ ಒಂದು ವಾರವಾಗಿತ್ತು , ಅಪ್ ಲೋಡ್ ಮಾಡಲು ಸಮಯ ದೊರಕಿರಲಿಲ್ಲ . ಇಂದಿನ ಪ್ರಜಾವಾಣಿಯಲ್ಲಿ ದಾವೂದನ ಬಗ್ಗೆ ಪಾಕೀಸ್ಥಾನದ ನಿಲುವಿನಲ್ಲಾದ ಬದಲಾವಣೆಯ ವರದಿಯನ್ನು ನೋಡಿ ನಗು ಬಂತು )

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 647 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 12, 2008 - 2:12pm — ಗಣೇಶ

ಉ: ದಾವೂದ್ ಇಬ್ರಾಹಿಂ ಬಂಧನ......ನಂತರ

ಗಣೇಶ's picture

ಸೋಮಣ್ಣನವರೆ,

ನೂರಕ್ಕೆ ನೂರು- ನೀವು ಬರೆದಂತೆ ನಡೆಯುತಿತ್ತು.

ವೀರಪ್ಪನ್ ಅನ್ನು ಜೀವಂತ ಹಿಡಿದಿರುತ್ತಿದ್ದರೆ, ಈ ಚುನಾವಣೆಯಲ್ಲಿ ೩ ಪಕ್ಷದವರೂ ಅವನನ್ನು ಸೇರಿಸಲು ನಾ ಮುಂದು ತಾ ಮುಂದು ಎಂದು ಪ್ರಯತ್ನಿಸುತ್ತಿದ್ದರು.ಹೇಗೂ ಕೋಟಿಗಟ್ಟಲೆ ಹಣ ಅವನ ಬಳಿ ಇತ್ತು.

ಜೈಲಿನಿಂದಲೇ ಇಲಕ್ಶನ್ ಗೆ ನಿಂತು, ಮುಂದಿನ ಸಂಪುಟದಲ್ಲಿ ಅರಣ್ಯ ಮಂತ್ರಿ/ಗೃಹ ಮಂತ್ರಿ/ಮುಖ್ಯಮಂತ್ರಿ(!?) ಆಗುತ್ತಿದ್ದನೋ ಏನೋ..

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 10:08pm — csomsekraiah

ಉ: ದಾವೂದ್ ಇಬ್ರಾಹಿಂ ಬಂಧನ......ನಂತರ

csomsekraiah's picture

ಪ್ರೀತಿಯ ಗಣೇಶ್ ’ನಡೆಯುತ್ತಿತ್ತು ’ ಅಲ್ಲ ’ನಡೆದೀತು ಮುಂದೆ’ ಯೋಚಿಸಬೇಡಿ , ನಾವಿರುವ ಭಾರತದಲ್ಲಿ ಯಾವುದೂ ಅಸಂಭವವಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಟಾಕಿ ಸಿಡಿಸಿದ್ದಕ್ಕೆ ಪಾತಕಿ ಪಟ್ಟವೇ?!
  • ರಾಜ ಮುದ್ದು ರಾಜ
  • ಭಾರತೀಯ ಪ್ರಜಾಸತ್ತೆ
  • ಹೊಳಲ್ಕೆರೆಗೆ ಪ್ರಥಮಸ್ಥಾನ ; ಚಂದ್ರಶೇಖರನ ಅಖಂಡವಿಜಯ !
  • ಸಂತಸದ ಗುಟ್ಟು
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .
  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator