ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಕನ್ನಡಂಗಳ್: ಪದ್ಯ ಹೀಗಿದೆ

August 9, 2006 - 5:39pm — olnswamy

ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬.

"ದೋಸಂ ಇನಿತು ಎಂದು ಬಗೆದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಂ ವಾಸುಗಿಯುಂ ಅರಿಯಲಾರದೆ ಬೇಸರಿಸುಗುಂ ದೇಸಿ ಬೇರೆಬೇರಪ್ಪುದರಿಂ"
ಅರ್ಥ: "ದೇಸಿ ನುಡಿಗಳು ಬೇರೆ ಬೇರೆಯಾಗಿರುವುದರಿಂದ ಈ ಹಲವು ಕನ್ನಡಗಳಲ್ಲಿ ದೋಷಗಳು ಎಷ್ಟಿವೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಯುಳ್ಳ ವಾಸುಕಿಯೂ ಬೇಸರಿಸಿಯಾನು" ಇದು ಶ್ರೀ ಕೆ.ವಿ. ಸುಬ್ಬಣ್ಣ ಅವರು ತಮ್ಮ ಲೇಖನದಲ್ಲಿ (ಅರೆ ಶತಮಾನದ ಅಲೆಬರಹಗಳು, ಪುಟ ೪೫೨, ಅಕ್ಷರಪ್ರಕಾಶನ) ವಿವರಿಸಿರುವ ರೀತಿ.
ದೇಸಿಯಲ್ಲಿ ವೈವಿಧ್ಯ ಅಪಾರವಾಗಿ ಇರುವುದರಿಂದಲೇ ಒಂದು ಶಿಷ್ಟ ಭಾಷೆಯ ರೂಪವನ್ನು ನಿರ್ಮಿಸಿಕೊಳ್ಳುವ ಅಗತ್ಯ ಕಂಡುಬರುತ್ತದೆ. ಹಾಗೆ ಆಗುವುದಕ್ಕೆ ರಾಜಕೀಯ ಬೆಂಬಲವೂ ಬೇಕು. ಆದ್ದರಿಂದಲೇ ಕವಿ ಮತ್ತು ರಾಜ ಇಬ್ಬರೂ ಸೇರಿ ನಿರ್ಮಿಸಿದ್ದು ಕವಿರಾಜಮಾರ್ಗ ಅನ್ನುವುದು ಅವರ ವಿವರಣೆ.
ಇನ್ನು ಕಳಿಸು ಎಂಬ ಪದದ ಬಗ್ಗೆ:
ವ್ಯಾಕರಣದ ನಿಯಮಗಳು ಎಲ್ಲ ಪದಗಳ ರೂಪವನ್ನೂ ವಿವರಿಸಲಾರವು ಅನ್ನುವುದಕ್ಕೆ ಉದಾಹರಣೆಯಾಗಿ ಇದನ್ನು ಹೇಳಿದ್ದೆ.
ನೋಡಿ, ಇಸು ಮಾತ್ರವಲ್ಲ, ಪು, ಹು, ಇವು ಕೂಡ ಪ್ರತ್ಯಯಗಳೇ. ಮುಡುಹು, ಮುಡಿಪು ಇತ್ಯಾದಿಗಳಲ್ಲಿ ಮುಡಿ ಎಂಬ ರೂಪಕ್ಕೆ ಪು, ಹು, ಇತ್ಯಾದಿ ಸೇರಿವೆ. ಕಳುಹು ಅನ್ನುವುದನ್ನು ಮೂಲ ರೂಪ ಅನ್ನುವುದು ಸರಿಯಾಗದು. ಕಳುಹಿಸು ಅನ್ನುವುದರಲ್ಲಿ ಕಳುಹು ಮತ್ತು ಇಸು ಮಾತ್ರ ಅಲ್ಲ, ಮೊದಲಿನ ಹು (ನಡುಗನ್ನಡದಲ್ಲಿ ಪು) ಕೂಡ ಇದೆ. ಹಾಗಿದ್ದರೆ ಕಳ್ ಅನ್ನುವುದು ಮೂಲವೆನ್ನೋಣವೇ? ಧಾತುಗಳಿಗೆ, ಅಂದರೆ ಕ್ರಿಯಾಪದದ ಮೂಲರೂಪಕ್ಕೆ ಎರಡು ಅರ್ಥಗಳು ಸಾಮಾನ್ಯವಾಗಿ ಇರುವುದಿಲ್ಲ. ಕಳವು ಅನ್ನುವ ಪದದಲ್ಲಿ ಕೂಡ ಕಳ ಅನ್ನುವ ಮೂಲರೂಪಕ್ಕೆ ವು ಎಂಬ ಪ್ರತ್ಯಯ ಸೇರಿ ನಾಮಪದ ಹುಟ್ಟಿದೆ. ಭಾಷೆಯಲ್ಲಿ ಇಂಥ ಸ್ವಾರಸ್ಯದ ತೊಡಕುಗಳು ಅನೇಕವಿವೆ. ಅವುಗಳದೇ ಬೇರೆ ಲೋಕ. ಕೊಂಚ ಯೋಚಿಸಿದರೆ ಕನ್ನಡದ ಸಾಮಾನ್ಯ ಪದ "ಆದರೆ" ಕೂಡ ಸಮಸ್ಯಾತ್ಮಕವೇ. ಅದರಲ್ಲಿ ಆಗು ಅನ್ನುವುದು ಮೂಲ ರೂಪ. ಹಿಂದೆ ಒಡೆ ಎಂಬ ಪ್ರತ್ಯಯವಿತ್ತು. ಆದೊಡೆ ಅನ್ನುವುದು ಹಳಗನ್ನಡ ನಡುಗನ್ನಡದಲ್ಲಿ ಸಿಗುತ್ತದೆ. ಒಡೆ ಅನ್ನುವುದು ಅರೆ ಎಂದು ಬದಲಾಗಿದ್ದು ನಡುಗನ್ನಡ ಕಾಲದಲ್ಲಿ. ಸುಮಾರು ೧೪ನೆಯ ಶತಮಾನ. ಆದರೆ (!) ಆದೊಡೆ ಅನ್ನುವುದು ಭೂತಕಾಲ ಸಂಬಂಧಿಯಾಗಿತ್ತು. ನುಡಿದೊಡೆ ಮುತ್ತಿನ ಹಾರ ಇತ್ಯಾದಿ. ಹೊಸಗನ್ನಡದಲ್ಲಿ ಭೂತವಲ್ಲದ (ನಾನ್ ಪಾಸ್ಟ್) ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಯಾಕೆ, ಹೇಗೆ, ಬಲು ದೊಡ್ಡ ಪ್ರಶ್ನೆಗಳು.
ಕೇವಲ ಸರಿ ಮತ್ತು ತಪ್ಪು ರೂಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ. ಜನಕ್ಕೆ ಅರ್ಥವಾಗುವ, ಜನ ಬಳಸುತ್ತಿರುವ ರೂಪಗಳೆಲ್ಲವೂ ಸರಿಯೇ. ಶಿಷ್ಟರೂಪ ಯಾರೊಬ್ಬರ ಇಚ್ಛೆಯಿಂದ ನಿರ್ಧಾರಿತವಾಗುವುದಿಲ್ಲ. ವ್ಯಾಕರಣ ಅಂಕುಶವಲ್ಲ, ಭಾಷಾ ಸತ್ಯದ ವಿವರಣೆಯ ಪ್ರಯತ್ನ, ಅಷ್ಟೆ.

  • ಪ್ರಬಂಧ
~.~
  • Login or register to post comments
  • 922 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 11, 2006 - 9:41am — ಮಹೇಶ ಭೋಗಾದಿ

ಸವಿಯೊದಗು

ಮಹೇಶ ಭೋಗಾದಿ's picture

ನಿಮ್ಮ ಈ ವಿವರಣೆಗೆ ಸವಿಯೊದಗು.

"ಕಳುಹಿದನು, ಕಳುಹಿಸಿದನು" ಇವೆರಡರ ಅರ್ಥ-ವ್ಯತ್ಯಾಸವನ್ನು ದಯವಿಟ್ಟು ತಿಳಿಸಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪದಬೆಳಗು:೨: ಬದುಕು!
  • ಭಾಷೆಯಲ್ಲಿ ಸರಿ ಮತ್ತು ತಪ್ಪು
  • Thanks , ನನ್ನಿ ಮತ್ತು ಸವಿಯೊದಗು
  • ಮಡಿ ಭಾಷೆ, ಮಡಿ ಭಾಷೆ
  • ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
  • ಹಬ್ಬಗಳ ನಡುವೆ ಸಂಪದದ ಹಬ್ಬ
  • ಬಿಡುಗಡೆಯ ನಂತರದ ಬೇಡಿಗಳು (೩)

ಇತ್ತೀಚಿನ ಪ್ರತಿಕ್ರಿಯೆಗಳು

  • shreedevikalasad
    ಉ: ಕಚೇರಿ ಎಂಬ ನರಕ-೧
    August 29, 2008 - 1:22pm
  • srinivasps
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 1:19pm
  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 29, 2008 - 12:57pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator