ಆಟೋ ನುಡಿ ೧೨
ಎಸ್.ಎಲ್.ಭೈರಪ್ಪನವರ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಯಲ್ಲಿ ಬರುವ, ಮರಿ ಕಾಳಿಂಗಗೌಡನು ಕಂಡುಕೊಂಡ "ತಂತ್ರಜ್ಞಾನವೂ ಬೇಕು, ಸಂಸ್ಕೃತಿಯೂ ಜೊತೆಗಿರಬೇಕು" ಎನ್ನುವ ಸತ್ಯದಂತಿದೆ, ಈ ದಿನದ ಆಟೋ ನುಡಿ.
ಇಂದಿನ ಆಟೋ ನುಡಿ - ಐ.ಟಿ. ಬಿ.ಟಿ. ಬರಲಿ ಕನ್ನಡವೂ ಜೊತೆಗಿರಲಿ.

- Login or register to post comments
- 659 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಇನ್ನೊಂದು ಆಟೋ ನುಡಿ
ನಿನ್ನೆ ಗಮನ ಸೆಳೆದ ಇನ್ನೊಂದು ಆಟೋ ನುಡಿ
ಎಲ್ಲಾರೂ ನನ್ನೋರು
ನನ್ನೋರಿಗಾಗಿ ನಾನು
Re: ಇನ್ನೊಂದು ಆಟೋ ನುಡಿ
ಹೀಗೇ ಬ್ರೌಸ್ ಮಾಡ್ತಾ ಇದ್ದಾಗ ನಿಮ್ಮ "ಆಟೋ ನುಡಿ" ಓದಿದೆ. ನಮ್ಮ ಚಿಕ್ಕಪ್ಪನವರ ಇತ್ತೀಚಿನ ಆಟೋ ಅನುಭವ ಜ್ಞಾಪಕಕ್ಕೆ ಬಂತು. ಅದನ್ನ ಇಲ್ಲಿ ಹಂಚಿಕೊಂಡಿದ್ದೇನೆ.
ಕಳೆದ ತಿಂಗಳು ನಮ್ಮ ಚಿಕ್ಕಪ್ಪನವರ ಮಗಳ ಮದುವೆ ಪ್ರಯುಕ್ತ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಡಲಿಕ್ಕಾಗಿ ಟಾಕ್ಸಿ ಮಾಡಿಕೊಂಡು ಹೋಗುತ್ತಿದ್ದಾಗ, ಒಬ್ಬ ಆಟೋದವನು ಎಡಗಡೆಯಿಂದ ಮುನ್ನುಗ್ಗಿದನು. ನಾವೂ ಸಹ ಎಡಗಡೆಗೇ ತಿರುಗಬೇಕಾದುದರಿಂದ ನಮ್ಮ ಟಾಕ್ಸಿಯವನೂ ಸ್ವಲ್ಪ ಎಡಕ್ಕೆ ಬಂದಾಗ ಆಟೋ ಕಾರಿನ ಮುಂದಿನ ಬಂಪರ್ ಗೆ ಸಿಕ್ಕಿಕೊಂಡಿತು. ನಮ್ಮ ಟಾಕ್ಸಿ ಡ್ರೈವರ್ ಮೊದಲೇ ಮುಂಗೋಪಿ, ಬಯ್ಯುತ್ತಲೇ ಕೆಳಗಿಳಿದ. ನಾನೂ ಸಹ ಕೆಳಗಿಯುವಷ್ಟರಲ್ಲಿ ಆ ಆಟೋ ಚಾಲಕ,ಚಿಕ್ಕ ವಯಸ್ಸಿನವನು, ಬಹುಶಃ 18 ಇರಬಹುದು, ಆಟೋದಿಂದ ಕೆಳಗಿಳಿದ. ಅವನಿಗೆ ತನ್ನ ತಪ್ಪು ಅರಿವಾಗಿತ್ತು. ತಕ್ಷಣವೇ "ಏಣ್ಣಣ್ಣಾ? ಏನೋ ತಮ್ಮ ತಿಳೀದೇ ತಪ್ಪ್ ಮಾಡಿದ್ರೆ ಹೀಗೆ ಬಯ್ತೀಯಲ್ಲಣ್ಣಾ" ಅಂದು ಬಿಡೋದೇ!!
ನಮ್ಮ ಡ್ರೈವರಿಗೆ ಅರೆ ಘಳಿಗೆ ಏನು ಹೇಳುವುದಕ್ಕೂ ತೋಚಲಿಲ್ಲ. ಈ ಆಟೋದವನು ತಪ್ಪು ಮಾಡಿದ್ದಲ್ಲದೇ ಅಣ್ಣ, ತಮ್ಮ, ತಿಳೀದೇ ತಪ್ಪಾಯ್ತು ಅಂತ ಹೇಳಿದ್ದಕ್ಕೆ, ನಮ್ಮ ಹಿಂದೆ, ಮುಂದೆ ಸೇರಿದ್ದವರೆಲ್ಲಾ "ಹೋಗ್ಲಿ ಬಿಡಪ್ಪ, ಏನೋ ತಿಳೀದೆ ನುಗ್ಬಿಟ್ಟ" ಅನ್ನೋದೇ!!
ನಮ್ಮ ಡ್ರೈವರ್ ಸ್ವಲ್ಪ ಸಾವರಿಸಿಕೊಂಡು, ಸಮಾಧಾನವಾಗಿ "ಅಲ್ಲಪ್ಪಾ, ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದ್ರೆ ನಿನ್ನ ಪ್ರಾಣ ಹೋಗ್ತಿತ್ತಲ್ಲೋ. ಹುಷಾರಾಗಿ ಗಾಡಿ ಓಡ್ಸು" ಎಂದವನೇ ವಾಪಸ್ಸಾದ.ಆ ಆಟೋ ಚಾಲಕನು ತನ್ನದೇ ತಪ್ಪಿದ್ದರೂ,ಸಮಯಸ್ಪೂರ್ತಿ ನಡವಳಿಕೆಯಿಂದ ವಾತಾವರಣವನ್ನು ತಿಳಿಗೊಳಿಸಿ, ಎಲ್ಲರ ಮನಗೆದ್ದು ಹೊರಟಿದ್ದ.