ಬಯಕೆ v/s ನಂಬಿಕೆ
ಬಯಕೆಯಿಲ್ಲದ ಬಡ್ದಿಹಯ್ದ ಅವನ್ಯಾವನಿಹನ್? ಅಂತ ಕೇಳ್ಮೆ ಕೇಳಿದರೆ 'ಯಾರೂ ಇಲ್ಲ' ಅಂತ ಉತ್ತರ ಸಿಕ್ಕುವುದು ನಿಕ್ಕುವ. ನಮ್ಮಲ್ಲಿ ಅದು ಬೇಕು(ಆಗ್ಬೇಕು) ಇದು ಬೇಕು ಅಂತ ಹತ್ತು-ಹಲವು ಬಯಕೆಗಳು ಮೂಡುವುದು ಸಹಜ. ಆದರೆ ಈ ಬಯಕೆಗಳನ್ನು ಈಡೇರಿಸಿಕೊಳ್ಳಲು ನಾವು ನಂಬಿರುವ ನಂಬಿಕೆಗಳನ್ನು ಬಲಿಗೆ ಕೊಡಬೇಕಾಗಿ ಬಂದರೆ? ಯಾವುದನ್ನು ಆರಿಕೊಳ್ಳಬೇಕು ಅನ್ನುವ ಗೊಂದಲ ನನಗೆ ಹಲವು ಸರ್ತಿ ಕಾಡಿದೆ. ಬಯಕೆನೋ ಇಲ್ಲ ನಂಬಿಕೆನೊ? ನಾವು ನಂಬಿರುವ ನಂಬಿಕೆಗಳಿಗೆ ದಕ್ಕೆ ಬಾರದೆ ನಮ್ಮ ಬಯಕೆಗಳು ಈಡೇರಿದರೆ ಏಸು ಚಂದ ಅಲ್ವ. ಆದ್ರೆ ಹಾಗೆ ಹಾಗೋದು ತುಂಬ ವಿರಳ. ಬಯಕೆಗಳು ಬಂದು ನಮ್ಮನ್ನು ಕಾಡಿ ನಂಬಿಕೆಗಳನ್ನು ಗಾಳಿಗೆ ತೂರಿಸಿ ನಮ್ಮ ಹೆಗಲ ಮೇಲೆ ಸವಾರಿ ಮಾಡುವಶ್ಟು ನಾವು ಬಯಕೆಗಳಿಗೆ ತೊತ್ತಿಗರಾಗಿರುತ್ತೇವೆ. ಹಿಂಗಿದ್ರೂ ಬಯಸಿ ಬಯಸಿ ಪಡೆದ(ಅಂದರೆ ನಂಬಿಕೆಯನ್ನು ಬಲಿಕೊಟ್ಟು)ಸರಕು ಮುಂದೆ ನಮಗೆ ಕೆಡುಕಾಗಿರುವ್ದು ಗೊತ್ತಿಲ್ಲದೇ ಇರುವಂತದ್ದಲ್ಲ. ಹಾಗಾದರೆ ಬಯಕೆ ಮತ್ತು ನಂಬಿಕೆ, ಇವುಗಳ ನಡುವೆ ತಿಕ್ಕಾಟ ಬಂದಾಗ ಯಾವುದನ್ನು ಆರಿಸಿಕೊಳ್ಳಬೇಕು? ನಿಮಗೇನಾದರೂ ಗೊತ್ತಾ? ಏನಾದರೂ ಹಱುವು/ಉಪಾಯಗಳಿವಿಯೇ? ಆ ಬಯಕೆಯಿಂದ ಸದ್ಯಕ್ಕೆ ನೆಮ್ಮದಿ ಸಿಕ್ಕಿದರೂ ಆಮೇಲೆ ಕೆಡುಕಾಗಬಹುದು.

- Login or register to post comments
- 355 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬಯಕೆ v/s ನಂಬಿಕೆ
ಬಯಕೆ v/s ನಂಬಿಕೆ. ಹ್ಮ್...
ನಂಬಿಕೆಗಳನ್ನು ಅಲುಗಾಡಿಸುವಂತಹ ಆಸೆಗಳು ನಮಗೆ ಇರುವುದರಿಂದಲೇ ನಾವು ಮುಂದೆ ಬರೋಕ್ಕೆ ಸಾಧ್ಯ ಅಂತ ನಮ್ಮ ಅಂಬೋಣ. ಈ ತಿಕ್ಕಾಟ ನಮ್ಮಲ್ಲಿ ಶುರುವಾದಾಗ, ಈ ರೀತಿ ಪ್ರಶ್ನಿಸಿಕೊಳ್ಳಬೇಕು.
೧. ಈ ನಂಬಿಕೆ ನನ್ನ ಮೇಲೆ ಹೇರಲ್ಪಟ್ಟಿದ್ದೇ. ಅಥವಾ ನಾನೇ ಹಾಕಿಕೊಂಡಿದ್ದೇ.
೨. ನಂಬಿಕೆ ನನ್ನ ಮುನ್ನುಗ್ಗುವಿಕೆಗೆ ಅಡ್ಡಗಾಲಾಗಿದೆಯೇ. ಆಗಿದ್ದರೆ ಏಕೆ ? ಹೇಗೆ ?
ಈ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳುವಷ್ಟರಲ್ಲಿ ಆಸೆಯೋ ನಂಬಿಕೆಯೋ ಎಡಬಿಡಂಗಿತನ ಹೊರಟುಹೋಗಿರುತ್ತದೆ. ನಿನ್ನ ಅನಿಸಿಕಯೇನು ?
ಉ: ಬಯಕೆ v/s ನಂಬಿಕೆ
ಹ್ಮ್..
೧. ಈ ನಂಬಿಕೆ ನನ್ನ ಮೇಲೆ ಹೇರಲ್ಪಟ್ಟಿದ್ದೇ. ಅಥವಾ ನಾನೇ ಹಾಕಿಕೊಂಡಿದ್ದೇ.
[ವಯ್ಬವ] ಅಲ್ಲ. ನಾನೇ ಹಾಕಿಕೊಂಡಿದ್ದು ಅತ್ವ ನನ್ನ ಅರಿವಿಗೆ ಎಟಕುವ (ಲಾಜಿಕಲ್ ಆಗಿ) ವಿಸ್ಯಗಳನ್ನು ತಿಳಿದುಕೊಂಡು ನಾನೇ ತಿಳಿದುಕೊಂಡಿರುವ ನಂಬಿಕೆ
೨. ನಂಬಿಕೆ ನನ್ನ ಮುನ್ನುಗ್ಗುವಿಕೆಗೆ ಅಡ್ಡಗಾಲಾಗಿದೆಯೇ. ಆಗಿದ್ದರೆ ಏಕೆ ? ಹೇಗೆ ?
[ವಯ್ಬವ] ನಂಬಿಕೆ ಅಲ್ಲ, ಬಯಕೆ ನನ್ನ ನಂಬಿಕೆಯನ್ನು ತುಳಿಯುತ್ತಿದೆ. ಹಾಗಾಗಿ ಈ ಬಯಕೆ ನನ್ನ ಅರಿವನ್ನು ಹೆಚ್ಚಿಸಿಕೊಳ್ಳಲು/ಚೂಪು ಮಾಡಿಕೊಳ್ಳಲು ಅಡ್ಡಗಾಲು ಹಾಕುತ್ತಿದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು