ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಪರಿವರ್ತನೆ

November 28, 2005 - 2:38pm — srikanth

ಭೈರಪ್ಪನವರ ಕೆಲವು ಕೃತಿಗಳ ಮುನ್ನುಡಿಯಲ್ಲಿ ಈ ವಿಚಾರ ಓದಿದ ನೆನಪು.ಯಾವುದೋ ಒಂದು ವಿಚಾರ ಅವರ ಮನಸ್ಸಿನಲ್ಲಿ ಉಂಟಾಗಿ ,ಬಹುಕಾಲ ಚರ್ಚೆ ,ವಿಶ್ಲೇಷಣೆಗಳಾಗಿ,ಕೊನೆಗೆ ಕಥೆಯಾಗಿ ಮೂಡಿಬಂದಿರುವ ಬಗ್ಗೆ ತಿಳಿಸಿದ್ದಾರೆ.ಹೀಗೆ ಮನಸ್ಸಿನ ವಿಚಾರವನ್ನು ಹೊರಗೆಡವಲು ಕಥೆಗಳನ್ನು ಬಳಸುವ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದಿರುವುದರಿಂದಲೇ ಇರಬೇಕು , ಅವರ ಕಥೆಗಳು ನನಗೆ ತುಂಬಾ ಕುತೂಹಲಕಾರಿಯಾಗಿ ತೋರುತ್ತವೆ. ಬಹುಶಃ ಒಬ್ಬ ಬರಹಗಾರ/ಬರಹಗಾರ್ತಿಗೆ ಮಾತ್ರ ಅಂತಹ ಭಾವನೆಯನ್ನು ಅನುಭವಿಸಲು ಸಾಧ್ಯ. ನನ್ನಂತಹ ಹವ್ಯಾಸಿ ಓದುಗನಿಗೆ ಇದು ಅರ್ಥವಾಗುವುದಿಲ್ಲವೇನೋ.ಅಂತೆಯೇ ಕೆಲವರಿಗೆ ಬದುಕಿನ ದಿನನಿತ್ಯದ ಘಟನೆ ಎಷ್ಟೇ ಸಣ್ಣದಿರಲಿ ,ಮನಸ್ಸಿನಲ್ಲೇ ನಿಂತುಬಿಟ್ಟು, ಅದನ್ನು ಯಾರಿಗಾದರೂ ವಿವರಿಸಿದ ನಂತರವೇ ಆ ವಿಚಾರ ಚಿಂತನಾಲಹರಿಯಲ್ಲಿ ಹಿಂದೆ ಸರಿಯತ್ತದೆ.
ಇಂದು ಬೆಳಿಗ್ಗೆ ಒಂದು ಬಸ್ಸಿನ ಸಂಭಾಷಣೆಯು ನನ್ನಲ್ಲಿ ವಿಚಿತ್ರವಾದ ಕುತೂಹಲ ಉಂಟುಮಾಡಿದೆ.
ಆ ಸಂಭಷಣೆಯೇ ಇಲ್ಲಿನ ಕಥ(ನ)ವಸ್ತುವಾಗಿದೆ.
ವಾರದ ಐದು ದಿನಗಳನಂತೆ ಈ ದಿನವೂ ಬೆಳಿಗ್ಗೆ ಆಫೀಸಿಗೆ ತಯಾರಾಗಿ ಬಸ್ ನಿಲ್ದಾಣಕ್ಕೆ ಬಂದು ಕಾದು ನಿಂತೆ.ಸ್ವಲ್ಪ ಹೊತ್ತಿನ ಬಳಿಕ ಬಂದ ಬಸ್ ಏರಿದಾಗ ಅದೃಷ್ಟಕ್ಕೆ ಸೀಟು ಕೂಡ ಸಿಕ್ಕಿತು.ನಿತ್ಯದ ಅಭ್ಯಾಸದಂತೆ ಮೊಬೈಲ್ ಫೋನಿನಲ್ಲಿದ್ದ , ಆಟಗಳನ್ನಡುತ್ತಿರುವಾಗ ಪಕ್ಕದ ಸೀಟಿನಿಂದ ಇಬ್ಬರು ತರುಣರ ಸಂಭಾಷಣೆ ಕೇಳಿಬಂತು.ಒಬ್ಬ ಸ್ವಲ್ಪ ಕಪ್ಪಗಿದ್ದು ಬೈತಲೆ ಸೀಳು ಮಧ್ಯಕ್ಕೆ ಬರುವಂತೆ ಕೂದಲನ್ನು ಬಾಚಿದ್ದ.ಮತ್ತೊಬ್ಬ ಬೆಳ್ಳಗಿದ್ದು,ಕೂದಲನ್ನು ಕ್ರಾಪು ತೆಗೆಸಿದ್ದ.ಇಬ್ಬರೂ ಟೀಶರ್ಟ್, ಜೀನ್ಸ್ ಧರಿಸಿದ್ದರು.ಅವರಿಬ್ಬರೂ ಸಹಪಾಠಿಗಳಿರಬಹುದು.ಇಬ್ಬರೂ ಪರಸ್ಪರ ಆಂಗ್ಲ ಭಾಷೆಯಲ್ಲಿ ಮಾತನಾಡಿಕೊಳ್ಳುತಿದ್ದರು.ಅವರ ಸಂಭಾಷಣೆಯಲ್ಲಿನ ಭಾವವನ್ನು ,ಧಾಟಿಯನ್ನು ಕಾಪಡುವ ಸಲುವಾಗಿ ಅವರ ಮಾತುಗಳನ್ನು ಅದೇ ಭಾಷೆಯಲ್ಲೇ ಬರೆದಿದ್ದೇನೆ.ಇದು ನನಗೆ ಅನಿವಾರ್ಯವೆನ್ನಿಸಿತು.

"you know, that Praveen asked out Priya last week da ?? " ಎಂದು ಬಿಸಿ ಸುದ್ದಿ ಬಿತ್ತರಿಸುವ ಖಾಸಗಿ ವಾರ್ತಾ ಚಾನೆಲ್ ಗಳ ಸುದ್ದಿಗಾರರು ಮಾತನಾಡುವ ಉತ್ಸಾಹ ಉಕ್ಕುತ್ತಿರುವ ಧ್ವನಿಯಲ್ಲಿ ಕ್ರಾಪಿನ ಹುಡುಗ ಹೇಳಿದ.

ಹುಬ್ಬೇರಿಸುತ್ತಾ ಅ ಮಧ್ಯ-ತಲೆಸೀಳಿನ ಹುಡುಗ "When this did happen da ?" ಎಂದು ಕೇಳಿದ.

ಆಂಗ್ಲ ಭಾಷೆಯಲ್ಲಿ ಮಾತನಾಡುವಾಗ ವಾಕ್ಯದ ಕೊನೆಯಲ್ಲಿ "da" ಪೋಣಿಸುವುದು ಎಂದಿನಿನ್ದ ಪ್ರಾರಂಭವಾಯ್ತೋ ಗೊತ್ತಿಲ್ಲ,ಚೆನ್ನೈನ ನನ್ನ ಮಿತ್ರರ ಮಾತುಗಳಲ್ಲಿ "da" ಪ್ರಯೋಗವನ್ನು ಮೊದಲು ಬಾರಿ ಕೇಳಿದ್ದೆ.ಈಗ ಆ ಪ್ರಯೋಗ ತುಂಬಾ ಪ್ರಖ್ಯಾತವಾಗಿ ಹೇಗೋ ಒಂದು ತಮಿಳಿನ ಪದ ದಕ್ಷಿಣ ಭಾರತದ ಆಡು ಮಾತಿನ ಇಂಗ್ಲಿಷ್ ನಲ್ಲಿ ಸೇರಿಹೋಗಿದೆ.ಆದರೆ ಪ್ರತಿ ಸಾರಿಯೂ ಆ 'ಡಾ' ನನ್ನು ಬಳಸಿದಾಗ ವಿಚಿತ್ರವೆನ್ನಿಸುತ್ತದೆ,ಆಭಸವಾಗಿ ತೋರುತ್ತದೆ.ಇವರಿಬ್ಬರ ಮಾತುಗಳಲ್ಲಿ ಪುಂಖಾನುಪುಂಖವಾಗಿ "ಡಾ" ಪ್ರಯೋಗಗಳು ಕೇಳಿಬರುತಿದ್ದವು.ಅವೆಲ್ಲವನ್ನೂ ನೆನಪಿಸಿಕೊಂಡುಬರೆಯುವ ಶಕ್ತಿ ನನಗಿಲ್ಲ.

"Last Friday da" ಎಂದು ಉತ್ತರಿಸಿದ.

"Bastard !! I was thinking of asking her out during holidays after the exams" ಎಂದು ಕೋಪದಿಂದ ಗೊಣಗಿದರೂ ಮತ್ತೆ ಕಳ್ಳ ನಾಗೆ ಬೀರುತ್ತ "you know,of all the gals in our class ,Shraavani,Priya... are the cool chicks da" ಎಂದು ಉದ್ಗಾರದೊಡನೆ ಆ ಬೈತಲೆ-ಸೀಳಿನ ಹುಡುಗ ಮಾತು ನಿಲ್ಲಿಸಿದ.
ಇನ್ನಿಬ್ಬರು ಕೂಲ್ ಚಿಕ್ಸ್ ಹೆಸರುಗಳು ಅ ವಾಕ್ಯದಲ್ಲಿತ್ತು , ಆದರೆ ಈಗ ನೆನಪಿಗೆ ಬರುತ್ತಿಲ್ಲ.
ಕೀಟಲೆ ದನಿಯಲ್ಲಿ "ಓ............." ಎಂದು ಧೀರ್ಘವಾದ 'ಓ' ಹೇಳಿ " good thing you didn't ask her out , she made a big fuss about it .But have you asked Shraavani out anytime ?" ಎಂದು ಕಿರುನಗೆಯೊಂದಿಗೆ ಕ್ರಾಪಿನ ಹುಡುಗ ಪ್ರಶ್ನಿಸಿದ.
"she doesn't hang out with our gang.....,so I haven't asked her,but looks like she wants to go out with me" ಎಂದು ಅವನ ಮಿತ್ರ ಉತ್ತರಿಸಿದ.
ಈ ವಿಷಯ ನಿನಗೆ ಹೇಗೆ ತಿಳಿಯಿತೆನ್ದು ಕೇಳಲು ಮುಖ ಅರಳಿಸಿಕೊಂಡ.ಅಷ್ಟರಲ್ಲೇ ಅದನ್ನರಿತ ಅವನ ಮಿತ್ರ "she had sent Sindhu to indirectly enquire about me ,you know.............sindhu is in our gang.But, instead of saying good things about her, sindhu started making fun of her " ಎಂದು ನಗತೊಡಗಿದ.
"what did she say ?? " ಎಂದು ಮತ್ತೆ ಪ್ರಶ್ನಿಸದ.
ಮಾತು ಮುಂದುವರೆದಂತೆ ಆ ಕ್ರಾಪಿನ ಹುಡುಗ ಕ್ವಿಜ್ ಮಾಸ್ಟರ್ ಆಗತೊಡಗಿದ್ದ.ಆದರೆ ತನ್ನ ಮಿತ್ರನ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಾದುದು ತನ್ನ ಕರ್ತವ್ಯವೆಂಬಂತೆ ಮತ್ತೊಬ್ಬ ಅವಕ್ಕೆಲ್ಲ ಉತ್ತರಿಸುತ್ತಿದ.
"sindhu joked about possessiveness of shraavani saying that she was very kind, caring and other things,but I could make out what she was saying" ಎಂದ.
ಇಬ್ಬರು ಸ್ವಲ್ಪಹೊತ್ತು ನಕ್ಕರು.ಇದ್ದಕ್ಕಿದ್ದಂತೆ ಡೇಟಿಂಗ್ ನಿಂದ ನಾಳಿನ ವರಮಹಾಲಕ್ಷ್ಮೀ ಹಬ್ಬದ ರಜೆಯ ಪ್ರಯುಕ್ತ ಇಬ್ಬರೂ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳಾಪಟ್ಟಿಯ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ
" Tomorrow is a holiday, some vara..... varlakshmi it seems ? whatever....?
Most colleges are closed tomorrow for varlakshmi so what are you doing da ?" ಎಂದ.
ಆ ಕ್ರಾಪಿನ ಹುಡುಗ "I need to prepare for maths test tomorrow da" ಎಂದು ಹೇಳುವಾಗ ಅವನ ಮಾತಿನಲ್ಲಿ ಹಿಂದಿನ ಸುದ್ದಿಗಾರನ ಉತ್ಸಾಹವೆಲ್ಲಾ ಇಳಿದುಹೋಯಿತು.
ಅದನ್ನು ಲೆಕ್ಕಿಸದೆ ಅವನ ಮಿತ್ರ "Ok, I am comfortable, with differentiation ..........but worried about complex numbers" ಎಂದು ಚಿಂತೆಯಿಲ್ಲದ ಧ್ವನಿಯಲ್ಲಿ ಹೇಳಿದ.
ಸ್ವಲ್ಪಹೊತ್ತು ಇಬ್ಬರೂ ಮೌನವಾದರು.ಕಿಟಕಿಯ ಹೊರಗೊಂದು ಹೋಂಡ ಸಿಟಿ ಕಾರನ್ನು ಕಂಡಾಗ ಅವರ ಮಾತುಗಳು ಕಾರುಗಳ ಕಡೆಗೆ ತಿರುಗಿತು.ಆರಾಮದಯಕ,ಬೆಲೆಬಾಳುವ ಕಾರುಗಳ ಪಟ್ಟಿಯನ್ನೇ ಮಾಡಿಬಿಟ್ಟರು. ಜಯನಗರ ನಾಲ್ಕನೇ ಬ್ಲಾಕ್ ಬಸ್ ನಿಲ್ದಾಣ ಕಂಡೊಡನೆ ,ಅವರಿಬ್ಬರ ಮಾತುಗಳ ಆಲಿಕೆಯನ್ನು ಬಿಟ್ಟು ಕೆಳಗಿಳಿದು ಆಫೀಸಿನ ಕಡೆಗೆ ನಡೆದೆ.ದಾರಿಯುದ್ದಕ್ಕೂ ಒಂದು ವಿಚಿತ್ರ ಭಾವನೆ ಮನಸ್ಸಿನಲ್ಲಿ ಹಾಗು ಮುಖದಲ್ಲಿ ನಗುವನ್ನೂ,ಕುತೂಹಲವನ್ನು ಏಕಕಾಲದಲ್ಲಿ ತರಿಸಿತ್ತು.
"ಸಮಾಜದ/ನಾಗರೀಕತೆಯ ಮೌಲ್ಯಗಳು ,ತತ್ವಗಳು ಎಂದಿಗೂ ಶಾಶ್ವತಗಳಲ್ಲ,ಚಿರಸ್ಥಾಯಿಯೂ ಅಲ್ಲ,ಪ್ರತಿಯೊಂದು ತಲೆಮಾರು ಕೂಡ ತನ್ನದೇ ಆದ ಮೌಲ್ಯಗಳನ್ನು ,ತತ್ವಗಳನ್ನು ಸೃಷ್ಟಿಸಿಕೊಂಡು ಸಮಾಜ/ನಾಗರೀಕತೆಯಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ" ಎಂದು ಯಾರೋ ಒಬ್ಬ ಚಿಂತಕನ ಮಾತನ್ನು ನನ್ನ ಮಿತ್ರ ಪೃಥ್ವಿರಾಜ್ ನಿಂದ
ಕೇಳಿದ್ದೆ.
ಇಪ್ಪತ್ತನೇ ಶತಮಾನದ ಮೌಲ್ಯಗಳ,ತತ್ವಗಳ ಅಸ್ತಂಗತವನ್ನು ,ಜೊತೆಗೆ ಇಪ್ಪತ್ತೊಂದನೇ ಶತಮಾನದ ಹೊಸ ಮೌಲ್ಯಗಳ ಉದಯವನ್ನು ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಸಂಭಾಷಣೆ ಉದಯಿಸುತ್ತಿರುವ ಹೊಸ ಸಮಾಜದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

ಕಾಲೇಜಿನ ದಿನಗಳಲ್ಲಿ e√x ನ ಡಿರೈವೇಟಿವ್ ನನ್ನು ಫರ್ಸ್ಟ್ ಪ್ರಿನ್ಸಿಪಲ್ಸ್ ನಿಂದ ಬಿಡಿಸುವ ಬಗ್ಗೆ ಹೆಚ್ಚು ಗಮನಕೊಟ್ಟ ನನಗೆ ಈ ಘಟನೆ ವಿಚಿತ್ರವೇ ಸರಿ.

  • ಅನುಭವ ಕಥನ
~.~
  • Login or register to post comments
  • 873 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 29, 2005 - 7:28pm — suresh_k

೮೦ ಜಿಬಿ

suresh_k's picture

ಅವರಿಬ್ಬರ ದೀರ್ಘ ಸಂಭಾಷಣೆಯನ್ನು ಇಷ್ಟೊಂದು ಕರೆಕ್ಟಾಗಿ ನೆನಪಿಟ್ಟುಕೊಂಡು ಹೇಳುತ್ತಿದ್ದೀರೆಂದರೆ ನಿಮ್ಮ ತಲೆಯೊಳಗೊಂದು 80 GB ಸಾಮರ್ಥ್ಯದ ಹಾರ್ಡ್ ಡಿಸ್ಕೇ ಇರಬೇಕಲ್ವ da?!!!!

-ಸುರೇಶ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 30, 2005 - 11:14am — srikanth

೮೦ ಜಿಬಿ

srikanth's picture

ನಿಮ್ಮ ಕಾಮೆಂಟು ನೋಡಿದಾಗ "೮೦ ಜಿಬಿ ಸ್ವಲ್ಪ ಜಾಸ್ತಿ ಆಯ್ತಲ್ವಾ da ?" ಅಂತ ಹೇಳಬೇಕೆನ್ನಿಸಿತು.ಇಡಿ ಕಥನವೇ ೫ ಕೆಬಿ(ಯಾವ ಎನ್ ಕೋಡಿಂಗ್ ನಲ್ಲಾದರೂ) ದಾಟದಿರುವಾಗ ೮೦ ಜಿಬಿ ಎಲ್ಲಿಂದ ಬಂತೋ ನಾ ಕಾಣೇ ? ನನ್ನ ಈ ಕಥೆಯನ್ನು ೧ ಬೈಟ್ ಅಷ್ಟಾದರೂ ಜನ ಓದುತ್ತಾರೆಂಬ ನಂಬಿಕೆ ಇರಲಿಲ್ಲ. ನಿಮ್ಮ ಕಾಮೆಂಟು ಬಂದದ್ದು ಸ್ವಲ್ಪ ಆಶ್ಚರ್ಯ ಹಾಗೇ ಸ್ವಾಗತಾರ್ಹ ಕೂda.

-ಶ್ರೀಕಾಂತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 10, 2005 - 7:50pm — muralihr

ಕೆಟ್ಟ ಅಭ್ಯಾಸ

muralihr's picture

ಬೇರೆಯವರು ಮಾತಾಡುವಾಗ ಕೇಳುವುದು ಅಸಭ್ಯತೆ, ಅನಾಗರಿಕತೆ, ಅನಗತ್ಯ ಕುತೂಹಲ.
ಹಾಗೆ ಕೇಳುವಾಗ ನಮ್ಮ ಕೆಲಸದ ಮೇಲೆ ಗಮನ ಇರುವುದಿಲ್ಲಾ, ಅವನೇನ್ ಮಾಡ್ತಾನೆ, ಇವನೇನ್ ಮಾಡ್ತಾನೆ - ಇಷ್ಟರಲ್ಲಿ ಇದ್ದು ಬಿಡ್ತೀವಿ..Smiling:)Smiling
ಸುಮ್ಮನೆ ಬೈತ್ತಾಯಿದ್ದೇನೆ. ಆದರೂ ನೀವು ಒಬ್ಬ ಒಳ್ಳೆ ಬರಹಗಾರ ಆಗಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 12, 2005 - 12:22am — hpn

ಬಸ್ಸಿನಲ್ಲಿ ಕೂತಾಗ "ಕೇಳಿಸಿದ್ದು"

hpn's picture

muralihr wrote:
ಬೇರೆಯವರು ಮಾತಾಡುವಾಗ ಕೇಳುವುದು ಅಸಭ್ಯತೆ, ಅನಾಗರಿಕತೆ, ಅನಗತ್ಯ ಕುತೂಹಲ.
ಹಾಗೆ ಕೇಳುವಾಗ ನಮ್ಮ ಕೆಲಸದ ಮೇಲೆ ಗಮನ ಇರುವುದಿಲ್ಲಾ, ಅವನೇನ್ ಮಾಡ್ತಾನೆ, ಇವನೇನ್ ಮಾಡ್ತಾನೆ - ಇಷ್ಟರಲ್ಲಿ ಇದ್ದು ಬಿಡ್ತೀವಿ..Smiling:)Smiling

ಲೋ ಗುರುವೆ, ಇವರು ಬರೆದಿರೋದು ಇವರು ಬಸ್ಸಿನಲ್ಲಿ ಕೂತಾಗ "ಕೇಳಿಸಿದ್ದು", ಕಣೋ. ಆಗ ಮಾಡೋಕ್ಕೆ ಏನೂ ಕೆಲಸವಿರೋದಿಲ್ಲ, ಮೊಬೈಲ್ ಫೋನಿನಲ್ಲಿ ಆಟವಾಡುತ್ತಿರುತ್ತೇನೆ ಅಂತ ಇವರೇ ಬರ್ದಿಲ್ವಾ? ಬಸ್ಸಿನಲ್ಲಿ ಇಂತದ್ದು ನಡೆಯುತ್ತಿರುವಾಗ ನೀನೂ ಜೊತೆಗ್ ಕೂತ್ ನೋಡು... ಕೇಳಿಸ್ಕೊಳ್ಬಾರದು ಅಂದ್ಕೊಂಡ್ರೂ ಕಿವಿಗೆ ಬೀಳತ್ತೆ! (ನೀನು ತೀರ heavy concentration ಇರೋ ಗೀಕ್ ಆಗಿದ್ರೆ ಮಾತ್ರ exception - ಕಿವಿಗೆ ಬೀಳಲ್ಲ)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 12, 2005 - 9:04am — muralihr

:)

muralihr's picture

ಕಿವಿಗಳಿಗು ಕಣ್ಣಿನ ತರಹ ರೆಪ್ಪೆ ಒ೦ದು ಇರಬೇಕಿತ್ತು. ಆಗ NOISE , SOUND POLLUTION
issue ಸುಲಭವಾಗಿ ಪರಿಹಾರ ಆಗ್ತಾಯಿತ್ತು.
ನಾನು ತಮಾಷೆಗೆ ಆ ರೀತಿ ಹೇಳಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 12, 2005 - 1:50pm — hpn

Re: :)

hpn's picture

muralihr wrote:
ಕಿವಿಗಳಿಗು ಕಣ್ಣಿನ ತರಹ ರೆಪ್ಪೆ ಒ೦ದು ಇರಬೇಕಿತ್ತು. ಆಗ NOISE , SOUND POLLUTION
issue ಸುಲಭವಾಗಿ ಪರಿಹಾರ ಆಗ್ತಾಯಿತ್ತು.

ನಿಜ ಮಾರಾಯ. ನನ್ನ ಹತ್ತಿರ ಒಂದು ear cap ಇದೆ, ನಿಶ್ಯಬ್ಧ ಬೇಕೆನಿಸಿದಾಗ ಉಪಯೋಗಿಸುತ್ತೇನೆ... ಸಾಕಷ್ಟು ನಾಯ್ಸ್ ಹೊರಗಿಡುತ್ತದೆ. ಆದರೂ ಹೆಡ್ ಫೋನ್ ಹಾಕಿಕೊಂಡು ಕುಳಿತುಕೊಂಡರೇ ಸಾಕು ಸಾಕಷ್ಟು ಗಲಾಟೆ ಕಿವಿಗೆ ಬೀಳದಂತೆ ಮಾಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 7 ಮದುವೆ ಅನುಭವ
  • ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..
  • ಅಚ್ಚ ಕನ್ನಡದ ಹೆಸರುಗಳು
  • ಒಂದು ನೈಜ ಜೋಕು
  • ರೈತ ಬಲ್ಲ, ನವಿಲು ಆತನ ಮಿತ್ರ ಎಂದು. ಆದರೆ ಮಾಧ್ಯಮದವರಿಗೆ ಅವರಿಬ್ಬರು ಪರಸ್ಪರ ಶತ್ರುಗಳು ಎಂದು ಬಿಂಬಿಸುವಲ್ಲಿ ವಿಕೃತ ಆನಂದ.
Syndicate content

ಲೇಖಕರು

srikanth's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 105 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator