ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಅಮ್ಮಂದಿರ ಸುದ್ದಿ

May 16, 2007 - 9:45am — anivaasi

[ಇಂಗ್ಲೆಂಡಿನ ರಾಜಕುಮಾರಿ ಡಯಾನಾ ಸತ್ತ ಸಮಯದಲ್ಲೇ, ಮದರ್‌ ತೆರೇಸಾ ಸತ್ತ ಸಮಯದಲ್ಲೇ, ಅಲ್ಜೀರಿಯಾದಲ್ಲಿ ನಡೆದ ಹಳ್ಳಿಯ ತಾಯಂದಿರು, ಅವರೊಡನಿದ್ದ ಹಸುಗೂಸುಗಳ ಹತ್ಯಾಕಾಂಡ ಸುದ್ದಿಯಾಗದೇ ತೇಲಿಹೋದಾಗ]

ಅಮ್ಮಂದಿರಾ, ನಿಮ್ಮ ಸುದ್ದಿಯೆಂದರೆ,
ಕ್ಷುಲ್ಲಕ ಸಾವಿಗೀಡಾದ ಚೆಲುವೆ ಬಿಳೀ ರಾಜಕುಮಾರಿ
ಅಮ್ಮನ ಸುದ್ದಿಯಲ್ಲ.
ವಾತ್ಸಲ್ಯಪೂರ್ಣ ದೇವತಾಸ್ವರೂಪಿ ಬಿಳೀ ಸೀರೆಯ ಅಜ್ಜಿ
ಅಮ್ಮನ ಸುದ್ದಿಯಲ್ಲ.

ಮುಂಜಾನೆ ಅರೆ ಹರಿದ ಬೆಳಕಿನಲ್ಲಿ,
ಆಲ್ಜೀರಿಯಾದ ಹಳ್ಳಿಗಾಡಿನ ಮುರುಕು ಮನೆಗಳಲ್ಲಿ,
ಕೊರಳು ಕೊಯ್ಯಲು ಬಂದ ಧೂರ್ತರೆದುರಿನಲ್ಲಿ,
ಹಸುಳೆ ಮಕ್ಕಳ ಎದೆಗವಚಿ, ಬಚ್ಚಿಟ್ಟು ಕಾಪಾಡಿ
"ಅಲ್ಲಾ ನಿಮ್ಮಲ್ಲಿ ದಯೆ ಕರುಣಿಸಲಿ" ಎಂದರಚುತ್ತಾ-
ದಯೆ ಇಟ್ಟು ಬಿಟ್ಟುಬಿಡಿರೆಂದು ಅಂಗಲಾಚುತ್ತಾ-
ಕತ್ತಿ-ಕೊರಳಿನ ಸೆಣಸಾಟದಲ್ಲಿ ಹೋರಾಡುತ್ತಾ-
ಅಸುನೀಗಿದ ಅಮ್ಮಂದಿರಾ-
ನಿಮ್ಮ ದೇಹ ನೆಲದಲ್ಲಿ ಹೊರಳಿ
ನಿಮ್ಮ ದನಿ ಕೊಯ್ದ ಕೊರಳಿನ ರಕ್ತದೊಳಗಿಂದ ಮರಳುಗಾಡಿನ ಮಣ್ಣಲ್ಲಿ ಬೆರೆತು
ಅಮ್ಮಂದಿರಾ-
ಬೆಳಗಿನ ಬಿಸಿಲಿಗೆ ಹರಳುಗಟ್ಟುತ್ತಿರುವಾಗ

ಮೂಲೋಕದೊಳಗೊಂದು ಲೋಕ
ಚೆಲುವೆ ರಾಜಕುಮಾರಿಯೊಬ್ಬಳು
ಎಲ್ಲೋ ಸತ್ತ ಸುದ್ದಿಗೆ ಎಚ್ಚೆತ್ತು ದಿಗ್ಭ್ರಮೆಪಟ್ಟಿತು.

ಆಲ್ಜೀರಿಯಾದ ಅಮ್ಮಂದಿರಾ-
ಚೆಲುವೆಯರಾದರೂ ರಾಜಕುಮಾರಿಯರಲ್ಲ ನೀವು
ವಾತ್ಸಲ್ಯಪೂರ್ಣರಾದರೂ ದೇವತಾಸ್ವರೂಪಿಗಳಲ್ಲ ನೀವು
ತಳವೊಡೆದ ಸುದ್ದಿ ದೋಣಿಗೆ ಬಿಳೀ ಹಾಯಿ ಪತಾಕೆಗಳಾದರೆ,
ಆಲ್ಜೀರಿಯಾದ ಅಮ್ಮಂದಿರಾ-
ನೀವದರ ತಳದ ತೂತಿಗೆ ತೇಪೆಗಳು.

- ಸೆಪ್ಟೆಂಬರ್‍ ೧೯೯೭

  • ಕಾವ್ಯ ಮತ್ತು ಕವನ
~.~
  • Login or register to post comments
  • 627 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 17, 2007 - 12:49pm — hpn

ಉ: ಅಮ್ಮಂದಿರ ಸುದ್ದಿ

hpn's picture

ಮೂಲೋಕದೊಳಗೊಂದು ಲೋಕ

ಮೂರನೆಯ ಲೋಕದಲ್ಲಿಯೂ ಹೀಗೆಯೇ, ರಾಜ ಅಥವ ಬಚ್ಚನ್ ವಂಶಸ್ಥರಂತವರ ಸುದ್ದಿಯಿಂದಲೇ ಸಂಭ್ರಮ ಹಾಗು ದಿಗ್ಭ್ರಮೆ. ಅಲ್ಲಿಲ್ಲಿ ಜೀವ ತೆತ್ತವರದ್ದು ನಿತ್ಯದ ಗೋಳು - ಯಾರಿಗೂ ರುಚಿಸದು. ಇರಾಕ್ ನಲ್ಲಿ ಸತ್ತವರ ಸುದ್ದಿ ಬಗ್ಗೆ ಯಾರಾದರು ಇನ್ನೂ ಕಿವಿಕೊಟ್ಟು ಕೇಳುತ್ತಿದ್ದಾರೆಯೆ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 7:56am — anivaasi

ಉ: ಅಮ್ಮಂದಿರ ಸುದ್ದಿ

anivaasi's picture

"ಪ್ರಗತಿಯ ಪಥ"ದಲ್ಲಿರುವ ಭಾರತದಲ್ಲಿ ನೀವು ಹೇಳುತ್ತಿರುವ ಮಾತು ನಿಜ. ಆದರೆ ಇನ್ನಿತರ "ಮೂರನೇ ಲೋಕದ" ದೇಶಗಳು ಅಂದರೆ, ಆಫ್ರಿಕಾ, ದಕ್ಷಿಣ ಅಮೇರಿಕೆಯ ದೇಶಗಳಲ್ಲಿ ಇನ್ನೂ ಅಲ್ಪ ಸ್ವಲ್ಪ ಎಚ್ಚರ ಉಳಿದಿರಬಹುದು!
ನಮ್ಮಲ್ಲಿ ಇಂಗ್ಲೀಷೇತರ ಪತ್ರಿಕೆಗಳು ಪರವಾಗಿಲ್ಲ ಅಲ್ಲವೆ? ಅವುಗಳು ಸ್ವಲ್ಪವಾದರೂ ಸ್ಥಳೀಯ ಸುದ್ದಿಗಳಿಗೆ ಕಿವಿಗೊಡಬೇಕಾದ ಅಗತ್ಯವಿರಬಹುದು ಅಂದುಕೊಳ್ಳುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 11:17am — mahesha

ಉ: ಅಮ್ಮಂದಿರ ಸುದ್ದಿ

mahesha's picture

ಅನಿವಾಸಿ,

ಒನ್ ಡೌಟ್...

third world countries( ಮೂರನೇ ಲೋಕ?) ಅಂತ ಯಾಕೆ ಕರೇತಾರೆ?

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 12:56pm — anivaasi

ಉ: ಅಮ್ಮಂದಿರ ಸುದ್ದಿ

anivaasi's picture

ಇಲ್ಲಿ ಅದರ ಬಗ್ಗೆಗಿನ ಹಲವು ವಿವರಣೆಗಳ ಪೈಕಿ ಒಂದಿದೆ.
http://www.reference.com/browse/crystal/31659

ಇನ್ನು, ಅದು ಸರಿಯಾಗಿ ಬಳಕೆಯಾಗದ ಕಡೆ ಮುಜುಗರವೂ ನನಗಿದೆ. ಒಂದು ದೇಶದ ಸ್ಥಿತಿಯನ್ನು ಹೀಯಾಳಿಸುವುದು ಅಂಥ ಒಂದು ಬಳಕೆ. ಆದರೆ, third world ಅನ್ನುವುದು non-aligned movementನ ಪರಿಕಲ್ಪನೆಯಿಂದಲೂ ಬಳಕೆಯಾಗುವುದರಿಂದ ಒಂದು ರೀತಿಯಲ್ಲಿ ಅದಕ್ಕೆ ಅರ್ಥವೂ ಬರುತ್ತದೆ. ಪಾಶ್ಚಿಮಾತ್ಯ ಬಂಡವಾಳಶಾಹೀ ದೇಶಗಳು, ಪೂರ್ವದ ಕಮ್ಯೂನಿಸ್ಟ್ ದೇಶಗಳು ಎರಡರ ಜತೆಗೂ ಹೊಂದಾಣಿಕೆ ಇಲ್ಲದ ಗುಂಪು ಅನ್ನುವ ಹಿನ್ನೆಲೆಯಲ್ಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 18, 2007 - 1:50pm — mahesha

ಉ: ಅಮ್ಮಂದಿರ ಸುದ್ದಿ

mahesha's picture

ನನ್ನಿ ಅನಿವಾಸಿ.

ಅಮೆರಿಕದೋರು "third world"ಅಂತ ಕೀಳರ್ತದಲ್ಲಿ ಹಲವು ಸರತಿ ಬಳಸ್ತಾರೆ. ನಮ್ಮ ಇಂಡಿಯಾ ಕೂಡ "ತರ್ಡ್ ವಲ್‌ಡ್‌ ಕಂಟ್ರಿ" ಅಲ್ವಾ!

ನಾನು ಈ "ತರ್ಡ್‌ ಕ್ಲಾಸ್" ಅನ್ನೋದರ ತೆರ "ತರ್ಡ್ ವಲ್ಡ್‌ ಕಂಟ್ರಿ" ಅಂತ ತಪ್ಪುತಿಳಿದುಕೊಂಡಿದ್ದೆ.!
- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 24, 2007 - 10:19am — muralihr

ಉ: ಅಮ್ಮಂದಿರ ಸುದ್ದಿ

muralihr's picture

ಏನೇ ಆಗಲಿ !! ಈ World ಗಳು ..ಬರೀ ಕಚ್ಚಾಟ ಅಷ್ಟೇ.. ನಮ್ಮ ನಿಮ್ಮ ಕನ್ನಡ word ಗಳ World -- fourth world ..ಇಲ್ಲೇ ಮಜ ಇರೋದು ..ಇನ್ನು ಈ fourth world ಮತ್ತೆ fifth world (ನಿದ್ದೆ ಯ World ) ದಾಟಿದರೆ .. No world...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೊಳವೆ ಬಾವಿಯಲ್ಲಿ ಸತ್ತ ಹುಡುಗ
  • ಲಿನಕ್ಸಾಯಣ - ೯ - ಸ್ಮೈಲ್ ಪ್ಲೀಸ್
  • 123456
  • ಓಹ್! ಇವಳೆನಿತು ಚೆಲುವೆ!
  • ಸಂಪದ, ಈಗ ಮತ್ತಷ್ಟು ಹತ್ತಿರ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ -ಮೆಕ್ಕೆಜೋಳ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 117 ಅತಿಥಿಗಳು ಆನ್ಲೈನ್ ಇರುವರು.


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator