ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಡಿಜಿಟಲ್ ಕ್ಯಾಮೆರಾ ಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ

September 16, 2006 - 11:05am — Aravinda

ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ ಮಟ್ಟಿಗಾದರೂ ಸಮಾಧಾನ ಹೆಳುತ್ತದೆಂದು ಹೇಳಬಲ್ಲೆ. ನಾನು ಕ್ಯಾಮೆರ ಕೊಳ್ಳುವಾಗ ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಕೆಲವು ಕನ್ನಡ ಪದಗಳು ತಪ್ಪಿರಬಹುದು, ನೀವು ತಪ್ಪಾಗಿ ಭಾವಿಸುವುದಿಲ್ಲ ಎಂದುಕೊಂಡಿದ್ದೇನೆ. Smiling

ಮೊದಲಿಗೆ ಕ್ಯಾಮೆರ ಹಾಗೂ ಫೋಟೋಗಳಲ್ಲಿ ಬಳಸುವ ಕೆಲವು ಟರ್ಮಿನಾಲಜಿಸ್ ತಿಳಿದುಕೊಳ್ಳೋಣ. ಪಿಕ್ಸೆಲ್ ಎಂಬುದು ಫೋಟೋದ ಅತಿ ಸಣ್ಣ ಭಾಗ,ಇದು ಚಿತ್ರದ ಬಣ್ಣದ ವಿವರಣೆಯನ್ನು ಹೊಂದಿರುತ್ತದೆ.

ರೆಸೊಲ್ಯೂಶನ್ ಎಂದರೆ ಒಂದು ಇಂಚಿನ ಚೌಕದಲ್ಲಿ ಇರಬಹುದಾದ ಪಿಕ್ಸೆಲ್ ಗಳು. ಪಿಕ್ಸೆಲ್ ಸೈಜ್ ಎಂದರೆ ಒಂದು ಫೊಟೊದಲ್ಲಿ ಇರುವ ಒಟ್ಟು ಪಿಕ್ಸೆಲ್ ಗಳು, ಈಗಿನ ಮಾರುಕಟ್ಟೆಯಲ್ಲಿ 1 ಮೆಗಾ ಪಿಕ್ಸೆಲ್ ನಿಂದ 16 ಮೆಗ ಪಿಕ್ಸೆಲ್ ವರೆಗಿನ ಕ್ಯಾಮೆರಾಗಳು ಲಭ್ಯವಿದೆ. ಉದಾಹರಣೆಗೆ 3.1 ಮೆಗಾ ಪಿಕ್ಸೆಲ್ ಎಂದರೆ 3145728 ಪಿಕ್ಸೆಲ್ ಗಳು(2288 X 1728 ಪಿಕ್ಸೆಲ್ಸ್) ಇರುತ್ತವೆ.ಆ ಕ್ಯಾಮೆರಾದಿಂದ ತೆಗೆದ ಫೋಟೋದಲ್ಲಿ 3145728 ಪಿಕ್ಸೆಲ್ ಗಳು ಇರುತ್ತವೆ, ಇನ್ನೂ ವಿವರವಾಗಿ ಹೇಳಬೇಕೆಂದರೆ ಒಂದು ಫೋಟೋದ ವಿವರಣೆಗಳನ್ನೊಳಗೊಂಡ 3145728 ಅತಿ ಸಣ್ಣ ಭಾಗಗಳಿರುತ್ತವೆ.

ಈಗ ಪಿಕ್ಸೆಲ್ ಸೈಜ್ ಹಾಗೂ ಫೋಟೋ ಪ್ರಿಂಟ್ ಸೈಜ್ ಗೂ ಏನು ಸಂಬಂದ ಇದೆ ಎಂದು ತಿಳಿದು ಕೊಳ್ಳೋಣ. ಈಗ ಉದಹರಣೆಗೆ 3.2 ಮೆಗ ಪಿಕ್ಸೆಲ್ ಕ್ಯಾಮೆರಾದಲ್ಲಿ ತೆಗೆದ ಫೋಟೋವನ್ನು 13.5 X 10" ಸೈಜ್ ನಲ್ಲಿ ಪ್ರಿಂಟ್ ತೆಗೆದರೂ ಗುಣಮಟ್ಟದಲ್ಲಿ ವತ್ಯಾಸ ಬರುವುದಿಲ್ಲ. ಹೀಗೆ ಇನ್ನು ಕೆಲವು ಉದಾಹರಣೆಗಳನ್ನು ನೋಡೋಣ.

ಪಿಕ್ಸೆಲ್ಸ್ ಪ್ರಿಂಟ್ ಸೈಜ್
0.3Mega Pixels(640 X 480) 4" X 3"
1.2Mega Pixels(1280 X 960) 7" X 5"
2Mega Pixels(1600 X 1200) 10" X 8"
3.2Mega Pixels(2048 X 1536) 13.5" X 10"
4Mega Pixels(2288 X 1712) 15" X 11"
5Mega Pixels(2500 X 2000) 17" X 13"

ಈಗ ಪ್ರಿಂಟ್ ಸೈಜ್ ನ ಒಂದು ಅಂದಾಜು ಸಿಕ್ಕಂತಾಯಿತು. ಈಗ ನಿಮ್ಮ ಉಪಯೋಗಕ್ಕೆ ತಕ್ಕಂತೆ ಪಿಕ್ಸೆಲ್ ಸೈಜ್ ಅನ್ನು ಆರಿಸಿಕೊಳ್ಳಿ. ಈಗ ನೀವು 4" X 6" ಫೋಟೋ ಪ್ರಿಂಟ್ ತೆಗೆಯಬೇಕು ಎಂದುಕೊಳ್ಳಿ, 3 ಮೆಗಾ ಪಿಕ್ಸೆಲ್ ನ ಕ್ಯಾಮೆರಾದಲ್ಲಿ ತೆಗೆದ ಫೋಟೋಗೂ 1 ಮೆಗಾ ಪಿಕ್ಸೆಲ್ ನ ಕ್ಯಾಮೆರಾದಲ್ಲಿ ತೆಗೆದ ಫೋಟೋ ಪ್ರಿಂಟ್ ಗೂ ಬಹಳ ವತ್ಯಾಸವಿರುತ್ತದೆ, ಏಕೆಂದರೆ ಪಿಕ್ಸೆಲ್ ಗಳ ಸಂಖ್ಯೆಯಲ್ಲಿ ಇರೋ ವ್ಯತ್ಯಾಸ. ಜಾಸ್ತಿ ಪಿಕ್ಸೆಲ್ ಗಳಿದ್ದಷ್ಟೂ ಬಣ್ಣದ ಬಗ್ಗೆ ಮಾಹಿತಿ ಹಿಡಿದಿಡಲು ಹೆಚ್ಚು ಜಾಗ ಸಿಕ್ಕಂತಾಗುತ್ತೆ, ಆದ್ದರಿಂದಲೇ ಫೋಟೋದ ಗುಣಮಟ್ಟದಲ್ಲಿ ವ್ಯತ್ಯಾಸ ಬರುತ್ತದೆ.

ಈಗ ಆಪ್ಟಿಕಲ್ ಹಾಗೂ ಡಿಜಿಟಲ್ ಜೂಮ್ ಬಗ್ಗೆ ತಿಳಿದು ಕೊಳ್ಳೋಣ. ಆಪ್ಟಿಕಲ್ ಜೂಮ್ ಎಂದರೆ ದೂರದ ಚಿತ್ರಗಳನ್ನು ತೆಗೆಯಲು ಕ್ಯಾಮೆರಾದಲ್ಲಿರುವ ಎರಡು ಲೆನ್ಸ್ ಗಳ ನಡುವಿನ ಅಂತರವನ್ನು ಬದಲಿಸಿ ಫೋಟೋಗಳ ಗುಣಮಟ್ಟ ಕಾಯ್ದುಕೊಳ್ಳುವ ಒಂದು ವಿಧಾನ. ಆದರೆ ಡಿಜಿಟಲ್ ಜೂಮ್ ನಲ್ಲಿ ಲೆನ್ಸ್ ಗಳ ಅಂತರ ಬದಲಾಗುವುದಿಲ್ಲ, ಬದಲಿಗೆ ವಿದ್ಯುನ್ಮಾನ ತಂತ್ರಜ್ನಾನ ಬಳಸಿ ಹತ್ತಿರದಲ್ಲಿ ನೋಡಿದಾಗ ಕಾಣುವಂತೆ ಮಾಡುತ್ತದೆ. ಡಿಜಿಟಲ್ ಜೂಮ್ ಫೋಟೋದ ಗುಣಮಟ್ಟವನ್ನು ತಗ್ಗಿಸುತ್ತದೆ, ಆದ್ದರಿಂದ ಡಿಜಿಟಲ್ ಜೂಮ್ ಗಿಂತ ಆಪ್ಟಿಕಲ್ ಜೂಮ್ ಗೆ ಹೆಚ್ಚಿನ ಮಹತ್ವ ಕೊಡಬೇಕು. ಡಿಜಿಟಲ್ ಜೂಮ್ ಅನ್ನು ಯಾವುದೇ ಫೋಟೋ ಎಡಿಟಿಂಗ್ ತಂತ್ರಾಂಶ ಬಳಸಿ ಮಾಡಬಹುದು.

ಕ್ಯಾಮೆರಾದಲ್ಲಿರುವ ಇಂಟರ್ನಲ್ ಮೆಮೋರಿ ಲೆಖ್ಖಕ್ಕೇ ಬರುವುದಿಲ್ಲ ಯಾಕೆಂದರೆ ಅದು ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಪ್ರತ್ಯೇಕವಾಗಿ ಮೆಮೋರಿ ಕಾರ್ಡ್ ತೆಗೆದುಕೊಳ್ಳಲೇ ಬೇಕಾಗುತ್ತದೆ. 256 ಎಮ್ ಬಿ ಅಥವಾ 512 ಎಮ್ ಬಿ ಮೆಮೋರಿ ಕಾರ್ಡ್ ಬಳಸಬಹುದು ತಮ್ಮ ಅವಶ್ಯಕತೆಗನುಗುಣವಾಗಿ.

ಸಾಮನ್ಯವಾಗಿ Compact flash, Smart media, SD(Secured Digital), MMC, Memory stic ಇವುಗಳನ್ನು ಬಳಸಲಾಗುತ್ತದೆ. ಎಸ್ ಡಿ ಕಾರ್ಡ್ ಮಲ್ಟಿಪರ್ಪೋಸ್ ಆಗಿರುವುದರಿಂದ ಬೇರೆ ಉಪಕರಣಗಳಲ್ಲೂ ಉಪಯೋಗಿಸಬಹುದು.ಇನ್ನು ಎಲ್ಲರಿಗೂ ಗೊತ್ತಿರುವಂತೆ ರಿಚಾರ್ಜ್ ಮಾಡುವಂತ ಬ್ಯಾಟೆರಿಗಳಿದ್ದರೆ ಉತ್ತಮ.

ಇನ್ನೂ ಬಹಳ ವಿಷಯಗಳನ್ನು ಇಲ್ಲಿ ಚರ್ಚಿಸಿಲ್ಲ. ಇವಿಷ್ಟು ಮುಖ್ಯವಾದವುಗಳೆಂದು ಭಾವಿಸಿದ್ದೇನೆ.

~.~
  • Login or register to post comments
  • 599 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 16, 2006 - 4:04pm — pradeep_adiga

ಧನ್ಯವಾದಗಳು

pradeep_adiga's picture

ಅರವಿಂದ ಅವರೇ, ನಿಮ್ಮ ಲೇಖನ ತುಂಬಾ ಚೆನ್ನಗಿತ್ತು. ನನಗೆ ದಿಜಿಟಲ್ ಕ್ಯಾಮರಾಗಳ ಬಗ್ಗೆ ಬಹಳಆಸಕ್ತಿ.ಈ ಲೇಖನ ಬಹಳ ಉಪಯೋಗಕಾರಿ.

ಇತೀ ನಿಮ್ಮ,

ಪ್ರದೀಪ 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 16, 2006 - 9:23pm — Sunil Jayaprakash

ಅಧಿಕ ಪಿಕ್ಸೆಲ್ = ಉತ್ತಮ ಕ್ಯಾಮೆರಾ? ಮತ್ತೊಮ್ಮೆ ಯೋಚಿಸಿ

Sunil Jayaprakash's picture

ನಾನು ಈ ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಗ, ನನ್ನ ಸ್ನೇಹಿತನನ್ನು "ತುಂಬಾ ಅಂದರೆ ತುಂಬಾ" ಪೀಡಿಸಿದ್ದೆ. ಆಗ ಅವನು, "ಅಧಿಕ ಪಿಕ್ಸೆಲ್ ಎಂದಮಾತ್ರಕ್ಕೆ ಕ್ಯಾಮೆರಾ ಚೆನ್ನಾಗಿದೆಯೆಂಬ ತೀರ್ಮಾನಕ್ಕೆ ಬರಬಾರದು, ಆಪ್ಟಿಕಲ್ ಜೂಮ್ ಅನ್ನೂ ಗಣನೆಗೆ ತೆಗೆದುಕೊಳ್ಳಬೇಕು" ಎಂದು ಹೇಳಿದ್ದ. ಇಷ್ಟಾದರೂ ನನಗೆ ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕೆಂಬ ಹಂಬಲ ಈಡರದೇ ಹಾಗೆಯೇ ಉಳಿದಿದೆ.

ನಿಮ್ಮ ಲೇಖನಕ್ಕೆ ನನ್ನ ಸವಿಯೊದಗೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2006 - 7:21pm — Aravinda

ಎಷ್ಟೇ ಆಪ್ಟಿಕಲ್ ಜೂಮ್ ಇದ್ದರೂ...

Aravinda's picture

ನೀವು ಇಲ್ಲಿ ಹೇಳುತ್ತಿರುವುದನ್ನೆ ನಾನು ನನ್ನ ಲೇಖನದಲ್ಲಿ ಹೇಳಿದ್ದು.

ಜೂಮ್ ಹಾಗೂ ಪಿಕ್ಸೆಲ್ ಎರಡೂ ಸ್ವತಂತ್ರ ಗುಣಗಳು. ಅಂದರೆ ಇವೆರಡೂ ಬಹಳ ಮುಖ್ಯ.

ಜೂಮ್ ಜಾಸ್ತಿ ಇದ್ದಷ್ಟೂ ತುಂಬಾ ದೂರದ ವಸ್ತುಗಳನ್ನ ಚೆನ್ನಾಗಿ ತೆಗೆಯ ಬಹುದು, ಪಿಕ್ಸೆಲ್ ಸೈಜ್ ಜಾಸ್ತಿ ಇದ್ದಷ್ಟೂ ಫೋಟೋ ಪ್ರಿಂಟ್ ಚೆನ್ನಾಗಿ ಬರುತ್ತದೆ. ತುಂಬಾ ಆಪ್ಟಿಕಲ್ ಜೂಮ್ ಇದ್ದು ಪಿಕ್ಸೆಲ್ ಸೈಜ್ ಕಡಿಮೆ ಇದ್ದರೆ. ಪ್ರಿಂಟ್ ಕ್ವಾಲಿಟಿ ಯಲ್ಲಿ ವ್ಯತ್ಯಾಸ ಬರುತ್ತದೆ. ಜೂಮ್ ಗೂ ಪ್ರಿಂಟ್ ಸೈಜ್ ಗೂ ಸಂಬಂಧವಿಲ್ಲ.

ಧನ್ಯವಾದಗಳೊಂದಿಗೆ

ಅರವಿಂದ

http://www.belaku.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 18, 2006 - 10:38pm — ರಘುನಂದನ

ವಿವರಗಳು ತುಂಬಾ ಸಹಕಾರಿಯಾಗಿವೆ.

ರಘುನಂದನ's picture

ಕೆಮೆರಾಗಳನ್ನು ಕುರಿತಾಗಿ ನನಗೊಂದು ರೀತಿಯಾದ ಹಂಬಲ. ನನ್ನ ಬಳಿ ದುಡ್ಡು ಕೂಡಿದಾಗಲೆಲ್ಲ ಬೇರೆ ಬೇರೆ ರೀತಿಯ ಕೆಮೆರಾಗಳನ್ನು ಖರೀದಿಸಿದ್ದೇನೆ. ಒಂದೆರಡು ವರ್ಷಗಳ ಹಿಂದೆ ಸಿಂಗಪುರದಿಂದ ಫ್ಯೂಜಿ ಡಿಜಿಟಲ್ ಕೆಮೆರಾವನ್ನೂ ತರಿಸಿದೆ. ಆದರೆ ಗೊತ್ತಲ್ಲ? ತರಿಸಿ ಒಂದೆರಡು ದಿನಗಳಲ್ಲೇ ಅದು ಔಟ್ ಡೇಟೆಡ್ ಎನಿಸಿತು. ಮೇಲಾಗಿ ಅದು ಎಸ್.ಎಲ್.ಆರ್ ಅಲ್ಲ. ಇದೊಂದು ನನ್ನ ಕೈ ಸೇರಿದರೆ ಎಷ್ಟು ಚೆನ್ನ? ಇದಕ್ಕೆ ಪೂರಕವಾಗಿ ನೀವು ತುಂಬ ಉಪಯೋಗಿಯಾದ ಸಲಹೆಗಳನ್ನು ಕೊಟ್ಟಿದ್ದೀರಿ. ಇನ್ನೊಂದಿಷ್ಟು ಇವೆ ಎಂದಿರುವಿರಲ್ಲ ಬೇಗ ಅದನ್ನೂ ತಿಳಿಸಿದರೆ ನೆಮ್ಮದಿಯಾಗಿ ಕೆಮೆರಾ ಖರೀದಿಸಬಹುದು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 20, 2006 - 3:19am — kannada1

tumba dhanyavadagalu. Namma

kannada1's picture

tumba dhanyavadagalu. Namma digi prints yaake chennagilla annodu iga gotaitu. olle mahiti illi tilisiddu dhanyavadagalu.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಾಯ
  • ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ
  • ನೀಳ್ಗತೆ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 141 ಅತಿಥಿಗಳು ಆನ್ಲೈನ್ ಇರುವರು.


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator