ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ
ಹೋಗದ ಊರಿಗೆ ದಾರಿ ಕೇಳಿದ ಹಾಗೆ
ಹೋಗು ಅನ್ನಲಾರದೆ ಹೊಗೆ ಹಾಕಿದರಂತೆ
ತೀಟೆ ತೀರಿದ ಮೇಲೆ ಲೌಡಿ ಸಂಗವೇನು?
ಹೊತ್ತಿರುವಾಗಲೇ ಗೊತ್ತು ಸೇರಬೇಕು
ಹುಲ್ಲಿನ ಉರಿ , ಕನಸಿನ ಸಿರಿ ( ಬೇಗನೆ ಮುಗಿದು ಹೋಗುತ್ತವೆ)
ಹುಲಿ ಬಡವಾದರೆ ಹುಲ್ಲು ಮೇಯುವದಿಲ್ಲ.
ಹುತ್ತ ಬಡಿದೊಡೆ ಹಾವು ಸಾಯುವುದೇ ?
ಹುಣ್ಣು ಮಾದರೂ ಕಲೆ ಹೋಗಲಿಲ್ಲ
ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ .
ಹಸನ್ಮುಖೀ ಸದಾ ಸುಖೀ

- Login or register to post comments
- 623 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
Re: ಹಾಲು ಎಟುಕದಿರುವಾಗ ಬೆಕ್ಕೂ ಪ್ರಾಮಾಣಿಕ
ಹುಲಿ ಬಡವಾದರೆ ಹುಲ್ಲು ಮೇಯುವದಿಲ್ಲ.
ಸಂಸ್ಕೃತ ಸುಭಾಷಿತವೊಂದರಲ್ಲಿ ಸಿಂಹದ ಬಗ್ಗೆ ಇದೇ ಮಾತನ್ನು ಈರೀತಿ ಹೇಳಲಾಗಿದೆ:
ಕ್ಷುತ್‍ಕ್ಷಾಮೋಪಿ ಜರಾಕೃಶೋಪಿ ಶಿಥಿಲಪ್ರಾಯೊಪಿ ಕಷ್ಟಾಂ
ದಶಾಮಾಪನ್ನೊಪಿ ವಿಪನ್ನಧೀಧೃತಿರಪಿ ಪ್ರಾಣೆಷು ನಶ್ಯತ್ಸ್ವಪಿ
ಮತ್ತೆಭೇಂದ್ರವಿಭಿನ್ನಕುಂಭಪಿಶಿತ ಗ್ರಾಸೈಕಬದ್ಧಸ್ಪೃಹಃ
ಕಿಂ ಜೀರ್ಣಂ ತೃಣಮತ್ತಿಮಾನಮಹತಾಂ ಅಗ್ರೇಸರಃ ಕೇಸರೀ ||
(ಹಸಿವಿನಿಂದ ಬಳಲಿದ್ದರೂ ಮುಪ್ಪಿನಿಂದ ದುರ್ಬಲವಾಗಿದ್ದರೂ ಅಂಗಗಳೆಲ್ಲ ಕ್ಷೀಣಿಸಿದ್ದರೂ ಅತಿಕಷ್ಟದ ಸನ್ನಿವೇಶದಲ್ಲಿ ಸಿಲುಕಿದ್ದರೂ ತನ್ನ ಮನೋಸ್ಥೈರ್ಯವನ್ನೇ ಕಳೆದುಕೊಂಡಿದ್ದರೂ, ಕಟ್ಟಕಡೆಯಲ್ಲಿ ಜೀವ ಹೋಗುವ ಸ್ಥಿತಿಯೇ ಉಂಟಾಗಿದ್ದರೂ, ಮದಿಸಿದ ಕಾಡಾನೆಗಳ ಸೀಳಿದ ಕುಂಭಸ್ಥಳದಲ್ಲಿರುವ ಮಾಂಸವನ್ನು ಮಾತ್ರ ಭಕ್ಷಿಸುವ ಸ್ವಭಾವವನ್ನು ತನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ, ಸ್ವಾಭಿಮಾನಿಗಳಲ್ಲಿ ಅಗ್ರಗಣ್ಯವಾದ ಸಿಂಹವು ಒಣಹುಲ್ಲನ್ನು ತಿಂದು ಬದುಕಿ ಉಳಿಯುತ್ತೇನೆಂದು ಎಂದೂ ಬಯಸುವುದಿಲ್ಲ )
- ಶ್ರೀವತ್ಸ ಜೋಶಿ