ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ?

GNU/Linux habba!

ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ.

ಸಂಪದಿಗರಿಗೆ, ಲಿನಕ್ಸ್ ಆಸಕ್ತರಿಗೆ ಇಂತಹ ಅವಕಾಶವೊಂದನ್ನು ನೀಡುವ ಉತ್ಸಾಹ ನಮ್ಮದು. ಸಂಪದ ಫೌಂಡೇಶನ್ ವತಿಯಿಂದ ಈ ಕ್ರಾರ್ಯಕ್ರಮ - ಇಂಥದ್ದೊಂದು ಮೊದಲನೆಯದು! ನೀವೂ ಒಂದ್ ಕೈ ಸೇರಿಸ್ತೀರಲ್ಲ?

ಇದಕ್ಕಾಗಿ, ಮುಂದಿನ ತಿಂಗಳು "ಗ್ನೂ/ಲಿನಕ್ಸ್ ಇನ್ಸ್ಟಾಲ್ ಫೆಸ್ಟ್ " (Gnu/Linux Install Fest) ಮಾಡೋಣ ಅಂತ. ಈ ಆಲೋಚನೆಯ ಬಗ್ಗೆ ಚರ್ಚೆ ನಡೆಸುತ್ತ ಒಂದು ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದೀವಿ. ಇನ್ಸ್ಟಾಲ್ ಫೆಸ್ಟ್ , ಲಿನಕ್ಸ್ ಇನ್ಸ್ಟಾಲ್ ಮಾಡೋದರ ಜೊತೆಗೆ , ಹೇಗೆ ಕನ್ನಡವನ್ನ ಲಿನಕ್ಸ್ ನಲ್ಲಿ ಬಳಸೋದು ಅನ್ನೋದನ್ನ ಪ್ರಮುಖವಾಗಿ ನಿಮ್ಮ ಮುಂದಿಡುವ ಪ್ರಯತ್ನ. ಈ ಕಾರ್ಯಕ್ರಮದ ರೂಪುರೇಷೆಗಳನ್ನ ಸಂಪದದ ವಿಕಿ ಪುಟದಲ್ಲಿ ಅಪ್ಡೇಟ್ ಮಾಡ್ತಾ ಇದ್ದೇವೆ. ನೀವೂ ಒಮ್ಮೆ ಕಣ್ಣು ಹಾಯಿಸಿ

ಇದನ್ನ ಕಾರ್ಯರೂಪಕ್ಕೆ ತರಲು ನಿಮ್ಮೆಲ್ಲರ (ಟೆಕಿ ಮಿತ್ರರ) ಸಹಾಯದ ಅವಶ್ಯವಿದೆ. ನೀವು ನಮ್ಮೊಂದಿಗೆ ಸ್ವಯಂಸೇವಕರಾಗಿ ಬಂದು ಲಿನಕ್ಸ್ ಬಗ್ಗೆ ಎಲ್ಲರಿಗೆ ತಿಳಿಸಿ ಕೊಡ್ತೀರಾ? ಹಾಗಿದ್ರೆ ವಿಕಿ ನಲ್ಲಿ ನಿಮ್ಮ ಹೆಸರು ನೋಂದಾಯಿಸಿ. ನಮ್ಮೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಿ. ಟೆಕ್ನಾಲಜಿಯನ್ನ ಆಫ್ ಲೈನ್ ಕೂಡ ಜನರ ಮುಂದಿಡುವ ಈ ಕೆಲಸಕ್ಕೆ ನಿಮ್ಮ ಹೆಗಲು ಸೇರಿಸಿ.

ನಿಮ್ಮ,
ಓಂ ಶಿವಪ್ರಕಾಶ್

~

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

mahesha's picture

ಒಳ್ಳೆಯ ಕೆಲಸ...

ನಂಗೆ ಕನ್ನಡದಲ್ಲಿ ಲಿನಕ್ಸನ ’ಬೂಟು ಮತ್ತು ಶೆಲ್ ಪ್ರಾಮುಟು’ ನೋಡಬೇಕು ಎಂಬ ಬಯಕೆ ....

ಅದರ ಚಿತ್ರಗಳನ್ನ ಹಾಕ್ರಿ.. ಬರಕ್ಕಾಗದೇ ಇದ್ರೆ ಇಲ್ಲೇ ನೋಡಣ.

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

hpn's picture

ಏನೋ ಮಾರಾಯ ಇದು? Smiling

ನೀನೇ ನಮ್ಮ ಸ್ಟಾರ್ volunteer. ಬರದೇ ಇದ್ರೆ 'ಬೂಟು, ಶೆಲ್ಲು' ಎಲ್ಲ ಮನೆಗೇ ವಿಲೇವಾರಿ ಮಾಡ್ತೇವೆ. Eye-wink

(ಸೀರಿಯಸ್ಸಾಗಿ)
ಬೂಟು ಶೆಲ್ ಪ್ರಾಂಪ್ಟಿಗಿಂತ ಕನ್ನಡದ ಮಟ್ಟಿಗೆ ಆಗೋ ಕೆಲ್ಸ ಸಾಕಷ್ಟಿವೆ. ಬೂಟು ಶೆಲ್ ಪ್ರಾಂಪ್ಟು ಎಲ್ಲ ಡೆವಲಪರ್ಸ್ ಗೆ. ಅವರು ಕನ್ನಡ ಬಳಸೋದು ಅಷ್ಟರಲ್ಲೇ ಇದೆ. ಈಗ ಕನ್ನಡ ಬಳಸೋರಿಗೆ (ಸಾಮಾನ್ಯ ಬಳಕೆದಾರರಿಗೆ) ಬೇಕಾದ ಕನ್ನಡದ ಸಲಕರಣೆಗಳನ್ನು ಮುಗಿಸೋಣ, ಆಮೇಲೆ ಉಳಿದದ್ದು.

ಈ ಕಾರ್ಯಕ್ರಮ ಇವೆಲ್ಲದಕ್ಕೂ ನಾಂದಿ ಹಾಡಬಲ್ಲುದು. ಹೀಗಾಗಿ ಯಾರೂ ತಪ್ಪಿಸ್ಕೋಬೇಡ್ರಿ... ಸೀರಿಯಸ್ ಆಗಿ ಭಾಗವಹಿಸಿ. Sticking out tongue
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

mahesha's picture

ಲೋ..

ನಾನ್ ಎಲ್ಲ ಪ್ರೊಬಬಲ್-ವಿನ್‌ಯೂಗಳನ್ನು ನೋಡಿದ್ದೀನಿ... ಬರಬೋದಪ್ಪ.. ನಾನ್ ಸುಮ್ನೆ ಸ್ಕೋಪ್-ತಗೊಳ್ಳಕ್ಕೆ ಹೇಳ್ತಿಲ್ಲ...!
ವಾರದ ಕೊನೆ ರಜ ಅಂದ್ರೆ, ಏನೇನೋ ಕೆಲಸ ಬಂದು ಬಿಜಿ ಆಗೋಗ್ತಿದ್ದೀನಿ

ಆ ಸಲಕರಣೆಗಳ ಪಟ್ಟಿ ಎಲ್ಲಿದೆಯೋ?

ಇನ್ನು ಬೂಟು, ಶೆಲ್ಲು ಇವುಗಳ ಬಗ್ಗೆ.. ನಂಗೆ ಯಾರೂ ಹೇಳಿದ್ರು ಕಿರಣ ಅನ್ನೋದು ಮಾಡಿದ್ದಾರೆ ಅಂತ. ನೆಟ್ಟಲ್ಲಿ ಎಶ್ಟು ಹುಡುಕಿದ್ರೂ ಸಿಕ್ತಿಲ್ಲ.!

ಇರಲಿ.. ಈ ವೀಕೆಂಡು ನಿನ್ ಮೀಟಾಗಕ್ಕೆ ಟ್ರಯ್ ಮಾಡ್ತಿನಿ..!

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

sudhimail's picture

ಅಗತ್ಯವಾಗಿ ಇದು ಎಲ್ಲರಿಗೂ ಸಹಾಯ ಆಗುತ್ತೆ. ಎಲ್ಲೇ ನಡೆದರೂ ನಾನಂತು ಸಿದ್ಧ್.

ವಂದನೆಗಳೊಂದಿಗೆ,
ಸುಧೀಂದ್ರ

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

omshivaprakash's picture

ಮಹೇಶರೆ, ಇಲ್ಲಿದೆ ನೋಡಿ ಕನ್ಸೊಲಿನಲ್ಲಿ ಕನ್ನಡ ತರಲು ನೆಡೆದಿರೋ ಒಂದು ಕೆಲಸ

http://ekalavya.it.iitb.ac.in/summary.do

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

cmariejoseph's picture

ವರ್ಷಗಳ ಹಿಂದೆ ಸಿದ್ಧಾರೂಢ ಎಂಬ ಚಿರಯುವಕ ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದಂತೆ ನೆನಪು.

ಪ್ರೀತಿಯಿಂದ
ಸಿ ಮರಿಜೋಸೆಫ್

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

omshivaprakash's picture

ವಿಷಯ ಮತ್ತೆಲ್ಲೋ ಹೊಗ್ತಿದೆ, ನೀವೆಲ್ಲಾ ನಮ್ಮೊಂದಿಗೆ ಬಂದು ಎಲ್ಲರಿಗೂ ಲಿನಕ್ಸ್ ನ ಅರಿವು ಮೂಡಿಸಲಿಕ್ಕೆ ಸಹಾಯ ಮಾಡಿದರೆ, ತಂತ್ರಾಂಶ ಅಭಿವ್ುದ್ದಿ ಮಾಡಲಿಕ್ಕೆ ಅನೇಕರನ್ನ ಒಟ್ಟು ಗೂಡಿಸ ಬಹುದು. ಏನಂತೀರಾ?ಹೊಸ ಪ್ರತಿಭೆಗಳನ್ನ ಈ ಸಂದರ್ಭದಲ್ಲಿ ಬೇಟಿ ಮಾಡಿದರೂ ಮಾಡಬಹುದು ಅಂತ ನನ್ನ ಅನಿಸಿಕೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

hpn's picture

ನಿಜ, ಮಾತು ಎತ್ತಲೋ ಹೊರಳಿದೆ ಇಲ್ಲಿ. ಈ ಪುಟದ ನಿಜವಾದ ಉದ್ದೇಶ ನಾವು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಸ್ವಯಂಸೇವಕರ ನೋಂದಣಿ. ಲಿನಕ್ಸ್ ಬಲ್ಲ ಹತ್ತು ಜನ (ನಾವುಗಳು ಆಗಲೇ ಸುಮಾರು ಆರು ಜನ ಇದ್ದೇವೆ - ಇನ್ನು ನಾಲ್ಕು ಜನರಿಗೆ ಮಾತ್ರ ಈ ಅವಕಾಶ!) ಹೊಸಬರಿಗೆ ಲಿನಕ್ಸ್ ಹಾಕಿಕೊಳ್ಳುವಲ್ಲಿ ಸಹಾಯ ಮಾಡಬಹುದು.

ಕಾರ್ಯಕ್ರಮದ ಮತ್ತಷ್ಟು ವಿವರ ಇಂದು ರಾತ್ರಿ ಹಾಕಲಿದ್ದೇವೆ. ಕಾರ್ಯಕ್ರಮಕ್ಕೆ ಬರಲಿಚ್ಛಿಸುವ ಆಸಕ್ತರು ದಯವಿಟ್ಟು ವಿಕಿಯಲ್ಲಿ ಒಂದು ಪ್ರತಿಕ್ರಿಯೆ ಸೇರಿಸಿ ಅಥವ ನಮಗೆ ಇ-ಮೇಯ್ಲ್ ಮಾಡಿ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

mahesha's picture

ನನ್ನಿ....

ಪಟ್ಟಿ ಕೇಳಿದ್ದು ಕುತುಕಕ್ಕಾಗಿ.. ವಿಶಯ ದಾರಿತಪ್ಪಿದಕ್ಕೆ ಮನ್ನಿಸಿರಿ

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

Sunil Jayaprakash's picture

ನಮ್ಮದೂ ಒಂದು ಕೈ ಇದೆ ಕಣ್ರಪ್ಪಾ. ಫಂಕ್ಷನ್ನಿಗೆ ಒಂದು ೮-೧೦ ದಿನ ಇದೆ ಅನ್ವಾಗ್ಲೇ ಬಂದು ಬಿಡ್ತೀವಿ. ಎಲ್ಲಾ ಕೆಲಸ ನಮ್ಮದೇ, ಟೆನ್ಶನ್ ಬಿಟ್ಬುಡಿ ಅಲಾ Smiling

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

savithru's picture

ಲಿನಕ್ಸು!!.. ನಾನು ಸಹಾ ಇದೆ ಮಯ್ದಾನ್ದಾಗೆ ( plotform ) ಕೆಲ್ಸ ಮಾಡೋದು!. ಇಲ್ಲಿನ ನಾಲ್ಕಾರು ಪದಗಳನ್ನು ( commands) ಬಿಟ್ರೆ ಹೆಚ್ಚು ಗೊತ್ತಿಲ್ಲ. ಇಲ್ಲಿ ಯಾರಾದ್ರೂ ಹೆಚ್ಗೆ ಹೇಳಿಕೊಡ್ತೀನಿ ಅಂದ್ರೆ ಯಾರಾದ್ರೂ ಸುಮ್ನೀರ್ತಾರ? ...ನಂದೊಂದು ಪ್ರೆಸೆಂಟ್.... ಇರುತ್ತೆ ಅಲ್ಲಿ. ಆದ್ರೆ ಸವಿತೃ ಆಗಿ ಅಲ್ಲ!.. ನಾನಾಗಿ!!

ನನ್ನ ತಮ್ಮನ್ನ ಕರ್ಕಂಡ್ ಬರಕ್ಕೆ ಯತ್ನುಸ್ತೀನಿ... ಅವಂಗೆ ಸ್ವಲ್ಪ ಜಾಸ್ತಿ ಗೊತ್ತು..ನನಗಿಂತ Smiling

ಇನ್ಮುಂದೆ ಈ ಬೆಂಗಳೂರಿನಲ್ಲಿ ನಡೆಯುವ ಇಂತ ಕೆಲಸಗಳಿಗೆ ನಂದೊಂದು ಅಳಿಲು ಸೇವೆ ಇರುತ್ತೆ. ನೆನಪಿಟ್ಟುಕೊಂಡು ಕರೆದರೆ ಈ ಶಿವಾ ಖುಶಿಪಡ್ತಾನೆ...

ಸವಿತೃ

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

Aravinda's picture

ನಾನು ಕೂಡ ಬರಲು ಪ್ರಯತ್ನಿಸುತ್ತೇನೆ, ಈಗ ಎಷ್ಟು ಜನ ಆಗಿದಾರೆ ಅಂತ ನೋಡಲು ಯಾವುದಾದರೂ ಕೊಂಡಿ ಇದ್ಯಾ? ...
ಇದೇ ಹಬ್ಬದ ಖುಷಿಗೆ T ಅಂಗಿ ಯಾಕೆ ಮಾಡಿಸ್ಬಾರ್ದು Eye-wink

ನಿಮ್ಮವನೇ,
ಅರವಿಂದ
http://www.belaku.net

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

raghava's picture

ಬೆನ್ಗ್ಳೂರ್ನಲ್ಲಿ ಎಲ್ಲಿ ಕಾರ್ಯಕ್ರಮ? ನಾನೂ ಬರ್ತೇನೆ .. ಕೈಲಾದ ಸಹಾಯ ಮಾಡ್ಲಿಕ್ಕೆ ...

ಅಂದ ಹಾಗೆ ಟೀ-ಶರ್ಟು ಮಾಡ್ಸೋಡು ಚೆನ್ನಾಗಿರುತ್ತೆ

--ರಾಘವ

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

raghava's picture

ಮರ್ತ್ಬಿಟ್ಟಿದ್ದೆ ... ಉಬುಂಟು ಗೆ ಡಬ್ದೊಳ್ಗಿಂದ ಕೆಲ್ವು ವಿಶ್ಯಗಳಲ್ಲಿ ಸಪೋರ್ಟು ಇಲ್ಲ. ಅದ್ಕೆ ಲಿನಕ್ಸ್ ಮಿನ್ಟ್ ಅನ್ನೊ ಡಿಸ್ಟ್ರೊ ಒಂದಿದೆ. ಒಂದಿಪ್ಪತ್ಸೀಡಿ ಗೀಚ್ಕೊಂಡ್ ಬಂದಿರ್ತೀನಿ ... ಈ ಮಿಂಟ್ ಗೆ ಉಬುಂಟು ರೆಪಾಸಿಟ್ರಿಗ್ಳೂ ನಡ್ಯುತ್ತ್ವೆ ... ಎಂಪೀತ್ರೀ/ಸ್ಕಿಮ್ಮು ಎಲ್ಲಾ ಇದೆ ...

--ರಾಘವ

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

hpn's picture

ಒಳ್ಳೇದು, ಹಿಡ್ಕೊಂಡ್ ಬನ್ನಿ Smiling

Volunteer's ಮೀಟ್ ಒಮ್ಮೆ ಇಟ್ಟುಕೊಳ್ಳೋಣ. ಸಾಕಷ್ಟು ಮಾತನಾಡುವುದಿದೆ! ಶ್ರೀನಿಧಿ ಈ ಬಗ್ಗೆ ಬರೆಯಲಿದ್ದಾರೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

hpn's picture

ಸುಮಾರು ೧೫+ ಜನ ಆಗಲೇ ಈ ಪುಟದ ಮೂಲಕ ಹಾಗೂ ಇ-ಮೇಯ್ಲ್ ಮೂಲಕ ನೋಂದಾಯಿಸಿದ್ದಾರೆ Eye-wink

ಟಿ ಶರ್ಟ್ ಮಾಡಿಸಬಹುದು Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

ವೈಭವ's picture

ನಾನು ಬತ್ತಿನಿ. ಇದರಿಂದ ನಂಗೆ ಏಟು ಲಿನಕ್ಸ್ ಗೊತ್ತು ಅಂತ ಗೊತ್ತಾಯ್ತುದೆ. Smiling

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

hpn's picture

ಭರತ್, ಬರುತ್ತೀನಿ ಅಂದ ಮೇಲೆ ಬರಬೇಕು. ತಪ್ಪಿಸಿಕೊಳ್ಳೋ ಹಾಗಿಲ್ಲ ಮತ್ತೆ!

ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ್ರಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

ವೈಭವ's picture

ಡೇಟ್ ಹೇಳಿ ಸಾರ್. ಆಮ್ಯಾಕೆ ನಿಕ್ಕುವ ಇಲ್ವೊ ಇದೀನೊ ಅಂತ ಹೇಳ್ತಿನಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

ವೈಭವ's picture

ಡೇಟ್ ಅಲ್ಲ ಎಲ್ಲಿ ನಡೆಯೋದು ಅಂತ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

hpn's picture

ಎಲ್ಲಿ ಎನ್ನುವುದು ಸ್ವಲ್ಪದಿನಗಳಲ್ಲೇ ಖಾತ್ರಿಯಾಗುತ್ತದೆ. ಬಹುಶಃ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

madhava_hs's picture

ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ದಿನಾಂಕ ತಿಳಿಸಿ. ಆಗಮಿಸಲು ಪ್ರಯತ್ನಿಸುವೆನು.

ಉ: ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!

rameshbalaganchi's picture

ಮಾರಾಯ್ರೆ,
ಬೆಂಗಳೂರಿಗೆ ತೀರ್ಥಹಳ್ಳಿಯಿಂದ ಬರೋದು ಕಷ್ಟಸಾಧ್ಯ. ಅದೂ ಅಲ್ದೆ ನಮ್ಮ ಕಾಲೇಜ್‌ನಲ್ಲಿ ಅಕೆಡೆಮಿಕ್ ಇಯರ್ ಕೊನೆಗೆ ಬರ್ತಿದೀವಿ. ಉಸಿರಾಡೋಕ್ಕೂ ಪುರಸೊತ್ತಿಲ್ಲ. ಯಾರಾದರೂ ಪುಣ್ಯಾತ್ಮರು ಉಬುಂಟು Linux ಅನ್ನು install ಮಾಡ್ಕೊಳ್ಳೋದು ಹೇಗೆ ಅಂತ ಸಂಪದದಲ್ಲೇ ವಿವರಿಸಿದರೆ ಇಲ್ಲಿಂದಲೇ ಎಲ್ರಿಗೂ ಧನ್ಯವಾದ ಹೇಳ್ತೀನಿ. ನನ್ನ ಹತ್ರ ಅದರ C.D. ಇದೆ. ಅದರ ಜಾಕೆಟ್‌ನಲ್ಲಿ ಕೊಟ್ಟಿರುವ ಹಾಗೆ ಮಾಡಿದರೂ ಯಾಕೋ ಇನ್ಸ್ಟಾಲ್ ಆಗ್ತಿಲ್ಲ. ಯಾರಾದರೂ ತಜ್ಞರು ದಯವಿಟ್ಟು ನಾನು ಹೇಗೆ ಇನ್ಸ್ಟಾಲ್ ಮಾಡ್ಕೋಬಹುದು ಅನ್ನೋದನ್ನ ವಿವರಿಸಿ ಹೇಳ್ತೀರಾ? ಅಥವಾ ಈಗಾಗಲೇ ಯಾರದಾದರೂ ಪ್ರಶ್ನೆಗೆ ಉತ್ತರವಾಗಿ ಅದನ್ನು ವಿವರಿಸಿ ಹೇಳಿದ್ದರೆ ಅದರ ಕೊಂಡಿಯನ್ನು ಕಳಿಸಿಕೊಡಿ.

ಉ:

hpn's picture

ಮಾಧವ್, ಈ ಪುಟ ನೋಡಿ:
http://sampada.net/event/GNU-Linux-Habba

ರಮೇಶ್,
ಏಪ್ರಿಲ್ ೨೬ಕ್ಕೆ ಇರೋದು ಈ ಕಾರ್ಯಕ್ರಮ - ಬಿಡುವು ಮಾಡಿಕೊಳ್ಳಬಹುದು ಅನ್ಸತ್ತೆ. ನೋಡಿ.
ಇಲ್ಲಿ ಬರೆಯಬಹುದು (ಶಿವು ಆಗಲೇ ಒಂದು ಬಾರಿ ಬರೆದಿಟ್ಟಿದ್ದಾನೆ - ನೋಡಿ) ಆದರೆ ನೇರ installation ತೋರಿಸಿಕೊಟ್ಟಂತೆ ಇರುವುದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

Syndicate content