ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
ಭಗೀರಥ ಪ್ರಯತ್ನದಿಂದಾಗಿ, ಕೊನೆಗೂ, ಎಲೆಕ್ಷನ್ ಮೊದಲೇ ಚಿತ್ರದುರ್ಗ ಹಾಗೂ ಸುತ್ತಮುತ್ತಲ ಸ್ಥಳಗಳು ಕುಡಿಯುವ ನೀರನ್ನು ಪ್ರಥಮಬಾರಿಗೆ ಕಂಡಿವೆ. ಇದರ ರೋಚಕ ಸುದ್ದಿಯನ್ನು "ಸಂಜೆವಾಣಿ " ಪತ್ರಿಕೆಯಲ್ಲಿ ಓದಿ ಆನಂದಿಸಿರಿ. "ದಾವಣಗೆರೆ ಸುದ್ದಿ," ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಇದು ಪ್ರಕಟವಾಗಿದೆ.

- Login or register to post comments
- 312 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
ಶಾಂತಸಾಗರ? ಅಣೆಕಟ್ಟಾ ಇದು?
ಒಟ್ಟು ಚಿತ್ರದುರ್ಗಕ್ಕೆ ನೀರು ಪೂರೈಕೆ ಎಂಬ ಶೀರ್ಷಿಕೆ ಓದೇನೆ ಖುಷಿಯಾಯ್ತು. ಸಿಕ್ಕಾಪಟ್ಟೆ ನೀರಿನ ತಾಪತ್ರಯ ಅಲ್ಲಿ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
ಹೌದು. ಹರಿಯವರೆ.
ಇದು ಒಬ್ಬ ಮಹಿಳೆ ನಿರ್ಮಿಸಿದ ಕೆರೆ. ಆಕೆಗೆ ಕೆಟ್ಟ ಹೆಸರು ಬಂತಂತೆ. ಎಲ್ಲರೂ ಸೂಳೆ ಎಂದು ಹೀನಾಯ ಮಾಡುತ್ತಿದ್ದರಂತೆ. ಬೇಸತ್ತು, ಒಂದು ಜನಹಿತಕಾರಿಯಾದ ಕೆರೆಯನ್ನು ನಿರ್ಮಿಸಿದರಂತೆ. ಶಾಂತಸಾಗರ, ಬೆಟ್ಟಗಳ ಬದಿಯಲ್ಲಿ ತಗ್ಗಿನಲ್ಲಿದೆ. ನೀರು ದಂಡಿಯಾಗಿ ಶೇಖರಣೆಯಾಗುತ್ತದೆ. ಅದಕ್ಕೆ ನಂತರ ಚಿಕ್ಕ ಅಣೆಕಟ್ಟನ್ನೂ ಕಟ್ಟದ್ದಾರೆ. ಸೇತುವೆಯ ತರಹ. ಆಷ್ಟೆ. ಬೇರೆ ಇನ್ನೇನು ಇಲ್ಲ. ಜನ ಬೋಟಿಂಗ್ ವ್ಯವಸ್ಥೆ ಮಾಡಲು ಸರ್ಕಾರವನ್ನು ಕೇಳುತ್ತಿದ್ದಾರೆ. ಆದರೆ ಸ್ವಚ್ಛಕುಡಿಯುವ ನೀರಿನ ತಾಣದಲ್ಲಿ ಅದೆಲ್ಲಾ ಅಷ್ಟು ಸಮರ್ಪಕವಲ್ಲ. ಅಂದರೆ, ಕುಡಿಯುವ ನೀರನ್ನು ಚಿತ್ರದುರ್ಗಕ್ಕೆ ವಿತರಣೆ ಮಾಡುವ ಈ ಯೊಜನೆ ಬಹಳ ವರ್ಷಗಳಿಂದಲೂ ಕೇಳಿ ಬರುತ್ತಿತ್ತು. ಆದರೆ, ಈಗ ದಿಡೀರನೆ ಮಾಡಿರುವುದನ್ನು ಕಂಡರೆ ಇದರಲ್ಲೂ ರಾಜಕೀಯ ಇರಬಹುದೇನೊ ಅನ್ನಿಸುತ್ತದೆ.
(ಸೂಳೆಕೆರೆ) ಅಥವಾ ಶಾಂತಸಾಗರದ ಬಗ್ಗೆ, ನನ್ನ ಚಿತ್ರಲೇಖನ ಇರಬೇಕು. ಸಂಪದದಲ್ಲಿ ಬರೆದಿದ್ದ ನೆನಪು !