ಅಮ್ಮಜಿಖಷೆಸ್ಸ ಖನಮ ಒಜಿ
ಇದೊಂದು ಸೀಕ್ರೆಟ್ ಭಾಷೆ
ನಮ್ಮ ಮತ್ತು ನಮ್ಮ ಸಂಬಂಧಿಕ್ರ ಮನೆಗ್ಳಲ್ಲಿ ಸಮಯ-ಸಂದರ್ಭಾನುಸಾರ ಭಾಳ ಬಳ್ಕೆ ಆಗತ್ತೆ. ಇದಕ್ಕೆ ಮಿತಾಕ್ಷರ ಅಂತ ಯಾರು ಹೆಸರು ಕೊಟ್ರೋ ತಿಳೀದು. ಇದು ಅಕ್ಷರಗ್ಳನ್ನ ಕಡ್ಮೆ ಮಾಡಲ್ಲ. ವಿಜ್ಞಾನೇಶ್ವರನ 'ಮಿತಾಕ್ಷರ ಸಂಹಿತೆಗೂ' ಇದಕ್ಕೂ 'ಇಮಾಂ ಸಾಬಿ-ಗೋಕುಲಾಷ್ಟಮಿ' ಸಂಬಂಧ.
ಕೆಲವು ಸಂದರ್ಭಗ್ಳಲ್ಲಿ ತುಂಬಾ ಜನದ್ನಡುವೆ ಇದ್ಗೊಂಡೇ ರಹಸ್ಯ ಮಾತಾಡೋ ಸಂದರ್ಭ ಬರತ್ತೆ. ಆಗ ಬಳಕೆಯಾಗೋ ನಮ್ಮ ಆಪ್ತ ಭಾಷೆ ಇದು. ಟೆಲಿಫೋನಲ್ಲಿ ಮಾತಾಡುವಾಗ ಬೇರೆಯೋರು ಕೇಳಿಸ್ಕೋತಾರೇನೋ ಅನ್ನೋ ಹೆದರ್ಕೇಗೆ ಮೊಬೈಲ್‌ನೋರು ಮೈಲಿ ದೂರ ಹೋಗ್ಬೇಕಿಲ್ಲ ಅಥ್ವಾ ಲ್ಯಾಂಡ್‌ಲೈನ್ನೋರು ಮೂಕ ಕೋಗಿಲೆ ಥರ ಸಂಕ್ಟಪಡ್ಬೇಕಿಲ್ಲ. ಕೆಲ್ವೇ ದಿನ ಕಷ್ಟ ಪಟ್ರೆ ಆಮೇಲೆ ಯಾವ್ ಥರ ಅಭ್ಯಾಸ ಆಗತ್ತೆ ಅಂದ್ರೆ ನೀವೊಬ್ರೇ ಇದ್ದಾಗ್ಲೂ ಇದ್ರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಹೀಗೆ ಯಾವ್ ಭಾಷೇ ಹಾಡನ್ನೂ ಪ್ರರಿವರ್ತ್ನೆ ಮಾಡಿ ಹಾಡ್ಕೋಭೋದು.
ಇದು ಬರೀ ವಿನೋದದ್ವಿಷ್ಯ ಮಾತ್ರ ಅಲ್ಲ ಉಪ್ಯೋಗ ಕೂಡ ಇದೆ!! ಇದ್ರಲ್ಲಿ ಡೈರಿ ಬರ್ಕಂಡ್ರೆ ಯಾವ್ನನ್ ಮಕ್ಳೂ ಓದಕ್ಕೆ ತಿಣಕ್ಬೇಕು. ಹಾಗಾದ್ರೆ ಇದು ಪಬ್ಲಿಕ್ಕಾಯತಲ್ಲ ಅಂತ ಕೇಳ್ಭೋದು ನೀವು!! ನಂಗೂ ಗೊತ್ತು ಕಂಡ್ರೀ. ಪುಗ್ಸಟ್ಟೆ ಸಿಕ್ಕಿದ್ದನ್ನ ಜನ ಯಾವತ್ತೂ ಕಲ್ಯಲ್ಲ. ಬೇಕಾದ್ರೆ ನೋಡಿ, ಸಂಪದಿಗ್ರಲ್ಲಿ ಮೂರೂ ಮತ್ತೊಂದು ಜನ ಇದನ್ನ ಕಲ್ತು ಖುಷಿಪಟ್ರೆ ನನ್ನಾಣೆ. ಇದು ಸುಲಭ ಅಂದ್ರೆ ಸುಲಭ, ಕಷ್ಟ ಅಂದ್ರೆ ಕಷ್ಟ. ಅಂದ್ರೆ ನಿಮ್ಮಿಚ್ಛೆಗೆ ತಕ್ಕ ಹಾಗೆ ಇದೆ. ಇದಕ್ಕೆ ಒಂದು ಸಣ್ಣ ಶ್ಲೋಕ ನೆನ್ಪಿಟ್ಕೊಂಡ್ರಾಯ್ತು. ಶ್ಲೋಕ ಅಂದ್ರೆ ಸಂಸ್ಕೃತ ಶ್ಲೋಕ ಅಲ್ಲ. ಮಯೇಸ್ ಮತ್ತು ಅವರ ಬಳಗ ಸಕ್ಕದ -ಒಕ್ಕದ ಅಂತ ಜಗಳಕ್ಬರ್ಬೇಡಿ.
ಅರೆ! ನಮ್ಮೂರಲ್ಲಿ ಗುಡ್ಗು ಸಿಡ್ಳು ಮಳೆ ಬರೋ ಥರ ಇದೆ. ಶ್ಲೋಕ ಮತ್ತು ಅದರ ಅಪ್ಲಿಕೇಶನ್ ಹೇಗೆ ಅಂತ ಮುಂದಿನ ಪೋಸ್ಟ್‌ನಲ್ಲಿ ತಿಳಿಸ್ತೀನಿ. ಅಲ್ಲೀತಂಕ ಜೀವ ಬಿಗಿ ಹಿಡ್ಕಂಡು ಕಾಯ್ತಿರಿ. ಬರ್ಲಾ? ಕಂಪ್ಯೂಟರ್ ಕನೆಕ್ಷನ್ ಡಿಸ್ಕನೆಕ್ಟ್ ಮಾಡ್ಬೇಕು.

- Login or register to post comments
- 618 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅಮ್ಮಜಿಖಷೆಸ್ಸ ಖನಮ ಒಜಿ
ರೀ
ಶ್ಲೋಕ ಅಂದ್ರೆ ಅದು ಸಕ್ಕದದ್ದೇ.......... ಕನ್ನಡ ಶ್ಲೋಕ, ಇಂಗ್ಲೀಶ್ ಅಂತ ಎಲ್ಲಾದ್ರು ಕೇಳಿದ್ದೀರ?
ಸಂಸ್ಕೃತದಲ್ಲಿ ಏನೇ ಹೇಳಿದ್ರು ಶ್ಲೋಕ ಅಂತೆ..
ಸಂಸ್ಕೃತಪ್ರಚಾರಕರು ಮನೆಗೆ ಬಂದು ತಲೆ ತಿನ್ತಾ ಹೇಳೋ ಮಾತು.. ( ಈ ಸಂಸ್ಕೃತಪ್ರಚಾರಕರು ಅನ್ನೋ ಪದವೇ ವಿಚಿತ್ರ.. ಹಿಂದಿಪ್ರಚಾರಕರೂ ಇದ್ದಾರೆ.. ಒಂದು ನುಡಿಯನ್ನ ಪ್ರಚಾರ ಮಾಡಬೇಕೇ? ಇಂಗ್ಲೀಶನ್ನು ಪ್ರಚಾರ ಮಾಡಲು ಬ್ರಿಟೀಶರು ಯಾವ ಪ್ರಚಾರ ಸಭೆ ಕಟ್ಟಿದ್ರೋ
)
ಇದೆಲ್ಲ ಹಾಳಾಗಿ ಹೋಗ್ಲಿ.. ಇದ್ದದ್ದೇ ಗೋಳು ನಂದು.
ನಿಮ್ಮ ಆ ಗುಟ್ಟು ರಟ್ಟು ಮಾಡಿ... ನಿಮ್ಮಾಆಆ ಗುಟ್ಟುನುಡಿ ಕಲಿತು.. ಅದ್ರಲ್ಲಿ ಭಯಂಕರ ಕಾವ್ಯ ಬರೀತೀನಿ
=====================================
ಮಾಯ್ಸ!
