ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?

December 7, 2005 - 10:43am — olnswamy

ಕನ್ನಡ ಜನರ ಓದು ಅಭ್ಯಾಸದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನನ್ನ ಮಾತುಗಳು ಕೊಂಚ ವಿಚಿತ್ರವಾಗಿ ಕೇಳಿಸಬಹುದು. ಆದರೂ ತಾಳ್ಮೆಯಿಂದ ಓದಿ ಚರ್ಚೆ ಮಾಡುತ್ತೀರೆಂದುಕೊಂಡಿದ್ದೇನೆ.
ಪುಸ್ತಕಗಳನ್ನು ಸಂಗ್ರಹಿಸುವುದು, ಜೋಪಾನವಾಗಿ ಇಟ್ಟುಕೊಳ್ಳುವುದು ವ್ಯರ್ಥ ಎಂದು ಅನಿಸುತ್ತಿದೆ. ನಮ್ಮ ಅಪ್ಪನ ಕಾಲದಿಂದ ಮತ್ತು ನಾನು ಓದ ತೊಡಗಿದಾಗಿನಿಂದ ಸಂಗ್ರಹಗೊಂಡ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಅನಗತ್ಯ ಹೊರೆ ಅನಿಸತೊಡಗಿದೆ.
೧. ಮತ್ತೆ ಮತ್ತೆ ಓದಲು ಬಯಸುವ ಪುಸ್ತಕಗಳ ಸಂಖ್ಯೆ ನನಗೆ ಗೊತ್ತಿರುವ ಭಾಷೆಗಳನ್ನೆಲ್ಲ ಸೇರಿಸಿದರೂ ಐನೂರು ಮೀರಲಾರದು. ಮತ್ತೆ ಯಾಕೆ ಈ ಪುಸ್ತಕ ರಾಶಿ?
೨. ನಮ್ಮ ಯಾರದೇ ಸಂಗ್ರಹದಲ್ಲಿರುವ ಪುಸ್ತಕಗಳಲ್ಲಿ ಶೇ ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ಎರಡನೆಯ ಬಾರಿಗೆ ತೆರೆದು ನೋಡುವುದೇ ಇಲ್ಲ. ಮತ್ತೆ ಯಾಕೆ ಅವನ್ನೆಲ್ಲ ಇಟ್ಟುಕೊಂಡಿರುತ್ತೇವೆ?
೩. ಹೆಣ್ಣುಮಕ್ಕಳು ಇಡೀ ಜೀವಮಾನದಲ್ಲಿ ಹತ್ತು ಬಾರಿ ಕೂಡ ಉಡದ ಬೆಲೆ ಬಾಳುವ ಜರಿ ಸೀರೆಗಳನ್ನು ಸಂಗ್ರಹಿಸುವ ಹಾಗೆ ಪುಸ್ತಕಗಳನ್ನೂ ನಾನು ಸಂಗ್ರಹಿಸಿಕೊಂಡಿದ್ದೀನಾ?
೪. ಓದಿದ್ದು ಮನಸ್ಸಿಗೆ ಇಳಿದು ನನ್ನ ವ್ಯಕ್ತಿತ್ವದ ಭಾಗವೇ ಅಗುವುದಾದರೆ ನಿರ್ಜೀವ ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು? ನನಗೆ ಹಾಗೆ ಓದಲು ಅಗಿಲ್ಲ ಎಂದೇ?
೫. ವರ್ತಮಾನದಲ್ಲಿ ಬದುಕುವುದು ಮುಖ್ಯ ಅನ್ನುವುದಾದರೆ ಭೂತಕಾಲದ ಭಾವ-ವಿಚಾರ ವಸ್ತು ಸಂಗ್ರಹಾಲಯದಂತಿರುವ ಪುಸ್ತಕಗಳನ್ನು ಯಾಕೆ ಕೂಡಿಟ್ಟುಕೊಳ್ಳಬೇಕು?
೬. ಬರೆಯುವ ಕೆಲಸದಲ್ಲಿರುವವರಿಗೆ ರೆಫರೆನ್ಸ್‌ಗೆ ಬೇಕು ಅನ್ನುವ ವಾದ ಇದ್ದೀತು. ಆದರೆ ಅದಕ್ಕೆ ಈಗ ಅಂತರ್ಜಾಲ ಇದೆ, ಲೈಬ್ರರಿ (ಎಷ್ಟೇ ಕೆಟ್ಟ ವ್ಯವಸ್ಥೆಯವಾದರೂ) ನಮ್ಮಲ್ಲಿವೆ. ಖಾಸಗಿ ಪುಸ್ತಕ ಸಂಗ್ರಹ ಏಕೆ ಬೇಕು?
೭. ದುಡ್ಡು ಕೂಡಿಡುವುದಕ್ಕೆ, ಒಡವೆಗಳನ್ನು ಮಾಡಿಸಿ ಬ್ಯಾಂಕಿನ ಲಾಕರ್‌ನಲ್ಲಿ ಇಡುವುದಕ್ಕೆ, ಇರುವ ಒಂದು ಮನೆಯಲ್ಲದೆ ಹಲವು ಮನೆ ಸೈಟುಗಳನ್ನು ಮಾಡಿಕೊಳ್ಳುವುದಕ್ಕೆ ಇತ್ಯಾದಿ ಚಟುವಟಿಕೆಗಳಿಗೆ ಮತ್ತು ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಯಾವ ವ್ಯತ್ಯಾಸವಿದೆ?

  • ಚಿಂತನೆ
~.~
  • Login or register to post comments
  • 1339 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 8, 2005 - 9:26am — Rohit

ಹೊಳೆದಿರಲಿಲ್ಲ

Rohit's picture

ನನಗಿದು ಹೊಳೆದಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2005 - 11:58am — hpn

ನನಗೂ ಹೊಳೆದಿರಲಿಲ್ಲ

hpn's picture

ಪುಸ್ತಕಗಳನ್ನು ಸ್ವಂತದ ಲೈಬ್ರೆರಿಯಂತೆ ಇಟ್ಟುಕೊಳ್ಳುವುದು 'convention'. ಹಾಗೆ ನೋಡಿದರೆ ನಾವು ಕಂಪ್ಯೂಟರಿನಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳುವ ಒಮ್ಮೆ ಬಳಸಿದ ಎಷ್ಟೋ‌ ಫೈಲ್ಸು ಕೂಡ ಇದೇ ವರ್ಗಕ್ಕೆ ಸೇರುತ್ತವೆ. ನಾವು ಮುಂದೆ ಅದನ್ನು ಬಳಸುತ್ತೀವೋ ಇಲ್ವೋ, ಹಾಗೇ ಇಟ್ಟುಕೊಂಡಂತೂ ಇರುತ್ತೇವೆ.

olnswamy wrote:
ಬರೆಯುವ ಕೆಲಸದಲ್ಲಿರುವವರಿಗೆ ರೆಫರೆನ್ಸ್‌ಗೆ ಬೇಕು ಅನ್ನುವ ವಾದ ಇದ್ದೀತು. ಆದರೆ ಅದಕ್ಕೆ ಈಗ ಅಂತರ್ಜಾಲ ಇದೆ, ಲೈಬ್ರರಿ (ಎಷ್ಟೇ ಕೆಟ್ಟ ವ್ಯವಸ್ಥೆಯವಾದರೂ) ನಮ್ಮಲ್ಲಿವೆ. ಖಾಸಗಿ ಪುಸ್ತಕ ಸಂಗ್ರಹ ಏಕೆ ಬೇಕು?

ಎಲ್ಲ ಪುಸ್ತಕಗಳೂ‌ ಸಿಗೋದಿಲ್ವಲ್ಲ. ಹಲವು ತಾಂತ್ರಿಕ ಪುಸ್ತಕಗಳು ಆನ್ಲೈನ್ ಸಿಗೋದಿಲ್ಲ (ನನ್ನ ಬಳಿ ಇರುವ ಪುಸ್ತಕಗಳಲ್ಲಿ ಸುಮಾರು ೮೦% ತಾಂತ್ರಿಕ ಪುಸ್ತಕಗಳೇ). ಅಲ್ಪ ಸ್ವಲ್ಪ ಮಾಹಿತಿ ಮಾತ್ರ ಇಂಟರ್ನೆಟ್ಟಿನಲ್ಲಿ ಜಾಲಾಡಿ ಪಡೆದುಕೊಳ್ಳಬಹುದು - ಆದರೆ ಡೀಟೇಯ್ಲಾಗಿ ಓದಬೇಕಾದರೆ ಪುಸ್ತಕಗಳೇ ಚೆನ್ನ. ರೆಫರೆನ್ಸಿಗೆ ಮತ್ತೆ ಮತ್ತೆ ಮತ್ತೊಬ್ಬರಿಂದ ಕೇಳಿ ತರುವುದು ಕಷ್ಟದ ಕೆಲಸ. ಸ್ವಲ್ಪ ದುಡ್ಡು ಖರ್ಚಾದರೂ ಸ್ವಂತದ ಕಾಪಿ ಇದ್ದರೆ ಕೆಲಸ ಸುಲಭ. ಆದರೂ ತಾಂತ್ರಿಕ ಪುಸ್ತಕಗಳ ತೊಂದರೆ ಏನೆಂದರೆ, ಅದರಲ್ಲಿ ಹಲವು ಸ್ವಲ್ಪ ದಿನಗಳ ನಂತರ outdate ಆಗಿಬಿಡುತ್ವೆ. (php ಬಗ್ಗೆಯೇ ಒಂದು ವರ್ಷದಲ್ಲಿ ೬ ಪುಸ್ತಕಗಳನ್ನು ನಾನು ಕೊಂಡಿರುವೆ).

asterix adventures, Tintin, ಇಂದ್ರಜಾಲ, ಅಮರ ಚಿತ್ರ ಕಥೆ ಮುಂತಾದ ಕಾಮಿಕ್ ಪುಸ್ತಕಗಳು ಹಲವು ನನ್ನ ಬಳಿ ಸುಮಾರು ವರ್ಷಗಳಿಂದ ಇವೆ. ಅವನ್ನು ಎಷ್ಟು ಬಾರಿ ಓದಿದರೂ ಬೇಜಾರು ಮೂಡುವುದಿಲ್ಲ.

ಇನ್ನು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ಪುಸ್ತಕಗಳು ಮಾತ್ರ - ಒಮ್ಮೆ ಓದಿದ ಮೇಲೆ ಮತ್ತೊಮ್ಮೆ ಓದುವುದು ಬರಿಯ ವೊಕ್ಯಾಬ್ಯುಲರಿ ಇಂಪ್ರೂವ್ ಮಾಡಿಕೊಳ್ಳೋದಕ್ಕೋ ಅಥವಾ (ಕೃತಿ ಬಹಳ ಚೆನ್ನಾಗಿದ್ದರೆ) ಅದರ ನಿರೂಪಣೆಯ ಶೈಲಿಯ ಬಗ್ಗೆ ಮತ್ತಷ್ಟು ತಿಳಿಯಲು ಬಹುಶಃ ಮತ್ತೆ ಓದ್ತೀವಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2005 - 5:30pm — ಪ್ರಶಾಂತ.ಪಂಡಿತ

ಪುಸ್ತಕಸ್ಫೋಟ

ಪ್ರಶಾಂತ.ಪಂಡಿತ's picture

ನೀವು ಹೇಳಿದಂತೆ ಎಲ್ಲಾ ಬಗೆಯ ಪುಸ್ತಕಗಳನ್ನು ಸಂಗ್ರಹಿಸುವ ಅಗತ್ಯವೇನೂ ಇಲ್ಲ. ಅದರಲ್ಲೂ ಕೇವಲ ಮಾಹಿತಿ ನೀಡುವ ಪುಸ್ತಕಗಳು, reference materialಗಳನ್ನು ಬರವಣಿಗೆಯ ವ್ಯವಸಾಯದಲ್ಲಿರುವವರು ಇಟ್ಟುಕೊಳ್ಳಬಹುದು. ಉಳಿದವರು ಅಗತ್ಯ ಬಿದ್ದಾಗ ಗ್ರಂಥಾಲಯಕ್ಕೆ ಹೋಗಬಹುದು. ಆದರೆ ಇದೇ ಮಾತನ್ನು ‘ಕಲಾಕೃತಿ’ಗಳಿಗೆ ಅಥವಾ ವೈಚಾರಿಕ ಬರಹಗಳಿಗೆ ಅನ್ವಯಿಸಲಾಗದೇನೋ. ಇಂತಹ ಮೌಲಿಕ ಕೃತಿಗಳು ಕೇವಲ ದಿನಪತ್ರಿಕೆಗಳಲ್ಲಿ ವಾರಪತ್ರಿಕೆಗಳಲ್ಲಿ ಪ್ರಕಟವಾದರೆ ನಂತರದ ಪೀಳಿಗೆಯ ಓದುಗರಿಗೆ ಅವು ಸಿಗದೇ ಹೋಗುತ್ತವೆ. Paper cutting ಗಳನ್ನು ಸಂಗ್ರಹಿಸಿಡುವುದಕ್ಕಿಂತ ಮುನ್ನುಡಿ ಬೆನ್ನುಡಿಗಳನ್ನೊಳಗೊಂಡ ಪುಸ್ತಕವು ಓದಿಗೆ ಬೇಕಾದ context ಒದಗಿಸುತ್ತದೆ. ಕಾಲೇಜು ದಿನಗಳಲ್ಲಿ ಹತ್ತಿರದಲ್ಲೇ ಇದ್ದ ಸೆಂಟ್ರಲ್ ಲೈಬ್ರರಿಗೆ ಪದೇಪದೇ ಹೋಗಿ ಬೇಕಾದ ಪುಸ್ತಕ ಸಿಗದೇಹೋದಾಗ ಬೇಸರಪಟ್ಟುಕೊಂಡು (ಕೆಲವೊಮ್ಮೆ ಆ ಅಸಹಾಯಕ ಪರಿಸ್ಥಿತಿಗೆ ನೊಂದು) ಹಿಂತಿರುಗಿ ಬರುತ್ತಿದ್ದುದು ನೆನಪಿಗೆ ಬರುತ್ತಿದೆ. ಮುಂದೊಮ್ಮೆ ದುಡಿಯುವಂತಾದಾಗ ಮೊದಲು ಈ ಪುಸ್ತಕಗಳನ್ನು ಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ. ನಿಮ್ಮ ಚಿಂತನೆ ಓದಿದ ಮೇಲೆ ನನ್ನ ಬಳಿಯಿರುವ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. ಬಹುತೇಕ ಎಲ್ಲಾ ಪುಸ್ತಕಗಳನ್ನೂ ನಾನು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೇನೆ. ಒಂದೆರಡು ಪುಸ್ತಕಗಳನ್ನು ಬಿಟ್ಟು ಬೇರೆ ಯಾವ ಪುಸ್ತಕವನ್ನೂ ಕೊಳ್ಳಬಾರದಿತ್ತು ಎನ್ನಿಸಿಲ್ಲ (ಸಧ್ಯಕ್ಕೆ ನನ್ನ ಹತ್ತಿರ ಇರುವ ಪುಸ್ತಕಗಳು 60 ಮೀರುವುದಿಲ್ಲ. ಬಹುಶಃ ಅದಕ್ಕೆ ಹೀಗನಿಸುತ್ತಿರಬೇಕು!). ಕೆಲವೊಮ್ಮೆ ಕೊಳ್ಳುವವರೆಗೆ ‘ಈ ಪುಸ್ತಕ ನನ್ನಂತವರಿಗಾಗಿಯೆ’ ಎಂಬುದು ತಿಳಿಯುವುದಿಲ್ಲ!

ಇನ್ನು ಓದಿದ್ದು ಮನಸ್ಸಿಗಿಳಿದು ವ್ಯಕ್ತಿತ್ವದ ಭಾಗವಾಗುವ ಬಗ್ಗೆ ನನಗೆ ಸ್ವಲ್ಪ ಅನುಮಾನವಿದೆ. ಪ್ರತಿ ಓದಿಗೂ ಹೊಸದೇನನ್ನೋ ಕೊಡುವ ಓದುಗನ ಮನಸ್ಥಿತಿಗೆ ತಕ್ಕಂತೆ ಹಿಂದೆ ಹೊಳೆಯದ್ದೇನೋ ಈಗ ಹೊಳೆಯುವ ಕಾಣದ ಒಳಪದರಗಳು ಅನಾವರಣಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ ಎನ್ನಿಸುತ್ತದೆ. ಒಂದು ಒಳ್ಳೆಯ ಕೃತಿಗೆ (ಕಾವ್ಯ, ಕಥೆ, ವೈಚಾರಿಕ ಬರಹ ಇತ್ಯಾದಿ) ಈ ಗುಣ ಇರುತ್ತದೆ ಹಾಗಾಗಿ ಆ ಪುಸ್ತಕವನ್ನು revisit ಮಾಡುವ ಬರಹದೊಂದಿಗೆ ಬರಹಗಾರರೊಂದಿಗೆ ಮುಖಾಮುಖಿಯಾಗುವ ಅಗತ್ಯ ಇರುತ್ತದೆ. ಆ ಕಾರಣಕ್ಕೆ ಪುಸ್ತಕಗಳು ‘ಸಜೀವ’ವಾಗಿರುತ್ತವೆ. ಲೈಬ್ರರಿಯಲ್ಲಿ ಪುಸ್ತಕ ಸಿಗದೇ ಬೇಸರಪಟ್ಟುಕೊಳ್ಳುವುದರ ಬದಲು ಅಥವಾ ಪ್ರತಿ ಸಲ ಪುಸ್ತಕ ಬೇಕಾದಾಗ ಇನ್ನೊಬ್ಬರನ್ನು ಮುಜುಗರಪಟ್ಟುಕೊಂಡು ಕೇಳುವುದರ ಬದಲು ಕೊಂಡಿಟ್ಟುಕೊಳ್ಳ್ರವುದೇ ಮೇಲು ಎನ್ನಿಸುತ್ತದೆ. ಆದರೆ 1000 ಪುಸ್ತಕಗಳ ರಾಶಿಯಿದ್ದರೆ ಏನು ಮಾಡಬೇಕೋ ತಿಳಿಯದು! ಬಹುಶಃ ನಿಮ್ಮ ಅಭಿಪ್ರಾಯಕ್ಕೆ ಮೂಲಕಾರಣ ಪುಸ್ತಕಸ್ಫೋಟ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 8, 2005 - 6:13pm — srikanth

ಪುಸ್ತಕಗಳ ಬಗ್ಗೆ

srikanth's picture

ನೀವು ಕೊಂಡು ,ಓದಿ ಇಷ್ಟಪಟ್ಟ ಪುಸ್ತಕಗಳನ್ನು ಮಿತ್ರರಿಗೆ ಹುಟ್ಟುಹಬ್ಬ ಮತ್ತಿತರ ಸಮಾರಂಭಗಳಲ್ಲಿ ಊಡುಗೊರೆಯಾಗಿ ಕೊಟ್ಟರೆ ಹೇಗೆ ? ಪುಸ್ತಕ ಓದಿದಂತೆಯೂ ಆಯಿತು ಜೊತೆಗೆ ಆ ಪುಸ್ತಕದ indirect marketing ಕೂಡ ಆದಂತಾಯಿತು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 9, 2005 - 1:21pm — olnswamy

ಆಗ ಹೀಗೂ ಆದೀತು

olnswamy's picture

ಪುಸ್ತಕ ಸಂಗ್ರಹದ ಹಂಬಲ ತೀವ್ರವಾಗಿದ್ದ ನನ್ನ ಬದುಕಿನ ಯುಗದಲ್ಲಿ ಕನ್ನಡದ ಹಿರಿಯ ಸಾಹಿತಿಗಳು ಇತರ ಹಿರಿಯ ಸಾಹಿತಿಗಳಿಗೆ ಕೊಟ್ಟ ಪುಸ್ತಕಗಳು, ನಾನೇ ಯಾವುದೋ ಪತ್ರಿಕೆಗೆ ರಿವ್ಯೂಗೆ ಕಳಿಸಿದ ಪುಸ್ತಕ ಇತ್ಯಾದಿಗಳೆಲ್ಲ ಸೆಕೆಂಡ್ ಹ್ಯಾಂಡ್ ಅಂಗಡಿಗಳಲ್ಲಿ ಸಿಕ್ಕಿವೆ. ನನಗೆ ಬೇಡ ಅನ್ನಿಸಿದ್ದನ್ನು ಇನ್ನೊಬ್ಬರಿಗೆ ಉಡುಗೊರೆ ಕೊಟ್ಟರೆ ಅವರಿಗೆ ಅದು ಬೇಕಾದೀತು ಅನ್ನುವ ಗ್ಯಾರಂಟಿ ಏನೂ ಇಲ್ಲ. ನನ್ನಲ್ಲಿದ್ದ ಪುಸ್ತಕ ಒಂದಷ್ಟು ಕಡಮೆ ಆಯಿತು ಅನ್ನುವ ಹಗುರಭಾವ ಬಿಟ್ಟರೆ.
ಇನ್ನೊಬ್ಬರಿಗೆ ಏನು ಬೇಕು ಎಂದು ಗೊತ್ತಿದ್ದರೆ ಬರೆದ ಪುಸ್ತಕಗಳೆಲ್ಲ ಬೆಸ್ಟ್ ಸೆಲ್ಲರ್ ಆಗುತ್ತಿದ್ದವಲ್ಲವೆ!
ರಾಮನಾಥನ್ ಅವರು ಹೇಳಿದ್ದು ನಿಜ: ಪ್ರತಿಯೊಬ್ಬರಿಗೂ ಒಂದು ಪುಸ್ತಕ, ಪ್ರತಿ ಪುಸ್ತಕಕ್ಕೂ ಒಬ್ಬ ಓದುಗ ಇರುತ್ತಾನಂತೆ. ನನಗೆ ಮುಖ್ಯ ಅನ್ನಿಸಿದ ಪುಸ್ತಕ ನಮ್ಮ ಮನೆಯಲ್ಲೇ ಇನ್ಯಾರಿಗೂ ಮುಖ್ಯ ಅನಿಸದೆ ಇರಬಹುದು. ನಾನು ಅಮೂಲ್ಯ ಅಂತ ಸೆಕೆಂಡ್ ಹ್ಯಾಂಡಿನಲ್ಲಿ ತಂದ ಪುಸ್ತಕ ಅದನ್ನು ತೂಕಕ್ಕೆ ಹಾಕಿದವರಿಗೆ ಬೇಡದ ಕಸವಾಗಿತ್ತು ಅಲ್ಲವೆ? ಪುಸ್ತಕ ಇನ್ನೊಬ್ಬರಿಗೆ ಉಡುಗೊರೆಯಾಗಿ ದಾಟಿಸಿದಾಗ ಮಾರ್ಕೆಟಿಂಗ್ ಎಲ್ಲಿಂದ ಬಂತು? ಪ್ರಕಾಶಕರಿಗೆ ಒಬ್ಬ ಕೊಳ್ಳುಗ ಕಡಮೆಯಾಗುವಂತೆ ಮಾಡಿರುತ್ತೇನೆ, ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 9, 2005 - 9:56am — muralihr

ಒಳ್ಳೆ ವಿಚಾರ

muralihr's picture

ಸಾರ್,
ಇದು ನಿಜವಾಗಲು ಒಳ್ಳೆ ವಿಚಾರ. ನಿಮ್ಮ ಹತ್ತಿರ ತು೦ಬಾ ಪುಸ್ತಕಯಿದಿದ್ದು ನೋಡಿದ್ದೆ.
ಈ ಮನುಷ್ಯ ಅದೆಷ್ಟು ತಲೆ ಕೆಡಿಸಿಕೊ೦ಡಿರಬೇಕು -- ದೇವರೆ ಈ ಪ್ರೋಪೆಸರ್ ಗಿರಿ ಅ೦ದರೇನೆ ಇಷ್ಟು
ಅ೦ದ್ಕೊ೦ಡಿದ್ದೆ. ನಿಮ್ಮ ಭಾರ ಕಡಿಮೆ ಮಾಡುವ ಯತ್ನ ನಾನು ಮಾದುತ್ತೇನೆ.
ನನಗೆ ಕಾವ್ಯಮೀಮಾ೦ಸೆ ಮತ್ತು ಕೆಲವು ಬೇರೆ ಬೇರೆ ಪುಸ್ತಕ ಬೇಕಿತ್ತು.
ನಿಮ್ಮ ಬಳಿ ಇದ್ದರೆ - ದಾನ ವನ್ನು ಮಾಡಿ.
ನಿಮ್ಮ ಭಾರ ಕಡಿಮೆಯಾಗುತ್ತೆ.
ನಿಮ್ಮ ರೂಮ್ ಖಾಲಿ ಆಗುತ್ತೆ.
ನಿಮ್ಮ ಆತ್ಮಕ್ಕೆ ಶಾ೦ತಿ ಸಿಗತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 9, 2005 - 1:07pm — olnswamy

ಖಂಡಿತ ತೆಗೆದುಕೊಳ್ಳಿ

olnswamy's picture

ನನಗೆ ತೀರ ಬೇಕೇ ಬೇಕೆನ್ನಿಸುವ ಒಂದು ಐನೂರು ಪುಸ್ತಕಗಳನ್ನು ಬಿಟ್ಟು ಉಳಿದವನ್ನೆಲ್ಲ ಆಸಕ್ತರಿಗೆ ಕೊಟ್ಟುಬಿಡುತ್ತಿರುವೆ. ಮುರಳಿಯವರು ಖಂಡಿತ ಕಾವ್ಯಮೀಮಾಂಸೆಯ ಪುಸ್ತಕಗಳನ್ನು ತೆಗೆದುಕೊಂಡು ಸಂತೋಷಪಡಬಹುದು. ಮೈಸೂರಿಗೆ ಬರಬೇಕು, ಅಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರು ಓದುಗರು
  • ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
  • ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು
  • ಪುಸ್ತಕ ಬಿಡುಗಡೆ
  • ಇಂಟರ್ನೆಟ್ ಮೂಲಕ ಕನ್ನಡ ಪುಸ್ತಕಗಳ ಖರೀದಿ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)
  • ‘ಮನೆ ಅಂಗಳದ ಕೈತೋಟ-ವಿಶ್ವ ದಿನಾಚರಣೆ’ (ಆಗಸ್ಟ್ ೨೬) ಇಂದು!
  • ಫೈರ್ಫಾಕ್ಸಿನಲ್ಲಿ ಉದಯವಾಣಿಯನ್ನು ಓದುವ ಬಗ್ಗೆ
  • (Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ !
  • ಬಿಡುಗಡೆಯ ನಂತರದ ಬೇಡಿಗಳು (೧)

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
  • kalpana
    ಉ: ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
    August 28, 2008 - 9:38pm
  • srivathsajoshi
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 9:10pm
  • cmariejoseph
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 28, 2008 - 9:09pm
  • ASHOKKUMAR
    ಉ: ಐಪಿಟಿವಿ:ಅಂತರ್ಜಾಲ ಮೂಲಕ ದೂರದರ್ಶನ
    August 28, 2008 - 9:04pm
  • ASHOKKUMAR
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:44pm
  • ASHOKKUMAR
    ಉ: ಬಂಗಾರದ ಅರಮನೆ
    August 28, 2008 - 8:40pm
  • cmariejoseph
    ಉ: ಕನ್ನಡ ವಿಕಿಪೀಡಿಯಾ
    August 28, 2008 - 8:34pm
  • spkolle
    ಉ: ಬಂಗಾರದ ಅರಮನೆ
    August 28, 2008 - 8:13pm
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೨
    August 28, 2008 - 8:01pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator