ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

April 6, 2008 - 7:01am — omshivaprakash

ಮುಂದೇನಾಗಬಹುದು? ನಿಮಗ್ಯಾರಿಗಾದರೂ ಗೊತ್ತಿದೆಯೇ? ಆಗಸದಲ್ಲಿ ಕಾಣುತ್ತಿರುವ ನಕ್ಷತ್ರ, ಗೆಲಾಕ್ಸಿಗಳು ನಿಜವಾಗಲೂ ಅದೇ ರೀತಿಯಲ್ಲಿ ಅಸ್ತಿತ್ವದಲ್ಲಿವೆಯೇ? ಬೆಳಕಿನವೇಗದಲ್ಲಿ ಸಾಗಿ ನಮ್ಮ ಕಣ್ಣೆದುರಿಗೆ ರಾಚುತ್ತಿರುವ ಆ ನಭೋಮಂಡಲದ ದೃಶ್ಯ ಎಷ್ಟೋ ವರ್ಷಗಳ ಹಿಂದಿನದಾಗಿರಬಹುದಲ್ಲವೆ? ಇರಲಿ.

ಇದನ್ಯಾಕೆ ಹೇಳಿದೆನೆಂದರೆ, ಹಿಂದೇನಾಗಿದೆ ಅನ್ನೋದರ ಮಾಹಿತಿಯೂ ಮಾನವರಾದ, ಈ ಭುವಿಯ ಬುದ್ದಿವಂತ ಜೀವಿಯಾದ ನಮ್ಮಗೇ ಇಲ್ಲ. ನೆನ್ನೆ ಮೊನ್ನೆಯವರೆಗೆ ಡೆಸ್ಕ್ಟಾಪ್, ಲ್ಯಾಪ್ಟಾಪ್ ಕೀಲಿಸಿ ತನ್ನ ಕೆಲಸ ಮುಗಿಸಿ ಕೊಳ್ಳುತಿದ್ದ ಮನುಷ್ಯ, ಅವುಗಳ ಉಪಯೋಗದಿಂದ ಎದುರಾಗಬಲ್ಲ ಅಪಾಯಗಳನ್ನ ತಿಳಿಯುವುದರ ಒಳಗೇ , ಅವನಿಗೆ ಅಂಗೈನಲ್ಲೇ ವಿಶ್ವ ದರ್ಶನ ಮಾಡ ಹೊರಟಿವೆ ಇಂದು ಎಲ್ಲರ ಕೈನಲ್ಲಿ ರಿಂಗಿಣಿಸುತ್ತಿರುವೆ ಕಿರಿ ಕಿರಿ ಮೊಬೈಲುಗಳು. ಕಿರಿ ಕಿರಿ ಇರಲಿ, ಅವು ಇಂದು ಎಲ್ಲರಿಗೆ ಬಹು ಪ್ರಿಯ. ರಿಂಗಣ ತರುವುದು ಇಂದಿನ ಯುವ ಜನಾಂಗದ ತುಟಿಯಲಿ ಕಿರು ನಗು. ಯಾರಿಗೆ ಗೊತ್ತು ಯಾವ ನಗುವಿನಲಿ ಏನಡಗಿದೆ ಎಂದು Eye-wink (ಬರಿ ತಮಾಷೆಗೆ ಹೇಳಿದೆ).

ಹುಡುಗ, ಹುಡುಗಿಯರೆ, ಒಂದೆಜ್ಜೆ ಮತ್ತೆ ಮುಂದೆ ಹೋಗಿ ತಂತ್ರಜ್ಯ್ನಾನದ ಉಪಯೋಗ ಪಡೆಯಿರಿ. ನಿಮ್ಮ ಮೊಬೈಲ್, ರಿಂಗಣದ ಜೊತೆಗೆ ನಿಮ್ಮ ಭೂತ ಭವಿಷ್ಯಗಳ ಕಿಂಡಿಯಾಗಲಿರುವುದನ್ನ ಒಮ್ಮೆ ಇಣುಕಿ ನೋಡಿ. WAP ಅಂದ್ರೇನು ಅಂತ ಹುಡುಕಾಡಲಿಕ್ಕೆ ನಿಮ್ಮಲ್ಯಾರಾದರೂ ತಯಾರಿದ್ದೀರಾ? ಅದರಲ್ಲಿ ಕನ್ನಡದ ಕನ್ನಡಿಯನ್ನ ತಯಾರು ಮಾಡ್ಲಿಕ್ಕೆ ಸಾದ್ಯವಿದೆಯೆ ಅಂತ ನಿಮಗೆ ತಲೆ ಕೆಡಿಸಿ ಕೊಳ್ಳುವಷ್ಟು ಸಮಯವಿದೆಯೇ?

ನನ್ನ ಇಂಗ್ಲೀಷ ಬ್ಲಾಗನ್ನ ನನ್ನ ಮೋಟೋ ಮಿಂಗ್ ನಲ್ಲಿ ವೀಕ್ಷಿಸಿದಾಗ ನಮ್ಮ ಹುಡುಗರ
ತಲೆಯಲ್ಲೇನಾದರೂ ಇದರ ಹುಳು ಹತ್ತಿದೆಯೋ ಎನೋ ಕೇಳೇ ಬಿಡೋಣ ಅಂತ ಈ ಲೇಖನ ಬರೀಲಿಕ್ಕೆ
ಶುರು ಮಾಡಿದೆ.ಇದರ ಮೇಲೆ ಕೆಲಸ ಮಾಡ್ಲಿಕ್ಕೆ , ಹೊಸದನ್ನ ಹುಡುಕಿ ಕನ್ನಡಿಗರ ಮುಂದಿಡುವ
ಕಿಚ್ಚು ನಿಮ್ಮಲ್ಲಿದ್ದರೆ ಹೇಳಿ ನಿಮಗೆ ಬೇಕಿರುವ ಸಹಾಯ ಮಾಡುವ. ನಿಮ್ಮೊಂದಿಗೆ ನಾವೂ
ನಮ್ಮ ಕೈ ಜೋಡಿಸ್ತೇವೆ.

  • ಮಾಹಿತಿ ಫಲಕ
~.~
  • Login or register to post comments
  • 338 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 9, 2008 - 8:35pm — prasannasp

ಉ: ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

prasannasp's picture

WAP ಅಂದ್ರೇನು? ಅದು nokia 3500 ನಲ್ಲಿ ಎಲ್ಲಿ ಇದೆ?
ಈ ಜಂಗಮವಾಣಿ ಬಳಸುವವರು ದಯವಿಟ್ಟು ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 9, 2008 - 9:17pm — Aravinda

ಉ: ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

Aravinda's picture

WAP ಅಂದರೆ Wireless Application Protocal. ಅಂತರ್ಜಾಲ ಪುಟಗಳನ್ನು browser ನಲ್ಲಿ ನೋಡಲು HTTP ಇದ್ದಂಗೆ ಮೊಬೈಲ್ ಡಿವೈಸ್ ಗಳಿಗೆ ಅರ್ಥ ಆಗೋವಂತ ಪುಟಗಳನ್ನು ಮಾಡಲು ಬಳಸುವ ಒಂದು standard ಗೆ WAP ಅಂತ ಕರೀತಾರೆ. ಅಂತರ್ಜಾಲ ಪುಟ ಬರೆಯಲು HTML(Hypertext Markup Language) ಬಳಸುವಂತೆ ಇದಕ್ಕೆ WML(Wireless Markup Language) ಅಂತ ಬಳಸ್ತಾರೆ. ಇದರ ಬಗ್ಗೆ ತುಂಬಾ detail ನನಗೆ ಅಷ್ಟೋಂದಾಗಿ ತಿಳಿದಿಲ್ಲ. ಉಳಿದ ಸಂಪದಿಗರ ಪ್ರತಿಕ್ರಿಯೆ ಗಾಗಿ ಕಾಯೋಣ. Smiling

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 10, 2008 - 1:17am — omshivaprakash

ಉ: ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

omshivaprakash's picture

ಹೌದು, ವ್ಯಾಪ್ ಅಂಗೈನಲ್ಲಿ ವಿಶ್ವದರ್ಶನ ಮಾಡಿಸಲಿಕ್ಕೆ ಬೇಕಿರುವ protocol (ನಿಯಮಗಳನ್ನ) ನಮಗೆ ನೀಡುತ್ತೆ. ಅರವಿಂದರು ಹೇಳಿದ ಹಾಗೆ, ಕೆಲ ಮೊಬೈಲ್ ಗಳು ನಿಮಗೆ ವ್ಯಾಪ್ browser ಗಳನ್ನ ಒದಗಿಸಿ ಅದರಲ್ಲೇ ವಿವಿದ ಅಂತರ್ಜಾಲ ತಾಣಗಳನ್ನ ವೀಕ್ಷಿಸಲು ಅನುವು ಮಾಡಿಕೊಡುತ್ತವೆ. ಆದರೆ ಒಂದು ವಿಷಯ ತಿಳಿದಿರಲಿ, ಈ ಸೇವೆಗೆ (ವ್ಯಾಪ್) ನಿಮ್ಮ ಮೊಬೈಲ್ ಕಂಪನಿ ಶುಲ್ಕ ವಿದಿಸ್ತದೆ. ಏರ್ಟೆಲ್ ಮುಂತಾದ ಕಂಪನಿಗಳು ಈ ಸೇವೆಯನ್ನ ಕಡಿಮೆ ಖರ್ಚಿನಲ್ಲಿ ಆಗಲೇ ಕೊಡ್ತಿವೆ. ಈ ವ್ಯಾಪ್ ಸೇವೆ ಇಂಟರ್ನೆಟ್ ಕನೆಕ್ಷನ್ ಕೊಂಡಂತೆ. ಕೊಂಚ ಗೂಗಲ್ ನಲ್ಲಿ ದುರ್ಬಿನು ಹಾಕಿ ಕೊಂಡು ನೋಡಿದರೆ ಮತ್ತೂ ಕೆಲವು ವಿಷಯಗಳನ್ನ ನೀವೆಲ್ಲ ನಮ್ಮೊಂದಿಗೆ ಹಂಚಿ ಕೊಳ್ಳಬಹುದು.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 12, 2008 - 3:02pm — prasannasp

ಉ: ವ್ಯಾಪ್ (WAP) ಅಂಗೈನಲ್ಲಿ ವಿಶ್ವ ದರ್ಶನ

prasannasp's picture

ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಅದರ ಬಗ್ಗೆ ಸ್ವಲ್ಪ ತಿಳೀತು.
ನಾನು BSNL ಸಂಪರ್ಕ ಹೊಂದಿದ್ದು, ಅದರಿಂದಲೇ GPRS ಸೇವೆ ಪಡೆಯುತ್ತಿದ್ದೇನೆ.
ನೊಕಿಯ 3500 ದಲ್ಲಿ ವೆಬ್ ಬ್ರೌಸರ್‍ ಆಗಿ ಒಪೇರಾ ಮಿನಿ ಲಬ್ಯವಿದೆ.
ಸಧ್ಯಕ್ಕೆ ನಾನು ಇದನ್ನೇ ಬಳಸುತ್ತಿದ್ದೇನೆ.

"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 79 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator