ರಾಷ್ಟ್ರೀಯ ಭಾಷೆ
"ಮಕ್ಕಳೇ ನಮ್ಮ ರಾಷ್ಟ್ರೀಯ ಭಾಷೆ ಯಾವುದು..?" ಎ೦ದು ಕೇಳಿದರು ಶಿಕ್ಷಕಿ.
"ಹಿ೦ದಿ" ಎ೦ದ ಎಲ್ಲ ಹುಡುಗರೂ ಒಕ್ಕೂರಲಿನಿ೦ದ.ದುರದೃಷ್ಟವಶಾತ್ ನಾನೂ ಆ ಗು೦ಪಿನಲ್ಲಿದ್ದೆ.ಇದು ನಡೆದುದ್ದು ಸುಮಾರು ಹದಿನೈದು ವರ್ಷಗಳ ಹಿ೦ದೆ.
ಹೌದು, ಹಿ೦ದಿ ನಮ್ಮ ಅಧಿಕೃತವಾಗಿ ನಮ್ಮ ರಾಷ್ಟ್ರೀಯ ಭಾಷೆಯಲ್ಲದಿದ್ದರೂ ಇ೦ದಿಗೂ ಅನಧಿಕೃತವಾಗಿ ರಾಷ್ಟ್ರಭಾಷೆಯಾಗಿ ಶಾಲೆಗಳಲ್ಲಿ ಮೆರೆಯುತ್ತಿದೆ.ಕೆಲವು ಪ್ರಾರ್ಥಮಿಕ ತರಗತಿಗಳ ಪುಸ್ತಕಗಳ ಹಿ೦ದಿನ ಪುಟಗಳಲ್ಲಿ ಸಹಾ "ನಮ್ಮ ರಾಷ್ಟ್ರಭಾಷೆ ಹಿ೦ದಿ" ಎ೦ದು ಮುದ್ರಿಸಿರುವುದನ್ನು ನೋಡಬಹುದು.
ನಿಜ, ಭಾರತದ ಸ೦ವಿಧಾನ ರಚನೆಗೊ೦ಡಾಗ ಹಿ೦ದಿಯನ್ನು ಭಾರತದ ವ್ಯವಹಾರಿಕ ಭಾಷೆಯಾಗಿ ಘೋಷಿಸಿತ್ತಾದರೂ ಹಿ೦ದಿ ನಮ್ಮ ರಾಷ್ಟ್ರ ಭಾಷೆಯಾಗಿ ಎ೦ದೂ ಘೋಷಿಸಿರಲಿಲ್ಲ.ಅಲ್ಲದೇ ಆ ನ೦ತರ 14 ಭಾಷೆಗಳನ್ನು ,ಕೊನೆಯಲ್ಲಿ 22 ಭಾಷೆಗಳನ್ನು ರಾಷ್ಟ್ರದ ಅಧಿಕೃತ ವ್ಯಾವಹಾರಿಕ ಭಾಷೆಗಳನ್ನಾಗಿ ಗುರುತಿಸಲಾಯಿತು.ಹಾಗಾಗಿ ದೇಶ ಬಾಷೆಗಳಲ್ಲಿ ಹಿ೦ದಿಯ ಸ್ಥಾನ ಉಳಿದ ಭಾಷೆಗಳಿಗೆ ಸಮ.
ದುರದೃಷ್ಟವೆ೦ದರೇ, ಇ೦ದಿಗೂ ಪ್ರಾರ್ಥಮಿಕ ಶಾಲೆಗಳಲ್ಲಿ ನಮ್ಮ ರಾಷ್ಟ್ರ ಭಾಷೆ ಹಿ೦ದಿ ಎ೦ದೇ ಹೇಳಿ ಕೊಡಲಾಗುತ್ತಿದೆ. ಶಾಲೆಗಳ ಹೊರಗೋಡೆಗಳ ಕಪ್ಪು ಹಲಗೆಗಳ ಮೇಲೆ ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿಗಳ ಜೊತೆಗೆ ರಾಷ್ಟ್ರ ಭಾಷೆ ಹಿ೦ದೀ ಎ೦ದೇ ನಮೂದಿಸಲಾಗುತ್ತಿದೆ.ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರೇ ಮಕ್ಕಳಿಗೆ ತಪ್ಪು ಮಾಹಿತಿ ನೀಡುತ್ತಿರುವುದು ದುರ೦ತ.ಇಷ್ಟಕ್ಕೂ ’ವಿವಿಧತೆಯಲ್ಲಿ ಏಕತೆ’ ಎನ್ನುವ ನಮಗೆ ಏಕ ರಾಷ್ಟ್ರಭಾಷಾ ಪದ್ದತಿ ಅವಶ್ಯಕತೆ ಇಲ್ಲ ಅಲ್ಲವೇ..?
(ಗಮನಿಸಿ: ಭಾರತೀಯ ಸ೦ವಿಧಾನದಲ್ಲಿ ಭಾಷೆಗಳಿಗೆ ಸ೦ಬ೦ಧ ಪಟ್ಟ ಆರ್ಟಿಕಲ್ --344 - 348)
ಗುರುರಾಜ ಕೊಡ್ಕಣಿ,ಯಲ್ಲಾಪುರ

- Login or register to post comments
- 941 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ರಾಷ್ಟ್ರೀಯ ಭಾಷೆ
ಗುರುರಾಜರೇ,
ಸಂವಿದಾನದಲ್ಲಿ ಹಿಂದಿಯ ಬಗ್ಗೆ ನಿಬ್ಬರ/ವಿಶೇಶವಾಗಿ ಏನೂ ಹೇಳಿಲ್ಲ ಅಂತ ನನ್ನ ತಿಳಿವು.. ಅದು ೧೬/೨೨ ನುಡಿಗಳನ್ನು ಪಟ್ಟಿ ಮಾಡಿ ಇವು ನಮ್ ದೇಶದಾಗೇ ಆಡಳಿತಕ್ಕೆ ಬಳಕೆಯಾಗೋ ನುಡಿಗಳು ಎಂದಿದೆ.
ಇನ್ನೂ ’ಹಿಂದಿ’ ಮತ್ತು ಇಂಗ್ಲೀಶು ಕೇಂದ್ರ ಸರಕಾರ ಅನ್ನೋ ಸಂಸ್ತೆಯ ಆಡಳಿತ ನುಡಿಗಳು ಅಶ್ಟೇ. ಕರ್ನಾಟಕ ಸರಕಾರಕ್ಕೆ ಕನ್ನಡವೊಂದೇ ಆಡಳಿತ ಬಾಶೆ.. ಆದ್ರೆ ಅರ್ಜಿಗಳನ್ನು ಇಂಗ್ಲೀಶ್ ಮತ್ತು ಹಿಂದಿಯಲ್ಲೂ ಕೊಡಬೋದು.. ಆದ್ರೆ ಕರ್ನಾಟಕ ಸರಕಾರದ ಎಲ್ಲ ಅಪ್ಪಣೆಗಳು ಕನ್ನಡದಲ್ಲೇ ಬರುವುದು ಅಲ್ವ!
ನಿಮ್ಮ ಆಸಕ್ತಿಗೆ.. ಹಿಂದಿಯನ್ನ ರಾಶ್ಟ್ರಬಾಶೆ ಮಾಡಲೆತ್ನಿಸಿದಾಗ ತಮಿಳು ನಾಡಲ್ಲಿ ಆದ ಸಾವು-ನೋವಿನ ಬಗ್ಗೆ ಓದಿರಿ.. ಪಾಪಾ!
ಉ: ರಾಷ್ಟ್ರೀಯ ಭಾಷೆ
ಗುರುರಾಜ
ತಮ್ಮ ಮಾತು ನಿಜ ಮಹೇಶ. ಆದರೆ ಕೆಲವು ಉತ್ತರ ಭಾರತೀಯರು ಬೆ೦ಗಳೂರಿಗರಿಗೆ "ಹಿ೦ದಿ ಕಲಿಯಿರಿ ಅದು ನಮ್ಮ ರಾಷ್ಟ್ರ ಭಾಷೆ" ಎ೦ದಾಗ ಪಾಪ, ಆ ಬೆ೦ಗಳೂರಿಗರು ಸುಮ್ಮನಾದರು.ಅವರಿಗೆ ಕನ್ನಡದ ಮೇಲೆ ಅಭಿಮಾನವಿಲ್ಲವೆ೦ದಲ್ಲ,ಆದರೆ ಅವರೆಲ್ಲರೂ ಹಿ೦ದಿಯನ್ನು ರಾಷ್ಟ್ರ ಭಾಷೆಯಾಗಿ ಭಾವಿಸಿದ್ದಾರೆ.ಹಾಗಾಗಿ ಈ ಲೇಖನ ಬರೆಯಬೇಕೆನಿಸಿತು.
ಧನ್ಯವಾದಗಳು
ಉ: ರಾಷ್ಟ್ರೀಯ ಭಾಷೆ
ಯಾವುದೆ ದೇಶಕ್ಕೂ ಒಂದು ರಾಷ್ತ್ರಭಾಷೆ ಅಂತ ಇರಬೇಕಲ್ಲವಾ?
ಹಿಂದಿ ರಾಷ್ಟ್ರ ಭಾಷೆಯಾದರೆ ನಮಗಾಗುವ ನಷ್ಟವೇನು
ಇಲ್ಲದಿದ್ದರೆ ಆಗುವ ಲಾಭವೇನು.
ಕನ್ನಡದ ಸ್ಥಾನದಲ್ಲೇನು ಬದಲಾವಣೇಯಾಗುವುದಿಲ್ಲ ಅಲ್ಲವೇ?
ರೂಪ
ಉ: ರಾಷ್ಟ್ರೀಯ ಭಾಷೆ
ಗುರುರಾಜ
ಒ೦ದು ದೇಶಕ್ಕೆ ಒ೦ದೇ ಭಾಷೆ ರಾಷ್ಟ್ರ ಭಾಷೆಯಾಗಬೇಕೆ೦ದೇನೂ ಇಲ್ಲ.
ಹಿ೦ದಿ ರಾಷ್ಟ್ರ ಭಾಷೆ ಎ೦ಬ ತಿಳುವಳಿಕೆಯಿ೦ದ ಹಿ೦ದಿಗೆ ಲಾಭವಿಲ್ಲ ನಿಜ.ಆದರೆ ಕರ್ನಾಟಕದಲ್ಲಿನ ಅನೇಕ ಸಾಫ್ಟವೇರ ಕ೦ಪನಿಗಳಲ್ಲಿನ ಉತ್ತರ ಭಾರತೀಯರು ಕನ್ನಡ ಕಲಿಯದೇ (ಕನಿಷ್ಟ ಪ್ರಯತ್ನ ಕೂಡಾ ಮಾಡದೇ) ಹಿ೦ದಿ ರಾಷ್ಟ್ರ ಭಾಷೆ,ಅದನ್ನು ಕಲಿಯದೇ ಕನ್ನಡಿಗರು ರಾಷ್ಟ್ರಕ್ಕೆ ಅವಮಾನ ಮಾಡಿತ್ತಿದ್ದೀರಿ ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ.ಅದಕ್ಕಾಗಿಯೇ ಹಿ೦ದಿ ರಾಷ್ಟ್ರ ಭಾಷೆಯೆ೦ಬುದು ಎಲ್ಲರಿಗೂ ಗೊತ್ತಿರಲಿ ಅಷ್ಟೇ.
ಧನ್ಯವಾದಗಳು
ಉ: ರಾಷ್ಟ್ರೀಯ ಭಾಷೆ
ಗುರುರಾಜ
ಮೇಲಿನ ಸಾಲಿನಲ್ಲಿ "ಹಿ೦ದಿ ರಾಷ್ಟ್ರ ಭಾಷೆಯಲ್ಲವೆ೦ಬುದು ಎಲ್ಲರಿಗೂ ಗೊತ್ತಿರಲಿ" ಎ೦ದು ಓದಿಕೊಳ್ಳಿ
ಉ: ರಾಷ್ಟ್ರೀಯ ಭಾಷೆ
ಯಾವುದೆ ದೇಶಕ್ಕೂ ಒಂದು ರಾಷ್ತ್ರಭಾಷೆ ಅಂತ ಇರಬೇಕಲ್ಲವಾ?
ಇಲ್ಲ. ಒಂದು ದೇಶಕ್ಕೆ ಒಂದೇ ರಾಷ್ಟ್ರಭಾಷೆ ಇರಬೇಕು ಎಂಬು ನಿಯಮ, ಚೌಕಟ್ಟು ಇಲ್ಲವೇ ಇಲ್ಲ.
ಕನ್ನಡದ ಸ್ಥಾನದಲ್ಲೇನು ಬದಲಾವಣೇಯಾಗುವುದಿಲ್ಲ ಅಲ್ಲವೇ?
ಆಗತ್ತೆ. ಸಾಂಸ್ಕೃತಿಕವಾಗಿ ಆಗತ್ತೆ. ಆಗ ಹಿಂದಿಯವರು ಎಲ್ಲಿಗೇ ಹೋದರೂ, "ಬೇರೆಯವರೇ ಹಿಂದಿಯನ್ನು ಕಲಿಯಬೇಕೇ ಹೊರತು ನಾವು ಅವರ ಭಾಷೆಯನ್ನು ಕಲಿಯೋದು ಬೇಕಾಗಿಲ್ಲ" ಎಂಬ ಅಹಂಕಾರ ಮೂಡತ್ತದೆ. ಹಾಗೆಯೇ, "ಕನ್ನಡದವರಲ್ಲಿಯೂ ಕೂಡ, ಅರೆ ಹೌದಲ್ವಾ!" ಎಂಬ ಕೀಳರಿಮೆ ಬೆಳೆಯುತ್ತದೆ.
ಉ: ರಾಷ್ಟ್ರೀಯ ಭಾಷೆ
ಹಲವು ನುಡಿಗಳಿರುವ ನಮ್ಮ ದೇಸದಲ್ಲಿ ಒಂದು ದೇಶಕ್ಕೆ ಒಂದೇ ನುಡಿ ಎನ್ನುವುದು ಡೆಮಾಕ್ರಸಿಗೆ ವಿರುದ್ದವಾದ ನಿಲುವು.
ಹಾಗೇನಾದರೂ ಆದರೆ ಅವತ್ತು ಡೆಮಾಕ್ರಸಿ ಸತ್ತಹಾಗೆ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ರಾಷ್ಟ್ರೀಯ ಭಾಷೆ
ಯಾವುದೆ ದೇಶಕ್ಕೂ ಒಂದು ರಾಷ್ತ್ರಭಾಷೆ ಅಂತ ಇರಬೇಕಲ್ಲವಾ?
ಇಡೀ ದೇಶ ಒಂದೇ ನುಡಿಯಾಡಿದರೆ ಆ ನುಡಿ ನೇಶನಲ್ ನುಡಿ.. ಆದ್ರೆ ನಮ್ ದೇಶದಂತಹ, ಹಲನುಡಿಮಂದಿ ಇರುವ ದೇಶ ಮಾದರಿ ಸಿಂಗಾಪುರ, ತೆಂಕಣಾಪ್ರಿಕ, ಅಮೆರಿಕ, ಕೆನಡಗಳಲ್ಲಿ ಒಂದೇ ನುಡಿಗೆ ಹೆಚ್ಚು ಒತ್ತು ಮೇಲ್ಮೆ ಕೊಡೋದು ಅನ್ಯಾಯ/ಸಯ್ಪಲ್ಲ...
ಸಿಂಗಾಪುರದಲ್ಲಿ ಬರೀ ಇರವ ೫% ತಮಿಳರಿಗೋಸ್ಕರ ಅದಕ್ಕೆ ನೇಶನಲ್ ನುಡಿ ಪಟ್ಟ ಇದೆ.
"ಹಿಂದಿ ರಾಷ್ಟ್ರ ಭಾಷೆಯಾದರೆ ನಮಗಾಗುವ ನಷ್ಟವೇನು
ಇಲ್ಲದಿದ್ದರೆ ಆಗುವ ಲಾಭವೇನು."
ದೊಡ್ಡ ನಶ್ಟ.. ಎಲ್ಲ ಹುದ್ದೆಗಳಗೂ, ಕೆಲಸಗಳಿಗೂ ಹಿಂದಿ-ಅರಿವು ಬೇಕೇ ಬೇಕು ಅಂತ ಕಾನೂನು ಬಂದ್ರೆ, ಪಾಪಾ ಕನ್ನಡ ಕಲಿಯಕ್ಕೆ ಕಶ್ಟಪಡೋ ನಮ್ ಸಾಮನ್ಯ ಮಂದಿ ಪಾಡೇನು? ನಾಳೆ ಬೀದೀಲಿ ಆಟೋ ಓಡಿಸೋನು ಹಿಂದಿ ಮಾತಾಡ್ಬೇಕು ಅನ್ಬೋದು.
ಕನ್ನಡದ ಸ್ಥಾನದಲ್ಲೇನು ಬದಲಾವಣೇಯಾಗುವುದಿಲ್ಲ ಅಲ್ಲವೇ?
ಆಯ್ತದೆ.. ಕನ್ನಡ ಎರಡನೇ ದರ್ಜೆ ನುಡಿ ಆಯ್ತದೆ
ಹಿಂದೆ ಮಯ್ಸೂರು ದೇಶದಾಗೆ, ಕನ್ನಡವೇ ರಾಷ್ಟ್ರಭಾಷೆ. ಮಯ್ಸೂರು ದೇಶದ ರಾಷ್ಟ್ರಗೀತೆ ಕನ್ನಡದಲ್ಲೇ ಇತ್ತಲ್ಲ.. ಆ ಪಟ್ಟ, ಮೇಲ್ಮೆ ಹೋದುದಕ್ಕೆ ನಮ್ಮಲ್ಲಿ ಹಲವರಿಗೆ ಚೂರು ಕೀಳ್ಮೆಯಿಂದ ಮುಜುಗರ ಇಲ್ಲ ಅನ್ನೋದು ನಮಗೆ ನಮ್ ನುಡಿ ಮೇಲಿರುವ ಬೇಜವಾಬ್ದಾರಿತನ ತೋರಿಸ್ತದೆ..!!
ಇಂಡಿಯ ದೇಶಕ್ಕೆ ಇರುವ ೨೨(೨೩?) ಆಡಳಿತ ನುಡಿಗಳೂ ರಾಶ್ಟ್ರಬಾಶೆಗಳೇ, ಹಿಂದಿಯೊಂದೇ ರಾಷ್ಟ್ರಬಾಶೆ ಮಾಡೋದಾದ್ರೆ.. ಕನ್ನಡನೆಲ, ತಮಿಳುನೆಲ, ಬಂಗಾಲಿನೆಲ, ಮರಾಟಿನೆಲ ಇಂಡಿಯ ಜೊತೆ ಇರೋದೇ ಇಲ್ಲ..
ದಯವಿಟ್ಟು ಲಾಲ್ ಬಹದ್ದೂರ್ ಶಾಸ್‌ತ್ರಿ ಹಿಂದಿಯನ್ನ ಹೇರಲು ಹೋಗಿ ಕಯ್-ಸುಟ್ಟಿಕೊಂಡಿದನ್ನ,, ಅದಕ್ಕಾಗಿ ತಮಿಳರು ಬೀದೀಲಿ ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಸತ್ತಿದ್ದನ್ನ ಮರೇಬಾರದು.. ಅವರು ತಮ್ಮ ನುಡಿಗಾಗಿ ದೊಡ್ಡ ತ್ಯಾಗ, ಹುತಾತ್ಮತನ.!!
ಉ: ರಾಷ್ಟ್ರೀಯ ಭಾಷೆ
ಹಿಂದಿಯಿಂದ ನಮಗ್ಯಾರಿಗೂ ತೊಂದರೆಯಿಲ್ಲ.
ಇಡಿ ಭಾರತಕ್ಕೆ ಒಂದು ಏಕ ಭಾಷೆ ಬೇಕಿದೆ . ಅದು ಹಿಂದಿಯೇ ಆಗಬೇಕೆಂದೇನು ಇಲ್ಲ . ಕನ್ನಡಕ್ಕೆ ಆ ತಾಕತ್ತು ಆ ಮೆಜಾರಿಟಿಯ ಜನ ಇದ್ದರೆ ಕನ್ನಡವೇ ಆಗಲಿ ಇನ್ನೂ ಸಂತ್ತೋಷವೇ .
ಹಾಗೆ ಬೇಡ ಎನ್ನುವುದಾದರೆ ನೋಡಿದರೆ ರಾಷ್ಟ್ರಕ್ಕೊಂದು ಲಾಂಛನ, ರಾಷ್ಟಕ್ಕೊಂದು ಪಕ್ಶಿ, ಮೃಗ ,ಗೀತೆ ಏಕೆ ಬೇಕು ?
ಎಲಾ ಪಕ್ಶಿಗಳು ರಾಷ್ಟ್ರಕ್ಕೆ ಸೇರಿದ್ದವಲ್ಲವೇ ಎಂದು ಹೇಳಿದರೆ ಹೇಗೆ .
ನಮ್ಮ ರಾಜ್ಯಭಾಷೆಯ ಹಾಗೆ ರಾಷ್ಟ್ರಭಾಷೆಯ ಮೇಲೂ ಅಭಿಮಾನವಿರಬೇಕಷ್ಟೆ.
ಇನ್ನು ತಮಿಳರ ಬಗ್ಗೆ ಹೇಳಬೇಕೆಂದರೆ, ಹಾಗೆ ಮಾಡಿದ ಪರಿಣಾಮವೋ ಏನೋ ಅವರು ಭಾಷಾ ಸಂಕುಚಿತ ರಾಗಿಯೇ ಇದ್ದಾರೆ
ನಮ್ಮ ಎಲೆಕ್ಟ್ರಾನಿಕ್ ಸಿಟಿ ತಮಿಳ್ಖುನಾಡಿನ ಗಡಿಗೆ ಬಹು ಹತ್ತಿರವಿದೆ . ಹಾಗಾಗಿ ನಮ್ಮಲ್ಲಿ ಬರುವ ಬಹುತೇಕರು ಅಲ್ಲಿಂದ ಬಂದವರು.
ಬರುವವರೆಲ್ಲ ಹೆಚ್ಚಾಗಿ ಬಿ.ಇ. ಬಿ.ಟೆಕ್ ಎಮ್ .ಫಿಲ್ ಇದನ್ನು ಮಾಡಿರುವವರೇ
ಅವರು ಕೆಲ್ಸಸಕ್ಕಾಗಿ ಪಡುವ ಕಷ್ಟ ನಮ್ಮ ಕನ್ನಡಿಗರು ಯಾವತ್ತೂ ಪಟ್ಟಿಲ್ಲವೇನೊ.
ಯಾಕೆಂದರೆ ಅವರಿಗೆ ತಮಿಳು ಬಿಟ್ಟು ಬೇರೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಹಿಂದಿ ಅವರಿಗೆ ಪರಿಚಯವೇ ಇರುವುದಿಲ್ಲ.
ಇನ್ನೂ ಇಂಗ್ಳೀಷ್ ಸರಿಯಾಗಿ ಗೊತ್ತಿರುವುದಿಲ್ಲ.
ಬಹಳ ಜನ ಇತ್ತ ಬಂದ ಮೇಲೆ ಇಂಗ್ಕ್ಲಿಷ್ ಹಾಗು ಹಿಂದಿ ಕಲಿಯುವದರ ಮಹತ್ವವನ್ನು ಅರಿತಿದ್ದಾರೆ.
ನಾಡು ನುಡಿಗಾಗಿ ಅವರು ಮಾಡಿದ ತ್ಯಾಗ ದೊಡ್ಡದೇ ಆದ ಅದರಿಂದ ಆದ ಅನಾಹುತ ಅವರ ರಾಜ್ಯದ ಜನದ ಮುಂದಿನ ಪೀಳಿಗೆಗೆ.
ಅದೃಷ್ಟಾವಶಾತ್ ನಮ್ಮ ನಾಡಲ್ಲಿ ಆ ಪರಿಸ್ಟಿತಿ ಇಲ್ಲ
ನಮ್ಮ ಭಾಷೆ ದೊಡ್ಡದೇ ಹಾಗೆ ನಮ್ಮ ನಾಡು ಮಹತ್ವದ್ದೇ. ಆದರೂ ನಮ್ಗೆ ಒಂದು ರಾಷ್ಟ್ರಭಾಷೆ ಬೇಕಿದೆ.(ಯಾವ ಭಾಷೆಯೇ ಆಗಿರಲಿ)
ಯಾಕೆಂದರೇ ನಾವು ಮೊದಲು ಭಾರತೀಯರು ನಂತರ ಕನ್ನಡಿಗರು
( ಕರ್ನಾಟಕ ಭಾರತದ ಒಂದು ಅಂಗ ಎಂಬುದನ್ನ ಮರೆಯಬಾರದು)
ನನ್ನನ್ನ್ನು ಇಲ್ಲೀವರೆಗೆ ಹಿಂದ್ದಿಯಲ್ಲಿ ಮಾತನಾಡಿಸಿದವರಿಗಿಂತ(ಬೇಕಿದ್ದರೆ ಇಂಗ್ಲೀಶ್ ಉಪಯೋಗಿಸುತಾರೆ) ತಮಿಳಿನಲ್ಲಿ ಮಾತನಾಡಿಸಿದ(ತಮಿಳಿನವರು) ಹೆಚ್ಹು.
ಮತ್ತೆ ನಾನು ಕನ್ನಡ ವಿರೋಧಿ ಎಂದುಕೊಂಡು ಯುದ್ದ ಶುರು ಮಾಡಬೇಡಿ .
ರೂಪ
ಉ: ರಾಷ್ಟ್ರೀಯ ಭಾಷೆ
"ಹಿಂದಿಯಿಂದ ನಮಗ್ಯಾರಿಗೂ ತೊಂದರೆಯಿಲ್ಲ.
ಇಡಿ ಭಾರತಕ್ಕೆ ಒಂದು ಏಕ ಭಾಷೆ ಬೇಕಿದೆ "
ಈ ಎರಡು ಮಾತಿಗೂ ನೀವು ಕೊಡುವ ಓಸುಗರ/ಕಾರಣಗಳು ಒಪ್ಪುವಂತವನ್ನ...
"ಕನ್ನಡಕ್ಕೆ ಆ ತಾಕತ್ತು ಆ ಮೆಜಾರಿಟಿಯ ಜನ ಇದ್ದರೆ ಕನ್ನಡವೇ ಆಗಲಿ ಇನ್ನೂ ಸಂತ್ತೋಷವೇ ."
ಅರೇ.. ಮಯ್ಸೂರು ದೇಶದ ನೇಶನಲ್ ನುಡಿ ಆಗಿತ್ತಲ್ಲ.. ಕರ್ನಾಟಕ ನೆಲ ಶ್ರಿಲಂಕೆ ಇಂತ ದೊಡ್ಡದು.
ಹಿಂದಿಗಂತೂ ಆ ತಾಕತ್ತಿಲ್ಲ.. ಅದಕ್ಕೆ ಇಂದಿಗೂ ಅದು ಇಂಡಿಯದ ನೇಶನಲ್ ನುಡಿ ಆಗಿಲ್ಲ.. ಆಗೋದಿಲ್ಲ.. ನೀವ್ ಅದರ ಲಾಯರ್ ಆಗಿದ್ದೀರಿ ಈಗ ಅಶ್ಟೆ.
"ಯಾಕೆಂದರೇ ನಾವು ಮೊದಲು ಭಾರತೀಯರು ನಂತರ ಕನ್ನಡಿಗರು/( ಕರ್ನಾಟಕ ಭಾರತದ ಒಂದು ಅಂಗ ಎಂಬುದನ್ನ ಮರೆಯಬಾರದು)"
ಈ ’ನಾವು’ ಪದದಲ್ಲಿ ನಾವ್ ಹಲವರಿಲ್ಲ.. ನಾವ್ ಮೊದಲು ಕನ್ನಡಿಗರೇ ೧೦೦%. ಬಾರತೀಯರು ಅಂತೋ ಅಲ್ಲ.. ನಮ್ ಪಾಸ್ ಪೋರ್ಟ್ ಅಂತೆ ನಾನು ಇಂಡಿಯನ್..
ಇಂಡಿಯ = an union of states. Not a single state.
"ನಾಡು ನುಡಿಗಾಗಿ ಅವರು ಮಾಡಿದ ತ್ಯಾಗ ದೊಡ್ಡದೇ ಆದ ಅದರಿಂದ ಆದ ಅನಾಹುತ ಅವರ ರಾಜ್ಯದ ಜನದ ಮುಂದಿನ ಪೀಳಿಗೆಗೆ."
ಅವರ ಪೀಳಿಗೆಗೆ ಏನು ಅನಾಹುತ ಆಗಿದೆ? ನಮಗಿಂತ ಬಲದಲ್ಲಿ ಮುಂದಿರುವ ಜನಾಂಗ ಅವರು.
"ಮತ್ತೆ ನಾನು ಕನ್ನಡ ವಿರೋಧಿ ಎಂದುಕೊಂಡು ಯುದ್ದ ಶುರು ಮಾಡಬೇಡಿ"
ಆ ಹೆದರಿಗೆ ಇರೋರು ಹೀಗೆಲ್ಲ ಬಹಿರಂಗ ಹೇಳಿಕೆ ನೀಡಬಾರದು..
ಹಿಂದಿಯೊಂದೇ ರಾಷ್ಟ್ರಬಾಷೆಗೆ ತಕ್ಕ ನುಡಿ, ಕನ್ನಡಕ್ಕೆ ಆ ಮೇಲ್ಮೆ ತಾಕತ್ತು ಇಲ್ಲ ಅಂತ ಮೇಲೆ, ನೀವು ಕನ್ನಡ ವಿರೋದಿಯೇ!
ಹಿಂದಿ ಹೇರಿಕೆಗೆ ಒತ್ತು ನೀಡುವವರೇ...
"ಕನ್ನಡಕ್ಕೆ ಆ ತಾಕತ್ತು ಆ ಮೆಜಾರಿಟಿಯ ಜನ ಇದ್ದರೆ ಕನ್ನಡವೇ ಆಗಲಿ ಇನ್ನೂ ಸಂತ್ತೋಷವೇ ." ಈ ನಿಮ್ಮ ವಾಕ್ಯಕ್ಕೆ ನಮ್ಮ ದಿಕ್ಕಾರ! ನಾಳೆ ನಿಮ್ ಮನೆ ಮುಂದೆ ದರಣಿ! ಪೋನ್ ಮಾಡಿದ್ದೀನಿ !!
ಉ: ರಾಷ್ಟ್ರೀಯ ಭಾಷೆ
ಒಪ್ಪುವಂತವನ್ನ = ಒಪ್ಪುವಂತವಲ್ಲ
ಉ: ರಾಷ್ಟ್ರೀಯ ಭಾಷೆ
""ನಾಡು ನುಡಿಗಾಗಿ ಅವರು ಮಾಡಿದ ತ್ಯಾಗ ದೊಡ್ಡದೇ ಆದ ಅದರಿಂದ ಆದ ಅನಾಹುತ ಅವರ ರಾಜ್ಯದ ಜನದ ಮುಂದಿನ ಪೀಳಿಗೆಗೆ.""
ಹೌದೌದು.. ಆ ಅನಾಹುತದಿಂದಲೇ ಇಂದು ಎಂಟೆಂಟು ಮಂದಿ ಕೇಂದ್ರ
ಕ್ಯಾಬಿನೇಟ್ ಸಚಿವರು ಇರೋದು.
ಹಾಗೆ ತಮಿಳು ಒಂದೇ ವರ್ಶದಲ್ಲಿ ಕ್ಯಾಸಿಕಲ್ ನುಡಿ ಆದುದು.
ಅದಕ್ಕೆ ರಯಿಲ್ವೇ ಕೆಲಸಗಳಿಗೆ ತಮಿಳರಿಗೆ ಮಾತ್ರ ಹಿಂದಿ ಕಡ್ಡಾಯ ಇಲ್ಲ.
ಆ ಅನಾಹುತದಿಂದಲೇ ಇಂದು ಅತಿಹೆಚ್ಚು ಇಂಜಿನಿಯರ್ ಕಾಲೇಜು ತಮಿಳು ನಾಡಲ್ಲಿರೋದು.
ನನಗೇ ತಮಿಳರನ್ನು ಸುಮ್ನೆ ಸುಮ್ನೆ ಬಯ್ಯೋದು ಪುಕಲ್ತನ, ತೇಪೆ ಕೆಲಸ ಅನ್ನಿಸ್ತದೆ..
ಅವರಲ್ಲಿ ನಯವಿಲ್ಲ, ತುಂಬಾ ಸೆಲ್ಪಿಶ್ಶು., ಜೀನೋಪೋಬಿಕ್ ಇವೆಲ್ಲ ಒಪ್ಪಬೋದು.. ಅದ್ರೆ ಅವರು ಉದ್ದಾರ ಆಗಿಲ್ಲ ಅನ್ನೋದು ಮರಳು.
ಉ: ರಾಷ್ಟ್ರೀಯ ಭಾಷೆ
ನಾನು ಹಿಂದಿಯ ಲಾಯರ್ ಅಲ್ಲ ಮೊದಲಿಗೆ ಹಾಗಿದ್ದರೆ ನಾನು ಸಂಪದಕ್ಕೆ ಸದಸ್ಯಳಾಗಬೇಕಾಗಿರಲಿಲ್ಲ ಮೊದಲ ಆದ್ಯತೆ ಕನ್ನಡಕ್ಕೆ ಎಂದು
ಅದು ನನ್ನ ಬ್ಲಾಗ್‌ನಿಂದ ಸ್ಪಷ್ಟ
"ಹಿಂದಿಯೊಂದೇ ರಾಷ್ಟ್ರಬಾಷೆಗೆ ತಕ್ಕ ನುಡಿ, ಕನ್ನಡಕ್ಕೆ ಆ ಮೇಲ್ಮೆ ತಾಕತ್ತು ಇಲ್ಲ "
ಅಂತ ನಾನ್ ಎಲ್ಲೂ ಹೇಳಿಲ್ಲ. ನೀವು ಹೇಳ್ತಿದ್ದೀರ ಮೇಲೆ
ಇನ್ನು ಹಿಂದಿಯನ್ನು ಹೇರಿ ಎಂದು ಯಾರಾದರೂ ಹೇಳುವ ಮೊದಲೆ ನಾವೆಲ್ಲ ಹಿಂದಿ 6ನೇ ತರಗತಿಯಿಂದಲೇ ಕಲಿತವರು.ಅದು ನಮ್ಮ ತೃತೀಯ ಭಾಷೆ ಯಾಗಿ ಇದೆ.
ನಮ್ಮ ನ್ಯಾಶನಲ್ ಚಾನ್‌ಲ್ ಡಿಡಿ ೧ ಅನ್ದ್ ಡಿಡಿ ೨ ಎಲ್ಲ ಹಿಂದಿಯಲ್ಲೆ ಇರುವುದು. ಆಗ್ ಕೇಬಲ್ ಇಲ್ಲದಾಗ ನಾವೆಲ್ಲ ಅದನ್ನೆ ನೋಡಿದವರು.
ಸಂಜೆ ಆರು ಘಂಟೆಯ ಮೇಲೆ ಕನ್ನಡ ಕಾರ್ಯಕ್ರಮ . ಆಗ ಹಿಂದಿಯ ಹೇರಿಕೆ ಆಗಲಿಲ್ಲವೇ?
ಈ ’ನಾವು’ ಪದದಲ್ಲಿ ನಾವ್ ಹಲವರಿಲ್ಲ.. ನಾವ್ ಮೊದಲು ಕನ್ನಡಿಗರೇ ೧೦೦%. ಬಾರತೀಯರು ಅಂತೋ ಅಲ್ಲ.. ನಮ್ ಪಾಸ್ ಪೋರ್ಟ್ ಅಂತೆ ನಾನು ಇಂಡಿಯನ್"
ಕನ್ನಡಕ್ಕಾಗಿ ಇಷ್ಟೆಲ್ಲಾ ಹೇಳುವವರು ಇಂಡಿಯನ್ ಪದದ ಕನ್ನಡ ಅರ್ಥ ಭಾರತೀಯ ಎಂದು ತಿಳಿದಿಲ್ಲದಿರುವುದು ವಿಷಾದಕರ
ನೀವು ಹೇಳುತ್ತಿರುವುದು ನೋಡಿದರೆ ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಆದರೆ ಭಾರತೀಯನಲ್ಲ ಎಂಬಂತಿದೆ
" ಆ ಹೆದರಿಕೆ ಇರೋರು ಹೀಗೆಲ್ಲ ಬಹಿರಂಗ ಹೇಳಿಕೆ ನೀಡಬಾರದು.. "
ನಾನು ಯುದ್ದ ಬೇಡ ಎಂದೆನೇ ಹೊರತು ವಾದವನ್ನಲ್ಲ
ಹೆದರಿಕೆ ಇದ್ದಿದ್ದರೆ ಹೀಗೆ ಬರೆಯುತ್ತಿರಲಿಲ್ಲ.
"ಈ ನಿಮ್ಮ ವಾಕ್ಯಕ್ಕೆ ನಮ್ಮ ದಿಕ್ಕಾರ! ನಾಳೆ ನಿಮ್ ಮನೆ ಮುಂದೆ ದರಣಿ! ಪೋನ್ ಮಾಡಿದ್ದೀನಿ"
ಖಂಡಿತಾ ಬನ್ನಿ ಇನ್ನೂ ಸಂತೋಷವೇ
ವಾದಕ್ಕೆ ಧರಣಿಗೆ ನಾನು ಸಿದ್ದ. ನಾನೂ ನಮ್ಮೂರಿನ ಕನ್ನಡ ಸಂಘದ ಸದಸ್ಯಳೆ.
ಧಿಕ್ಕಾರ ಹಾಕುವುದಕ್ಕಿಂತ ಆ ಮಾತಿನಲ್ಲಿ ಇರುವ ಸತ್ಯಾಂಶವನ್ನು ಗಮನಿಸಿ
ಇದನ್ನೆ ಒಂದು ಆಂದೋಳನ ಮಾಡಿಕೊಂಡು ಕನ್ನಡವನ್ನೇ ರಾಷ್ಟ್ರಭಾಷೆ ಮಾಡುವಂತೆ ಅರ್ಜಿ ಹಾಕಬಹುದಲ್ಲವಾ. (ಒಂದು ಸಣ್ಣ ಕಿಡಿ ಜ್ಯೋತಿಯಾಗಬಹುದು)
"ಕನ್ನಡ ವಿರೋಧಿ "
ಆ ಮಾತಿಗೆ ಎದುರಿದ್ದರೆ ಸರಿಯಾದ ಉತ್ತರ ಕೊಡುತ್ತಿದ್ದೆ.
ಹಾಗೆಂದೆರೆ ನನ್ನ ಹೆತ್ತ ತಾಯಿಯ ವಿರೋಧಿ ಎಂದಾಗುತ್ತದೆ.
ಆ ಮಾತು ನನ್ನ ರಕ್ತ ಕುದಿಯುವಂತೆ ಮಾಡುತ್ತದೆ.
ಈಗಲೂ ನಾನು ಬರೆದದ್ದಕ್ಕೆ ನಾನು ಕಟ್ಟು
ನಮ್ಮ ದೇಶಕ್ಕೆ ಒಂದು ರಾಷ್ಟ್ರಭಾಷೆ ಬೇಕೆ ಬೇಕು . (ಯಾವುದಾದರೂ ಆಗಲಿ)
ರೂಪ
ಉ: ರಾಷ್ಟ್ರೀಯ ಭಾಷೆ
"ನಮ್ಮ ದೇಶಕ್ಕೆ ಒಂದು ರಾಷ್ಟ್ರಭಾಷೆ ಬೇಕೆ ಬೇಕು . (ಯಾವುದಾದರೂ ಆಗಲಿ)"
ಸರಿ..
ರೂಪ ಅವರಿಗೆ ಬೇಕು.
ಮಹೇಶನಿಗೆ ಬೇಡ..
ಹರಿ ಒಂದು ಪೋಲ್ ಮಾಡಣ!!
ಉ: ರಾಷ್ಟ್ರೀಯ ಭಾಷೆ
ಹವ್ದು,
ಹರಿ ಮೊದಲು ಸಂಪದದಲ್ಲಿ ನಡೆಯುತ್ತಿದ್ದ ಪೋಲ್ ಗಳು ಈಗೀಗ ಬರ್ತಾನೆ ಇಲ್ಲ.. ಯಾಕೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ರಾಷ್ಟ್ರೀಯ ಭಾಷೆ
ರೂಪ ಅವರೇ ನಿಮ್ಮ ದಿಟ್ಟತನಕ್ಕೆ ಮೆಚ್ಚುಗೆ. ಆದರೆ ’ಇಂಡಿಯ’ ಒಂದು ಇಡೀ ರಾಸ್ಟ್ರವಲ್ಲ, ಇದೊಂದು ಹಲವು ದೇಶಗಳ ಒಕ್ಕೂಟ ಅನ್ನಲಡ್ಡಿಯಿಲ್ಲ. ಇಂಡಿಯ ಎಂಬ ಹೆಸರು ಬಂದದ್ದು ಇಂಡಸ್‍ನಿಂದ. ಇಂಡಸ್ ಎಂಬುದು ಸಿಂದೂ ಕಣಿವೆ ನಾಗರಿಕತೆಗ ಪರಂಗಿಗಳು ಕೊಟ್ಟ ಹೆಸರು. ಸಿಂದುಯಿಂದಲೇ ಇಂಡಸ್ ಮತ್ತು ಹಿಂದು ಆಗಿದೆ. (ಹಿಂದು ಅಂಬುದು ಅರಬ್ಬರು ಕೊಟ್ಟ ಹೆಸರು ಸ>ಹ ಆಗಿದೆ). ಸಿಂದು > ಇಂಡಸ್ ಎಂದು ಯುರೋಪಿಯನ್ನರು ಕರೆದರು.
ಇನ್ನು ಇಂಡಸ್ ಎಂಬುದರ ಬಹುವಚನ ’ಇಂಡಿಯ’. ಇಂಗಲೀಸ್‍ನಲ್ಲಿ ಇಂದ ಹಲವಾರು ಒರೆಗಳು ಬರುತ್ತವೆ, ex:bacterium-bacteria. ಅಂದರೆ ಸಿಂದು ನಡಾವಳಿಯಿದ್ದದ್ದು ಸಿಂದು ಹೊಳೆಯ ದಂಡೆಯ ಗುಂಟ. ಅದರಂತೆಯೆ ಇದ್ದು ಬೇರೆ ಬೇರೆ ಹೊಳೆ ದಂಡೆ ಇಲ್ಲವೇ ಬಯಲುಗಳಲ್ಲಿ ಹಬ್ಬಿಕೊಂಡಿದ್ದ ನಡಾವಳಿಗಳನ್ನು ಒಟ್ಟಾಗಿ ಇಂಡಿಯ ಅಂತ ಕರೆದರು.
ಯುರೋಪಿಯನ್ ದೇಶಗಳನ್ನು ನೋಡಿ, ಫ್ರೆಂಚ್, ಇಂಗ್ಲಿಶ್, ಪೋರ್ಚುಗಲ್, ಡಚ್, ಜರ್ಮನ್ ಹಲವು, ಇವುಗಳ ನುಡಿಗಳು ಬೇರೆ, ಆದರೆ ನಡಾವಳಿಗಳು ಕೊಂಚ ಬೇರೆತನಗಳೊಂದಿಗೆ ಹೆಚ್ಚು ಕಮ್ಮಿ ಒಂದೇ ಬಗೆಯವು. ಅವು ಬೇರೆ ಬೇರೆ ದೇಶಗಳೆಂದು ಗುರುತುಪಡಿಸಿಕೊಂಡಿದ್ದರೂ ತಾವು ಯುರೋಪಿಯನ್ನರೆಲ್ಲರೂ ಒಂದೇ ಅನ್ನುವ ಅನಿಸಿಕೆ ಅವರೆಲ್ಲರಲ್ಲಿದೆ. ಅದಕ್ಕೆ ಅವರು ಹಲ ಏಡುಗಳ ಹಿಂದೆ ಯೂರೋ ಅನ್ನುವ ದುಗ್ಗಾಣಿ ಮಾಡಿಕೊಂಡರು. ಇದೀಗ ಯುರೋಪ್‍ನ ಎಕಾನಾಮಿ ಸಕ್ಕತ್ ಬೂಮ್‍ನಲ್ಲಿದೆ.
ಅದರಂತೇಯೇ ನಮ್ಮ ಇಂಡಿಯನೂ ಒಂದು ಇಡೀ ರಾಸ್ಟ್ರ ಅಲ್ಲವೇ ಅಲ್ಲ. ಕರ್ನಾಟಕಕ್ಕೆ ಬಂದವರು ಹೊರಗೆ ಕನ್ನಡದಲ್ಲಿ ಮಾತಾಡಲಿ, ಮಹಾರಾಸ್ಟ್ರದಲ್ಲಿ ಮರಾಟಿ, ತಮಿಳುನಾಡಲ್ಲಿ ತಮಿಳಿನಲ್ಲಿ... ಹೀಗೆ ಆಯಾ ರಾಜ್ಯದಲ್ಲಿ ಆಯಾ ನುಡಿಯಲ್ಲಿ ಮಾತಾಡಲಿ... ಇದರಿಂದ ಯಾರಿಗೆ ಏನು ತೊಂದರೆ? ಮಾಹಾರಾಸ್ಟ್ರದಲ್ಲಿ, ಆಸ್ಸಾಮಿನಲ್ಲಿ ಹಿಂದಿ ನುಡಿಯವರ ಮೇಲೆ ಹಲ್ಲೆಗಳಾಗಿದ್ದು, ಈ ಹಿಂದಿ ರಾಸ್ಟ್ರಬಾಸೆ... ಎಲ್ಲರೂ ಕಲಿಬೇಕು ಅನ್ನುವ ಪೊಳ್ಳು ನಂಬಿಕೆಯಿಂದಾಗಿಯೆ...
ಇನ್ನು ಇಡೀ ಇಂಡಿಯವನ್ನು ಒಟ್ಟಿಗೆ ಮಾತಾಡಿಸುವಾಗ ಒಂದೇ ನುಡಿಯಲ್ಲಿ ಇರಬೇಕಾಗುತ್ತೆ... ಅದು ಇಂಗಲೀಸ್ ಆಗಿದ್ದಲ್ಲಿ ತಪ್ಪೇನು? ಅಸ್ಟಕ್ಕೂ ಇಂಗಳೀಸ್ ಈಗ ಬಿಟ್ಟುಬಿಡಲಾಗದನಿತು ಬೇಕಿದೆ... ಚೀನಾದಂತಾ ನಾಡುಗಳು ಇಂಗಲೀಸಿನ ಬೇಕನ್ನು ತಿಳಿದು, ಅದಕ್ಕೆ ಒತ್ತು ನೀಡ್ತಿವೆ.. ಇಂಗಳಿಸ್ ಗೊತ್ತಿರುವದಕ್ಕೇ ಏಸೊಂದು ಇಂಡಿಯನ್ನರು ಕೆಲಸ ಪಡ್ಕೋತಿದಾರೆ..
ಇಂಡಿಯ ಬ್ರೀಟೀಶರಿಂದ ನಮ್ಮದೇ ಕೈ ಸೇರಿದಾಗ, ಹಿಂದಿ ಮಾತಾಡುವ ಮಂದಿ ಹೆಚ್ಚಿತ್ತು... ಅದಕ್ಕಾಗೇ ಅದನ್ನು ಸೆಂಟ್ರಲ್ ಗೋರ್ಮೆಂಟಿನ ನುಡಿ ಮಾಡಿದ್ರು... ೧೯೪೭ರಲ್ಲಿ ಹಿಂದಿಯನ್ನು ರಾಸ್ಟ್ರಬಾಸೆ ಮಾಡೋಕೆ ಜತುನಗಳು ನಡೆದವು... ಅಲ್ಲ, ಬರೀ ಹೆಚ್ಚಿನ ಮಂದಿ ಮಾತಾಡ್ತಾರೆ ಅನ್ನೋದಕ್ಕೆ ರಾಸ್ಟ್ರಬಾಸೆ ಮಾಡೋದಾದ್ರೆ.. ಹುಲಿ ಯಾಕೆ ರಾಸ್ಟ್ರಪ್ರಾಣಿ ಆಗಬೇಕು.. ಇಲಿಯನ್ನು ಮಾಡೋಣ.. ನವಿಲು ಬೇಡ.. ಕಾಗೆಗಳು ಹೆಚ್ಚಿಗೆ ಸಿಗೋದ್ರಿಂದ... ಕಾಗೆನ ರಾಸ್ಟ್ರಪಕ್ಸಿ ಮಾಡಲಡ್ಡಿಯಿಲ್ಲವಾ?
ಕನ್ನಡಿಗರು "ಹಿಂದಿ ರಾಸ್ಟ್ರಬಾಸೆ.. ನಾವೆಲ್ಲ ಅದನ್ನು ಕಲಿಬೇಕು.. ಹಿಂದಿಯವರ ಜೊತೆ ಹಿಂದಿ ಮಾತಾಡಬೇಕು.." ಅನ್ನುವ ಇಂತ ಗೊಡ್ಡು ನಂಬಿಕೆಗಳಿಗೆ ಜೋತು ಬಿದ್ದರೆ.. ಬೆಂಗಳೂರಿನಲ್ಲಿ ಕನ್ನಡಕ್ಕೆ ಎಳ್ಳು-ನೀರು ಬಿಡಬೇಕಾಗುತ್ತೆ....
ಕನ್ನಡ ಹಿಂದಿಗೆ ಎಲ್ಲ ಬಗೆಯಲ್ಲೂ ಸರಿ-ಸಮಾನವಾಗಿದೆ... ಹಿಂದಿ ಬಂದರಸ್ಟೇ ಇಂಡಿಯನ್(ಬಾರತೀಯ) ಅಲ್ಲ... ಕನ್ನಡವೂ ಬಾರತದ ರಾಸ್ಟ್ರನುಡಿಯೇ ಆಗಿದೆ.. ಅನ್ನೋದನ್ನು ಎಲ್ಲ ಕನ್ನಡಿಗರು ಮನದಟ್ಟು ಮಾಡಿಕೊಳ್ಳಿ...
ಏರ್‍ಟೆಲ್‍ನವರು ಬೆಂಗಳೂರಿಗರಿಗೆ ಹಿಂದಿ ಕಲಿಸೋ ಕ್ಯಾಂಪೇನ್ ಹಮ್ಮಿಕೊಂಡಿದ್ದಾರೇನೋ... ಕರ್ನಾಡಿನ ಬೇರೆಲ್ಲ ಪಟ್ಟಣಗಳಲ್ಲಿ.. "ಹೆಮ್ಮೆಯಿಂದ ಹೇಳಿ, ಹಲೋ" ಅಂತ ಅಚ್ಚ ಕನ್ನಡದಲ್ಲಿ ಬರೆದಿದ್ರೆ.. ಬೆಂದಕಾಳೂರಲ್ಲಿ... garv se bolo , hello!!...
ನೋಡಿ ಇದರಿಂದ ನಿಮಗೇನು ಅನಿಸೋದಿಲ್ವಾ ರೂಪ ಅವರೇ?? ಹಿಂಗ್ ಆಗೋದು.. ಅಗ್ತಿರೋದು.. ಇಂಡಿಯಾಕೊಂದು ರಾಸ್ಟ್ರಬಾಸೆ ಬೇಕು.. ಅನ್ನುವವರಿಂದಲೇ./.. ಈಗೇನಂತಿರಿ??
ಉ: ರಾಷ್ಟ್ರೀಯ ಭಾಷೆ
ಭಲಾ!!
ಸದ್ಯ ನಮ್ ಕನ್ನಡನಾಡಿಗ ಪಡೆ ಚನ್ನಾಗಿದೆ..
ಗೆಲುವು ನಮ್ಗೆ..
ಹಿಂದಿ ಹೇರಿಕೆಗೆ ದಿಕ್ಕಾರ !!
ಉ: ರಾಷ್ಟ್ರೀಯ ಭಾಷೆ
ಇಷ್ಟು ದಿನ ನಾನು ಸಹ, ರಾಷ್ಟ್ರ ಭಾಷೆ ಹಿ೦ದಿ ಅಂತಾನೆ ಅನ್ಕೊಂಡಿದ್ದೆ
ಉ: ರಾಷ್ಟ್ರೀಯ ಭಾಷೆ
ಥೂ.. ನಾನೂ ಬೆಂಗಳೂರಿಗೆ ಬರೋಕೆ ಮುಂಚೆ ಹಾಗೇ ಅನ್ಕೊಂಡಿದ್ದೆ ಹಿಂದಿ ರಾಷ್ಟ್ರಭಾಷೆ ಎಲ್ಲಾರೂ ಕಲಿಬೆಕು ಅಂತ. ಸಣ್ಣವ್ರಿದ್ದಾಗಿಂದ್ಲೂ ಅದನ್ನೆ ತಲೆಲ್ಲಿ ತುಂಬಿದ್ರು ನಮಗೆ ಶಾಲೆಲ್ಲಿ, ಎಲ್ಲಾ ಕಡೆ. ಇಂದಿಗೂ ಬಹುಪಾಲು ಮಂದಿಗೆ ಅದೇ ತಪ್ಪು ತಿಳುವಳಿಕೆ ಇದೆ.
ಉ: ರಾಷ್ಟ್ರೀಯ ಭಾಷೆ
ಗುರುರಾಜರೇ
ತುಂಬಾ ಧನ್ಯವಾದಗಳು.
ನಿಮ್ಮಿಂದ ಒಂದು ಹೊಸ ವಿಷಯ ತಿಳಿಯುವಂತಾಯಿತು. ತಪ್ಪು ಗ್ರಹಿಕೆ ದೂರವಾಯಿತು
ನಿಮ್ಮ ಲೇಖನ ಓದಿ ವಿಕಿಪೀಡಿಯದಲ್ಲಿ ಹುಡುಕಿದ ಮೇಲೆ ನನಗೆ ಈ ಇನ್ನಷ್ಟು ವಿಷಯಗಳು ಸಿಕ್ಕಿತು.
http://en.wikipedia.org/wiki/Official_languages_of_India
http://en.wikipedia.org/wiki/National_language#India
http://rajbhasha.nic.in/consteng.htm
ರೂಪ
ಉ: ರಾಷ್ಟ್ರೀಯ ಭಾಷೆ
ಉ: ರಾಷ್ಟ್ರೀಯ ಭಾಷೆ
ಗುರುರಾಜ
"ನನ್ನಿ" ಅ೦ದರೇ ಏನು ಅರ್ಥ
ಉ: ರಾಷ್ಟ್ರೀಯ ಭಾಷೆ
http://sampada.net/forum/4839
ಅಲ್ಲಿ ನೋಡಿ..
ನನ್ನಿ ೧೦೦% ಕನ್ನಡದ ಒರೆ.. ನಂಱಿಗೆ ಹತ್ತಿರ ಅಂತೆ
ಉ: ರಾಷ್ಟ್ರೀಯ ಭಾಷೆ
ಗುರುರಾಜ
ನನ್ನೀ ಮಹೇಶ
ಉ: ರಾಷ್ಟ್ರೀಯ ಭಾಷೆ
ಹೌದು ನಾನು ಮೊದಲು ಹಿಂದಿ ರಾಷ್ಟ್ರ ಭಾಷೆ ಅಂದುಕೊಂಡಿದ್ದೆ. ಹಿಂದಿ ನಮಗೆ ಹೇರಿರುವ ಹೊರೆ ಎಂದು ಈಗ ಅರಿವಾಯಿತು.
ಹಾಗೆ ರಾಷ್ಟ್ರ ಭಾಷೆ ಮಾಡಹೊರಟಲ್ಲಿ ಕನ್ನಡವೇ ಯಾಕಾಗಬಾರದು?
ಕನ್ನಡದಲ್ಲಿ ಮನುಷ್ಯರನ್ನು ಕರೆದುಕೊಂಡು ಹೋಗಲು,ವಸ್ತುವನ್ನು ತಗೆದುಕೊಂಡು ಹೋಗಲು ಹೀಗೆ ಹೇಳುತ್ತಾರೆ.
ಅವನನ್ನು ಕರೆದುಕೊಂಡು ಹೋಗು, ಅದನ್ನು ತಗೊಂಡು ಹೋಗು ಅಂತ ಪದಗಳನ್ನು ಬಳಸಬಹುದು
ಆದರೆ ಹಿಂದಿಯಲ್ಲಿ ಹೀಗಿಲ್ಲ ಅದು ಮನುಷ್ಯರಾಗಲಿ ವಸ್ತುವಾಗಲಿ ಒಂದೇ ಮಾತು ಲೇಕೆ ಜಾವ್
ಮತ್ತೆ ಕನ್ನಡ ೨೦೦ಬಿ.ಸಿ ಗಿಂತಲೂ ಹಳೆಯದು ಮತ್ತು ಸಮೃದ್ಧವಾಗಿದೆ.
ಅದಕ್ಕಿಂತ ಮೊದಲು ನಾವು ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಕಲಿಕೆಯನ್ನು ನಿಲ್ಲಿಸಬೇಕು.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.