ರಶೀಧರ 'ಬ್ಲಾಗಂಬರಿ'

ಮೈಸೂರು ಆಕಾಶವಾಣಿಯ ರಶೀಧರ ಪರಿಚಯ ನಿಮಗೆ ಮೈಸೂರು ಪೋಸ್ಟಿನಿಂದ, ಹಾಗೂ ಸಂಪದದಲ್ಲಿ ಅವರು ಬರೆದ ಕೆಲವು ಕವನಗಳಿಂದ ಆಗಿರಬಹುದು. ಈಗವರು ಹೊಸತೊಂದು ಪ್ರಯೋಗಕ್ಕೆ 'ಕೈ' ಹಾಕಿದ್ದಾರೆ. ಅದುವೇ 'ಬ್ಲಾಗಂಬರಿ'. ಅವರೇ ಹೇಳುವಂತೆ:
`ಬ್ಲಾಗಂಬರಿ 'ಎಂಬುದು ಕಾದಂಬರಿ ಮತ್ತು ಬ್ಲಾಗ್ ಎಂಬ ಎರಡು ನಾಮ ಪದಗಳ ವರ್ಣಸಂಕರದಿಂದ ಉಂಟಾದ ಕನ್ನಡ ಸಾಹಿತ್ಯದ ಒಂದು ವಿನೂತನ ತಳಿ.ಕನ್ನಡ ಸಾಹಿತ್ಯದ ಹೊಸ ಹೇಸರಗತ್ತೆ!
ಈ ಹೇಸರಗತ್ತೆಯ ಹುಟ್ಟುವಿಕೆಯ ಜೆನೆಟಿಕ್ ಇಂಜಿನೀಯರಿಂಗಿಗೆ ಬೇಕಾದ ತಂತ್ರಜ್ಞಾನದ ಜೋಡಿಕೆ ಸಂಪದದಲ್ಲೇ ನಡೆದಿದ್ದು. ನಿರ್ವಹಣೆಯ ಭಾರ ಇಸ್ಮಾಯಿಲರದ್ದು. ರಶೀಧರ ಬರಹ ಅದರ ಆತ್ಮ.
ನೋಡಿ, ಕಾಮೆಂಟು ಮೂಲಕ ಪ್ರೋತ್ಸಾಹಿಸಿ - ಹೇಗನ್ನಿಸಿತೆಂದು ಇಲ್ಲೂ ಬರೆದು ತಿಳಿಸಿ.

- Login or register to post comments
- 1105 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: