ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಭರತೇಶ ವೈಭವದಲ್ಲಿ ಕನ್ನಡ ನುಡಿಗಟ್ಟುಗಳು - ಕಲ್ಪು ೮

January 2, 2008 - 11:02pm — Sunil Jayaprakash

ಹೇಳಿ ಕೇಳಿ ಭರತೇಶ ವೈಭವ "ಹಾಡುಗಬ್ಬ"(ರತ್ನಾಕರವರ್ಣಿ ಹೇಳುವುದು) = "ಸಾಂಗತ್ಯ, ಸಂಗೀತಕಾವ್ಯ"(ವಿಮರ್ಶಕರು ಹೇಳುವುದು). ರತ್ನಾಕರವರ್ಣಿ ಭರತೇಶ ವೈಭವವನ್ನು ಹಾಡುವುದಕ್ಕಾಗಿಯೇ ಬರೆದಿರುವುದು ಅಂತ ಹೇಳಿದ್ದಾನೆ. ಸರಿ, ಭರತೇಶ ವೈಭವದಲ್ಲಿ "ಸಂಗೀತ ಸವರಣೆ" ಹೇಗಿದೆ ಎಂಬುದನ್ನು ಮುಂದೆ ನೋಡೋಣ. ಈ ದಿನ ಹದಿಹರೆಯದವರ ಪರಿಭಾಷೆಯಲ್ಲಿರುವ ಒಂದು ಸರಸಪದ್ಯವನ್ನು ಗಮನಿಸೋಣ.

ಭರತ ಒಮ್ಮೆ ಹೆಂಡತಿಯ ತವರಿಗೆ ಬಂದಿರುತ್ತಾನೆ. ಅಲ್ಲಿ ಹೆಂಡತಿಯ ತಂಗಿ(ನಾದಿನಿ, ನಾದುನಿ)ಗೆ ಸ್ವಲ್ಪ ಕೀಟಲೆ ಮಾಡುತ್ತಾನೆ. ನಾದಿನಿಯೂ ಕೂಡ ಏನು ಕಮ್ಮಿ ಇಲ್ಲ, ಅವಳೂ ಮಾತಿನ ಮಲ್ಲೆ. ಭರತೇಶ ಹಾಗೆ ಕೀಟಲೆ ಮಾಡುತ್ತಾ, ಇವಳು ಏನು "ಕಾತರೆಯೋ"(=timid, perplexed) ಅಂತ ಆಡಿಕೊಳ್ತಾನೆ. ಆಗ ನಾದಿನಿ ಹೇಳ್ತಾಳೆ.

ಕಾತರಗೀತರವನು ನೀವು ನಿಮ್ಮಂಬು
ಜಾತಾಕ್ಷಿಯರು ಬಲ್ಲಿರೈಸೆ
ಆತಳ್ಳಿಬಳ್ಳಿಯ ನಾವೇನ ಬಲ್ಲೆವು
ಮಾತು ಸಾಕಿನ್ನೇಳು ಭಾವ || ೨೬ ||

"ಕಾತರಗೀತರವನು ನೀವು ನಿಮ್ಮ ಅಂಬುಜಾತಾಕ್ಷಿಯರು ಬಲ್ಲಿರೈಸೆ (ಬಲ್ಲಿರಿ ಅಷ್ಟೇ). ಆ ತಳ್ಳಿಬಳ್ಳಿಯ ನಾವೇನು ಬಲ್ಲೆವು, ಮಾತು ಸಾಕು ಇನ್ನು ಏಳು ಭಾವ".

ಈ ಪದ್ಯದ ಮೂರನೆ ಸಾಲಿನಲ್ಲಿ ಬರುವ "ತಳ್ಳಿಬಳ್ಳಿ" ಎಂಬ ಪದವನ್ನು ಗಮನಿಸಿ. ಈ ಪದಕ್ಕೆ ಅನೇಕ ರೂಪಗಳಿವೆ. ತೆಳ್ಳಂಬೆಳ್ಳ, ತೆಳ್ಳಗೆಬೆಳ್ಳಗೆ, ತ(ಥ)ಳುಕುಬಳುಕು ಹೀಗೆ. ನಮ್ಮಮ್ಮ ಮತ್ತು ನಮ್ಮ ದೊಡ್ಡಮ್ಮನವರು ಮಾತನಾಡುವಾಗ ಈ "ತಳ್ಳಿಬಳ್ಳಿ" ಪದವನ್ನು ನಾನು ಕೇಳಿದ್ದಿದೆ. ತಳ್ಳಿಬಳ್ಳಿಗಿಂತ ಹೆಚ್ಚಾಗಿ "ತೆಳ್ಳುಗ್ ಬೆಳ್ಳುಗ್ ಮಾತಾಡೋದು" ಎನ್ನುವ ಪದವಂತೂ ಅಬ್ಬಬ್ಬಾ!!!

೧. ಸುಮ್ಮನೆ ಕೀಟಲೆ ಮಾಡಲು ನಮ್ಮಮ್ಮನ್ನೇ ಕೇಳೋಣ ಅಂತ, "ಏನಮ್ಮ ತಳ್ಳಿಬಳ್ಳಿಮಾತು ಅಂದ್ರೆ", ಅಂತ ಕೇಳಿದ್ದಕ್ಕೆ ಸ್ವಲ್ಪ ಹೊತ್ತು ನಗುವಿಗೆ ಮಿಕ್ಕು ಮುಗುಳ್ನಕ್ಕ ನಂತರ, "ಜಾಣತನದ ಮಾತೂ ಅಂತ, ಅದೇ ಹೇಳ್ತಾರಲ್ಲ ಮೊಸರಲ್ಲಿ ಕೂದಲು ತೆಗೆಯುವಂತಹ ಮಾತು ಅಂತ Eye-wink, ಮರುಳು ಮಾಡುವಂತಹ, ಸುಮ್ಸುಮ್ನೆ ಏನೇನೋ ಹೇಳುವ, ಒಯ್ಯಾರದ ಮಾತು ಅಂತ" ಎಂಬ ಉತ್ತರ ಸಿಕ್ಕಿತು.
೨. ಸರಿ ಸಾಗುತ್ತಾ, "ತಳ್ಳಿ" ಎಂದರೇನು ತಿಳಿದುಕೊಳ್ಳಲು ದ್ರಾವಿಡ ನುಡಿಕೋಶವನ್ನು ತಡಕಾಡಿದೆ. ಆಗ ಈ ಪದದ ವಿಸ್ತಾರ ಅರಿವಿಗೆ ಬಂತು. ಇಲ್ಲಿ ಚಿಟುಕಿ Eye-wink (ಅನಿವಾಸಿಯವರಿಗೆ ನನ್ನಿ). ಅರ್ಥ ೧, ಅರ್ಥ ೨
೩. ಪಂಡಿತ ಕವಲೀಯವರ ಕಸ್ತೂರೀ ಕೋಶದಲ್ಲಿ "ತಳ್ಳಿ" ಎಂಬುದಕ್ಕೆ ತಂಟೆ, ಗೊಡವೆ, ಸಂಬಂಧ, ಉಪದ್ರವ, ಚಾಡಿ ಎಂಬರ್ಥಗಳಿವೆ.
೪. ಇಗೋ ಕನ್ನಡ, ಜಿ.ವಿಯವರ ನಿಘಂಟಿನಲ್ಲಿ ಸಂಬಂಧ, ಒಡನಾಟ , ಗೊಡವೆ, ಗೋಜು, ನಿಂದೆ, ಅಪವಾದ, ಕಟ್ಟು, ಬಂಧನ, ಹೋರಾಟ, ಕಣದಲ್ಲಿ ತೆನೆ ತುಳಿಸಲು ಎತ್ತುಗಳನ್ನು ಸಾಲಾಗಿ ಕಟ್ಟುವುದು.
೫. ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಅಚ್ಚಕನ್ನಡ ನುಡಿಕೋಶದಲ್ಲಿ ಹೊಂದಿಕೆ, ಕೂಡಿಕೆ, ಒಡನಾಟ, ಹೋಱಾಟ ಎಂಬ ಅರ್ಥಗಳಿವೆ.

ಗಮಿನಿಸಿ ನೋಡಿ ಬೇಕಿದ್ದರೆ, ಈ ತಳ್ಳಿಬಳ್ಳಿ, ತೆಳ್ಳಗೆಬಳ್ಳಗೆ ಮುಂತಾದ ಪದಗಳನ್ನು ನಮ್ಮಂತಹ ಹದಿಹರೆಯದವರನ್ನು ಉದ್ದೇಶಿಸಿ ಮಾತನಾಡುವಾಗಲೇ ಹೆಚ್ಚಾಗಿ ಬಳಸುತ್ತಾರೆ Eye-wink

  • ಜ್ಞಾನವಾಹಿನಿ
~.~
  • Login or register to post comments
  • 507 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
  • Minimize and Maximize
  • firefox tab, keyboard tabಗಳಿಗೆ ಕನ್ನಡ ಪದಗಳು
  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂಬೈನ, ಟಾಜ್, ಒಬೆರಾಯ್ ಹೋಟೆಲ್ ಗಳು, ನಾರಿಮನ್ ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆಸ್ಪತ್ರೆ,ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ಪಾಠಕ
  • ಹಿರಿಯರ ಆಸೆ
  • ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
  • ಸ್ಥಿತಪ್ರಜ್ಞ
  • ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
  • ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?
  • ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಇತ್ತೀಚಿನ ಪ್ರತಿಕ್ರಿಯೆಗಳು

  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
  • kalpana
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:41am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 166 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator