ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ

ಚಂದಮಾಮನಿಗೆ ಅರವತ್ತು......

May 9, 2008 - 3:11pm — Nagendra.trasi

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳುತ್ತದೆ.

ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌‌ನೆಡೆಗೆ ಮೋಹಿತನಾಗಿದ್ದೆ. ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು.

ಹೌದು ಈಗ ಚಂದಮಾಮನ ನೆನಪು-ನೇವರಿಕೆ ನಮ್ಮಿಂದ ನಿಧಾನಕ್ಕೆ ತೆರೆ-ಮರೆಗೆ ಸರಿಯತೊಡಗಿದೆ. ಆ ಜಾಗದಲ್ಲಿ ಹ್ಯಾರಿ ಪಾಟರ್ ಬಂದು ಕುಳಿತಿದ್ದಾನೆ. ಯಾರು ಎಷ್ಟೇ ಬಾಯಿ ಬಡಿದಕೊಂಡರೂ ಚಂದಮಾಮ, ಬಾಲಮಿತ್ರ, ಈಸೋಪನ ಕಥೆಗಳು, ಅಕ್ಬರ್-ಬೀರ್‌‌ಬಲ್‌ ಕಥೆಗಳ ಮುಂದೆ ಹ್ಯಾರಿ ಪಾಟರ್ ಅನ್ನು ನಿವಾಳಿಸಿ ಒಗೆಯಬೇಕು.

1947ರ ಜುಲೈ ತಿಂಗಳಿನಲ್ಲಿ ನಾಗಿ ರೆಡ್ಡಿ ಮತ್ತು ಅವರ ಆಪ್ತಮಿತ್ರ ಚಕ್ರಪಾಣಿಯವರು ಜತೆಗೂಡಿ ಚಂದಮಾಮನನ್ನು ಹುಟ್ಟು ಹಾಕಿದ್ದರು. ಚಂದಮಾಮ ಎರಡು ಬಣ್ಣಗಳಲ್ಲಿ ಪ್ರಪ್ರಥಮವಾಗಿ ಹೊರಬಿದ್ದ 64ಪುಟಗಳ ಸಂಚಿಕೆಯ ಬೆಲೆ 6ಅನ್ನಾ (ಅಂದರೆ 37 ಪೈಸೆ), 1947ರ ಜುಲೈಯಲ್ಲಿ 6 ಸಾವಿರ ಪ್ರತಿಯನ್ನು ಅಚ್ಚು ಹಾಕಿಸಲಾಗಿತ್ತಂತೆ. ಅದನ್ನು ಅಂಚೆ ಕಚೇರಿ ಮೂಲಕ ಕಳುಹಿಸುವ ಏರ್ಪಾಟು ಮಾಡಲಾಗಿತ್ತು. ಹೀಗೆ ನಿರಂತರವಾಗಿ ಮಾಸಿಕ ಪ್ರಕಟಣೆ ಕಂಡ ಚಂದಮಾಮ 1998ರಲ್ಲಿ ನೌಕರರ ವಿವಾದದಿಂದಾಗಿ ಪ್ರಕಟಣೆ ನಿಂತುಹೋಗಿತ್ತು.ನಂತರ ಮತ್ತೆ ಪ್ರಕಟಣೆಯನ್ನು ಆರಂಭಿಸಲಾಗಿತ್ತು,

ಪ್ರಥಮವಾಗಿ ಚಂದಮಾಮ ಚೆನ್ನೈಯಲ್ಲಿ ಆರಂಭಗೊಂಡಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ, ನಂತರ ನಾಲ್ಕು ವರ್ಷಗಳ ಬಳಿಕ ಆರು ಭಾಷೆಗಳಲ್ಲಿ ಪ್ರಕಟಣೆ ಕಾಣಲು ಆರಂಭಿಸಿದ ಚಂದಮಾಮ ನಂತರ ಏಕಕಾಲದಲ್ಲಿ ಇಂಗ್ಲೀಷ್,ಕನ್ನಡ ಸೇರಿದಂತೆ 12ಭಾಷೆಗಳಲ್ಲಿ ಅದರಲ್ಲೂ ಚಂದಮಾಮದ ಹೆಗ್ಗಳಿಕೆ ಯಾವುದೆಂದರೆ ಪ್ರಪ್ರಥಮವಾಗಿ ಸಿಂಧಿ, ಗುರುಮುಖಿ, ಸಿಂಹಳ ವಿದೇಶ ಭಾಷೆಗಳಲ್ಲಿಯೂ ಪ್ರಕಟವಾಗತೊಡಗಿತು. 1978ರಲ್ಲಿ ಸಂಸ್ಕೃತ ಭಾಷೆಯಲ್ಲಿಯೂ ಚಂದಮಾಮವನ್ನು ಆರಂಭಿಸಲಾಗಿತ್ತು. 2004ರಲ್ಲಿ ಮಕ್ಕಳಿಗಾಗಿ ಬುಡಕಟ್ಟು ಭಾಷೆಯಲ್ಲಿ ಪ್ರಕಟಣೆ ಆರಂಭಿಸಿದ ಕೀರ್ತಿಗೆ ಭಾಜನವಾದದ್ದೂ ಚಂದಮಾಮ.

1981ರಲ್ಲಿ ಅಂಧರಿಗಾಗಿ ಬ್ರೈಲ್ ಎಡಿಷನ್ ಅನ್ನು ಹೊರ ತರಲು ಆರಂಭಿಸಿತ್ತು. ಆ ಮಟ್ಟದಲ್ಲಿ ಬೆಳೆದ ಹೆಮ್ಮೆ ಚಂದಮಾಮ ಕಾಮಿಕ್ಸ್‌‌ನದ್ದು. ಹೀಗೆ ಚಂದಮಾಮ ತನ್ನ ಅರವತ್ತು ಸಂವತ್ಸರಗಳ ಯಶೋಗಾಥೆಯಲ್ಲಿ ಏರಿದ ಎತ್ತರ ಮಾತ್ರ ಆಗಾದವಾದದ್ದು, 2003ರಲ್ಲಿ ಸಿಂಗಾಪುರದಲ್ಲಿ ಇಂಗ್ಲಿಷ್-ತಮಿಳ್ (ಸಿಂಗಾಪುರದಲ್ಲಿ ಅಂಬುಲಿಮಾಮಾ ಎಂಬ ಹೆಸರಿನಲ್ಲಿ ಪ್ರಕಟಣೆ ಕಾಣುತ್ತಿದ್ದು, ಇದನ್ನು ಅಲ್ಲಿನ ತಮಿಳು ಟಿಚರ್ಸ್ ಯೂನಿಯನ್ ಪುಸ್ತಕ ಹೊರತರುವ ಜವಾಬ್ದಾರಿ ವಹಿಸಿಕೊಂಡಿದೆ). ಭಾಷೆಯಲ್ಲಿ, ಉತ್ತರ ಅಮೆರಿಕದಲ್ಲಿ ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.

ಸುಮಾರು 3 ಲಕ್ಷಕ್ಕೂ ಅಧಿಕ ಓದುಗರನ್ನು ಪಡೆದಿರುವ ಚಂದಮಾಮ, ಅಂದಾಜು ಏಳು ಲಕ್ಷ ಪ್ರಸಾರ ಸಂಖ್ಯೆಯನ್ನು ಹೊಂದಿದೆ. ಅಲ್ಲದೇ ಚಂದಮಾಮ ದೀರ್ಘಕಾಲ ಪ್ರಕಟಣೆ ಕಂಡ ಮಕ್ಕಳ ಮ್ಯಾಗಜೀನ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ, 2002ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ದಾಖಲೆ ಬರೆದಿದೆ. ಆದರೂ ನಮ್ಮನ್ನೆಲ್ಲ ಸಾಹಿತ್ಯದೆಡೆಗೆ ದೂಡಿದ, ಅರವತ್ತು ವರ್ಷಗಳನ್ನು ಪೂರೈಸಿದ ಚಂದಮಾಮಕ್ಕೊಂದು ಶುಭ ಹಾರೈಕೆ......

  • ಜ್ಞಾನವಾಹಿನಿ
~.~
  • Login or register to post comments
  • 334 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 9, 2008 - 5:55pm — Aravind M.S

ಉ: ಚಂದಮಾಮನಿಗೆ ಅರವತ್ತು......

Aravind M.S's picture

ವಿಷಾದದ ಒಂದೇ ವಿಷಯವೆಂದರೆ ಚಂದಮಾಮದ ಆಗಿನ ಗುಣಮಟ್ಟ ಈಗ ಇಲ್ಲದಿರುವುದು. ನಾವು ಅಂದು ಬೆರಗಿನಿಂದ ನೋಡುತ್ತಿದ್ದ ಅದ್ಭುತ ಚಿತ್ರಗಳು ಈಗ ಕಾಣುತ್ತಿಲ್ಲ. ವಪ, ರಝಿ, ಜಯ, ಶಂಕರ್ ರ ಚಿತ್ರಗಳು ಈಗ ಬರುತ್ತಿಲ್ಲ. ಎಲ್ಲಿ ಹೋದರು ಈ ಅದ್ಭುತ ಕಲಾಕಾರರು / ಅವರ ಪೀಳಿಗೆಯ ಕಲಾಕಾರರು ಎಂದು ವ್ಯಥೆ ಪಡುತ್ತಿದ್ದೇನೆ. ಯಾರೋ ಹೇಳಿದಂತೆ ಇಂದಿನ ದಿನಗಳ ಟಿ.ವಿ ವೀಕ್ಷಣೆಯು ಇದರ ಕಾರಣವಾಗಿರಬಹುದು. ಆದರೆ ಇದರಿಂದ ನಮ್ಮ ವ್ಯಥೆಯೇನೂ ಕಡಿಮೆಯಾಗಲಿಕ್ಕಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲಾ ಚಂದಮಾಮ ಪ್ರಿಯರಿಗಾಗಿ
  • ಪಾಪು ಮತ್ತು ಚಂದಮಾಮ
  • ಹಳೇ ಚಂದಮಾಮ ಇಲ್ಲಿದ್ದಾನೆ
  • "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ?
  • ಹಳೇ ಚಂದಮಾಮ ಇಲ್ಲಿದ್ದಾನೆ
Syndicate content

ಲೇಖಕರು

Nagendra.trasi's picture

ಪೂರ್ಣ ಹೆಸರು
ನಾಗೇಂದ್ರ .ತ್ರಾಸಿ

ಪರಿಚಯ

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮಿಯಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಚೆನ್ನೈಯ ವೆಬ್ ದುನಿಯಾ ಡಾಟ್ ಕಾಮ್‌‌ನಲ್ಲಿ ಆನ್ ಲೈನ್ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .
  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator