ಸುಭಾಷಿತಗಳು
ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬||

- Login or register to post comments
- 808 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಸುಭಾಷಿತಗಳು
ಹರಿ ಪ್ರಸಾದ್..
ಇದು ಪೂರ ಸಮ್ಸುಕುರುತದ ಎಳೆ.. ಕನ್ನಡದ ಅಲ್ಲದ್ದು..
ಇದಕ್ಕೆ ಅನುವಾದ ಬರೆದಿದ್ದರೆ ಬೇರೆ ಮಾತು..
ಇದನ್ನು ಕಿತ್ತು ಹಾಕಕ್ಕೆ ಮನವಿ!
=====================================
ಮಾಯ್ಸ!
ಉ: ಸುಭಾಷಿತಗಳು
ಈಗ ಅನುವಾದ ಕೊಟ್ಟಿದ್ದೀನಲ್ಲ ಸ್ವಾಮಿ. ಗೊತ್ತಿರುವ ಒಳ್ಳೆಯ ವಿಚಾರ ಹೇೞೋಣವೆಂದರೆ ಯಾಕಿಷ್ಟು ಅಸಹನೆ. ಯಾವ ಕಡೆಯಿಂದ ಬಂದರೂ ಒಳ್ಳೆಯದನ್ನು ಸ್ವೀಕರಿಸೆನ್ನುತ್ತಾರೆ ಹಿರಿಯರು. ಈಗೇನನ್ನುತ್ತೀರಾ?
ತಮ್ಮವನೇ ಆದ
ಕನ್ನಡಕಂದ
ಉ: ಸುಭಾಷಿತಗಳು
ನೀವು ಈ ಸಯಿಟಿನ ಕಾಯಿದೆ ಕಟ್ಟಳೆ ನೋಡಿ...
ಕನ್ನಡದಲ್ಲಿ ಬರೆಯಬೇಕು...!
ಪೂರ್ತಿ ಸಂಸ್ಕೃತದಲ್ಲಿ ಬರೆಯೋದು, ಇಲ್ಲನ ಕಟ್ಟಳೆ ಮುರಿದಂತೆ.
=====================================
ಮಾಯ್ಸ!
ಉ: ಸುಭಾಷಿತಗಳು
ಈಗಲೂ ಇದನ್ನು ಇಟ್ಟುಕೊಳ್ಳಬೇಕೆನ್ನುತೀರೋ? ಅಥವಾ ಕಿತ್ತುಹಾಕಿ ಎನ್ನುತ್ತೀರೋ?!
ಉ: ಸುಭಾಷಿತಗಳು
ಆದ್ರೆ ಸಂಸ್ಕೃತದ ಸುಬಾಶಿತಗಳಿಗಿಂತ ಹಿರಿಗನ್ನಡ/ಹೞಗನ್ನಡದ ಪದ್ಯಗಳನ್ನು ಬಿಡಿಸಿ ಬರೆಯಿರಿ.. ನಲಿವಾಗುವುದು..
ಇದು ಕನ್ನಡದ ಕೂಟ.. ಅಲ್ಲವೇ.. !! ಸಂಸ್ಕೃತದ ಸುಬಾಶಿತಗಳನ್ನು ಬೇಕಾದರೆ ತೆಲುಗು, ಮರಾಟಿ, ಹಿಂದಿ, ಮಳಯಾಳಂ ಸಯಿಟುಗಳಲ್ಲೂ ಹಾಕಬೋದೇನೋ!
=====================================
ಮಾಯ್ಸ!
ಉ: ಸುಭಾಷಿತಗಳು
ಕನ್ನಡಕಂದರೆ,
ನಿಮ್ಮ ಸಕ್ಕದ ಸುಬಾಶಿತದ ತಲೆ ಬುಡ ಅರ್ತ ಆಗಲಿಲ್ಲ. ಕನ್ನಡಯ್ಸಿ ಹಾಕಿದ್ದರೆ ಚೆನ್ನಾಗಿತ್ತು. ಹೆಚ್ಚು ಮಂದಿಗೆ ಅರ್ತ ಆಗುತ್ತದೆ. ಇದು ಕನ್ನಡದ ತಾಣ. ಎಲ್ಲಾರಿಗೂ ಸಕ್ಕದ ಬರಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸುಭಾಷಿತಗಳು
ಅನುವಾದ ಕೊಡುತ್ತೇನೆ. ಕೊಂಚ ಕಾಲಾವಕಾಶ ಕೊಡಿ. ಚುನಾವಣಾಕರ್ತವ್ಯದಲ್ಲಿ ಭಾಗಿಯಾಗಿದ್ದೇನೆ.
ಉ: ಸುಭಾಷಿತಗಳು
ಕನ್ನಡದಲ್ಲಿ ಇರದ ಬರಹಗಳನ್ನು ಸಂಪದದಲ್ಲಿ ಅಳಿಸ ಹಾಕಲಾರುವುದು..
ನಿಮ್ಮೀ ಬರಹವೂ ಕೂಡ ಅದಕ್ಕೆ ಸಲ್ಲುವುದು!
=====================================
ಮಾಯ್ಸ!
ಉ: ಸುಭಾಷಿತಗಳು
ಕನ್ನಡಕಂದರೆ,
ಇಲ್ಲಿಯವರೆಗೆ ಈ ಸುಭಾಷಿತಗಳನ್ನು ನಾನು ಕೇಳಿರಲಿಲ್ಲ! ಧನ್ಯವಾದಗಳು..
ಓದಿದಕೂಡಲೆ, ಕನ್ನಡಿಸಬೇಕೆಂದು ಮನಕ್ಕೆ ಬಂದಹಾಗೆ ಬರೆದಿದ್ದೇನೆ
ತಪ್ಪು ತಿಳಿಯದಿರಿ. ನಿಮ್ಮ ಒಳ್ಳೇ ಭಾಷಾಂತರಕ್ಕೆ ಕಾಯುವೆ.
ಆರು ಬಗೆಯ ಹುಸಿವಿದ್ಯೆಗಳು:
ಕಲಿತ ವಿದ್ಯೆ ಮಾಡಬೇಕುಪಕಾರ ತನಗೋ ಮೇಣ್ ಪರರಿಗೋ
ಇಲ್ಲದೆ ಅದಿರಲು ಬರಿ ಹೊತ್ತಿಗೆಯೊಳು, ಅದರಿಂದೇನು ಭಾರವಿದ್ಯೆಯಿಂ? || 1||
ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2||
ಬಾಯ್ಮಾತಿನಲಿದ್ದು ಬಳಕೆಯಲಿ ಇಲ್ಲದೆಲೆ
ಬರಿ ರಂಜಿಸಲು ಇರಲದು ಗಿಳಿಪಾಠವು ||3||
ಬಲ್ಲವರ ಮುಂದೆ ತೋರದೆಲೆ, ಮೂರ್ಖರ ಮುಂದೆಯೆ ಬೆಳಗುತಲಿ
ಬಯಸಿದವರಿಗೆ ಕಲಿಸದಿರಲದುವೆ ಧೂರ್ತ ವಿದ್ಯೆಯು || ೪||
ಆವಕಲಿಕೆಯದು ಹೆರರ ಮಚ್ಚರವ ತರಿಸುತಲಿ
ಸುಖನಿದಿರೆಯ ಕೆಡಿಸುವುದದು ಶೂಲವಿದ್ಯೆಯು! || ೫||
ಇತರರಿಗೆ ಅಪಕಾರಿ ತನಗೆ ಮಾತ್ರ ಒಳಿತಾಗಲೆಂತಿರಲು
ಕಲಿತದ್ದು ಕಲಿಕೆಯಲ್ಲದುವೆ ಚೋರವಿದ್ಯೆಯು! ||೬||
ಕಡೆಯ ಶ್ಲೋಕದ ಅರ್ಥ ಸರಿಯಾಗಿ ಬಂದಿಲ್ಲ ಎಂದು ಎನಿಸುತ್ತಿದೆ.
ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಸುಭಾಷಿತಗಳು
ಸಾರ್..
ನನ್ನಿ!!
ಅವರೇ ಬರೆಯಲಿ ಎಂದು !
ನೋಡಿ, ತರ್ಜುಮೆ ಜೊತೆ ಇದ್ರೆ ಎಶ್ಟು ಚಂದ!
=====================================
ಮಾಯ್ಸ!
ಉ: ಸುಭಾಷಿತಗಳು
ಪ್ರಿಯ ಹಂಸಾನಂದಿ,
ಇತರರಿಗೆ ಅಪಕಾರಿ ತನಗೆ ಮಾತ್ರ ಒಳಿತಾಗಲೆಂತಿರಲು
ಕಲಿತದ್ದು ಕಲಿಕೆಯಲ್ಲದುವೆ ಚೋರವಿದ್ಯೆಯು! ||೬||
ಕಡೆಯ ಶ್ಲೋಕದ ಅರ್ಥ ಸರಿಯಾಗಿ ಬಂದಿಲ್ಲ ಎಂದು ಎನಿಸುತ್ತಿದೆ.
ಕನ್ನಡಕ್ಕೆ ಭಾವಾನುವಾದ ಚೆನ್ನಾಗಿದೆ. ಆದರೆ ೬ ನೆಯ ಶ್ಲೋಕದ ಅರ್ಥ ಸ್ವಲ್ಪ ಬೇರೆಯಾಗಿದೆ.
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬
ನನ್ನ ಪ್ರಯತ್ನ ಹೀಗಿದೆ:
ಕಸಿದು ಪರರ ನಲ್ನುಡಿಗಳನು ತನ್ನದೆಂದಾಡುವನ
ಹೆಸರ ಗಿಟ್ಟಿಸುವ ಕಲಿಕೆ ತಾ ನಿಜದಿ ಕಳವಲ್ತೆ?
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಸುಭಾಷಿತಗಳು
ಬೆನಕ ಅವರಿಗೆ ವಂದನೆಗಳು. ಕಾವ್ಯರೂಪದಲ್ಲಿ ಪ್ರಾಸಬದ್ಧವಾಗಿ ತಾವು ಹೇೞಿದ್ದು ನಮ್ಮ ಮನಸ್ಸಿಗೆ ತುಂಬಾ ಹಿಡಿಸಿದೆ. ಧನ್ಯವಾದಗಳು.
ಉ: ಸುಭಾಷಿತಗಳು
ಭಲೆ ಬೆನಕರೆ! ಬಲು ಸೊಗಸಾಗಿದೆ.
ಧನ್ಯವಾದಗಳು,
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಸುಭಾಷಿತಗಳು
ಸಕ್ಕತ್ ಬೆನಕ,
ಪ್ರಾಸ ಎಲ್ಲಾ ಸಕ್ಕತ್ತಾಗಿ ಬಂದಿದೆ.
ಕಳವಲ್ತೆ = ಕಳವು+ಅಲ್ತೆ ಇದು ಹಳೆಗನ್ನಡ ಅಲ್ವ
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸುಭಾಷಿತಗಳು
ಎಲ್ಲರಿಗೂ ಧನ್ಯವಾದಗಳು!
ವೈಭವರೇ,
ಹೌದು; ಸರಿಯಾಗಿದೆ.
ಅಲ್ತೆ ಎಂಬುದು "ಅಲ್ಲವೇ?" ಎಂಬ ಪ್ರತೀತ್ಯ ಅಥವಾ ದೃಢೀಕರಣ ರೂಪ.
ಉದಾ:
ಕನ್ನಡಂ ಕತ್ತುರಿಯಲ್ತೆ! = ಕನ್ನಡ ಕಸ್ತೂರಿಯಲ್ಲವೇ!
(ಕನ್ನಡವೆಂದರೆ ಬೆಂಗಳೂರಿಗರಿಗೆ ಕತ್ತುರಿ, ಅಲ್ತೆ!?)
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಸುಭಾಷಿತಗಳು
ಎಲ್ಲರಿಗೂ ’ಕನ್ನಡಂ ಕತ್ತುರಿಯಲ್ತೆ’ ಆದರೆ ಅಭಿಮಾನಶೂನ್ಯರಾದ ಬೆಂಗಳೂರಿಗರಿಗೆ ಮಾತ್ರ ’ಕನ್ನಡಕ್ಕೆ ಕತ್ತರಿಯಲ್ತೆ’
ಉ: ಸುಭಾಷಿತಗಳು
ಕನ್ನಡಕಂದ,
ಎಲ್ಲಾಕ್ಕಿಂತ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯುವುದು ಬೆಂಗಳೂರಿನಲ್ಲೇ . ನೆನಪಿರಲಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸುಭಾಷಿತಗಳು
ಕೊನೆಯದಱ ಅನುವಾದ ಹೀಗಿದೆ.
ಬೇಱೆಯವರ ಒಳ್ಳೆಯ ನುಡಿ ಅಥವಾ ಕೆಲಸವನ್ನು ಅಪಹರಿಸಿ ತನ್ನದೆನ್ನುತ್ತ ಅದಱ ದೊಡ್ದತನವನ್ನೆ (ಕದ್ದುದಱ ದೊಡ್ಡತನವನ್ನೆ ಹೇೞುತ್ತ) ಹೇೞುವಂತ ಚೌರವಿದ್ಯೆ(ಕಳ್ಳಬಿಜ್ಜೆ)ಯಿಂದೇನು?
ಉ: ಸುಭಾಷಿತಗಳು
ಷಣ್ಮಿಥ್ಯಾವಿದ್ಯಾಃ
ಆಱು ಮಿಥ್ಯಾ ವಿದ್ಯೆಗಳು (ಆಱು ಸುಳ್ಳು ಬಿಜ್ಜೆಗಳು)
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರಂಥಸಂಚಯಸಂಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನುವಾದ: ಯಾವುದೇ ಪುರುಷನಿಗೆ (ಸ್ತೀಗೂ ಕೂಡ) ತನಗಾಗಲಿ ಅಥವಾ ಪರರಿಗಾಗಲಿ ಉಪಯೋಗಕ್ಕೆ ಬಾರದೆ ಬಱಿ ಗ್ರಂಥಸಂಗ್ರಹ ಮಾಡಿದರೆ ಅಂಥ ಭಾರವಿದ್ಯೆಯಿಂದೇನು? (ಪ್ರಯೋಜನವಿಲ್ಲ.)
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುವಾದ: ದೊಡ್ಡ ದೊಡ್ಡ ಮತುಗಳಿಂದ ಅನ್ಯಾಯವನ್ನು ನ್ಯಾಯವೆಂದೂ ನ್ಯಾಯವನ್ನು ದುರಾಸೆಗೋಸ್ಕರ ಅನ್ಯಾಯವೆಂದು ಹೇೞುವ ಕ್ಷುದ್ರವಿದ್ಯೆ(ಕೀೞುಬಿಜ್ಜೆ)ಯಿಂದೇನು? (ಪ್ರಯೋಜನವಿಲ್ಲ.)
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಂಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಅನುವಾದ: ಅನುಷ್ಠಾನದಲ್ಲಿಲ್ಲದೆ ಬಱಿ ಪಾಠಮಾತ್ರದಿಂದ ಜನರನ್ನು ರಂಜಿಸುವ ಗಿಳಿಪಾಠದಿಂದೇನು? (ಪ್ರಯೋಜನವಿಲ್ಲ.)
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಅನುವಾದ: ಬುದ್ಧಿವಂತರೆದುರು ಮುಚ್ಚಿ (ಗೌಪ್ಯವಾಗಿರಿಸಿ) ಮೂರ್ಖರೆದುರು ತೋಱಿಸುವ (ಪ್ರಕಾಶಿಸುವ) ಮತ್ತು ಶಿಷ್ಯರಿಗೆ ಹೇೞಲಾಗದ (ಬೋಧಿಸಲಾಗದ) ಶಠವಿದ್ಯೆ(ಮೋಸಬಿಜ್ಜೆ)ಯಿಂದೇನು? (ಪ್ರಯೋಜನವಿಲ್ಲ.)
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಂಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಅನುವಾದ: ಬೇಱೆಯವರ ಮೇಲೆ ಹೊಟ್ಟೆಕಿಚ್ಚು ತರುವಂಥ ಹಾಗೂ ವ್ಯಥೆ ತಂದು ಸುಖ ನಿದ್ರೆಯನ್ನೊಯ್ಯುವಂಥಹ ಶೂಲವಿದ್ಯೆಯಿಂದೇನು? (ಪ್ರಯೋಜನವಿಲ್ಲ.)
ಪರಸೂಕ್ತಾಪಹಾರೇಣ ಸ್ವಸುಭಾಷಿತವಾದಿನಾ|
ಉತ್ಕರ್ಷಃ ಖ್ಯಾಪ್ಯತೇ ಯಸ್ಯಾಃ ಕಿಂ ತಯಾ ಚೌರವಿದ್ಯಯಾ||೬||
ಅನುವಾದ: ಬೇಱೆಯವರ ಒಳ್ಲೆಯ ನುಡಿ ಹಾಗೂ ಕೃತಿಗಳನ್ನು ಅಪಹರಿಸಿ ತನ್ನದೆಂದು ಹೇೞಿ ಅದಱ ದೊಡ್ಡಸ್ತಿಕೆಯನ್ನು (ತನ್ನದಲ್ಲದ ಬೇಱೆಯವರ) ಹೇೞುವಂಥ ಚೌರವಿದ್ಯೆ(ಕಳ್ಳಬಿಜ್ಜೆ)ಯಿಂದೇನು? (ಪ್ರಯೋಜನವಿಲ್ಲ.)
ಉ: ಸುಭಾಷಿತಗಳು
೨(ಎರಡನೆಯ ಪದ್ಯದ ಅನುವಾದದಲ್ಲಿ ’ಮತುಗಳನ್ನು’ ಎಂಬುದಱ ಬದಲಾಗಿ ’ಮಾತುಗಳನ್ನು’ ಎಂದು ಓದಿ.
ಉ: ಸುಭಾಷಿತಗಳು
ಭಲೇ ಕಂದ!
ಉ: ಸುಭಾಷಿತಗಳು
ಎಲ್ಲ ತರ್ಜುಮೆಗಾರರಗೆ ನಂನಿ..
ಬಱೀ ಸಕ್ಕದದಲ್ಲಿ ಹಾಕದೇ, ತರ್ಜುಮೇ ಸೇರಿಸಿ ಹಾಕಿರಿ ಕಂದ ಇನ್ಮಂದೆ - ಕೋರಿಕೆ
=====================================
ಮಾಯ್ಸ!