ಉ: ಅಮ್ಮಜಿಖಷೆಸ್ಸ ಖನಮ ಒಜಿ
ರೀ ಸ್ವಾಮಿ,
ಈ ಪದ್ಯದಲ್ಲಿ "ಶ್ಚೈವ" ಅನ್ನುವುದೊಂದು ಬಿಟ್ರೆ ಉಳ್ದಿದ್ದೆಲ್ಲ ಬರಿ ಬರೀ ಅಕ್ಷರಮಾಲೇನೇ. ಅದೂ ಯಾರೋ ಪುಣ್ಯಾತ್ಮರು ನೆನಪಿಟೊಳ್ಳೋದು ಸುಲಭ ಅಂತ ಹಂಗೆ ಮಾಡಿರಬೇಕು.
ಸ್ವಾಮಿ. ಭಾಷೆಗೆ ಪ್ರಚಾರ ಬೇಡ ಅಂದ್ರೆ ಹೇಗೆ? ದಿನ ಕಳೀತಾ ಕಳೀತಾ ಜನ ತಮ್ಮ ಸ್ವಂತ ಭಾಷೇನೇ ಮರ್ತು ತಮಗೆ ಹೆಚ್ಚು ಉಪ್ಯೋಗ ಬರೋ ಬೇರೆ ಭಾಷೆ ಕಲಿಯಲ್ವ? ಮೊದಲಾದ್ರೆ ಬರೀ ಮನುಷ್ಯರ ಭಾಷೆ ಕಲೀತಿದ್ರೆ. ಈಗ ನಿಮಂಥೋರು ಅದೇನೋ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ ಜಾವಾ, ಸಿ, ಸಿ++ ಅಂತ ಏನೇನೋ ಕಲ್ತು, ಅದರ ಪ್ರಚಾರಕ್ಕೆ ಇಡಿ ಜಗತ್ತೇ ನಿಂತಿಲ್ವೇ? ಅಷ್ಟ್ಯಾಕೆ ನೀವು ನಿಮ್ಮ ಪಡೆಯವರು ಸಂಸ್ಕೃತದ ಪುಕ್ಕ ತರಿದು ಕೋಳಿಪಲಾವ್ ಮಾಡಿ ಕನ್ನಡದ ಧ್ವಜ ನೆಡಕ್ಕೆ ನಿಂತಿಲ್ವೆ. ಕಾಲಕಾಲಕ್ಕೆ ಎಲ್ಲಕ್ಕೂ ಪ್ರಚಾರ ಬೇಕೇ ಬೇಕು.
ಗಡಿಬಿಡಿ ಮಾಡ್ವೇಡಿ ಸದ್ಯದಲ್ಲೇ ಗುಟ್ಟು ರಟ್ಟಾಗಲಿದೆ. ಕಾದು ನೋಡಿ;)
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
"ಸಂಸ್ಕೃತದ ಪುಕ್ಕ ತರಿದು ಕೋಳಿಪಲಾವ್ ಮಾಡಿ ಕನ್ನಡದ ಧ್ವಜ ನೆಡಕ್ಕೆ ನಿಂತಿಲ್ವೆ."
ಇನ್ನು ಕನ್ನಡ ತೆಕ್ಕೆ ಏರಿಸಕ್ಕೂ, ನಿಮ್ಮ ಸಂಸ್ಕೃತಕುಕ್ಕುಟಕ್ಕೂ ’ಇಮಾಂ ಸಾಬಿ ಗೋಕಾಷ್ಟಮಿಯಂದು ಪುಳಿಯೊಗರೆ ನೇವೇದ್ಯ’ ಮಾಡಿದಷ್ಟೇ ನಂಟು..
ಸತ್ ಕೋಳೀನ ಯಾರು ತಿನ್ನಲ್ಲ.. ಬಿಡಿ
ಸಿ ಪ್ರಚಾರ ಸಭೆ, ಸಿ++ ಪ್ರಚಾರ ಸಭೆ ಒಳ್ಳೇ ಅಯ್ಡಿಯ!
ನಿಮ್ ಗುಟ್ ಮೇಲೆ ನಂಗೆ ಇಂಟರೆಸ್ಟ್ ಹೋಗ್ತಾ ಇದೆ...!
=====================================
ಮಾಯ್ಸ!
ಉ: ಅಮ್ಮಜಿಖಷೆಸ್ಸ ಖನಮ ಒಜಿ
"ಸತ್ ಕೋಳೀನ ಯಾರು ತಿನ್ನಲ್ಲ.. ಬಿಡಿ "
ನಿಜ ಬೇರೇನೇ ಇದೆ. ಜೀವದ ಕೋಳಿ ಕೊಂಡು ತಿನ್ನುವ ಶಕ್ತಿ ನಮ್ಮ ದೇಶದಲ್ಲಿನ್ನೂ ಬಹಳ ಜನಕ್ಕಿಲ್ಲ.
"ಇನ್ನು ಕನ್ನಡದ ತೆಕ್ಕೆ .. . . . . . . . ಪುಳಿಯೋಗರೆ"
ಈ ಪೋರ್ಟಲ್ ನಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ಹಾಗೆ ಯಾರಾದ್ರೂ ಒಳ್ಳೆ ಮಾತು ಬರೆದ್ರೆ ನೀವು ಕೈದು ಹಿಡಿದು ನೀವು ಇತ್ತೀಚೆಗೆ ಹಾಕಿರುವ ಪ್ರೊಫೈಲ್ ಫೋಟೋಕ್ಕೆ ತಕ್ಕ ಹಾಗೆ ಪಟುಭಟನಂತೆ ಆರ್ಭಟಗೈಯುವುದು ನೋಡಿದ್ರೆ ತಿಳ್ಯಲ್ವ ನೀವು ಹೇಳ್ತಿರೋದು ನಿಮಗೇ ಒಪ್ಪಿಗೆ ಇಲ್ಲ ಅಂತ. ನಂಗನ್ನಿಸೋದು ಏನಪ್ಪಾ ಅಂದ್ರೆ ನಿಮಗೆ ಕೆಲವ್ರಿಗೆ ಇರೋ ಹಾಗೆ ಸಂಸ್ಕೃತದ ಬಗ್ಗೆ love-hate relation ಇದೆ ಅಂತ.
ಸಂಸ್ಕೃತ ಸತ್ತಿತು ಅನ್ನೋದಾಗ್ಲಿ ಸಾಯಬೇಕು ಅನ್ನೋದಾಗ್ಲಿ ನಿಮ್ಮ ಹಾಗೂ ನಿಮ್ಮಂತೆ ಯೋಚಿಸೋರ wishful thinking. ಅಷ್ಟೆ!
ಇವತ್ತು ಕಾಲೇಜಿಂದ ವಾಪಸ್ ಬಂದು ಮಿತಾಕ್ಷರದ ಬಗ್ಗೆ ಬರೀತೀನಿ. ತಮ್ಮ ಸೈರಣೆ ಕೋರುತ್ತೇನೆ.
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಯಪ್ಪಾ, ರಮೇಶಬಳಗಂಚಿ, ಸಂಸ್ಕೃತಪಂಡಿತರು ಈ ಪ್ರತಿ ಶೀಘ್ರನಿರ್ಣಯಿಗಳಾಗಿಬಿಟ್ಟರೆ ಹೇಗೆ. ಇರಲಿ ಇಲ್ಲಿ ಕೇಳಿ, ನಾನು ಮತ್ತು ಮಹೇಶ, "ಸಂಸ್ಕೃತ ಸತ್ತ ಭಾಷೆ" ಎಂದು ಹೇಳಿದವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದೇವೆ. ಭವದೀಯರಿಗೆ ಸಂಸ್ಕೃತವನ್ನು ಹೊಗಳಬೇಕೆಂದಿದ್ದರೆ ಹೊಗಳಿ, ಆದರೆ ಸಂಪದದಲ್ಲಿ ತುಂಬಾ ಜನರು ಮಾಡಿರುವದು, "ಕನ್ನಡವನ್ನು ಕನ್ನಡತನವನ್ನು ಹಳಿದು ಸಂಸ್ಕೃತವನ್ನು ಅಟ್ಟಕ್ಕೇರಿಸುವುದು" - ಅದಕ್ಕೆ ಮಾತ್ರವೇ ನಮ್ಮ ತಕರಾರು. ಸಾಂಪಲ್ ಬೇಕಿದ್ದರೆ ಓದಿ ನೋಡಿ, ಸಂಸ್ಕೃತವಿಲ್ಲದ ಕನ್ನಡ ಜಾಳು. ಅಲ್ಲಿ ಕೇಳಿದ್ದ ಕೆಲವು ಪ್ರಶ್ನೆಯನ್ನು ಮತ್ತೊಮ್ಮೆ ಇಲ್ಲಿ ಹಾಕುತ್ತಿದ್ದೇನೆ.
ಸಂಸ್ಕೃತವನ್ನು ಹೊಗಳುವ ಭರಾಟೆಯಲ್ಲಿ ಕನ್ನಡವನ್ನು, ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಕನ್ನಡಿಗರನ್ನು ಕೀಳೆಣಿಸಬೇಡೀಪ್ಪಾ.
ಸರಿ ಬಿಡಿ, ಇದೆಲ್ಲ ಇದ್ದದ್ದೇ, ನಮ್ಮಲ್ಲಿನ ಇಗ್ನೋರೆನ್ಸ್(ಅರಿಯಮಿಕೆ) ಹಾಳಾಗ್ಲಿ, ನಿಮ್ಮ ಬರಹ ಕುತೂಹಲ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ, ಇದರ ಗುಟ್ಟಿನ ರಟ್ಟಿಗೆ ಕಾಯ್ತಾ ಇದ್ದೀನಿ.
ಉ: ಅಮ್ಮಜಿಖಷೆಸ್ಸ ಖನಮ ಒಜಿ
ನೋಡು ಅವರು ಯಾವ ಕಡೆ ನಿಲ್ತಾ ಇದ್ದಾರೆ.. ನನ್ನ ಮಾತಂಬು ಹಣ್ಣೀಯಿತು...! ಇವರೂ ಸಂಸ್ಕೃತವನ್ನು ಬಳಕೆಯಲ್ಲಿರ ಇರದ, ಸತ್ತ ಅಂತ ಅಂದ್ರೆ ತಾಳಲಾರರು.. ಅಂದ್ರೆ ಎಶ್ಟು ಸಂಸ್ಕೃತಮೋಹ ಅಲ್ಲ ಸಂಸ್ಕೃತವಾತ್ಸಲ್ಯ/ಪ್ರೇಮ
ನಾವು ಕನ್ನಡದೊರು ’ಸಂಸ್ಕೃತವಿಲ್ಲದ ಕನ್ನಡ ಜಾಳು’, ’ಕನ್ನಡ ಮಡಿಭಾಷೆ’ ಹೀಗೆಲ್ಲ ಅಂದಾಗ ಎಲ್ಲ ಮುಚ್ಚಿಕೊಂಡಿದ್ರೆ ಸಭ್ಯರು... ಕನ್ನಡವನ್ನು ಜಾಳು ಅಂದಾಗ, ಮಹಾನ್ ಸಂಸ್ಕೃತಪಂಡಿತರೂ ’ನಾನೂ ಕನ್ನಡಿಗ’ ಎಂದು ಹೇಳಿಕೊಂಡು ಕನ್ನಡದ
ಸಂಸ್ಕೃತಯಿಸುವಿಕೆ/Sanskritizationಗೆ ಎಡೆವಿಡೆ ದುಡಿಯುವವರು.. ಒಂದು ಸೊಲ್ಲೋ ಎತ್ತಲಿಲ್ಲ.. ಬದಲಿಗೆ ನಮ್ಮನ್ನು ಬಾಯಿತುಂಬ ಮೂದಲಿಸಿ ಬಯ್ದು ಹೋದರು ತಾನೇ!
"ಸಂಸ್ಕೃತವಿಲ್ಲದ ಕನ್ನಡ ಜಾಳು" ಈ ಮಾತು ಬಂದಾಗ ನಮ್ಮ ನಾಡಲ್ಲಿ ದಿಟವಾಗಲೂ ಈ ಸಂಸ್ಕೃತದವರು ತಾವು ಮೊದಲು ಕನ್ನಡಿಗರು, ಸಂಸ್ಕೃತ ಒಂದು ಬರೀ ಕಲಿತ ನುಡಿ ಎಂಬ ಮನಸ್ಸಿದ್ರೆ, ಮುಂದೆ ಬಂದು ಅದಕ್ಕೆ ವಿರೋದ/ಇದಿರುಮಾತು ಹೇಳ್‌ಬೇಕಿತ್ತು.. ಹೇಳಲಿಲ್ಲ.. ಅಂದ್ರೆ ಏನು ತಿಳೀಬೇಕು, ಅದನ್ನೇ ನಾವು ತಿಳಿದಿರೋದು..
ಒಂದೇ ಮಾತಲ್ಲಿ ಸಂಸ್ಕೃತನೆತ್ತಿಗೇರಿದವರು ಕನ್ನಡನಿಷ್ಠರಲ್ಲ!
=====================================
ಮಾಯ್ಸ!
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಪ್ರೀತಿಯ ಸುನೀಲ್
ನಾನು "ಭವದೀಯ"ನೂ ಅಲ್ಲ, ಸಂಸ್ಕೃತಪಂಡಿತನೆಂಬ ಭ್ರಮೆಯಲ್ಲೂ ನಾನು ಬದುಕುತ್ತಿಲ್ಲ. ಬಹುಶ: ನೀವು ಗಮನಿಸಿರಬಹುದಾದಂತೆ ನಾನು ಕನ್ನಡವನ್ನು ಎಂದೂ ತೆಗಳಿಲ್ಲ ಹಾಗೂ ಸಂಸ್ಕೃತವೇ ಶ್ರೇಷ್ಠವೆಂಬ ಭ್ರಮೆಯೂ ನನಗಿಲ್ಲ ಇಲ್ಲ. ಆದರೆ ನಮಗೂ ನಮ್ಮಂಧ ಇನ್ನು ಕೆಲವರಿಗೂ ಸಂಪದದಲ್ಲಿ ಇರುವ ತೊಂದರೆ ಏನೆಂದರೆ ನಾವು ಕನ್ನಡ ವಿರೋಧಿಗಳಲ್ಲ, ಕನ್ನಡ ಪ್ರೀತಿಯೊಂದಿಗೆ ಸಂಸ್ಕೃತ ಪ್ರೀತಿಯನ್ನೂ ಇಟ್ಟುಕೊಂಡಿದ್ದೇವೆ ಎಂದು ಮನವರಿಕೆ ಮಾಡಿಕೊಡಬೇಕಾಗಿರುವುದು. ಏನೇ ಇರಲಿ ನಾನು ಸಂಪದಕ್ಕೆ ಹೊಸಬ ಇನ್ನೂ ಇದನ್ನು explore ಮಾಡುತ್ತಿದ್ದೇನೆ. ನೀವು ಕೊಟ್ಟಿರುವ ಮಾಹಿತಿಗಳು ಕುತೂಹಲಕಾರಿಯಾಗಿವೆ. ಅವನ್ನು ಗಮನಿಸುತ್ತೇನೆ. ನನ್ನ ಮಿತಿಯಲ್ಲಿ ಕನ್ನಡಕ್ಕಾಗಿ ದುಡಿಯುವುದೂ ನನ್ನ ಉದ್ದೇಶ. ಆದರೆ ಕನ್ನಡದ ಏಳ್ಗೆ ಗಾಗಿ ದುಡಿಯುವ ನಮ್ಮಲ್ಲಿ ಸಹನೆ ಬೇಕೆನ್ನುವುದೇ (ಕನಿಷ್ಠ) ನಮ್ಮನಮ್ಮಲ್ಲಿಯಾದರೂ) ಬೇಡಿಕೆ. ಮುಂದಿನ ದಿನಗಳಲ್ಲಿ ನನಗೆ ಗೊತ್ತಿಲ್ಲದ ಕನ್ನಡದ ಮೇಲ್ಮೆ ಅಂಶಗಳನ್ನೂ ತಿಳಿದುಕೊಳ್ಳುವ ಕುತೂಹಲ ನನ್ನದು. ಸಹಕರಿಸಿ.
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
ರಮೇಶರವರೆ,
ದಯವಿಟ್ಟು ತಾವು ಶಂಕರಬಟ್ಟರ ಹೊತ್ತಿಗೆಗಳನ್ನು ಓದಿ. ಕನ್ನಡಕ್ಕೆ ಸಕ್ಕದದಿಂದಾಗಿರುವ ಕೆಡುಕನ್ನು ಹೇಳಿದ್ದಾರೆ.
ಇಶ್ಟೆಲ್ಲ ಹೇಳುವ ನೀವು 'ಸಂಸ್ಕ್ರುತವಿಲ್ಲದ ಕನ್ನಡ ಜಾಳು' ಅನ್ನುವವರಿಗೆ ಯಾಕೆ ಏನೂ ಹೇಳುವುದಿಲ್ಲ.?
ನಮಗೆ ಸಕ್ಕದದಲ್ಲಿರುವ 'ಅರಿವು' ಬೇಕು ಆದರೆ ಸಕ್ಕದದ ಬೇಕರಣ, ಸಕ್ಕದದ 'ಕ್ಲಿಶ್ಟ' ಪದಗಳು ಬೇಡ. ಇದಕ್ಕಿಂತ ತಿಳಿಯಾಗಿ ಹೇಳಕ್ಕಾಗಲ್ಲ.
ಇಲ್ಲೆ ಸಂಪದದಲ್ಲೆ 'ಕರ್ನಾಟಕದ ಒಂದುಗೂಡಿಕೆ(ಏಕೀಕರಣ) ಆಗಕ್ಕೆ ಸಂಸ್ಕ್ರುತ ಬೇಕು' ಅಂತಾರೆ. ಈ ತರ ಹೇಳುದ್ರೆ ಉರಿಯಲ್ವ. ಇಂತವರ ಇದಿರು ನೀವು ಮಾತನಾಡುವುದಿಲ್ಲವೇಕೆ.?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಅಮ್ಮಜಿಖಷೆಸ್ಸ ಖನಮ ಒಜಿ
"ದಯವಿಟ್ಟು ತಾವು ಶಂಕರಬಟ್ಟರ ಹೊತ್ತಿಗೆಗಳನ್ನು ಓದಿ"
ಖಂಡಿತ ಓದ್ತೀನಿ ಈ ಬೇಸಿಗ ರಜದಲ್ಲಿ- ಮುಕ್ತಮನಸ್ನಿಂದ ಓದ್ತೀನಿ. ನನ್ನ ಅಭಿಪ್ರಾಯ ರೂಪಿಸ್ಕೋತೀನಿ.
"ಸಕ್ಕದದಲ್ಲಿರುವ ಅರಿವು ಬೇಕು ಆದರೆ ಸಕ್ಕದದ ಬೇಕರಣ, ಸಕ್ಕದದ ಕ್ಲಿಶ್ಟ ಪದಗಳು ಬೇಡ."
ಯಾರು ಇದಕ್ಕೆ ಬೇಡ ಅಂತಾರೆ? ಕನ್ನಡ ಸಂಸ್ಕೃತದ ವ್ಯಾಕರಣವನ್ನು ಹೊಂದಿಸಿಕೊಂಡಿರುವುದು ಅಂದಿನ ಕಾಲದ ಅದರ ಅಗತ್ಯಕ್ಕೆ ಅನುಗುಣವಾಗಿ ಅನ್ನಿಸುತ್ತದೆ ನನಗೆ. ಮಕ್ಕೀಕಾ ಮಕ್ಕಿ ಅಲ್ಲ. ಕನ್ನಡ ಸಂಸ್ಕೃತ ವ್ಯಾಕರಣದ ಆಧಾರ ಬಿಟ್ಟು ತನ್ನದೇ ಆದ ವ್ಯಾಕರಣ ಪದ್ಧತಿ ಇಟೊಂಡ್ರೆ ನನಗೂ ಸಂತೋಷವೆ. ಆದರೆ ಇದು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಆಗುವ ಕೆಲಸ ಅಲ್ಲ ಅನ್ನುವುದೂ ನಿಮಗೂ ತಿಳಿಯದಲ್ಲ. ಒಂದು ತೊಡಕು ತೋರುತ್ತದೆ ನನಗೆ-ಸಂಸ್ಕೃತದ ಪದಗಳು ಮತ್ತು ವ್ಯಾಕರಣವನ್ನು ಆಧರಿಸಿ ಈಗಾಗಲೇ ಬರೆದಿರುವ ಹೇರಳ ಸಾಹಿತ್ಯರಾಶಿಯನ್ನು ಅರ್ಥಮಾಡಿಕೊಳ್ಳುವ ತೊಡಕು ಹೇಗೆ ಬಗೆಹರಿಸುತ್ತೀರಿ? ಅವುಗಳನ್ನು ಕೇವಲ ಮೇಲ್ಕಂಡ ಕಾರಣಕ್ಕಾಗಿ write offಮಾಡಬರುವುದಿಲ್ಲ ಅಲ್ಲವೆ? ಅಥವಾ ಆ ಕೃತಿಗಳನ್ನ್ನುಹೊಸಗನ್ನಡದ ಹೊಸವ್ಯಾಕರಣಕ್ಕೆ ಪರಿವರ್ತನೆ ಮಾಡಬೇಕೆ?.
ಸಂಸ್ಕೃತದ ಪದಗಳು ಕ್ಲಿಷ್ಟ ಅನ್ನುವುದನ್ನು ನಾನು ನೀವು ತೀರ್ಮಾನ ಮಾಡಲಾಗುತ್ತದೆಯೇ? ಇವೆಲ್ಲ ಸಾಮಾನ್ಯರ ತೀರ್ಮಾನಕ್ಕೆ ಬಿಟ್ಟರೆ ಒಳ್ಳೆಯದು. ನಾವು, ನಮ್ಮಂಥವರು ಯಾವುದೇ ವೇದಿಕೆಯಲ್ಲಿ ಏನೇ ಹೇಳಿದರೂ ಭಾಷೆಯ ಅಳಿವು ಉಳಿವಿಗೆ ಕಾರಣಕರ್ತರು ಜನಸಾಮಾನ್ಯರೇ ಹೊರತು ಬೇರೆ ಯಾರೂ ಅಲ್ಲ
"ಇದಕ್ಕಿಂತ ತಿಳಿಯಾಗಿ ಹೇಳಕ್ಕಾಗಲ್ಲ"
ನನ್ನೆಲ್ಲ ಪ್ರತಿಕ್ರಿಯೆಗಳನ್ನು ಗಮನಿಸಿ ಹೇಳಿತ್ತಿದ್ದೀರೋ ಗೊತ್ತಿಲ್ಲ. ನನ್ನ ಇಲ್ಲಿಯವರೆಗಿನ ಬರಹ, ಪ್ರತಿಕ್ರಿಯೆಗಳ ಭಟ್ಟಿ ಇಳಿಸಿದ ರೂಪ ಏನೆಂದರೆ
ಚರ್ಚೆ, ವಾದ-ವಿವಾದಗಳಿರಲಿ, ಆದರೆ ಅದರಿಂದ ಬೆಳಕು ಹೆಚ್ಚು ಬರಲಿ- ಬೆಂಕಿಯಲ್ಲ. ನಮ್ಮ ವಾದಗಳು ನಮಗೆ ಸರಿಯೆನಿಸಿದಾಗ ಹೇಳುವ ಹಕ್ಕು ಸ್ವಾತಂತ್ರ್ಯನಮಗಿದ್ದೇ ಇದೆ. ಆದರೆ ವ್ಯಕ್ತಿಗತ ನಿಂದನೆ, ಕುತ್ಸಿತ ಟೀಕೆ, ಮೂದಲಿಕೆಗಳಿಂದ ಪ್ರಯೋಜನವಿಲ್ಲ. ಅಲ್ಪಸ್ವಲ್ಪ ತಮಾಷೆ ಬೇಡವೆನ್ನುವುದಿಲ್ಲ. ಆದರೆ ಅವೇ ಮುಖ್ಯವಾದಾಗ ನಮಗೆ ಸಿಗಬೇಕಾದ ಸತ್ಯ ಮರೆಯಾಗುತ್ತದೆ. "ಗಂಟಲ ಬಲಮೆ ಬಲಂ" ಎನ್ನುವುದಾದರೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ. ಇದನ್ನು ನಾನು ಕೇವಲ ನಿಮಗೆ - ವೈಭವ್ ಅವರಿಗೆ ಮಾತ್ರ ಹೇಳಿತ್ತಿರುವುದಲ್ಲ. ಸಂಸ್ಕೃತದ ಪರವಾಗಿ ವಾದಿಸುತ್ತಿರುವವರಿಗೂ ಅನ್ವಯಿಸುತ್ತದೆ.
ಇಲ್ಲಿ ಬಂದ ಹೊಸತರಲ್ಲಿ ನಾನು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಕ್ಕಿಂತ ಬರೆದದ್ದೇ ಹೆಚ್ಚು. ನಾನಿಲ್ಲಿಗೆ comparatively ಹೊಸಬ.
"ಸಂಸ್ಕೃತವಿಲ್ಲದ ಕನ್ನಡ ಜಾಳು"
ಇದಂತೂ ನನ್ನ ಅಭಿಪ್ರಾಯವಲ್ಲ. ಬರೆದವರೂ ಯಾವ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಗೊತ್ತಿದ್ದರೆ ನನ್ನ ತಿಳುವಳಿಕೆಯ ಮಟ್ಟಕ್ಕೆ ಪ್ರತಿಕ್ರಿಯೆ ತೋರುತ್ತಿದ್ದೆ.
"ಕರ್ನಾಟಕ ಏಕೀಕರಣಕ್ಕೆ ಸಂಸ್ಕೃತ ಬೇಕು"
ಇದೂ ನನ್ನ ಅಭಿಪ್ರಾಯವಲ್ಲ. ಇದಕ್ಕೆ ನನ್ನ ಸಹಮತವಿಲ್ಲ. ಇದು practical suggestion ಅಲ್ಲವೆಂದೇ ನನ್ನ ಭಾವನೆ.
ನಾನಿಲ್ಲಿ ಬಂದು ಓದುವುದು, ಬರೆಯುವುದೂ ಸ್ವತಂತ್ರವಾಗಿ. ಯಾವುದೇ ಗುಂಪು ಕಟ್ಟುವ ಅಥವಾ ಅಂಥವರ ಪರವಹಿಸುವ ವಿರೋಧಿಸುವ ಪ್ರಶ್ನೆಯೇ ಇಲ್ಲ. ಇದು ಕೇವಲ ನನ್ನ ವಿಷಯ ಸ್ಪಷ್ಟಪಡಿಸಲೇ ಹೊರತು ಯಾರೋ ಮಾಡಿತ್ತಿದ್ದಾರೆ ಅನ್ನುವ ಅರ್ಥ ಇದರಲ್ಲಿಲ್ಲ. ಯಾರನ್ನಾದರೂ ವಿರೋಧಿಸಿದರೆ ಅದು ಕೇವಲ topical ಆಗಿ ವ್ಯಕ್ತಿಗತವಾಗಿ ಅಲ್ಲ.
"ಈ ತರ ಹೇಳಿದ್ರೆ ಮೈ ಉರಿಯಲ್ವ?"
ಯಾಕೆ ಉರಿಯಬೇಕು ಅಂತೀನಿ ನಾನು. ಇಡಿಯ ಜಗತ್ತು ನನ್ನ ನೇರಕ್ಕೆ ನಡೆಯಲಿ ಎಂದರೆ ಹೇಗೆ? ಪ್ರತಿಯೊಬ್ಬನೂ ತನ್ನ ತನ್ನ spaceನಲ್ಲಿದ್ದುಕೊಂಡೇ ತನಿಷ್ಟದಂತೆ ಈ ಪ್ರಪಂಚ ಬದಲಾಯಿಸಲು ಪ್ರಯತ್ನಿಸುತ್ತಿರುತ್ತಾನೆ. ಹಾಗೆಯೇ ಅವರು. ನಮ್ಮದು ಸರಿ ಎಲ್ಲರೂ ಇದನ್ನು ಒಪ್ಪಬಹುದು ಅನ್ನುವ ಆಶಾವಾದ ಮನದಲ್ಲಿರಬೇಕೇ ಹೊರತು ಅದು ದುರಾಗ್ರಹ ಅಥವಾ ಒತ್ತಾಯವಾದಾಗಲೇ ತೊಂದರೆಗಳು. ನನಗೆ persuasive technique ಇಷ್ಟವೇ ಹೊರತು ಬಲಾತ್ಕಾರವಲ್ಲ. ನಿಮ್ಮೆಲ್ಲರ ಒಳ್ಳೆಯ ಕೆಲಸಗಳಿಗೆ ನನ್ನ ಒತ್ತಾಸೆ ಬೆಂಬಲ ಇದ್ದೇ ಇದೆ.
ನನ್ನ ಅಭಿಪ್ರಾಯಗಳು ನಿಮಗೆಲ್ಲ ಇಷ್ಟವಾಗಬೇಕೆಂದೇನೂ ಇಲ್ಲ. ಇದು ನನ್ನದೊಂದು ಪ್ರಯತ್ನ ಅಷ್ಟೆ!
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಎಲ್ಲ ಸರಿ ರಮೇಶಬಳಗಂಚಿಯವರೇ, ನಿಮ್ಮದು ಮುಕ್ತಮನಸ್ಸು ಅಂತ ಹೇಳಿದ್ದರಿಂದ ಕೇಳ್ತಾ ಇದ್ದೀನಿ.
ಇದನ್ನು ಮಾಡಿದವರು ನೀವೇ ಅಲ್ಲವೇ, ನೋಡಿ ಇಲ್ಲಿ, ಇದನ್ನು ನೀವೇ ಹೇಳಿದ್ದು.
ಉಪದೇಶಗಯ್ಯುವುದೇ ಒಂದು, ತಾವು ಮಾಡುವುದೇ ಮತ್ತೊಂದು. ನೀವು ಮಾಡಿದ್ದು ತುಂಬಾ ತಪ್ಪಲ್ವಾ ?
ಉ: ಅಮ್ಮಜಿಖಷೆಸ್ಸ ಖನಮ ಒಜಿ
ನೋಡಿ ಈ ರೀತಿ, ಸಂಬಂಧಪಡದ ಮಾತನ್ನು ಹರಿಬಟ್ಟು, ಕನ್ನಡವನ್ನು, ಕನ್ನಡ ನುಡಿಯಲ್ಲಿ ಯೋಚಿಸುವವರನ್ನು ಮೂದಲಿಸುತ್ತಾ, ಎಲ್ಲ ಎಳೆಯಲ್ಲಿಯೂ ಸಂಸ್ಕೃತ-ಕನ್ನಡ ಜಗಳ ತೆಗೀತಾ ಇದ್ರೆ, ಬರಹದ ಮೂಲ ಆಶಯವೇ ಕೆಟ್ಟುಹೋಗತ್ತೆ. ಈ ದಿನ ಬೆಳಗ್ಗೆ, ನಿಮ್ಮ ಬರಹದ ಗುಟ್ಟಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಎಷ್ಟು ಆಸೆಯಿತ್ತೋ ಸಂಜೆಯ ಹೊತ್ತಿಗೆ ಅಷ್ಟೂ ಬತ್ತಿಹೋಗಿದೆ.
"ಸಂಸ್ಕೃತವನ್ನು ಸಾಯಿಸಬೇಕು ಎಂಬುದು ಮಹೇಶನ ಮತ್ತು ಅವನ ತರಹದವರ wishful thinking!!!" ಎಂಬ ಮಾತಿನಿಂದ ನನಗೆ ತುಂಬಾ ಬೇಸರವಾಗಿದೆ.
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಸುನಿಲ ಸಂಸ್ಕೃತ ಸಾಯಬೇಕೆಂದು ನನಗೆ ದಿಟವಾಗಲು ಆಸೆ ಇಲ್ಲ.. ಯಾಕೆ ಎಂದರೆ.. ಅದು ಸತ್ತು ಆಗಿದೆ..
ಅದರ ಹೆಣವನ್ನು ನಮ್ಮ ಕರ್ಮ ಎಂದು ನಾನೂ ಸೇರಿ ಹಲವರು ಹೊರುತ್ತಿರುವುರ ಜೊತೆಗೆ, ಕೆಲವರು ಆ ಹೆಣದ ಮರೆವಣಿಗೆ ಮುಂದೆ ಟಮಟೆ ಬಡಿದು ಕುಡಿದ ಅಮಲೇರಿಸಿಕೊಂಡು ಅದಕ್ಕೆ ಇಲ್ಲದ ಹೊಗಳಿಕೆಗಳನ್ನು ಕೂಗಿಕೊಂಡು ಅಳುತ್ತಾ ಕುಣಿಯುತ್ತಿದ್ದಾರೆ....
ಕೆಲವೇ ಹೊತ್ತು ಮರೆವಣಿಗೆ ಮುಗಿಯುವುದು, ಅದ ಅಬ್ಬರವೂ ಮುಗಿಯುವುದು, ಹೂತೋ ಸುಟ್ಟೋ ಬರುವೆವು.
ಆದರೆ ಅದನ್ನು ಸುಡಲು ಬೆಳೆದು ನಿಂತು, ಸೊರಗಿದರೂ, ಇನ್ನೂ ಹಸಿರಾಗಿರುವ ಹೆಮ್ಮರವನ್ನೂ ಕಡಿಯಲಾದೀತೇ!
=====================================
ಮಾಯ್ಸ!
ಉ: ಅಮ್ಮಜಿಖಷೆಸ್ಸ ಖನಮ ಒಜಿ
love hate relation ಬಗ್ಗೆ ನಾನು ಹೇಳಿದ್ದು ನೀವು ಹೇಳಿದ "ಸಂಸ್ಕೃತ ಸತ್ತಿತು" ಎಂದವರ ಬಗ್ಗೆ ನೀವು ತರಾಟೆ ತೆಗೆದುಕೊಂಡ ಪ್ರಸ್ತಾಪ ಮತ್ತು "ಸತ್ತ ಕೋಳಿ ಯಾರೂ ತಿನ್ನುವುದಿಲ್ಲ" ಎಂಬ ಮಾತು ಹೊರಡಿಸಿದ ಅರ್ಥದ ಬಗ್ಗೆ. ಮೇಲಿನದು ವೈರುಧ್ಯ ಅನ್ನಿಸಿದ್ದರಿಂದ ಆ ಮಾತನ್ನಾಡಿದೆ. ಅಷ್ಟೆ! ಇದು ಕುತ್ಸಿತ ಟೀಕೆ ಎಂದು ಮತ್ತು ಸ್ವಂತ ಉಪದೇಶದ ವಿರುದ್ಧ ಅನ್ನಿಸಿದರೆ ಏನೆನ್ನಬೇಕೋ ತಿಳಿಯುತ್ತಿಲ್ಲ. ವಾದ ವಿವಾದಗಳು ಚರ್ಚೆಗಳು topical ಆಗಿರಲಿ ಎಂಬ ನನ್ನ ಆಶಯಕ್ಕೆ ಪೂರಕವಾಗಿ ನಾನು ವ್ಯಕ್ತಿಗತ ನಿಂದನೆ ಮತ್ತು ಕುತ್ಸಿತ ಟೀಕೆಗಳ ಪ್ರಸ್ತಾಪ ಮಾಡಿದ್ದೆನೇ ಹೊರತು. ಬೇರೆ ಉದ್ದೇಶದಿಂದಲ್ಲ. ತಾವು ನನ್ನನ್ನು "ಪಂಡಿತ" "ಭವದೀಯ" ಎಂದೆಲ್ಲ ವ್ಯಂಗ್ಯವಾಗಿ ಉಲ್ಲೇಖಿಸಿದರೂ ನಾನು ಅದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಮಹೇಶ್ ಅವರ "ಐ ಲವ್ ಯೂ" ಬ್ಲಾಗ್ ನಲ್ಲಿ ನನಗೂ ಅವರಿಗೂ ನಡೆದ ಸಂವಾದ ನೀವು ಗಮನಿಸಿದರೆ ನೀವು ನನ್ನದು ಸ್ವಂತ ಉಪದೇಶಕ್ಕೆ ವಿರುದ್ದ್ಧದ ಮಾತು ಎನ್ನುತ್ತಿರಲಿಲ್ಲ ಎಂದು ನನಗೆ ಈಗಲೂ ಪ್ರಾಮಾಣಿಕವಾಗಿ ಅನ್ನಿಸುತ್ತಿದೆ. ನಾನು ಜಗಳಗಂಟನಾಗಿದ್ದರೆ ಮಹೇಶ್ ಅವರು ದೊಡ್ದತನದ ಮಾತಾಡಿದಾಗ ಕೂಡಲೆ ಅವರನ್ನು ಹೊಗಳುವ, ಅವರ ದೊಡ್ಡತನ ಗಮನಿಸುವ ಗೊಡವೆಗೆ ಹೋಗುತ್ತಿರಲಿಲ್ಲ. ಅದಕ್ಕೂ ಮೊದಲೂ ನಾನು ಮಹೇಶ್ ಅವರ ಪ್ರತಿಕ್ರಿಯೆಯ ಬಗ್ಗೆ ನೊಂದುಕೊಂಡಿದ್ದೆನೇ ಹೊರತು ಸಿಟ್ಟಿನ ಪ್ರತಿಕ್ರಿಯೆ ತೋರಿರಲಿಲ್ಲ. ಅದೂ ವೈರಸ್, ಪಿತ್ತ ನೆತ್ತಿಗೀರಿದ ಇತ್ಯಾದಿ ಮಾತುಗಳು ಮತ್ತು ಮತ್ತೊಂದು ಎಳೆಗೆ ಅವರು ಒಬ್ಬರನ್ನು fascist ಎಂದು ಕರೆದದ್ದರಿಂದ. ನಾನು ಯಾವ ಎಳೆಯಲ್ಲೂ ನಿಮ್ಮನ್ನು ಉಲ್ಲೇಖಿಸಿಲ್ಲ ಮತ್ತು ನಿಮ್ಮನ್ನು ನೋಯಿಸುವಂಥ ಮಾತನ್ನೂ ಆಡಿಲ್ಲ. ಬದಲಿಗೆ ನೀವು ನೀಡಿದ ಸಲಹೆಯನ್ನು ಒಪ್ಪಿಕೊಂಡಿದ್ದೇನೆ.
ಇನ್ನು ನನ್ನದು ಪ್ರತಿ ಎಳೆಯಲ್ಲಿ ಕನ್ನಡ -ಸಂಸ್ಕೃತದ ಜಗಳ ಎಂಬ ನಿಮ್ಮ ಆರೋಪದ ಬಗ್ಗೆ ಯಾರಾದರೂ ಮೂರನೆಯವರು ಹೇಳಲಿ.
ಹಾಗಾದರೂ ನನ್ನ ಯಾವುದಾದರೂ ಮಾತು ನನ್ನ ಉದ್ದೇಶಕ್ಕೆ ಮೀರಿ ನಿಮ್ಮ ಮನ ನೋಯಿಸಿದ್ದರೆ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
"ಸುನಿಲ ಸಂಸ್ಕೃತ ಸಾಯಬೇಕೆಂದು ನನಗೆ ದಿಟವಾಗಲು ಆಸೆ ಇಲ್ಲ.. ಯಾಕೆ ಎಂದರೆ.. ಅದು ಸತ್ತು ಆಗಿದೆ..
ಅದರ ಹೆಣವನ್ನು ನಮ್ಮ ಕರ್ಮ ಎಂದು ನಾನೂ ಸೇರಿ ಹಲವರು ಹೊರುತ್ತಿರುವುರ ಜೊತೆಗೆ, ಕೆಲವರು ಆ ಹೆಣದ ಮರೆವಣಿಗೆ ಮುಂದೆ ಟಮಟೆ ಬಡಿದು ಕುಡಿದ ಅಮಲೇರಿಸಿಕೊಂಡು ಅದಕ್ಕೆ ಇಲ್ಲದ ಹೊಗಳಿಕೆಗಳನ್ನು ಕೂಗಿಕೊಂಡು ಅಳುತ್ತಾ ಕುಣಿಯುತ್ತಿದ್ದಾರೆ....
ಕೆಲವೇ ಹೊತ್ತು ಮರೆವಣಿಗೆ ಮುಗಿಯುವುದು, ಅದ ಅಬ್ಬರವೂ ಮುಗಿಯುವುದು, ಹೂತೋ ಸುಟ್ಟೋ ಬರುವೆವು.
ಆದರೆ ಅದನ್ನು ಸುಡಲು ಬೆಳೆದು ನಿಂತು, ಸೊರಗಿದರೂ, ಇನ್ನೂ ಹಸಿರಾಗಿರುವ ಹೆಮ್ಮರವನ್ನೂ ಕಡಿಯಲಾದೀತೇ!"
ಸುನಿಲರೆ,
ನಿಮ್ಮ ಪ್ರತಿಕ್ರಿಯೆ ಮತ್ತು ಮಹೇಶ್ ಅವರ ಈಗ ಬಂದ ಪ್ರತಿಕ್ರಿಯೆ ಎರಡನ್ನೂ ಗಮನಿಸಿ.
ಇನ್ನು ಈ ವಿಷಯವಾಗಿ ನಾನು ಹೇಳುವುದೇನೂ ಉಳಿದಿಲ್ಲ.
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
ನಾನು ಮತ್ತು ಸುನಿಲ ಒಂದೇ ಹೇಳ್ತಿರೋದು..
ಯೋಚನೆ ಮಾಡಿ.. ಮಂಗಳವಾರ ಹೇಳ್ತೀನಿ
=====================================
ಮಾಯ್ಸ!
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಹೌದು ಸಾರ್,
ಹೊಟ್ಟೆ ಉರಿಯುತ್ತೆ. ಯಾಕಂದ್ರೆ
--> ಕನ್ನಡಕ್ಕೆ ತನ್ನ ಕಾಲಿನ ಮೇಲೆ ತಾನೇ ನಿಂತುಕೊಳ್ಳುವ ಎಲ್ಲ ತಕ್ಕುಮೆಯಿದ್ದರೂ ಅದನ್ನು ಸಕ್ಕದದ ಊರುಗೋಲಿನಲ್ಲಿ ಬಲವಂತವಾಗಿ ನಡೆಸಲಾಗುತ್ತಿದೆ.
--> ನಮ್ಮಂತವರಿಗೆ ಕನ್ನಡ ಬರೀ 'ಸಂವಹನಾ ಮಾದ್ಯಮ' ಅಲ್ಲ, ಅದು ನಮ್ಮ ಉಸಿರು. ನಮ್ಮ ಗುಂಡಿಗೆ ಹತ್ತಿರವಾದ ನುಡಿ. ಕನ್ನಡದಿಂದಲೇ ಈ ಪರ್ಪಂಚವನ್ನ ನೋಡುವ ಹುರುಪು ನಮಗೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಅಮ್ಮಜಿಖಷೆಸ್ಸ ಖನಮ ಒಜಿ
" ಕನ್ನಡಕ್ಕೆ ತನ್ನ ಕಾಲಿನ ಮೇಲೆ ತಾನೇ ನಿಂತುಕೊಳ್ಳುವ ಎಲ್ಲ ತಕ್ಕುಮೆಯಿದ್ದರೂ ಅದನ್ನು ಸಕ್ಕದದ ಊರುಗೋಲಿನಲ್ಲಿ ಬಲವಂತವಾಗಿ ನಡೆಸಲಾಗುತ್ತಿದೆ.
--> ನಮ್ಮಂತವರಿಗೆ ಕನ್ನಡ ಬರೀ 'ಸಂವಹನಾ ಮಾದ್ಯಮ' ಅಲ್ಲ, ಅದು ನಮ್ಮ ಉಸಿರು. ನಮ್ಮ ಗುಂಡಿಗೆ ಹತ್ತಿರವಾದ ನುಡಿ. ಕನ್ನಡದಿಂದಲೇ ಈ ಪರ್ಪಂಚವನ್ನ ನೋಡುವ ಹುರುಪು ನಮಗೆ."
ಬಹಳ ಸಂತೋಷ ವೈಭವ್, ನಿಮ್ಮ ಹಿಂದಿನ ಎಳೆಗೆ ಉತ್ತರಿಸುತ್ತ ನಾನೂ ಇದನ್ನೇ ಹೇಳಿದ್ದೇನೆ. ಕನ್ನಡ ಬೆಳೆಯುವುದರಲ್ಲಿ ನನ್ನ ತಕರಾರೇನಿಲ್ಲ. ವಾಸ್ತವವಾಗಿ ನಾನೂ ಇದನ್ನು ಇಷ್ಟಪಡಿತ್ತೇನೆ.
ನನ್ನ ತಕರಾರು ಇರುವುದು ನಮ್ಮದೇ ಕನ್ನಡಪ್ರೇಮ ಉಳಿದವರವರದ್ದಲ್ಲ ಎಂಬಂಥ ಮಾತಾಡುವವರ ಬಗ್ಗೆ ಮಾತ್ರ. ದಯವಿಟ್ಟು ಕನ್ನಡದ ಉತ್ಕೃಷ್ಟ ಸಾಹಿತ್ಯದ ಸೊಗಸುಗಳನ್ನು ಪರಿಚಯಿಸಿದರೆ ನಾವೂ ಖಂಡಿತ ನಿಮ್ಮ ಸಂತೋಷದಲ್ಲಿ ಸೇರಿಕೊಳ್ಳುತ್ತೇವೆ. ಕನ್ನಡದ ತಕ್ಕುಮೆಯನ್ನು ಹೊಸ ಪದಸಂಪತ್ತು ಸೃಷ್ಟಿಸುವುದರಲ್ಲಿ ಮತ್ತು ನಿಮ್ಮ ಆಶಯಗಳನ್ನು ಬಿಂಬಿಸುವಂಥ ಸಾಹಿತ್ಯಸೃಷ್ಟಿಯಲ್ಲಿ ಕಾಣಬರಲಿ. ಸಾಮಾನ್ಯರಿಗೆ ಅರ್ಥವಾಗದಂಥ ಹಳೆಗನ್ನಡದ ಕಾವ್ಯದ ಮೇಲ್ವೆಯನ್ನು ವರ್ಣಿಸಿ. ಸಧ್ಯದಲ್ಲೇ ನಾನು ಮೆಚ್ಚಿಕೊಂಡ ಆಂಡಯ್ಯನ ಕಾವ್ಯದ ಒಂದು ಸಣ್ಣ ಭಾಗದ ಓದಿನ ಸಂತೋಷವನ್ನು ಹಂಚಿಕೊಳ್ಳಬೇಕೆಂದಿದ್ದೇನೆ.
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
"ಸಧ್ಯದಲ್ಲೇ ನಾನು ಮೆಚ್ಚಿಕೊಂಡ ಆಂಡಯ್ಯನ ಕಾವ್ಯದ ಒಂದು ಸಣ್ಣ ಭಾಗದ ಓದಿನ ಸಂತೋಷವನ್ನು ಹಂಚಿಕೊಳ್ಳಬೇಕೆಂದಿದ್ದೇನೆ."
ತುಂಬ ನಲಿವಾಯಿತು ಸಾರ್. ನಿಮ್ಮಂತ ಹಿರಿಯರ ದಾರಿತೋರುವಿಕೆ ನಮ್ಮಂತ ಕಿರಿಯವರ ಮೇಲೆ ಇರಲಿ.
ನಾನು ನನ್ನ ತಿಳಿವಿನ ಮಟ್ಟಕ್ಕೆ ನಾನು ಓದಿದ ನಯಸೇನನ ದರ್ಮಾಮ್ರುತಂ, ಸಿರಿವಿಜಯರ ಕವಿರಾಜಮಾರ್ಗ ಮತ್ತು ಇದೀಗ ತಾನೆ ಪಂಪರಾಮಾಯಣವನ್ನ ಓದುತ್ತಾ ಇದ್ದೇನೆ.
ಈಗಾಗಲೆ ನಾನು ಬರೆದಿರುವ ಬರಹಗಳ ಎಳೆಗಳು ಇಲ್ಲಿವೆ. ಎಡತಾಗಿ.
http://sampada.net/blog/%E0%B2%B5%E0%B3%88%E0%B2%AD%E0%B2%B5/18/03/2008/...
http://sampada.net/article/7127
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಅಮ್ಮಜಿಖಷೆಸ್ಸ ಖನಮ ಒಜಿ
ರಮೇಶ್, persuasive technique ತುಂಬಾ ಚೆನ್ನಾಗೇ ಕಲ್ತಿದೀರ. ಎಸ್ಟೇ ಆದ್ರು ಲೆಕ್ಚರರ್ ಅಲ್ವ,. ಈ ಸಂಸ್ಕ್ರುತ ಕನ್ನಡ ಗುದಮುರಿಗೆ ಇಂದು-ನಿನ್ನೇದಲ್ಲ.. ತುಂಬಾ ಹಳೇದು. ನಿಮ್ಮ ಸಂಸ್ಕ್ರುತ ಕಾಳಜಿಗೆ ಬೇಸರ ಇಲ್ಲ. ಆದರೆ ನಿಮ್ಮ ಮಾತು,
ಸಂದರ್ಬ , ಹೊತ್ತು ಏನೇ ಇರಲಿ, ... ಕನ್ನಡದೊಲುಮೆ ದೂರವಿರಲಿ, ಸಕ್ಕದ-ಕನ್ನಡ ಆಗಲಿ, ಜಗತ್ತಿನ ಇನ್ನಾವುದೇ ನುಡಿಗಳಾಗಲಿ ಸರಿ-ಸಮ ಅನ್ನುವ ಯಾರೇ ಆಗಲಿ "ಸಂಸ್ಕ್ರುತವಿಲ್ಲದ ಕನ್ನಡ ಜಾಳು" ಅನ್ನುವದನ್ನು ಒಪ್ಪಲ್ಲ.
ನಿಮ್ಮ ಮಾತಿಂದ ನೀವು ಕನ್ನಡ ಹಾಲೊಳು ಸಕ್ಕದ ಸಕ್ಕರೆ ಬೇಡಿ ಅಳುವ ಮತ್ತೊಂದು desparate ಕೂಸು ಅನ್ನದೇ ದಾರಿಯಿಲ್ಲ.
ಉ: ಅಮ್ಮಜಿಖಷೆಸ್ಸ ಖನಮ ಒಜಿ
"ರಮೇಶ್, persuasive technique ತುಂಬಾ ಚೆನ್ನಾಗೇ ಕಲ್ತಿದೀರ. ಎಸ್ಟೇ ಆದ್ರು ಲೆಕ್ಚರರ್ ಅಲ್ವ,. "
ಸಂಗನ ಗೌಡರೆ, ನಾನು persuasive technique ಕಲಿತಿದ್ದೀನೋ ಇಲ್ಲವೋ ತಿಳಿಯದು, ಆದರೆ ನೀವು ವ್ಯಂಗ್ಯ ಮಾತುಗಳ ಕಲೆಯಲ್ಲಂತೂ ಸಿದ್ಧಹಸ್ತರು.
"ಸಂದರ್ಭ ಹೊತ್ತು ಏನೇ ಇರಲಿ, ಕನ್ನಡದೊಲುಮೆ ದೂರವಿರಲಿ"
ಇದರ ಅರ್ಥ ನಿಮಗೇ ಗೊತ್ತು,.
"ನಿಮ್ಮ ಮಾತಿಂದ ನೀವು ಕನ್ನಡ ಹಾಲೊಳು ಸಕ್ಕದ ಸಕ್ಕರೆ ಬೇಡಿ ಅಳುವ ಮತ್ತೊಂದು desparate ಕೂಸು ಅನ್ನದೆ ದಾರಿಯಿಲ್ಲ"
ಯಾಕೆ ಸ್ವಾಮಿ, "ನಾನು ಹೇಳುತ್ತೇನೆ, ನೀವು ಕೇಳಬೇಕು" ಅನ್ನುವ ಧೋರಣೆ ತೋರಿಸುತ್ತಿದ್ದೀರಿ?
ಕೂಸಿಗೆ ತನ್ನ ಹಾಲಲ್ಲಿ ಏನಿರಬೇಕು ಅನ್ನುವ ಸ್ವಾತಂತ್ರ್ಯವೂ ಇಲ್ಲವೆ?
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
ರಮೇಶ್‍ರೇ, ಮುಂಚಿನವರ ಮಾತನ್ನು ಮರುಹೇಳಲು ಕೋಟ್ಸ್ ಬಳಸಿ(quote tags)
ನಾನು ಹೇಳಿದ್ದು
ಉ: ಅಮ್ಮಜಿಖಷೆಸ್ಸ ಖನಮ ಒಜಿ
tips on quote tags
ಮತ್ತು ನೀವು ವಯಸ್ಸಲ್ಲಿ ಹಿರಿಯರು, ನಮ್ಮ ಯಾವುದಾದರು ಮಾತಿಗೆ offended feel ಮಾಡಿಕೊಳ್ಳುವದು ಬೇಡ ಅಂಬುದಕ್ಕಾಗಿ, ಹೆಚ್ಚಿಗೆ ಮಾತು ಬೆಳೆಸಲು ನನಗೆ ಮನಸ್ಸಿಲ್ಲ. ನಾನು ಬಳಸುವ ಪದಗಳನ್ನು ವಸಿ ನೋಡ್ರಲಾ.. ಆದಟ್ಟು ಕನ್ನಡದ ಪದಗಳನ್ನೇ ಬಳಸಲು ಜತನಗೈತಾನೇ ಇತ್ತೀನಿ... ಯಾಕಂದ್ರೆ ಸಂಸ್ಕ್ರುತ ಇಲ್ಲವೇ ಇನ್ನಾವುದೇ ನುಡಿ ಕನ್ನಡಕ್ಕಿಂತ ಮೇಲು ಅಂಬುವದು ನನಗೆ ಹಿಡಿಸದು.. ನನ್ನಂತಾ ಬೇರೆಯವರ ಬಗ್ಗೆ ನಾ ಮಾತಾಡಲೊಲ್ಲೆ... ಗುಂಪುಗಾರಿಕೆ ನನ್ನ ಜಾಯಮಾನ(ನೇಚರ್, ಪ್ರಕ್ರುತಿ) ಅಲ್ಲ...
ನಿಮಗೆ ಒಳ್ಳೇದಾಗಲಿ.
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಜಗಳ ಭಾರಿ ಚೆನ್ನಾಗಿದೆ. ಇದು ನಂಗೊಬ್ನಿಗೆನಾ ಬೇರೆಯವ್ರಿಗೂನಾ ಗೊತ್ತಿಲ್ಲ. ಇನ್ನೊಬ್ಬರ ಜಗಳ ನೋಡಕ್ಕೆ ಮಜಾ ಬರತ್ತೆ.
ಹೋಗ್ಲಿ ಬಿಡಿ. ಬೇರೆಯವ್ರ ಬಗ್ಗೆ ಗೊತ್ತಿಲ್ಲ. ನಂಗಂತು ಸಂಸ್ಕೃತ ಇಷ್ಟ. ಬೇಗ ಅದೇನ್ ಗುಟ್ಟೋ ತಿಳಿಸಿ. ನಾನು ಕಲ್ತ್ಕೋಬೇಕು. ಅವ್ಳ ಜೊತೆ ಮಾತಾಡಕ್ಕೆ ಇತ್ತಿತ್ಲಗೆ ಅಮ್ಮ ಇರ್ಬೇಕಾದ್ರೆ ಭಾರಿ ಹೆದ್ರಿಕೆ.
ಉ: ಅಮ್ಮಜಿಖಷೆಸ್ಸ ಖನಮ ಒಜಿ
ಇದರ ಅರ್ಥ "ಕನ್ನಡಿಗರೆಲ್ಲ ಗಮನ ಕೊಡಿ " ಅಲ್ಲವೇ?
ಉ: ಅಮ್ಮಜಿಖಷೆಸ್ಸ ಖನಮ ಒಜಿ
ತೀರ ಸರಿ,
ಇದರರ್ಥ ನೀವೂ ಇದನ್ನು ಬಳಸ್ತೀರಿ ಅಂತ ಆಯ್ತು. ಅಲ್ವಾ? ಸಂತೋಷ
"ಏರಿದವನು ಚಿಕ್ಕವನಿರಬೇಕು"
ಉ: ಅಮ್ಮಜಿಖಷೆಸ್ಸ ಖನಮ ಒಜಿ
ನಮಸ್ಕಾರ ಮಿತ್ರರೆ
ನಿಮ್ಮ ವಾದ ವಿವಾದ ಓದಲು ಚೆನ್ನಾಗಿರುತ್ತದೆ.ಆದರೂ ಒಮ್ಮೊಮ್ಮೆ ವಿಶ್ಯ ಎಲ್ಲಿನ್ದಲೊ ಶುರುವಾಗಿ ಇನ್ನೆಲ್ಲೊ ಹೋಯ್ತೇನೊ ಆನ್ನಿಸುತ್ತದೆ.ಮಾತಿಗಾಗಿ ಮಾತು ಬೇಡ.ಅಲ್ಲವೆ?.ನಾನಿನ್ನೂ ಸಮ್ಪದಕ್ಕೆ ಹೊಸಬಳು.ಶ್ಲೋಕದ ರಹಸ್ಯ ತಿಳಿಯಲು ಕಾತರ.
ಒನ್ದು ಸಣ್ಣ ಅನುಮಾನ.ತಾನ್ತ್ರಿಕ ವಿಶಯ ಪರಿಣಿತರಾದ ನಿಮಗೆ ಸಾಹಿತ್ಯ ಹಾಗೂ ಭಾಶೆ ಬಗ್ಗೆ ಬಹಳ ಅರಿವು ಹಾಗೂ ಕಾಳಜಿ ಇದೆ.ಖುಶಿಯಾಯ್ತು.ನನಗೆ ತಿಳಿದ ಮಟ್ಟಿಗೆ ಭಾಶೆ ಬಗ್ಗೆ ಅರಿವು ಇರುವವರು ತುಮ್ಬಾ ಕಮ್ಮಿ.ಅದರಲ್ಲೂ ಸೈನ್ಸ್ ವಿದ್ಯಾರ್ಥಿಗಳು ಗಮ್ಭೀರವಾಗಿ ತಗೊಳ್ಳಲ್ಲ.