ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಅಗಲಿಕೆಯ ಹಾದಿಯಲ್ಲಿ...!!

December 11, 2006 - 3:30pm — yuvapremi

ಮರೆತು ಮರೆಯಾಗಲು ಮೋಡದ ಹನಿಯಲ್ಲ..
ಕ್ಷಣವತ್ತು ಕಣ್ಣೊರಸಲು ಬೀಸಿದ ಬಿರುಗಾಳಿಯಲ್ಲ.
ಬೇಸಿಗೆಯ ಭಾನಿನೊಳು ಬಣ್ಣ ಬಣ್ಣದ ಕನಸುಗಳಿವು..
ಎಂದೋ ನುಡಿದ ಮಾತುಗಳು ಇಂದೆನ್ನ ಕಾಡುತಿಹವು...!!

ನನ್ನ ಮರೆತು ನೀನಿರಬಹುದು..
ನಿನ್ನ ಮರೆತು ನಾ ಬಾಳೆನು....!!

ನಾವು ನಡೆದ ನಡಿಗೆಯು ಎಮ್ಮ ನೋಡಿ ನಡುಗುತಿಹುದು..
ನಾವು ಸುತ್ತಿದ ಮರ ಗಿಡಗಳು ಸೊಸಿಹುದು ಕಂಭನಿಯ..!!
ನಾವು ಸವಿದ ಮಲ್ಲಿಗೆಯ ಕಂಪು ಬೆದರಿ ಬಾಡಿಹುದಿಂದು..
ನುಡಿದಸ್ಟು ಸುಲಭವಲ್ಲ ನಿನ್ನ ಮರೆತು ಮರೆಯಾಗಲು..!!

ನನ್ನನಗಲಿ ನೀ ಜೀವಿಸಬಹುದು...
ನಿನ್ನ ಮರೆತು ನಾ ಉಸಿರಾಡೆನು....!!

ನಮ್ಮ ಪ್ರೇಮ ಗಾನವದುವೆ ಕೋಗಿಲೆಗೂ ಮೀರಿಸಿತ್ತು..!!
ಮನದ ಒಲುಮೆಯ ಕುಣಿತವದುವೆ ನವಿಲನು ನಾಚಿಸಿತ್ತು..
ನಮ್ಮ ಪಿಸುಮಾತುಗಳವು ತಂದಿತ್ತು ಗುಡುಗಿಗು ಗಾಬರಿಯ..!!
ಇಂದೇಕೆ ಮರೆಯಲಿ ನಿನ್ನ, ಎನ್ನ ಕಣ್ತೆರೆಸಿದ ಪ್ರೀತಿಯನ್ನ..!!

ಅಂದು ಇಂದು ಎಂದೂ ಇರುವೆ ನೀನು..
ಎನ್ನೀ ಹೃದಯದ ಅರಮನೆಯಲಿ..!!

ಕನಸಿನಲ್ಲೊ ಸೊಗಸಕಾಣೊ ಅಪ್ರತಮ ಪ್ರೀತಿ ನೀನು..!!
ನಿನ್ನ ನೊಂದ ಮನವನಿನ್ನು ನಾನೆಂದೂ ನೋಯಿಸೆನು..
ಮನದ ಬಡಿತ ಮರೆಯಾದೀತು, ನಿನ್ನ ಮರೆತ ಮರುಕ್ಷಣವೆ..!!
ಹಾರಿ ತುಂಬ ಬಯಸುವೆ ನಿನ್ನ, ಸೇರಿ ಮಾಡಲು ಬಾಳುವೆ..!!

ಮರೆಯದಿರೆನ್ನ ನಿನ್ನ ಕನಸಿನಲ್ಲೂ...
ನಿನ್ನನಗಲಿ ನಾ ನಲಿಯಲಾರೆ...!!

-ಯುವಪ್ರೇಮಿ

  • ಕಾವ್ಯ ಮತ್ತು ಕವನ
~.~
  • Login or register to post comments
  • 518 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 11, 2006 - 11:09pm — Sunil Jayaprakash

Re: ಅಗಲಿಕೆಯ ಹಾದಿಯಲ್ಲಿ...!!

Sunil Jayaprakash's picture

ಏನ್ರೀ, ಯುವಪ್ರೇಮಿಗಳೇ, ಈದಿನವೇಕೆ ಹತಾಶರಾಗಿದ್ದೀರೆ. ಏನಾದರೂ ಜಗಳವಾಯಿತೋ ಹೇಗೆ.
ಅಂದ ಹಾಗೆ, ನನಗೆ ಒಂದು ಸಾಲು ಅರ್ಥವಾಗಲಿಲ್ಲ.

YuvaPremi wrote:
ನಮ್ಮ ಪ್ರೇಮ ಗಾನವದುವೆ ಕೋಗಿಲೆಗೂ ಮೀರಿಸಿತ್ತು..!!
ಮನದ ಒಲುಮೆಯ ಕುಣಿತವದುವೆ ನವಿಲನು ನಾಚಿಸಿತ್ತು..
ನಮ್ಮ ಪಿಸುಮಾತುಗಳವು ತಂದಿತ್ತು ಗುಡುಗಿಗು ಗಾಬರಿಯ..!!

ಇಲ್ಲಿ, ಪಿಸುಮಾತಿಗೆ ಗುಡುಗನ್ನು ಪ್ರತಿಸ್ಪರ್ಧಿ ಎಂದು ಏಕೆ ಗುರುತಿಸಬೇಕಿತ್ತು. ಪಿಸುಮಾತಿಗಿಂತಲೂ ಕ್ಷೀಣವಾಗಿರುವ ಧ್ವನಿಯನ್ನು ತಾನೇ ಬಳಸಬೇಕಾಗಿದ್ದುದು. ಅಥವಾ ನೀವು ಯಾವ ಅರ್ಥದಲ್ಲಿ ಇದನ್ನು ಹಾಕಿರುವಿರಿ ತಿಳಿಸುತ್ತೀರಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 12, 2006 - 8:39am — yuvapremi

Re: ಅಗಲಿಕೆಯ ಹಾದಿಯಲ್ಲಿ...!!

yuvapremi's picture

ಆತ್ಮೀಯ ಸ್ನೇಹಿತರಿಗೆ ನನ್ನ ಅಂತರಾತ್ಮದ ವಂದನೆಗಳು...

ಪ್ರೀತಿಯಲ್ಲಿ ಜಗಳ,ಕದನ,ನಗು,ನೋವು ಏಲ್ಲವು ಇದ್ದಿದ್ದೆ ಅಲ್ಲವೆ ಸಾರ್ ..

ನಮ್ಮ ಕದನ ಪ್ರೀತಿಗಾಗಿ...!!
ಪ್ರೀತಿಗಿಂತ ಪ್ರೀತಿ ಹೆಚ್ಹೊ ಅನ್ನುವ ತೀರ್ಪಿಗಾಗಿ..!!

ನಿಮಗೆ ಅರ್ಥವಾಗದ ಸಾಲಿನ ಸಂಕ್ಷಿಪ್ತ ಸಾರವಿಲ್ಲಿದೆ :

"ನಮ್ಮ ಪಿಸುಮಾತುಗಳವು ತಂದಿತ್ತು ಗುಡುಗಿಗು ಗಾಬರಿಯ..!!"

ಸಾದಾರಣವಾಗಿ ಗುಡುಗು "ಆತ್ಮ ವಿಶ್ವಾಸದ " ಪ್ರತೀಕ..
ಗುಡುಗು ಎಸ್ಟೇ ಗಡುಸಾದರು ಅಸ್ಟೇ ಪ್ರತಿಕ್ರಿಯೆ ವಾತಾವರಣದಮೇಲಾಗುತದೆ..

ಈ ಕವನದಲ್ಲಿ "ಪ್ರೇಮಿಗಳ ಪಿಸುಮಾತು " ಯಾರಿಗು ಕೇಳಬಾರದಿದ್ದರು ಆ ಮಾತುಗಳು ವಿಶ್ವಾಸದಾಯಕವಾಗಿರಬೇಕು...

ಆಡಿದಸ್ಟು ಪಿಸುಮಾತುಗಳವು ತಮ್ಮ ಪ್ರೇಮವನ್ನ ಅಗಲಿಸಲು ಕಠಿಣವಾಗಿಸುವಂತದ್ದಾಗಿಸಬೇಕು...

ಈ ಕವನದ ಪ್ರೇಮಿಗಳು ಪ್ರೇಮಿಸುತಿರುವಾಗ ಆಡಿದ ಪಿಸುಮಾತುಗಳು ಎಸ್ಟು ಶಕ್ತಿಯುತವಾಗಿದ್ದವು ಎಂದು ನೆನೆಸುವ ಒಂದು ಪ್ರಯತ್ನವನ್ನ ನನ್ನ ಕವನದಲ್ಲಿ ಮಾಡಿದ್ದೇನೆ..

ಅರ್ಥವಾಗದ ಯಾವುದೇ ವಾಕ್ಯವಿದ್ದರು ನನಗೆ ತಿಳಿಸಿ, ಕಂಡಿತವಾಗಿ ನಾನು ಅರ್ಥೈಸುವಂತಹ ಪ್ರಯತ್ನವನ್ನ ಮಾಡುತ್ತೇನೆ..

ಇಂತಿ
ನಿಮ್ಮವ
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀನು ನಿನ್ನ.....
  • ಪ್ರೀತಿಯ ಕರೆ
  • ಪ್ರೇಮ ಭಾವ
  • ಆ ಒಂದು ಚಲುವೆಯ ನಗು(ಬಣ್ಣದ ಚಿಟ್ಟೆ)
  • ಸದಾ ನಿನ್ನ ಜೊತೆ
Syndicate content

ಲೇಖಕರು

yuvapremi's picture

ಪೂರ್ಣ ಹೆಸರು
ಯುವಪ್ರೇಮಿ

ಪರಿಚಯ

ನನಗೆ ಕನ್ನಡ ಅಂದ್ರೆ ಅಚ್ಚು ಮೆಚ್ಚು.ಆದ್ರೆ ನಮ್ಮ ಮಕ್ಕಳೆಲ್ಲ ಇಂಗ್ಲಿಷ್ ನಲ್ಲಿ ವಿದ್ಯಾಭ್ಯಾಸ ಮಾಡ್ತಾಯಿರೋದ್ರಿಂದ ಅವರು ಮುಂದೆ ನನ್ನ ಲೇಖನಗಳನ್ನು ನೋಡಿ ಕನ್ನಡ ಓದೋದಕ್ಕೆ ಬರದೆ ಕಣ್ಣು ಕಣ್ಣು ಬಿಡುವುದನ್ನು ನಾನು ನೋಡೋದಕ್ಕೆ ಆಗುವುದಿಲ್ಲ. ಆದ ಕಾರಣ ಇನ್ನುಮುಂದೆ ನಾನು ಕನ್ನಡಕಿಂತ ಹೆಚ್ಚು ಇಂಗ್ಲಿಷನಲ್ಲಿ ಲೇಖನಗಳನ್ನು ಬರೆಯೋದಕ್ಕೆ ಇಷ್ಟ ಪಡ್ತೇನೆ. ಅದೂ ಅಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ಸಿಗುವ ಎಲ್ಲ ಯೋಗ್ಯತೆ ಇದ್ದರು ಅದನ್ನು ಪಡೆದು ಕುತ್ತಿಗೆಗೆ ಹಾಕೊಳ್ಳೊದಕ್ಕೆ ನಮ್ಮ ಕನ್ನಡ ಬಹಳ ಕಷ್ಟ ಪಡ್ತಾಯಿದೆ.ಸುಮ್ನೆ ಕನ್ನಡ ಕನ್ನಡ ಅಂತ ಕರುಳು ನೋವು ಬರುವವರೆಗು ಕುಣಿಯೋದು ಬಹಳಾನೇ ವ್ಯರ್ಥ...!!

Thanking you all very much...!! Eye-wink

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
  • "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
  • ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
  • ಕತೆ: ಬೇರುಗಳಂತಹ ಬಳ್ಳಿಗಳು
  • ಗೋವಿಂದ ಸ್ವಾಮಿ ಎನ್ನುವ ಸಂತ -ಭಾಗ ೨
  • ನಾಡ ಕೋವಿ
  • ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ತರುಣ, ತಱುಣ
    November 20, 2008 - 10:28pm
  • shobha.koppad
    ಉ: ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
    November 20, 2008 - 10:19pm
  • muralihr
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 10:15pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 9:08pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 9:04pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 9:03pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 9:03pm
  • harshab
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 9:03pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 8:59pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 8:58pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator