ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ರಂಗಸ್ಥಳ

March 15, 2006 - 12:44am — srikanth

ನಿಸರ್ಗವೇ ಹೀಗೆ. ಮನುಷ್ಯನು ಯೋಚಿಸಲು ಪ್ರಾರಂಭಿಸಿದಾಗಿನಿಂದಲೂ, ತನ್ನ ಸೌಂದರ್ಯದಿಂದ ಅವನನ್ನು ಆಕರ್ಷಿಸಿ ತನ್ನ ಆರಾಧಕನನ್ನಾಗಿಸುವುದು. ನಿಸರ್ಗದ ಸೌಂದರ್ಯವನ್ನು ವರ್ಣಿಸುವ ಕವಿಗಳ ಕೊನೆಯಿಲ್ಲದ ಸಾಲು ಇದಕ್ಕೆ ಸಾಕ್ಷಿ.ಆದರೆ ಅದೇ ಸೌಂದರ್ಯದೊಳಗೆ ಅಡಗಿರುವ ಭೀಕರತೆ ಕಂಡವರು ಕೆಲವೇ ಮಂದಿ. ಆ ಭೀಕರತೆಯನ್ನು ಕಂಡವರು ನಿಸರ್ಗದ ನಿಷ್ಕರುಣ ವ್ಯವಸ್ಥೆಗೆ ತಲೆದೂಗಿ ಗೌರವಿಸುವುದುಂಟು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ. ನಿಸರ್ಗವನ್ನು ಹತ್ತಿರದಿಂದ ನೋಡಿರದಿದ್ದರೆ ಅದನ್ನು “ಕವಿಗಣ್ಣಿ”ನಿಂದ ನೋಡಿದಾಗಲೇ ಅದನ್ನು ಗೌರವದಿಂದ ಕಾಣಲು ಸಾಧ್ಯ. ಬಹುಶಃ ಇದು ನಿಸರ್ಗದ ಭೀಕರತೆಯ ಮುಖವನ್ನು ಬದಿಗಿಟ್ಟು, ಅದರ ಸೌಂದರ್ಯವನ್ನು ಹೊಗಳುವ,ಗೌರವಿಸುವ ಪ್ರಯತ್ನ. ಹೀಗೆ ನೋಡಿದಾಗಲೇ ನಿಸರ್ಗವನ್ನು ಕಾಪಾಡಬೇಕೆಂಬ ಮನಸ್ಸಾಗುವುದು.

ಅಂದು ನಿಸರ್ಗವನ್ನು ರಂಗಸ್ಥಳವಾಗಿ ಕಂಡಾಗ, ಅದರ ಸ್ತಬ್ಧಚಿತ್ರವನ್ನು ಮನಸ್ಸಿನಲ್ಲೇ ಹಿಡಿದಿಡಬೇಕೆಂಬ ಪ್ರಯತ್ನವೇ ಇಲ್ಲಿನ ಕಥನವಸ್ತು. ಈ ಕಥನವು ನಿಸರ್ಗ ವರ್ಣನೆ ಮಾಡುವ ಕಥನಗಳ ಅನಂತ ಸಾಲಿನಲ್ಲಿ ಕರಗಿಹೋದರೂ, ಮನಸ್ಸಿನಲ್ಲಿ ಕರಗದಿರಲಿ ಎಂಬ ಆಶಯ.

ಕಾರಿನೊಳಗಿಂದ ಹೊರಗೆ ಇಣುಕಿ ನೋಡಿದಾಗ ಮೋಡಗಳ ಗುಂಪುಗಳು ಆಕಾಶದಲ್ಲೆಲ್ಲಾ ಚದುರಿತ್ತು.ಕೆಲವೆಡೆ ಪುಟ್ಟ ಪುಟ್ಟ ಬಿಡಿ ಮೋಡಗಳಿದ್ದರೆ, ಮತ್ತೆ ಕೆಲವೆಡೆ ಬೃಹದಾಕಾರದ ಒಂದೇ ಮೋಡ ಆಕಾಶವನ್ನು ನುಂಗುವ ವ್ಯರ್ಥ ಪ್ರಯತ್ನದಲ್ಲಿ ನಿರತವಾಗಿತ್ತು. ಇಂತಹ ಪ್ರಯತ್ನದಲ್ಲೇ ತೊಡಗಿದ್ದ ಅದೆಷ್ಟು ಮೋಡಗಳನ್ನು ಆಗ ನೋಡಲಿಲ್ಲ ? ಬಿಳಿ ಮೋಡ, ಕರಿ ಮೋಡ, ಚಪ್ಪಟೆ ಮೋಡ ಹೀಗೆ ವಿವಿಧ ಸಾಮನ್ಯ ವರ್ಣವಿನ್ಯಾಸದ ಮೋಡಗಳಿಂದ ಪ್ರಾರಂಭವಾಗಿ , ವರ್ಣಶಿಲ್ಪಿಯ ಅರೆಬರೆ ಚಿತ್ರಗಳನ್ನು ಹೋಲುವ ಕ್ಲಿಷ್ಟ ವರ್ಣ ವಿನ್ಯಾಸಗಳ ಮೋಡಗಳನ್ನು ನೋಡಿದ್ದಾಯಿತು. ಅಂದು ಆ ಮೋಡಗಳು ವಾತಾವರಣದಲ್ಲಿನ ತುಂಟತನವನ್ನೇ ಅನುಕರಿಸಿತ್ತಿದ್ದವೆನ್ನಿಸುತ್ತಿತ್ತು.ದೂರದಿಂದ ಕಂಡಾಗ, ಮಳೆಗರೆಯುವ ಕಾರ್ಮೋಡಗಳಂತೆ ತೋರಿ, ಹತ್ತಿರವಾದೊಡನೆ ಶಾಂತ ತೇಲುವ ಮೋಡಗಳಂತೆ ಮಾರ್ಪಾಡಾಗುತ್ತಿತ್ತು. ಈ ತುಂಟತನಕ್ಕೆ ಪಾಪ ಅವುಗಳು ಹೊಣೆಗಾರರಲ್ಲವೇ ಅಲ್ಲ. ಆ ಮೋಡಗಳ ಹೊಳೆಯುತ್ತಿರುವ ಅಂಚನ್ನು ಕಂಡಾಗ ನಿಜವಾದ ತುಂಟನನ್ನು ಪತ್ತೆ ಹಚ್ಚಬಹುದಿತ್ತು. ಅವನು ಆಗಾಗ್ಗೆ ಹೊರಬಂದು ಮುಖವನ್ನು ತೋರಿ ಮತ್ತೆ ಮೋಡಗಳೊಳಗೆ ಬಚ್ಚಿಟ್ಟುಕೊಳ್ಳುವ ಕಳ್ಳಾಟವಾಡುತ್ತಿದ್ದನು.ಆ ಮೋಡಗಳೂ ಸಹ ಅವನ ಈ ಕಳ್ಳಾಟದಲ್ಲಿ ಸಹಕರಿಸಿ, ಅವನ ಕಾಂತಿಯನ್ನು ತಡೆಯುವ ಶತಪ್ರಯತ್ನ ಮಾಡುತ್ತಿದ್ದವು.ಆದರೆ ಗಾಳಿಯ ರಭಸಕ್ಕೆ ಸಿಲುಕಿ ದಿಕ್ಕಾಪಾಲಾಗಿ ಚದುರಿದಾಗ ನಿರ್ವಾಹವಿಲ್ಲದೆ, ಅವಿತ ರವಿಯು ಹೊರಬಂದು, ಮತ್ತೊಮ್ಮೆ ಮೋಡಗಳ ಮರೆಯಲ್ಲಿ ಮರೆಯಾಗುವವರೆಗೆ ಬೆಳಕಿನ ಕಣಗಳನ್ನು ಧರೆಗಿಳಿಸಬೇಕಾಗುತ್ತಿತ್ತು.ತನ್ನ ಸೌಂದರ್ಯವನ್ನು ಪ್ರದರ್ಶಿಸಲು ಕಾತರಳಾಗಿದ್ದ ಧರಿತ್ರಿ,ಬೆಳಕಿನ ಮಳೆಯಲ್ಲಿ ಕುಣಿದಾಡತೊಡಗಿದಳು. ರಸ್ತೆಯನ್ನು ಸಾಲುಗಟ್ಟಿದ್ದ ಸಾಸಿವೆ ಗಿಡಗಳ ಹಳದಿ ಹೂಗಳಿಗೆ ಗಾಳಿಯು ಮೆಲ್ಲನೆ ಸೋಕಿ ಅವುಗಳನ್ನು ಅತ್ತಿತ್ತ ಬಾಗುವಂತೆ ಮಾಡುತ್ತಿತ್ತು.ಮೋಡಗಳನ್ನು ತನ್ನ ಶಕ್ತಿಯಿಂದ ಚದುರುವಂತೆ ಮಾಡಿದ್ದ ಅದೇ ಗಾಳಿಯು ಈಗ ಸಾಸಿವೆ ಹೂಗಳನ್ನು ಕೋಮಲವಾಗಿ ಅಲುಗಾಡುವಂತೆ ಮಾಡಿ ತನ್ನ ಸೌಮ್ಯತೆಯ ಪ್ರದರ್ಶನ ಮಾಡುತ್ತಿತ್ತು.ಅಂದು ಅಲ್ಲಿ ಎಲ್ಲರೂ ಪ್ರದರ್ಶಕರೇ. ಬಹುಶಃ ಬೆಟ್ಟದ ಮೇಲೆ ಮೇಯುತ್ತಿರುವ ಮೊದ್ದು ದನಗಳು, ತಮ್ಮಲ್ಲೇ ಕಿತ್ತಾಡುತ್ತಾ ಗಲಾಟೆ ಮಾಡುತ್ತಿದ್ದ ಗುಬ್ಬಿಗಳು ಮಾತ್ರ ಅಪವಾದವೆನ್ನಬಹುದು.

ಅಂದು ಮುಂಜಾನೆ ತೆರೆ ಸರಿದಾಗಿನಿಂದ ಆ ಪ್ರದರ್ಶನ ಎಡಬಿಡದೆ ಸಾಗಿತ್ತು.ಮೋಡಗಳು ಆಗಿಂದ್ದಾಗ್ಗೆ ಮಂಕು ಕವಿಯುವಂತೆ ಮಾಡುತ್ತಿದ್ದುದು ಅವುಗಳ ಶಕ್ತಿ ಪ್ರದರ್ಶನವೇ ಆಗಿರಬಹುದು.ಆದರೂ ಆ ಪ್ರದರ್ಶನ ಅದೆಷ್ಟು ಮನಸ್ಸುಗಳನ್ನು ಕಲಕಿತ್ತೋ ? ಅದೆಷ್ಟು ಪ್ರಶಂಸಕರನ್ನು ಗಳಿಸಿತ್ತೋ ?

ಇಲ್ಲಿಯವರೆಗೂ ತಮ್ಮ ಶಕ್ತಿಯ ಮದದಲ್ಲಿ ಮುಳುಗಿದ್ದ ಮೋಡಗಳು ಕರಗಿ ಹನಿಯಾಗುವ ಸಮಯ ಬಂದಾಗ, ಅವುಗಳ ಮದವೂ ಕರಗಿ ಗಂಭೀರವಾಗಿ ಭೂಮಿಗೆ ಸೇರುತ್ತಿದ್ದವು.ಆ ಸೋನೆ ಮಳೆಯೇ ಬಹು ಹೊತ್ತು ಸುರಿದು ಆಗಸವನ್ನೆಲ್ಲಾ ಸ್ವಚ್ಛಗೊಳಿಸಿತು. ಆಕಾಶದಲ್ಲಿ ಮಿಕ್ಕ ಮೋಡಗಳು ತಮ್ಮ ಅದೃಷ್ಟವನ್ನು ನೆನೆಸುತ್ತಾ, ಸಂತೋಷದಿಂದ ಇನ್ನೂ ಮೇಲಕ್ಕೆ ಸರಿದವು. ಮಳೆ ಹನಿಯಾದ ಮೋಡಗಳಿಗೆ ಕೆಳಗಿಳಿವ ಭಯವು ಪೊಳ್ಳೆಂದೆನಿಸಿ, ನೆಲಕ್ಕೆ ಬಿದ್ದು ಸಾರ್ಥಕತೆಯಲ್ಲಿ ಸಂತೋಷವನ್ನು ಕಾಣುತ್ತಿದ್ದವು. ಈಗ ತಪ್ಪಿಸಿಕೊಳ್ಳುವ ಸ್ಥಳವಿಲ್ಲದೇ, ಸೂರ್ಯನೂ ಮಂಕಾಗಿ ನಿಲ್ಲಬೇಕಾಯಿತು.ಬಹುಹೊತ್ತಿನಿಂದ ಈ ಆಟವಾಡಿ ದಣಿದಿದ್ದರಿಂದ ಆ ಪ್ರದರ್ಶನಕ್ಕೆ ತೆರೆ ಎಳೆಯತೊಡಗಿದನು.
ತೆರೆ ಇಳಿಯುವಾಗಲೂ, ಅಲ್ಲಿದ್ದ ಎಲ್ಲ ಪ್ರದರ್ಶಕರೂ ತಮ್ಮ ಸೌಂದರ್ಯ, ಶಕ್ತಿಗಳ ಕೊನೆಯ ನೋಟವನ್ನು ತೋರಿಸಬೇಕೆಂಬ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದವು.ಹುಲ್ಲಿನ ಮೇಲಿನ ಮಳೆಹನಿ, ಮೋಡಗಳ ವಿವಿಧ ವಿನ್ಯಾಸ, ತಂಗಾಳಿಯ ಶಾಂತತೆಗಳೊಡನೆ ಅಂದು ಆ ರಂಗಸ್ಥಳಕ್ಕೆ ತೆರೆಬಿತ್ತು. ಆದರೂ ಅಲ್ಲಿನ ಕಲಾವಿದರ ಕಲಾ ಪ್ರದರ್ಶನದ ಕಾತರ ತಣಿಯಲಿಲ್ಲ.ನಾಳೆ ಖಂಡಿತ ತೆರೆ ಮೇಲೇರುತ್ತದೆ ಎಂಬ ನಂಬಿಕೆಯೊಂದೇ ಅವುಗಳಲ್ಲಿ ಸಮಾಧಾನ ಮೂಡಿಸಿರಬೇಕು. ಅದೇ ಸಮಾಧಾನವು ರಾತ್ರಿಯ ವಾತವರಣದಲ್ಲಿ ಪಸರಿಸಿತು. ಅದೇ ಸಮಧಾನ ಭಾವದಲ್ಲಿ ನಾನು ಮುಂದೆ ಸಾಗಿದೆ.

  • ಅನುಭವ ಕಥನ
~.~
  • Login or register to post comments
  • 541 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 15, 2006 - 12:07pm — tvsrinivas41

ಮೋಡಗಳ ವೈವಿಧ್ಯತೆ

tvsrinivas41's picture

ನಿಮ್ಮ ಅನುಭವದ ನಿರೂಪಣೆ ಬಹಳ ಮನೋಜ್ಞವಾಗಿದೆ. ನಾವೂ ಮೋಡಗಳನ್ನು ನೋಡುತ್ತೇವೆ. ಆದರೆ ಅದರಲ್ಲಿನ ವಿವಿಧ ಮಜಲುಗಳನ್ನು ಗಮನಿಸಿರೋಲ್ಲ.

ಕೆಲವು ಸಲ ಮೋಡಗಳಲ್ಲಿ, ಬಿಲ್ಲು, ಬಾಣ, ಓಡುವ ಕುದುರೆ, ಹರಿವ ನದಿ ಇತ್ಯಾದಿಗಳ ಚಿತ್ರದಂತೆ ಕಾಣಬಹುದಲ್ಲವೇ? ಹಾಗೆಯೇ ಆ ಚಿತ್ರಗಳು ಬೇರೆ ಬೇರೆ ಚಿತ್ರಗಳಾಗಿ ಪರಿವರ್ತಿತವಾಗುತ್ತಿರುತ್ತವೆ. ಇದನ್ನೆಲ್ಲಾ ಗಮನಿಸ್ತಾ ಹೋದ್ರೆ ಕೆಲಸವೂ ಬೇಡ, ಊಟವೂ ಬೇಡ, ನಿದ್ರೆಯೂ ಬೇಡ.
ಕತ್ತಲಾದರೆ ಮಾತ್ರ ನಮ್ಮ ಊಹೆಗೆ ಕಡಿವಾಣ
ಮರಳಿ ಬದುಕಿನತ್ತ ಪಯಣ

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 15, 2006 - 2:09pm — ಮಹೇಶ ಭೋಗಾದಿ

ಮಳೆಗಾಲದ ಸೊಬಗು

ಮಹೇಶ ಭೋಗಾದಿ's picture

ಈ ಅನುಭವ ಕಧನವು, ಓದುಗರ ಕಲ್ಪನೆಯನ್ನು ಉತ್ತೇಜಿಸಿ, ತನ್ನ ವಿಹಂಗಮ ನೋಟಗಳನ್ನು, ಆ ಪ್ರಕೃತಿಯಾಟವನ್ನು, ಗೋವಿನ, ಹಕ್ಕಿಯ, ಮರಗಳ, ಗಾಳಿಯ ದನಿಯ ಇಂಚರದೊಂದಿಗೆ, ಅವರ ಮನಸ್ಸಿನ-ಪರದೆಯ ಮೇಲೆ ಚತ್ರಿಸುತ್ತಾ ಹೋಗುತ್ತದೆ.

ಮೇಘಗಳ-ವರ್ಣನೆಗಳಂತು ಬಹಳ ರೋಚಕವಾಗಿವೆ. ಕಾಳಿದಾಸನು ತನ್ನ ಮೇಘದೂತದಲ್ಲಿ ಈ ಜೀಮೂತಗಳ ಅಂಚನ್ನು ವರ್ಣಿಸುತ್ತಾ, ಅವನ್ನು ಚಿನ್ನವನ್ನು ತೀಡಿ ಪರೀಕ್ಷಿಸುವ ನಿಕಾಸದ(ಒಂದು ಕಲ್ಲು) ಹೊಳಪಿಗೆ ಹೋಲಿಸಿದ್ದಾನೆ.

ಈ ಪ್ರಕೃತಿಯ ನಾಟಕದಲ್ಲಿ ಪಾತ್ರಧಾರಿಗಳಾದ ಮೋಡ, ಗಾಳಿ, ನೇಸರ, ಮಳೆಹನಿ, ಸಾಸಿವೆ ಹೂ, ದನ, ಗುಬ್ಬಿ, ಭೂಮಿ, ರಸ್ತೆ, ಕಾರು, ಮುಂತಾದವು ತಮ್ಮ ಪ್ರಸಾದನದಿಂದ(make up), ನಟನೆಯಿಂದ, ಜೀವಿ-ನಿರ್ಜೀವಿಗಳ ವ್ಯತ್ಯಯವನ್ನು ಕಠಿಣಗಳಿಸಿ, ತಮ್ಮ ತಮ್ಮ ಪಾತ್ರವನ್ನು ಚೇತೋಹಾರಿಯಾಗಿ ಅಭಿನಯಿಸಿವೆ.

ಇಂತಹ ರಮ್ಯ ಕಥನಕ್ಕಾಗಿ ಲೇಖಕರಿಗೆ ಅಭಿನಂದನಾಪೂರ್ವಕ ಧನ್ಯವಾದಗಳು.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾತಕ್ಕೆ ಮಳೆ ಹೋದವೋ...
  • ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ
  • ನೀಲಿಗಗನದಲ್ಲಿ ಹತ್ತಿಯಂತಹ ಮೋಡಗಳ ಸಾಲು ; ಅದೆಷ್ಟು ಅಂದ ? !
  • ಕವಿಸಮಯ
  • ತೆರೆ, ತೆಱೆ
Syndicate content

ಲೇಖಕರು

srikanth's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
  • ಹಬ್ಬಗಳ ನಡುವೆ ಸಂಪದದ ಹಬ್ಬ
  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)

ಇತ್ತೀಚಿನ ಪ್ರತಿಕ್ರಿಯೆಗಳು

  • shreekant.mishrikoti
    ಉ: ಈಗ "ನನ್ನ ವಯಸ್ಸೆಷ್ಟು?" ಹೇಳಿ
    August 29, 2008 - 11:45am
  • mowna
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 11:43am
  • sankul
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 11:39am
  • roshan_netla
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:32am
  • Dr.Harisha
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 11:31am
  • mowna
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 29, 2008 - 11:27am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:22am
  • ಸಂಗನಗೌಡ
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:19am
  • ಸಂಗನಗೌಡ
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 11:08am
  • mahesha
    ಉ: ಬಿಡ್ತಾರ್‍
    August 29, 2008 - 10:50am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 93 ಅತಿಥಿಗಳು ಆನ್ಲೈನ್ ಇರುವರು.


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator