ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಕವಿಸಮಯ

November 28, 2005 - 10:55am — srikanth

"ಇಂದು ಜನರು ಸಂಗೀತವನ್ನು ನೋಡುತ್ತಾರೆ , ಕೇಳೋದಿಲ್ಲ" ಹೀಗೆ ನೊಂದು ನುಡಿದವರು ಸಂಗೀತ ನಿರ್ದೇಶಕ ಮನ್ನಾ ಡೆ. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸಂಗೀತದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತ ಮೇಲಿನ ಮಾತನ್ನು ಹೇಳಿದ್ದರು.ಪ್ರಾಚೀನ ಕಲೆ,ಪರಂಪರೆಗಳ ಸುವರ್ಣಯುಗವನ್ನು ವರ್ಣಿಸುತ್ತಾ,ಇಂದಿನ ಅವುಗಳ ಅವಸಾನದ ಬಗ್ಗೆ ಗೊಣಗಾಡುವ ಇನ್ನೊಬ್ಬ 'ಮುತ್ಸದ್ದಿ'ಗಳೆನ್ದುಕೊಂಡು ದಿನಪತ್ರಿಕೆಯ ಪುಟಗಳನ್ನು ತಿರುವುತ್ತಾ ಬೇರೆ ಸುದ್ದಿಗಳನ್ನು ಗಮನಿಸುತ್ತ ಹೋದೆ. ರೇಡಿಯೋದಲ್ಲಿ ಕೇಳಿದ ಕಿಶೋರಿ ಅಮೋನ್ಕರ್ ಅವರ ಗಾಯನವು ಮೇಲಿನ ಮಾತನ್ನು ಎರಡು ವರ್ಷದ ನಂತರ ಮತ್ತೆ ನೆನಪಿಸಿತು. ಅಂದು ಅವರು ರಾಗ 'ಮಿಯನ್ ಕೆ ಮಲ್ಹರ್" ವನ್ನು ಹಾಡಿದ್ದು , ಶಾಸ್ತ್ರೀಯ ಸಂಗೀತದ ಒಂದು ಆಯಾಮವನ್ನು ಪರಿಚಯಮಾಡಿಕೊಟ್ಟಿತು. ವಿಶೇಷವೆಂದರೆ ಈ ರಾಗಕ್ಕೆ ಸಮಾನಾಂತರವಾಗಿ "Largo Moderato" ಎಂಬ ರಾಗವು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲೂ ಇದೆ.

 

ಸಂಗೀತದ ಬಗ್ಗೆ ನನಗೆ ಹೆಚ್ಚೇನೂ ತಿಳಿದಿಲ್ಲ, ಕೆಲವರು ಪ್ರಖ್ಯಾತ ಗಾಯಕರ, ವಾದಕರ ಧ್ವನಿಮುದ್ರಿಕೆಗಳನ್ನು ಕೇಳಿದ್ದೇನೆ.

ರಾಗದ ಪರಿಚಯವಾಗಲಿ, ಸ್ವರಜ್ಞಾನವಾಗಲಿ ಇಲ್ಲ.ಆದರೂ ಅಮೋನ್ಕರ್ ಅವರ ಹಾಡುಗಾರಿಕೆ ನೆನಪಿನಲ್ಲಿ ಉಳಿಯುವ ಆಲಿಕೆಯಾಯಿತು.

ಗಾಯನ ಪ್ರಾರಂಭವಾಗುವ ಮುನ್ನ ರಾಗದ ಪರಿಚಯವನ್ನು ನಿರೂಪಕಿಯು ಮಾಡಿಕೊಟ್ಟರು. ಅವರು ಹೇಳಿದ ರಾಗದಲ್ಲಿನ ಗಾಂಧಾರ, ಮಧ್ಯಮಗಳ ಪ್ರಯೋಗ ಏನೇನೂ ಅರ್ಥವಾಗಲಿಲ್ಲ್ಲ.ಆದರೆ ಆಲಾಪದಲ್ಲಿ ಚಲಿಸುವ ಮೋಡಗಳ ಕಲ್ಪನೆ ಇದೆಯೆಂದೂ, ತಾನದಲ್ಲಿ ಗುಡುಗು-ಮಿಂಚುಗಳ ಕಲ್ಪನೆಯಿದೆಯೆಂದು ಹೇಳಿದರು.ಇಂತಹ ಕಲ್ಪನೆ ಹಾಡಿನಲ್ಲಿ ಹೇಗೆ ಕಲ್ಪಿಸಿಯಾರು ? ಎಂಬ ಕುತೂಹಲ ಉಂಟಾಗಿ, ಮುಂದಿನ ಎಫ್ ಎಂ ಸ್ಟೇಷನ್ನಿಗೆ ಬದಲಾಯಿಸದೆ ಹಾಡನ್ನು ಕೇಳಲು ಆರಂಭಿಸಿದೆ.

ಮಂದಗತಿಯಲ್ಲಿದ್ದ ಆಲಾಪವು ,ಆಲಿಕೆಯನ್ನು ಸ್ವಲ್ಪ ಕಷ್ಟಕರವಾಗೇ ಮಾಡಿತ್ತು. ಆದರೂ ಕೇಳುತ್ತ ಮುಂದುವರಿದಾಗ, ಮಂದಗತಿಯಲ್ಲಿ ಚಲಿಸುವ ಮೇಘಗಳ ಕಲ್ಪನೆ ಮನಸ್ಸಿಗೆ ಬರತೊಡಗಿತು. ಭೂಮಿಯಿಂದ ಎತ್ತರದಲ್ಲಿ ಮೋಡಗಳ ಚಲನೆಯ ಶಾಂತತೆಯನ್ನು ,ಆಲಾಪದ ಶಾಂತತೆಯಲ್ಲಿ ಹಿಡಿದಿಟ್ಟಿದ್ದರು. ಜೊತೆಗೆ ಹಾಡಿನ ನುಡಿಯು, ತನ್ನಿಂದ ದೂರವಾಗಿರುವ ಪ್ರಿಯಕರನ ನೆನಪಿಸಿಕೊಳ್ಳುತ್ತಿರುವ ಹೆಣ್ಣೊಬ್ಬಳ ಚಿತ್ರವನ್ನು ಮೂಡಿಸತೊಡಗಿತು. ಮನೆಯ ಎತ್ತರದ ಅಂತಸ್ತಿನ ಕಿಟಕಿಯಿಂದ ಮೋಡಗಳನ್ನು ಕಂಡೊಡನೆ ಚಲಿಸುವ ಮೋಡದಂತೆ ದೂರವಾಗುತ್ತಿರುವ ಪ್ರಿಯಕರನ ನೆನಪು ಆಲಾಪನೆಯ ನಿಧಾನ ಗತಿಯಿಂದ ,ಏಕತಾನತೆಯಿಂದ, ಚಿತ್ರಿತವಾಗುತ್ತಿತು.

ಬಹಳ ಹೊತ್ತು ಸಾಗಿದ ಆಲಾಪನೆಯಿಂದ ಬೇಸರ ಉಂಟುಮಾಡುವಂತೆ ತಡೆದದ್ದು , ಮೇಲೆ ಕಲ್ಪಿಸಿದ ಚಿತ್ರವೊಂದೇ.ಆಂತೂ ಆಗ ರೇಡಿಯೋ ಟ್ಯೂನ್ ಮಾಡದೇ ಸುಮ್ಮನಿದ್ದೆ.

ಆಲಾಪನೆಯ ಗತಿಯೇರತೊಡಗಿತು, ಆದರೆ ಈ ಗತಿ ಬದಲಾವಣೆ, ಪಾದರಸವೇರಿದನಂತೆ ಕ್ಷಣಮಾತ್ರದಲ್ಲಾಗದೇ,ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರಬಂದು ಮೇಲಕ್ಕೆ ಹರಿಯಲು ಪ್ರಯತ್ನಿಸುತ್ತಿರುವ ಆಕಾಶಗಂಗೆಯಂತೆ ಅಮೋನ್ಕರ್ ರವರ ಧ್ವನಿಯ ಏರಿಳಿತಗಳು, ಪ್ರತಿ ಏರಿಕೆಯಲ್ಲೂ ಹಿಂದಿನ ಮಟ್ಟವನ್ನು ಹಿಂದೆಹಾಕಿ ಇಳಿಕೆಯಲ್ಲಿ ಮತ್ತೆ ಅದೇ ಕೆಳಮಟ್ಟವನ್ನು ತಲುಪುತ್ತಿತ್ತು.ಕಿಟಕಿಯಿಂದ ಹೊರನೋಡುತ್ತಿರುವ ಆ ಹೆಣ್ಣಿನ ಮನಸ್ಸಿನಲ್ಲಿ ವಿವಿಧ ಭಾವನೆಗಳ ಏರಿಳಿತವಾಗಿ, ವಿರಹವು ಮನಸ್ಸನ್ನು ದಾಟಿ ಮೇಲೇಳಲು ಪ್ರಯತ್ನಿಸುವಂತಿತ್ತು.

ತಾನದ ಆರೋಹಣ, ಅವರೋಹಣಗಳು ಆರಂಭವಾಯಿತು,ಆರೋಹಣವು ಮೆಟ್ಟಿಲು-ಮೆಟ್ಟಿಲಾಗಿ ಮೇಲೇರಿ,ಎತ್ತರದಲ್ಲಿ ಮಿಂಚಿನ ಬೆಳಕಂತೆ ಕ್ಷಣಮಾತ್ರ ನಿಂತು ಮರೆಯಾಗಿ, ಅವರೋಹಣವು ಗುಡುಗಿನಂತೆ ಗಂಭೀರ ಧ್ವನಿಯಲ್ಲಿ ಕೆಳಗಿಳಿಯುತ್ತಿತ್ತು.ಆಗಸದ ಮಿಂಚು-ಗುಡುಗುಗಳನ್ನು ಕಂಡ ಕಣ್ಣುಗಳು ಮನಸ್ಸಿನಲ್ಲಿ ವಿರಹದಿಂದ ಉಕ್ಕುವ ದುಃಖ-ಕೋಪಗಳ

ಮಿಂಚು-ಗುಡುಗನ್ನು ಅನುಭವಿಸತೊಡಗಿತು.ಪ್ರತಿ ಆರೋಹಣದಲ್ಲಿನ ಮಿಂಚಿನ ಬೆಳಕು ಹೆಚ್ಚು ಹೊತ್ತು ನಿಲ್ಲತೊಡಗಿತು, ಅಷ್ಟು ಮೇಲೇರಿದ್ದರಿಂದ ಅವರೋಹಣದಲ್ಲಿಳಿಯುವಾಗ

ಗುಡುಗಿನ ಧ್ವನಿಯ ಪ್ರಭಾವ ಪ್ರಖರವಾಗಿತ್ತು.ಪ್ರತಿ ಆರೋಹಣ-ಆವರೋಹಣ ಚಕ್ರದ ನಡುವೆ ಗುಡುಗಿನ ನಂತರದ ಶಾಂತಿ ಇರುತ್ತಿತ್ತು.

ಮಿಂಚು-ಗುಡುಗುಗಳನ್ನು ಆಹ್ವಾನಿಸಿದ್ದ ತಾನವು ಈಗ "ಉಮಡ್, ಉಮಡ್, ಆಯೋ ರೇ" ಎಂದು ಮಳೆಯನ್ನು ಆಹ್ವಾನಿಸತೊಡಗಿತು,ಜೊತೆಗೆ ಅವಳ ಕಣ್ಣುಗಳಲ್ಲಿ ಕಣ್ಣೀರಿನ ಮಳೆಯನ್ನು ತರಿಸಿತು. ಮಳೆ ಬಂದು ,ಚಲಿಸುವ ಮೋಡಗಳೆಲ್ಲ ಕರಗಿಹೋದವು.ಅವಳ ಮುಖದಲ್ಲಿ ಕಣ್ಣೀರು ಬಂದು ವಿರಹದ ಮೋಡವನ್ನು ಕರಗಿಸಿ ಸಮಾಧಾನ ತರಿಸಿತು.

ಈ ಸಮಾಧನದ ಭಾವದೊಂದಿಗೆ ಗಾಯನವು ಮುಕ್ತಾಯವಾಯಿತು.

ಒಂದು ಘಂಟೆ ನನ್ನನ್ನು ಕೇಳುವಂತೆ ಮಾಡಿದ್ದ ಈ ಸಂಗೀತದ ಅನುಭವವನ್ನು ಮರೆಯುವ ಮುನ್ನ ಬರೆದಿಡಬೇಕೆನ್ನಿಸಿತು.ಬಹುಶಃ ಮತ್ತೊಮ್ಮೆ ಇದೆ ಹಾಡನ್ನು ಕೇಳಿದರೂ ಈ ನೆನಪು ಮರುಕಳಿಸದಿದ್ದರೆ ?

ರೀಮಿಕ್ಸ್ ವಿಡಿಯೋಗಳಲ್ಲಿ ಕಟ್ಟುಮಸ್ತಾದ ಆಳೊಬ್ಬನ ಸುತ್ತ ಲಘುವಸ್ತ್ರಖಚಿತವಾಗಿ ನರ್ತಿಸುವ ಸುಂದರಿಯರು ಹಾಡುವ ಹಾಡುಗಳು, ಮಲ್ಹರ್ ನಂತೆ ಮನಸ್ಸಿನಲ್ಲಿ ಚಿತ್ರಗಳನ್ನು

ಕೆತ್ತುತ್ತವೋ? ತಿಳಿಯದು, ಪರದೆಯ ಮೇಲಂತೂ ಕೆತ್ತುತ್ತವೆ.

ಮನಸ್ಸಿನ ಚಿತ್ರಗಳು ಪರದೆಯ ಮೇಲೆ ಕಾಣತೊಡಗಿದಾಗ ಮನ್ನಾಡೆ ಅವರೂ ಸಂಗೀತವನ್ನು ನೋಡಲು ಕಲಿಯುತ್ತಾರೋ ಏನೋ ?

  • ಅನುಭವ ಕಥನ
~.~
  • Login or register to post comments
  • 928 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 30, 2005 - 4:56pm — hpn

ಒಳ್ಳೆಯ ನಿರೂಪಣೆ

hpn's picture

ಸುಂದರವಾಗಿ ನಿರೂಪಿಸಿ ನಿಮ್ಮ ಅನುಭವವನ್ನ ಹಂಚ್ಕೊಂಡಿದ್ದೀರ Smiling

ನನ್ನ ಒಂದಷ್ಟು ಅಭಿಪ್ರಾಯಗಳು:

ಈಗಲೂ ಸಮಯ ಅಷ್ಟೇನು ಕೆಟ್ಟಿಲ್ಲ, ಜಾವೆದ್ ಅಕ್ತರ್, ಗುಲ್ಜಾರ್ ರಂತಹ ಕೆಲವರು ಬರೆಯುವ ಕೆಲವು ಹಾಡುಗಳು ಸಾಕಷ್ಟು ಅರ್ಥಪೂರ್ಣವಾಗಿ ಮನಸ್ಸಿನಲ್ಲೇ ಚಿತ್ರಣ ಮೂಡಿಸುವಷ್ಟು ಶಕ್ತವಾಗಿರುವುದೂ ಉಂಟು.

Having said that, ನೀವು ಮೇಲೆ ತಿಳಿಸಿದಷ್ಟು effective ಆಗಿ ಇಂದಿನ ಸಂಗೀತ ಇರೋದಕ್ಕೆ ಸಾಧ್ಯವೇ ಇಲ್ಲ, ಬಿಡಿ. ನಮ್ಮ ಸಾಂಪ್ರದಾಯಿಕ ಸಂಗೀತ ಪರಂಪರೆಗೆ ಎಷ್ಟು ಒಳ್ಳೆಯ ಇತಿಹಾಸವಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಷ್ಟೆ, ಸಾಕಷ್ಟು ಪ್ರಯೋಗಗಳಿಂದ enrich ಆಗಿ ಒಂದು ದೊಡ್ಡ "ಅಧ್ಯಯನ" ನಡೆಸುವಂತಹ ಸಬ್ಜೆಕ್ಟ್ ಆಗಿಹೋಗಿದೆ. ನಿಜವಾಗ್ಲೂ, ಹಿಂದುಸ್ತಾನಿ ಸಂಗೀತವಾಗ್ಲಿ, ಕರ್ನಾಟಕ ಸಂಗೀತವಾಗ್ಲಿ, ನಮ್ಮವರು (majority ಅಮೇರಿಕನ್ ಮಿಮಿಕ್ರಿಯಂತೆ) ಹೀಗೆ ಅಸಡ್ಡೆ ತೋರಿಸ್ತ ಹೋದ್ರೆ ಒಳ್ಳೆಯ ಸಂಗೀತ ಅಂದ್ರೇ ಏನು ಅನ್ನೋದು ತಿಳಿಯದೇ ಹೋಗುತ್ತೆ, ಬರೋ ಡೆಕೇಡುಗಳಲ್ಲಿ.

- ಹೆಚ್ ಪಿ

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2005 - 10:15am — srikanth

ಈ ಕಥನ

srikanth's picture

ಈ ಕಥನ ಬರೆಯೋಕ್ಕೆ ಪ್ರಾರಂಭಿಸಿದಾಗ ,ಇತ್ತೀಚಿನ ಸಂಗೀತದ ಬಗ್ಗೆ ಅಭಿಪ್ರಾಯ ತಿಳಿಸಬೇಕೆಂಬ ಆಸಕ್ತಿ ನನಗಿರಲ್ಲಿಲ್ಲ .ಶಾಸ್ರೀಯ ಸಂಗೀತ ಹಾಗು ಮುಖ್ಯವಾಹಿನಿ ಸಂಗೀತದ ಹೋಲಿಕೆ ಸರಿಯಲ್ಲ.

ಆದರೆ ಬರೆಯುತ್ತಾ ಹೋದಾಗ ಹೇಗೋ ಈ ಮಾತು ಇಲ್ಲಿ ನುಸುಳಿಬಿಟ್ಟಿದೆ

ಇದನ್ನು ಓದಿದವರು ಮುಂದಿನ ಬಾರಿ ರೇಡಿಯೋ ಟ್ಯೂನ್ ಮಾಡುವಾಗ ೫ ನಿಮಿಷ ಸಂಗೀತ ಕೇಳುವಂತೆ ಮಾಡಿದರೆ ನನ್ನ ಲೇಖನ ಸಾರ್ಥಕವಾಯ್ತೆಂದುಕೊಳ್ಳುತ್ತೇನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 7, 2005 - 10:42am — olnswamy

ಸಂಗೀತ ಹೇಗೆಲ್ಲ ಇರಬಹುದು!

olnswamy's picture

ಶ್ರೀಕಾಂತ ಅವರು ಸಂಗೀತ ಕೇಳಿ ಆದ ಅನುಭವವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ಅದನ್ನು ಓದಿ ಅನಿಸಿದ್ದು ಇದು.
ಅವರಂತೆಯೇ ನಾನೂ ಕೂಡ ಸಂಗೀತ ವಿದ್ವಾಂಸನಲ್ಲ. ರಾಗ ತಾಳ ಇತ್ಯಾದಿ ಗುರುತು ಹಿಡಿಯುವುದು ಬರುವುದಿಲ್ಲ. ಆದರೆ ಒಳ್ಳೆಯ ಸಂಗೀತ ಕೇಳಿದಾಗ ಮನಸ್ಸಿಗೆ ಧನ್ಯತೆಯ ಭಾವ ಮೂಡುತ್ತದೆ, ಬದುಕಿದ್ದು ಸಾರ್ಥಕ ಅನ್ನಿಸುತ್ತದೆ. ಹಾಗೆ ಅನ್ನಿಸುವಂಥ ಸಂಗೀತ ಮಾತ್ರ ಅಪರೂಪವೇ.
ಚೆನ್ನಾಗಿ ಹಾಡುವವರು ಇದ್ದಾರೆ. ವಿದ್ವಾಂಸರು ಇದ್ದಾರೆ. ಪ್ರಸಿದ್ಧರು ಇದ್ದಾರೆ. ಆದರೆ ತಮ್ಮ ಜೀವ-ಭಾವಗಳನ್ನೇ ತೆತ್ತುಕೊಂಡು ಹಾಡುವಂಥವರು, ಹಾಡುತ್ತ ಹಾಡುತ್ತ ತಮ್ಮ ಅನುಭವಗಳನ್ನೂ, ನಮ್ಮ ಅನುಭವಗಳನ್ನೂ ತಿದ್ದಿ ರೂಪಿಸುವವರು ಅಪರೂಪ. ಅಂಥ ಸಾಧ್ಯತೆ ಇರುವುದು ಕ್ಲಾಸಿಕಲ್ ಸಂಗೀತಕ್ಕೆ ಮಾತ್ರ ಅಂತ ನನ್ನ ಅನಿಸಿಕೆ.
ಟಿವಿ ಇತ್ಯಾದಿಗಳಲ್ಲಿ ಕಾಣುವ ಎಂಟಿವಿ ಇತ್ಯಾದಿ ಚಾನಲ್ಲುಗಳ ಚಿತ್ರವತ್ತಾದ ಸಂಗೀತ ಮನಸ್ಸನ್ನು ಉದ್ರೇಕಿಸುತ್ತದೆ. ಅದೂ ಕೂಡ ಸಂಗೀತದ ಒಂದು ಕೆಲಸವೇ. ಆದರೆ ಮನಸ್ಸಿನ ಅಲೆದಾಟವನ್ನು ನಿಧಾನ ನಿಧಾನಗೊಳಿಸಿ, ತಿಳಿಗೊಳಿಸಿ, ಹಾಯ್ ಅನಿಸುವಂತೆ ಮಾಡುವ, ಸಮಾಧಾನ ನೀಡುವ ಶಕ್ತಿ ಕ್ಲಾಸಿಕಲ್ ಕಲಾವಿದರಿಗೆ ಮಾತ್ರ ಅನಿಸುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ ಸಂಗೀತವನ್ನು ಕೇಳಿಸಿಕೊಳ್ಳುವ ಮನೋಧರ್ಮ ಮತ್ತು ಬಿಡುವು ಕೂಡ ಬೇಕಲ್ಲವಾ! ನಮ್ಮ ಮನಸ್ಥಿತಿಯೇ ವ್ಯಸ್ತವಾಗಿದ್ದಾಗ ಯಾವ ಸಂಗೀತ, ಯಾವ ಕಲೆ ಏನು ಮಾಡಬಲ್ಲುದು? ನಮ್ಮನ್ನು ನಾವು ಸಂತೈಸಿಕೊಳ್ಳದೆ ಕಲೆ-ಕಲಾವಿದರ ಯೋಗ್ಯತೆ ಅಳೆಯಲು ಹೊರಡುವ ಧಾರ್ಷ್ಟ್ಯ ತೋರುತ್ತೇವಲ್ಲವೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ್ ಕಥೆ ೩೩: ಸಾವಧಾನ!
  • ಇಂದಿನ ಸುದ್ದಿ...!
  • ಮುಕ್ತಾಯ
  • ಝೆನ ಕಥೆ ೩೬: ಛತ್ರ
  • ಕರ್ನಾಟಕ ಸಂಗೀತದ ರಸಾನುಭವ - ರಾಗ ಮೋಹನ (ಭಾಗ ೧)
Syndicate content

ಲೇಖಕರು

srikanth's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 218 ಅತಿಥಿಗಳು ಆನ್ಲೈನ್ ಇರುವರು.


ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator