ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
"ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗೆಗಿನ ಲೇಖನ " ಇದನ್ನೊಮ್ಮೆ ಓದಿ.
ವಿಂಡೋಸ್ ಇನ್ಸ್ಟಾಲ್ ಮಾಡಿದ್ರಿಂದನೋ ಅಥವಾ ಇನ್ಯಾವ್ದಾದ್ರು ಕಾರಣದಿಂದ ಲಿನಕ್ಸ್ ಗೆ ಬೂಟ್ ಆಗಲು ತೊಂದರೆ ಇದ್ರೆ GRUB ನ recover ಮಾಡ್ಬೇಕು. ಇದನ್ನು ತುಂಬಾ ತರಹದಲ್ಲಿ ಸರಿ ಮಾಡಬಹುದು, ನನಗೆ ಗೊತ್ತಿರೋ ಎರಡು ವಿಧಾನದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಒಂದು : ಲಿನಕ್ಸ್ ನ ಯಾವುದಾದರೂ LIVE ಸಿಡಿ ಉಪಯೋಗಿಸಿ GRUB ರಿಕವರ್.
೧) ಲಿನಕ್ಸ್ ನ ಯಾವುದಾದರೂ LIVE ಸಿಡಿ ಉಪಯೋಗಿಸಿ ಲಾಗಿನ್ ಆಗಿ.
೨) Alt + F2 ಒತ್ತಿದರೆ "Run Application" ಅಂತ ಒಂದು ವಿಂಡೋ ಓಪನ್ ಆಗುತ್ತೆ, ಅದ್ರಲ್ಲಿ "gnome-terminal" ಅಂತ ಬರೆದು "Run" ಅಂತ ಕೊಡಿ.
೩) ಉಬಂಟು LIVE ಸಿಡಿ ಬಳಸಿದ್ದಾದರೆ sudo grub ಅಂತ ಬರೆದು Enter ಬಟನ್ ಒತ್ತಿ, ಫೆಡೋರಾ ಬಳಸಿದ್ದರೆ su ಅಂತ ಬರೆದು Enter ಬಟನ್ ಒತ್ತಿ ಆಮೇಲೆ /sbin/grub ಅಂತ ಬರೆಯಿರಿ. ಈಗ grub> ಅಂತ ಬರುತ್ತೆ.
೪) ಈಗ find /boot/grub/stage1 ಅಂತ ಬರೆದು "Enter" ಒತ್ತಿದಾಗ ಕಂಪ್ಯೂಟರಿನಲ್ಲಿದ್ದ ಎಲ್ಲಾ ಲಿನಕ್ಸ್ ರೂಟ್ ಪಾರ್ಟಿಷನ್ ತೋರಿಸುತ್ತೆ.
ನನ್ನ ಕಂಪ್ಯೂಟರ್ ನ 6ನೇ ಪಾರ್ಟಿಷನ್ ಅಲ್ಲಿ ಉಬಂಟು ಹಾಗೂ 7ನೇ ಪಾರ್ಟಿಷನ್ ಅಲ್ಲಿ ಫೆಡೋರಾ ಇನ್ಸ್ಟಾಲ್ ಮಾಡಿದ್ದೇನೆ, ಹಾಗಾಗಿ ಮೇಲೆ ಬರೆದ ಸ್ಕ್ರಿಪ್ಟ್ ರನ್ ಮಾಡಿದಾಗ (hd0,5) ಮತ್ತು (hd0,6) ಅಂತ ತೋರಿಸುತ್ತೆ.
೫) ಈಗ ಯಾವ ಲಿನಕ್ಸ್ ಅನ್ನು ರಿಕವರ್ ಮಾಡಬೇಕೋ ಅದನ್ನು ಕೆಳಗೆ ತೋರಿಸಿದಂತೆ ಬರೆದು ರನ್ ಮಾಡಿ.
root (hd0, 5)
೬) ಇದಾದ ನಂತರ setup (hd0) ಅಂತ ಬರೆದು ರನ್ ಮಾಡಿ. ಅಲ್ಲಿಗೆ GRUB ರಿಕವರ್ ಮಾಡಿ ಮುಗೀತು, quit ಅಂತ ಬರೆದು ಟರ್ಮಿನಲ್ ಕ್ಲೋಸ್ ಮಾಡಿ , ಕಂಪ್ಯೂಟರ್ ರಿಸ್ಟಾರ್ಟ್ ಮಾಡಿ GRUB ಮೆನು ಬರುತ್ತೆ.
ಎರಡು : ಲಿನಕ್ಸ್ ನ ಇನ್ಸ್ಟಾಲೇಬಲ್ ಸಿಡಿ ಉಪಯೋಗಿಸಿ GRUB ರಿಕವರ್.
ಈ ವಿಧಾನದಲ್ಲಿ ಲಾಗಿನ್ ಆಗೋದು ಬೇಡ, ಪ್ರಾರಂಭದಲ್ಲೇ "Rescue Installed System" ಅಂತ ಕೇಳುತ್ತೆ. ಅದನ್ನ ಸೆಲೆಕ್ಟ್ ಮಾಡಿದಾಗ ರೂಟ್ ಶೆಲ್ ಗೆ ಕಂಟ್ರೋಲ್ ಸಿಗುತ್ತೆ(ರೂಟ್ ಶೆಲ್ ಅಂದ್ರೆ ರೂಟ್ ಅಥವಾ ಅಡ್ಮಿನ್ permission ಇರುವ ಟರ್ಮಿನಲ್ ಅಂತ). ಈಗ grub ಅಂತ ಬರೆದು "Enter" ಒತ್ತಿ, ಆಗ grub> ಅಂತ ಬರುತ್ತೆ. ಮೇಲೆ ತಿಳಿಸಿದ ೪, ೫ ಮತ್ತು ೬ ನೇ steps ನಿಂದ GRUB ರಿಕವರ್ ಮಾಡಬಹುದು.
--------------
ವಿಂಡೋಸ್ ನಿಂದ ಲಿನಕ್ಸ್ ಪಾರ್ಟಿಷನ್ ಡಿಲೀಟ್ ಮಾಡಿದ್ದರೆ GRUB ಕೂಡ ಡಿಲೀಟ್ ಆಗಿರೋದ್ರಿಂದ ಲಿನಕ್ಸ್ ಗೆ ಲಾಗಿನ್ ಆಗೋದು ಸಾದ್ಯ ಆಗಲ್ಲ, ಹಾಗೇ ಡಿಲೀಟ್ ಮಾಡಿದಾಗ ವಿಂಡೋಸ್ ಪಾರ್ಟಿಷನ್ Active ಆಗಿರೋಲ್ಲ ಹಾಗಾಗಿ ವಿಂಡೋಸ್ ಗೂ ಕೂಡ ಲಾಗಿನ್ ಆಗಕ್ಕಾಗಲ್ಲ.
ಲಿನಕ್ಸ್ ಅನ್ನು ಡಿಲೀಟ್ ಮಾಡಿರೋದ್ರಿಂದ GRUB ರಿಕವರ್ ಮಾಡೋ ವಿಧಾನ ಇಲ್ಲಿ ಪ್ರಯೋಜ್ನಕ್ಕೆ ಬರೋದಿಲ್ಲ. ಅದಕ್ಕೆ ವಿಂಡೋಸ್ ನ ಬೂಟ್ ಲೋಡರ್ ಅನ್ನು ಸರಿ ಪಡಿಸ್ಬೇಕು.
ವಿಂಡೋಸ್ ಬೂಟ್ ಲೋಡರ್ ಸರಿ ಮಾಡಲು XP ಸಿಡಿ ಹಾಕಿದಾಗ ಬಂದ ಮೆನುವಿನಲ್ಲಿ R ಒತ್ತಿದರೆ Recover ಅಂತ ಬರೆದಿರುತ್ತೆ ಅದನ್ನು ಆಯ್ಕೆ ಮಾಡಿ.ಈಗಾಗಲೇ ಇನ್ಸ್ಟಾಲ್ ಆಗಿರೋ ಯಾವ ವಿಂಡೋಸ್ ಗೆ ಲಾಗಿನ್ ಆಗ್ಲಿ ಅಂತ ಕೇಳುತ್ತೆ.
ನನ್ನ ಕಂಪ್ಯೂಟರ್ ನಲ್ಲಿ ಒಂದೇ ವಿಂಡೋಸ್ ಇದ್ದಿದ್ರಿಂದ ಒಂದೇ ಮೆನು ತೋರಿಸ್ತು. ಯಾವ ವಿಂಡೋಸ್ ಬೇಕೋ ಅದನ್ನೇ ಸೆಲೆಕ್ಟ್ ಮಾಡಿ. ಅಡ್ಮಿನಿಸ್ಟ್ರೇಟರ್ ಗುಪ್ತಪದ ಕೇಳುತ್ತೆ, ಇದ್ದರೆ ಬರೆಯಿರಿ ಇಲ್ಲದಿದ್ದರೆ ಹಾಗೇ "Enter" ಒತ್ತಿ.
ಈಗ fixmbr ಅಂತ ರನ್ ಮಾಡಿ, ಬೂಟ್ ಲೋಡರ್ ರಿಕವರ್ ಆಗುತ್ತೆ.

- Login or register to post comments
- 763 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ಅರವಿಂದ್, ಸ್ಕ್ರೀನ್ ಶಾಟ್ ಗಳು ತುಂಬಾ ಹೆವಿಯಾಗಿವೆ. ಸ್ವಲ್ಪ ಫೈಲ್ ಗಾತ್ರ ಚಿಕ್ಕದಾಗಿಸಿ, ಜೊತೆಗೆ ದೊಡ್ಡದಾದ ಚಿತ್ರಕ್ಕೆ ಲಿಂಕ್ ಕೊಟ್ಟರೆ ಬಹಳ ಚೆನ್ನಾಗಿರುತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ಬರೆಯುವುದ ಮರೆತೆ - ಬಹಳ ಒಳ್ಳೆಯ ಪ್ರಯತ್ನ ಇದು! ಹೀಗೆಯೇ ಮುಂದುವರೆಸಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ಧನ್ಯವಾದಗಳು.
ಇವಾಗ ಬರೆದುದ್ದನ್ನು ಎಡಿಟ್ ಮಾಡಲು ಸಾಧ್ಯ ಇಲ್ಲ ಅಲ್ಲವೇ? ಮುಂದೆ ಚಿತ್ರಗಳನ್ನ ಉಪಯೋಗಿಸುವಾಗ ಈ ವಿಷಯದ ಬಗ್ಗೆ ಗಮನ ಹರಿಸುತ್ತೇನೆ.
ನಿಮ್ಮವನೇ,
ಅರವಿಂದ
http://www.belaku.net
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ಅರವಿಂದ..
ಚನ್ ಆಗಿದೆ..!
ಈ ಗೊಡವೆಗೆ ಸಿಕ್ಕಿ ಹಾಕಿಕೊಳ್ಳದೇ ಇರಲು.....
೧) ಮೊದಲು ವಿಂಡೋಸ್ ಇನ್‌ಸ್ಟಾಲ್ ಮಾಡಿರಿ, ಬಳಿಕ ಲಿನಕ್ಸ್
೨) ಎಲ್ಲ ಸರಿಯಾಗಿ ಇರುವಾಗ ಸುಮ್ನೆ ಏನೂ ತರಲೇ ಮಾಡಿಕೋಬೇಡಿ
[ನನಗೆ ಇದು]
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ತುಂಬಾ ಉಪಕಾರಿ ಲೇಖನ. ನನ್ನಿ. ಯಾವಾಗಲಾದರೂ ಉಪಯೋಗಕ್ಕೆ ಬರುತ್ತೆ ಅಂತ ಉಳಿಸಿಟ್ಟುಕೊಂಡಿದ್ದೇನೆ. ವಿಂಡೋಸ್ ಯಾವಾಗ ಏನು ಮಾಡುತ್ತೋ ಬಲ್ಲವರಾರು?
ಇನ್ನೂ ಹೆಚ್ಚು ಇಂತಹ ಲೇಖನಗಳು ಬರಲಿ. ಅರ್ಧಂಬರ್ಧ ತಿಳಿದ ನಮ್ಮಂತಹವರಿಗೆ ತುಂಬಾ ಉಪಯೋಗ.
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ಅರವಿಂದರೇ,
ಇವೆರಡರ ಜೊತೆ ಮತ್ತೊಂದು ರೀತಿ ಇದೆ:
೧. ಉಬುಂಟು/ಬೇರೆ ಯಾವುದಾದರು ಲಿನಕ್ಸಿನಿಂದ ಬೂಟಿಸಿ,
೨. ಒಂದು ಟರ್ಮಿನಲ್ ತೆಕ್ಕೊಬೇಕು (ನೀವು ಹೇಳಿರುವಂತೆಯೇ)
೩. ಸೂಪರ್ಯೂಸರ್ ಆಗಬೇಕು (ಅದೂ, ನೀವು ಹೇಳಿರುವಂತೆಯೇ) ($ sudo -s)
೪. ಅದಾದ ಮೇಲೆ, ಲಿನಕ್ಸ್ ಇರುವ ಪಾರ್ಟಿಷನ್ನನ್ನು ಮೌಂಟ್ ಮಾಡಿ (# mount /dev/sda5 /mnt)
೫. ಇದೊಂದು ಕಮಾಂಡನ್ನು ಒತ್ತಬೇಕು
# grub --root-directory=/mnt /dev/sda
(IDE ಡಿಸ್ಕಾದರೆ, /dev/sda ಬದಲು /dev/hda ಬರುವುದು)
ನನ್ನಿ
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ಇತ್ತೀಚಿನ ಎಲ್ಲಾ ಲಿನಕ್ಸ್ LIVE/ Installable ಸಿಡಿ ಗಳು ಎಲ್ಲಾ ಪಾರ್ಟಿಷನ್ ಗಳನ್ನ ಆಟೋಮ್ಯಾಟಿಕ್ ಆಗಿ mount ಮಾಡುತ್ತವಲ್ಲ !
ನಿಮ್ಮವನೇ,
ಅರವಿಂದ
http://www.belaku.net
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ಹೌದು. ಅದರ ಮೌಂಟ್ಪಾಯಿಂಟನ್ನೇ ಉಪಯೋಗಿಸಿ ಇನ್ಸ್ಟಾಲ್ ಮಾಡಬಹುದು ಅಂದರೆ,
# grub-install --root-directory=/media/sda5 /dev/sda
ಅಷ್ಟೇ ಸಾಕು.
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
ide ಡಿಸ್ಕ್ ಎಂದರೇನು. ಇನ್ನು ಯಾವ ಯಾವ ರೀತಿಯ ಡಿಸ್ಕುಗಳಿವೆ ?
ಉ: ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?
IDE ಅಂದರೆ Integrated Drive Electronics, ಇದನ್ನು ATA (Advanced Technology Attachment) ಅಂತನೂ ಹೇಳ್ತಾರೆ. Serial ATA(SATA) ಹಾರ್ಡ್ ಡಿಸ್ಕ್ ಗಳೂ ಇರುವುದರಿಂದ ATA ಅನ್ನು Parallel ATA (PATA) ಅಂತನೂ ಕರೀತಾರೆ. ನನಗೂ ಇದರ ಬಗ್ಗೆ ಬಹಳವಾಗಿ ಗೊತ್ತಿಲ್ಲ, ಈ ಕೆಳಗಿನ ವಿಕಿಪೀಡಿಯಾದ ಕೊಂಡಿಯನ್ನು ನೋಡಿದರೆ ವಿವರಗಳು ಸಿಗುತ್ತೆ.
http://en.wikipedia.org/wiki/Hard_drive
ನಿಮ್ಮವನೇ,
ಅರವಿಂದ
http://www.belaku.net