ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಿಟ್ಟುಪುಟ್ಟು
ಕಿಟ್ಟು ಪುಟ್ಟು ಹುಟ್ಟಿನಿಂದ ಗೆಳೆಯರು
ಕ್ರಶ್ಶಿನ ಆಟ ಪಾಠ ತಾಟುಗಳಲೂ ಸೇರುವರು
ಆ ಕಡೆ ಅಪ್ಪ ಅಮ್ಮಗಳು ಕೆಲಸಕೆ ಹೋಗಲು
ಈ ಕಡೆ ಇವರಿಬ್ಬರೂ ಶಿಸ್ತಿನಲೇ ಬರುವರು
ಅವರಿಬ್ಬರಿಗರನೂ ಕಾಯಲಿಹಳು ಒಬ್ಬಳು ಆಯಾ
ಅವಳು ಸ್ವಲ್ಪ ಕಣ್ತಪ್ಪಿದರೂ ಇವರು ಮಾಯ
ಸಂಜೆಯಾಗಲು ಇಬ್ಬರೂ ಆಟಕೆ ಜೊತೆ ಜೊತೆಗೆ
ದಿನ ನಿತ್ಯವೂ ಆಟದಲಿ ಜಗಳವೂ ಸರ್ವೇ ಸಾಮಾನ್ಯ
ಒಮ್ಮೆ ಕಿಟ್ಟು ಹೊಡೆಯುವ ಬ್ಯಾಟಿನಲಿ ಪುಟ್ಟೂಗೆ
ಇನ್ನೊಮ್ಮೆ ಪುಟ್ಟು ಹೊಡೆಯುವ ಬಾಲಿನಲಿ ಕಿಟ್ಟೂಗೆ
ಅವ ಹೊಡೆದನೆಂದು ಅಳುತ ಇವನ ಕಂಪ್ಲೇಂಟು
ಇವನೂ ಅಳುವ ತನಗೆ ಬೀಳುವುದೆಂದು ಎರಡೇಟು
ಇಬ್ಬರೂ ತನ್ನಮ್ಮನಿಗೆ ಮುದ್ದು ಮುದ್ದು ಮಕ್ಕಳೇ
ಅಳುವ ಕಂದನ ನೋಡಿ ನಲುಗುವುದು ಇವರ ಕರುಳು
ಒಮ್ಮೆಲ್ಲೆ ಹೌಹಾರುವರು ಇನ್ನೊಬ್ಬರ ಮೇಲೆ
ಒಬ್ಬರ ಕೈಗೆ ಸಿಗುವುದು ಇನ್ನೊಬ್ಬರ ತಲೆಗೂದಲು
ಅಮ್ಮಂದಿರ ಜಗಳ ಇತರರೆಗಿಲ್ಲ ಮೋಜು
ಜಗಳದಲಿ ಒಡೆಯುವುದು ಟೀಪಾಯಿಯ ಗಾಜು
ಗಾಜು ಒಡೆದು ಚೂರಾಗಲು ಕೂಗಾಡುವರು ಅಪ್ಪಗಳು
ಹೆದರಿ ಚೀರಿ ಅಳುವರು ಕಿಟ್ಟು ಪುಟ್ಟುಗಳು
ಮತ್ತೆ ಬೆಳಗಾಗಲು ಜೊತೆ ಜೊತೆಗೆ ಕಿಟ್ಟು ಪುಟ್ಟು
ಅವರಮ್ಮನಿಗೆ ಇವರಮ್ಮನ ಮೇಲೆ ಬಲು ಸಿಟ್ಟು
ಸಂಜೆವರೆಗೂ ಇಬ್ಬರದೂ ಒಂದೇ ಆಟ ಪಾಠ ತಾಟು
ಇಬ್ಬರೂ ಸೇರಿಹರು ಜೊತೆ ಜೊತೆಯಲಿ ಆಟದಲಿ
ಇವರನೇ ನೋಡುತ ಕೂತಿಹರು ಅಪ್ಪ ಅಮ್ಮಗಳು ದೂರದಲಿ

- Login or register to post comments
- 585 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: