ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಶ್ರೀಬಸವೇಶ್ವರರ ವಚನಗಳು

May 8, 2008 - 5:52pm — sushil
ವಿಶ್ವಗುರು,ಭಕ್ತಿಭಂಡಾರಿ,ಕಾಯಕಯೋಗಿ,ತ್ರಿವಿಧ ದಾಸೋಹಿ  ಬಸವಣ್ಣನವರು||

ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯೂ !!

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು?
ಮನದಾ ಕೋಪ ತನ್ನರಿವಿನಾ ಕೇಡು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ !!

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ?
ಈ ಮಾಯೆಯ ಕಳವೊಡೆ ಎನ್ನಳವಲ್ಲ;
ನೀವೇ ಬಲ್ಲಿರಿ ಕೂಡಲಸಂಗಮದೇವಾ!!

ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ !!

ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ
ಮನ ನಿಮ್ಮದೆಂದ ಬಳಿಕ ಬೇರೆ ಮನವಿಲ್ಲ
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ
ಇಂತೀ ತ್ರಿವಿಧವೂ ನಿಮ್ಮದೆಂದರಿದ ಬಳಿಕ ಎನಗೆ ಬೇರೆ
ವಿಚಾರವುಂಟೆ ಕೂಡಲಸಂಗಮದೇವಾ!!

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ!!

ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ
ಕೂಡಲಸಂಗಮದೇವಾ
ಹಾಲಲ್ಲದ್ದು ನೀರಲ್ಲದ್ದು ನಿಮ್ಮ ಧರ್ಮ!!

  • ಅಧ್ಯಾತ್ಮ
~.~
  • Login or register to post comments
  • 545 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 9, 2008 - 1:58pm — muralihr

ಉ: ಶ್ರೀಬಸವೇಶ್ವರರ ವಚನಗಳು

muralihr's picture

ನಿಮ್ಮ ಹತ್ತಿರಾ ಸಮಗ್ರ ವಚನಗಳು ಉ೦ಟೋ ?? ನ೦ಗೇ ಒ೦ದು ವಚನ ಬೇಕಾಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 10, 2008 - 4:08pm — csomsekraiah

ಉ: ಶ್ರೀಬಸವೇಶ್ವರರ ವಚನಗಳು

csomsekraiah's picture

ಮುರಳೀಧರ್ ಯಾವ ವಚನ ಎಂದು ಹೇಳಿ ಪ್ರಯತ್ನಿಸೋಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 10, 2008 - 9:16pm — muralihr

ಉ: ಶ್ರೀಬಸವೇಶ್ವರರ ವಚನಗಳು

muralihr's picture

ಬೀದಿ ನಾಯಿಯ ಕಣ್ಣ ಮೂಲಕ ಜಗವ ನೋಡು ಅ೦ತಾ ಒ೦ದು ವಚನವಿದೆಯ೦ತೆ .. ಯಾರೋ ಬಸವಣ್ಣನವರು ಬರೆದದ್ದು ಅ೦ತಾ ಹೇಳಿದ್ದರು.
ಅದಕ್ಕೆ ಚೆಕ್ ಮಾಡ್ ಬೇಕಿತ್ತು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 12, 2008 - 11:25am — sushil

ಉ: ಶ್ರೀಬಸವೇಶ್ವರರ ವಚನಗಳು

sushil's picture

ಪ್ರತಿಕ್ರಿಯೆಗೆ ಧನ್ಯವಾದ.
ಸಮಗ್ರ ವಚನಗಳು ನನ್ನ ಹತ್ತಿರ ಇದೆ, ಹುಡುಕಿ ತಿಳಿಸುವೆ ಮುರಳಿಯವರೆ.
ಇಂತಿ ನಿಮ್ಮ,
ಸುಶೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2008 - 12:55pm — csomsekraiah

ಉ: ಶ್ರೀಬಸವೇಶ್ವರರ ವಚನಗಳು

csomsekraiah's picture

ನೀವು ತಿಳಿಸಿದ ರೀತಿಯ ವಚನ ನನ್ನ ಕಣ್ಣಿಗೆ ಬಿದ್ದಿಲ್ಲ , ಆಸಕ್ತಿದಾಯಕವಾಗಿದೆ , ಹುಡುಕುತ್ತೇನೆ , ನನಗೆ ಮೊದಲು ಸಿಕ್ಕರೆ ನಿಮಗೆ ತಿಳಿಸುತ್ತೇನೆ . ನಿಮಗೆ ಸಿಕ್ಕರೆ ತಿಳಿಸಿ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 13, 2008 - 5:58pm — ಸಂಗನಗೌಡ

ಉ: ಶ್ರೀಬಸವೇಶ್ವರರ ವಚನಗಳು

ಸಂಗನಗೌಡ's picture

Quote:
ತನಗಾದ ಆಗೇನು? ಅವರಿಗಾದ ಚೇಗೇನು?
ಹೀಗೆಂದರೇನು? ಸರಿಯಾಗಿ ತಿಳಿಯಲಿಲ್ಲ.. ಬಲ್ಲವರು ತಿಳಿಸಿ ಪ್ಲೀಸ್...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 18, 2008 - 1:15am — sushil

ಉ: ಶ್ರೀಬಸವೇಶ್ವರರ ವಚನಗಳು

sushil's picture

ತನಗಾದ ಲಾಭವೇನು?ಅವರಿಗಾದ ನಷ್ಟವೇನು?
ಎಂದು ಅರ್ಥೈಸಬಹುದು.

-ಸುಶೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 2:45pm — kannadakanda

ಉ: ಶ್ರೀಬಸವೇಶ್ವರರ ವಚನಗಳು

kannadakanda's picture

ವಚನಸಾಹಿತ್ಯ ಸಂಪೂರ್ಣವಾಗಿ ಶಿಷ್ಟ ಸಾಹಿತ್ಯ. ದಾಸರ ಸಾಹಿತ್ಯದಂತೆ ಸಂಪೂರ್ಣ ಆಡುಮಾತಲ್ಲ. ಆದರೆ ಶರಣರು ಎಲ್ಲಾ ಜನ ಮಾತಾಡುವ ಕನ್ನಡ ಭಾಷೆಯನ್ನೇ ಆಯ್ಕೆ ಮಾಡಿಕೊಂಡರು. ಹಾಗಾಗಿ ಶಿಷ್ಟ ಸಾಹಿತ್ಯವಾದ್ದಱಿಂದ ಆ ಕಾಲದಲ್ಲಿ ’ರ’ ಮತ್ತು ’ಱ’ ನಡುವೆ ಉಚ್ಚಾರ ಭೇದವಿತ್ತು.
ಇಲ್ಲಿ ಉದಾಹರಿಸಿರುವ ವಚನಗಳಲ್ಲಿ ಕೆಲವು ತಪ್ಪುಗಳನ್ನು ಹೇೞುತ್ತಿದ್ದೇನೆ. ಇದನ್ನು ಎಲ್ಲಾ ಕನ್ನಡಿಗರೂ ಗಮನಿಸಬೇಕು.
’ತನ್ನರಿವಿನಾ’ ತಪ್ಪು ಸರಿಯಾದ ರೂಪ ’ತನ್ನಱಿವಿನ’
’ತಾನರಿದವಂಗೆ’ ಬದಲು ’ತಾನಱಿದವಂಗೆ’
’ಬೇರೆ’ ಬದಲು ’ಬೇಱೆ’
’ನಿಮ್ಮನರಿದವಂಗೆ’ ಬದಲು ’ನಿಮ್ಮನಱಿದವಂಗೆ’
’ನಿಮ್ಮದೆಂದರಿದ’ ಬದಲು ’ನಿಮ್ಮದೆಂದಱಿದ’

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 2:49pm — kannadakanda

ಉ: ಶ್ರೀಬಸವೇಶ್ವರರ ವಚನಗಳು

kannadakanda's picture

ಈ ಹಿಂದೆ ತಿಳಿಸಿದ ತಪ್ಪೋಲೆಯಲ್ಲಿ ’ತನ್ನಱಿವಿನ’ ಎಂಬುದಱ ಬದಲು ’ತನ್ನಱಿವಿನಾ’ ಎಂದು ಓದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 2:50pm — mahesha

ಉ: ಶ್ರೀಬಸವೇಶ್ವರರ ವಚನಗಳು

mahesha's picture

ಆದರೆ ಇಂದು ಓದೋರಿಗೆ ನೆಱವಾಗಲೀ ಅಂತ ಹೀಗೆ ಬರೆದಿರಬೋದು..
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 2:58pm — kannadakanda

ಉ: ಶ್ರೀಬಸವೇಶ್ವರರ ವಚನಗಳು

kannadakanda's picture

'ನೆಱವು’ ತಪ್ಪು. ’ನೆರವು’. ’ರ’ಕ್ಕೆ ಬದಲಾಗಿ ’ಱ’ ಬೞಸಬಹುದೆಂಬ ಕಲ್ಪನೆಯಿದ್ದರೆ ಅದು ತಪ್ಪು. ಬಸವೇಶ್ವರರ ಮೂಲವಚನಗಳಲ್ಲಿ ’ರ’ ಮತ್ತು ’ಱ’ ಸ್ಪಷ್ಟವಾಗಿ ಭೇದವಿದೆ. ’ೞ’ ಮತ್ತು ’ಳ’ ಗಳ ಭೇದದ ಗೊಡವೆಯೇ ಬೇಡೆಂದ ಹರಿಹರ ಕವಿ ’ಱ’ ಮತ್ತು ’ರ’ ಗಳ ವಿಷಯದಲ್ಲಿ ಅಂತಹ ನಿಲುವು ತಳೆಯಲಿಲ್ಲ. ಅಂದರೆ ಆ ಕಾಲದ ಶರಣರು ಹಾಗೂ ಇತರ ಕವಿಗಳಿಗೆ ’ರ’ ಮತ್ತು ’ಱ’ ಗಳ ನಡುವಿನ ಉಚ್ಚಾರ ವ್ಯತ್ಯಾಸ ಹಾಗೂ ಬೞಕೆಯಲ್ಲಿ ಸ್ಪಷ್ತ ಕಲ್ಪನೆಯಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 3:43pm — mahesha

ಉ: ಶ್ರೀಬಸವೇಶ್ವರರ ವಚನಗಳು

mahesha's picture

ಹೋ..

ನೆಱ ಅಂತ ಒಂದು ಒರೆ ಇದೆ ಅಲ್ವ?

ನೆಱೆತು
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 3:50pm — kannadakanda

ಉ: ಶ್ರೀಬಸವೇಶ್ವರರ ವಚನಗಳು

kannadakanda's picture

ನೆಱೆ=ತುಂಬಾ ನೆಱೆ ನಂಬಿದೆ ನಿನ್ನ ಇತ್ಯಾದಿ. ನೆಱೆ=ಪ್ರವಾಹ ನೀರು ತುಂಬಿ ಬಂದಾಗ. ಆದರೆ ನೆರೆ ಅಂದರೆ ಒಟ್ಟಾಗು ಎಂದರ್ಥ. ನೆರವು ಅಂದರೆ ಸಹಾಯ ಮಾಡುವುದಕ್ಕೆ ಒಂದು ಕಡೆ ಸೇರು ಅರ್ಥಾತ್ ನೆರವು=ಗುಂಪು ನೆರೆಯವನು ಪಕ್ಕದವನು ನೆರವಾದರೆ ಮಾತ್ರ. ಇಲ್ಲದಿದ್ದರೆ ಹೊಱೆ ಅಷ್ಟೆ. ನೆರೆಹೊಱೆ ಹಾಗೆ ಬಂದಿರಬಹುದು. ನಮಗೆ ಬೇಕಾದಾಗ ಅವನ ನೆರವು. ಅವನಿಗೆ ನಮ್ಮ ಅವಶ್ಯಕತೆಯಿದ್ದಾಗ ನಮಗವ ಹೊಱೆಯೂ ಆಗಬಹುದು. ಆಗ ನಾವವನಿಗೆ ನೆರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 22, 2008 - 8:18am — mahesha

ಉ: ಶ್ರೀಬಸವೇಶ್ವರರ ವಚನಗಳು

mahesha's picture

ನೆರೆಗೂದಲು.. ಇಲ್ಲಿ ಯಾವ ನೆರೆ/ಱೆ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 3:44pm — kannadakanda

ಉ: ಶ್ರೀಬಸವೇಶ್ವರರ ವಚನಗಳು

kannadakanda's picture

ಆಗೇನು? ಚೇಗೇನು? ಆಗು ಅಂದರೆ ನಮಗೆಲ್ಲ ಗೊತ್ತಿರುವಂತೆ ನಮಗಾಗುವುದು ಅಂದರೆ ಲಾಭ. ತ್ಯಾಗ->ಚಾಗ->ಚೇಗ ಬಿಡಬೇಕಾಗಿ ಬರುವಂಥದ್ದು. ಅಂದರೆ ನಷ್ಟ. ಚಾಗ ಹೇಗೆ ಚೇಗ ಆಯ್ತೆಂದರೆ ಬೇಡ<->ಬ್ಯಾಡ ಆಗುವಂತೆ ತ್ಯಾಗ<->ತ್ಯೇಗ ಚ್ಯಾಗ<->ಚೇಗ ಅಂದರೆ ತ್ಯಾಗ. ಅಂದರೆ ಚೇಗ ಅಂದರೆ ಚಾಗ -> ತ್ಯಾಗ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದು ಭೋದಿಸುವ ವಿಷಯವಲ್ಲ ,ಕಾರ್ಯ ರೂಪಕ್ಕೆ ತರಬೇಕು
  • "ಕಳಬೇಡ ಕೊಲಬೇಡ"
  • ವಚನ
  • ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
Syndicate content

ಲೇಖಕರು

sushil's picture

ಪೂರ್ಣ ಹೆಸರು
ಸುಶೀಲ್ ಕುಮಾರ್

ಪರಿಚಯ

ಪುಸ್ತಕ,ಚಿತ್ರಕಲೆ,ಸಂಗೀತ ನನ್ನ ಸ್ನೇಹಿತರು.ತಾಯಿಗೆ ತಾಯ್ನಾಡಿಗೆ ಒಳ್ಳೆ ಮಗನಾಗೋ ಆಸೆ Sticking out tongue

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 4:40pm
  • veenadsouza
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 4:29pm
  • ASHMYA
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:55pm
  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator