ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್ ಅನ್ನು ಕನ್ನಡಕ್ಕೆ ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು
ಪುಟ್ಟಿ ಜೊತೆ ಇತ್ತೊಂದು ಕುರಿಮರಿ
ಅದರ ಆಟ ಏನ್ಹೇಳ್ತೀತಿರಿ ರೀ
ಬಣ್ಣ ಅದರದು ಬಿಳುಪು
ಕಣ್ಣ್ಣು ಫಳ ಫಳ ಹೊಳಪು
ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿ
ಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ
ಒಮ್ಮೆ ಹೋಗಿ ಪುಟ್ಟಿ ಶಾಲೆಗೆ
ಮಾಡ್ತು ತುಂಬಾ ದಾಂಧಲೆ
ಟೀಚರಮ್ಮ ಹೊಡ್ಯೋಕೆ ಹೋದರೆ
ಓಡ್ತು ಬ್ಯ್ಬಾ ಬ್ಯಾ ಅಂತಲೇ
ಹೊಳೆ ಹೊಳೆಯುವ ನಕ್ಷತ್ರ
ಬಾರೋ ಒಮ್ಮೆ ನನ್ಹತ್ರ
ಅದು ಹೆಂಗೆ ಹೋಗಿ ಸೇರಿದೆ ಆಕಾಶ
ನನ್ನೂ ಕರ್ಕೊಂಡು ಹೋಗು ಬಾಬಾರಾ
ಗುಂಡ ಗುಂಡಿ ನೀರಿಗೋದ್ರು
ಕೆರೆಯ ಏರಿಗೆ
ಗುಂಡ ಗುಂಡಿ ಜಾರಿ ಬಿದ್ರು
ನಡು ದಾರಿಗೆ
ದೂರ ಹೋಗು ಮಳೆರಾಯ
ಆಟ ಆಡ್ಬೇಕು ನಾನಯ್ಯ
ನೀನು ಬಾ ನಾಳೆ
ಸ್ಕೂಲಿಗೆ ಹೋಗೋ ಟೈಮಲ್ಲೇ
ಅಮ್ಮ ನೋಡಿ ನಿನ್ನ
ಬೇಡ ಸ್ಕೂಲಿಗೆ ಅಂತಾಳೆ

- Login or register to post comments
- 301 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ರೂಪ
ಪರಿಚಯ
ದೇಶ, ಭಾಷೆ, ಸಂಸ್ಕೃತಿಯ ಬಗ್ಗೆ ಹುಚ್ಚು ಅನ್ನೋ ಅಷ್ಟು ಪ್ರೀತಿ ನನ್ನತನದ ಬಗ್ಗೆ ಹೆಮ್ಮೆ, ಗರ್ವ ಅನ್ಕೊಂಡರೆ ಅದು ಓದುವವರ ದೃಷ್ಟಿಕೋನ
ಸಮಾಜ ಸುಧಾರಿಸೋಕೆ ಹೋಗಿ ಪೆಟ್ಟು ತಿಂದು ಅದು ಅಲ್ಲೇ ಇರಲ್ ನಾನಿಲ್ಲೇ ಇರ್ತೀನಿ ಅನ್ನೋ ಲೆವೆಲ್ಗೆ ಬಂದಿದೆ ನನ್ನ ಮನಸ್ಸು
ಆಗಾಗ ಏನಾದರೂ ಬರೆಯೋ ಮೂಡು ಬಂದಾಗ ಒಂದಷ್ಟು ಗೀಚೋದು ತಪ್ಪದೆ ಸಂಪದ ಓದೋದು,
ಇರೋದು ಬೆಂಗಳೂರು, ಇನ್ನೂ ಭಾರತದಾಚೆ ಯಾವುದನ್ನೂ ನೋಡಿಲ್ಲ, ನೋಡೋ ಅಂಥ ಹಂಬಲಾನೂ ಇಲ್ಲ ಅಂತ ಮುಖ ಮರೆ ಮಾಡಿಸಿಕೊಳ್ಲೋದಿಲ್ಲ ![]()
ಸ್ತ್ರೀವಾದಿ ಅನ್ನೋ ಪಟ್ಟ ಬೇರೆ ಇದೆ ತಲೆ ಮೇಲೆ, ಅದಕ್ಕೆ ಇರಬೇಕು ನಂಗೆ ಎಮ್,ಕೆ ಇಂದಿರಾ, ತ್ರಿವೇಣಿ, ಅಂತಹವರೇ ಇಷ್ಟ ಆಗ್ತಾರೆ.
ಆಧುನಿಕತೆಯ ಹೆಸರಿನಲ್ಲಿ ಕನ್ನಡ ಅಕ್ಷರ ಭಾಷೆ, ಸಂಸ್ಕೃತಿ, ದೇಶದ ಮೇಲೆ ನಡೆಯುತ್ತಿರುವ ಹಲ್ಲೆ ನೋಡಿದಾಗಲೆಲ್ಲಾ ಬೇಸರವಾಗುತ್ತದೆ
ಆದರೆ ತಡೆಯುವ ಶಕ್ತಿ ನನಗಿಲ್ಲವಲ್ಲ ಎಂಬ ಭಾವನೆ ಮೂಡಿ ಸುಮ್ಮನಾಗುತ್ತೇನೆ
ಮತ್ತೊಬ್ಬರ ಕೆಳಗೆ ಕೆಲಸ ಮಾಡಿ ಬೇಸರವಾಗಿ ನನ್ನದೇ ಆದ ಪುಟ್ಟ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಬೆಳೆಸಿದ್ದೇನೆ. ಹಾಗೆ ಸಾವಿರಾರು ಜನಕ್ಕೆ ನಮ್ಮ ಸಂಸ್ಥೆ ದಾರಿ ದೀಪವಾಗಿ ಗುರಿ ಸೇರಲು ಸಹಾಯ ಮಾಡಿದೆ ಎನ್ನುವುದರಲ್ಲಿ ನನಗೆ ಹೆಮ್ಮೆಯಿದೆ
ಆಗಾಗ ತೆರೆದ ಮನದಲ್ಲಿ (http://www.thereda-mana.blogspot.com/) ಖುಶಿಗಾಗಿ ಏನಾದರೂ ಗೀಚುತ್ತಿರುತ್ತೇನಿ
ಕತೆಯೋ ಕವನವೋ ಇಲ್ಲ ವೈಯುಕ್ತಿಕ ವಿಷಯವೋ ಯಾವುದೋ ಒಂದು ಅದಲ್ಲದೆ http://yashuputagalu.blogspot.com/ ನನ್ನ ಮುದ್ದುಮಗಳ ಬಾಲ ಲೀಲೆಗಳನ್ನೂ ಪೇರಿಸುತ್ತೇನೆ



RSS:
ಉ: ಮಕ್ಕಳ ಹಾಡು
ಮುದ್ದಾದ ಪ್ರಾಸಭರಿತ ಸಾಲುಗಳು. ಇ೦ಥ ಪ್ರಯತ್ನಗಳು ಕನ್ನಡ ಸಾಹಿತ್ಯದಲ್ಲಿ ಅವಶ್ಯವಾಗಿ ಆಗಬೇಕು. ನಾವು ಶಿಶುಸಾಹಿತ್ಯವನ್ನು ಕಡೇಗಣಿಸೆದ್ದೇವೇನೋ ಅ೦ತ ಅನಿಸುತ್ತದೆ. ಇದಕ್ಕೆ ಅಪವಾದ ನಿಮ್ಮ ಪ್ರಯತ್ನ. Keep it up Roopa.
ಡಾ|| ಜ್ಞಾನದೇವ್ ಮೊಳಕಾಲ್ಮುರು
ಉ: ಮಕ್ಕಳ ಹಾಡು
ಧನ್ಯವಾದಗಳು
ಬೇಕು ಎನ್ನುವುದೇ ಹೊಸದರ ತಾಯಿ ಎನ್ನುತ್ತಾರಲ್ಲ ಹಾಗೆ
http://thereda-mana.blogspot.com/
ರೂಪ
ಉ: ಮಕ್ಕಳ ಹಾಡು
ರೂಪ, ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ನಿಮ್ಮ ಲೇಖನಗಳು ನನಗೆ ತುಂಬ ಇಷ್ಟ. ಹೀಗೆ ಬರಿತಿರಿ.
Lakshdeep!!
ಉ: ಮಕ್ಕಳ ಹಾಡು
ವಂದನೆಗಳು
http://thereda-mana.blogspot.com/
ರೂಪ