ಈಗಿನಂತೆ 0 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅರೆ ಮಲೆನಾಡಿನ ಮಾಗಿ ಹಣ್ಣು 'ಗುಡ್ಡೇ ಗೇರು'
H G Arun kumar Huruli's picture
ಹೆಚ್.ಜಿ.ಅರುಣ ಕುಮಾರ್ ಹುರುಳಿ.
17
Jan
2012
ಬ್ಲಾಗ್ ಬರಹ

ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು

...

ಪ್ರತಿಕ್ರಿಯೆಗಳು: 8
ಹಿಟ್ಸ್ : 201
ಬಸ್ ಪ್ರಯಾಣದ ನೆನಪುಗಳು
addoor's picture
ಅಡ್ಡೂರು ಕೃಷ್ಣ ರಾವ್
19
Sep
2011
ಲೇಖನ
             ...
ಪ್ರತಿಕ್ರಿಯೆಗಳು: 7
ಹಿಟ್ಸ್ : 308
ಅನನ್ಯ ಅಲ್ಲಮ ೫ (೨)
csomsekraiah's picture
ಸಿ ಸೋಮಶೇಖರಯ್ಯ
26
Jun
2010
ಪುಟ

 

...
ಪ್ರತಿಕ್ರಿಯೆಗಳು: 0
ಹಿಟ್ಸ್ : 795
ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ ಮಾತ್ರ!
partha1059's picture
ಪಾರ್ಥಸಾರಥಿ
08
May
2011
ಲೇಖನ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!

ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ...

ಪ್ರತಿಕ್ರಿಯೆಗಳು: 27
ಹಿಟ್ಸ್ : 629
ಸಹವಾಸ ದೋಷ
hamsanandi's picture
ಹಂಸಾನಂದಿ
05
May
2010
ಬ್ಲಾಗ್ ಬರಹ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,039
ಮತದಾನ .
supreethjburji's picture
26
Jun
2006
ಬ್ಲಾಗ್ ಬರಹ

ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ !

ಖುಷಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,321
ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
15
Mar
2010
ಪುಟ

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ,...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,181
ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ
uday_itagi's picture
ಉದಯ್ ಇಟಗಿ
15
Mar
2011
ಲೇಖನ

ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು...

ಪ್ರತಿಕ್ರಿಯೆಗಳು: 14
ಹಿಟ್ಸ್ : 750
ಆಧುನಿಕತೆಯ ರೋಗಗಳು
skakkilaya's picture
ಡಾ| ಶ್ರೀನಿವಾಸ ಕಕ್ಕಿಲ್ಲಾಯ
06
Nov
2006
ಬ್ಲಾಗ್ ಬರಹ

'ನಾವು ಮನುಷ್ಯರಯ್ಯ, ಪ್ರಾಣಿಗಳಲ್ಲ'. ಅದರಲ್ಲೇಕೆ ಸಂಶಯ? ನಾವು ಪ್ರಾಣಿಗಳಲ್ಲವೆಂದೋ ಅಥವಾ ಪ್ರಾಣಿಗಳಿಗಿಂತ ಮಿಗಿಲೆಂದೋ ಹೇಳಿಕೊಳ್ಳದಿದ್ದರೆ ನಮ್ಮ ಅಹಮ್ಮಿಗೆ ಸಂತೃಪ್ತಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,117
೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ
Shivashankar Rao's picture
Addoor Shivashankar Rao
01
Mar
2012
ಲೇಖನ

ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು...

ಪ್ರತಿಕ್ರಿಯೆಗಳು: 9
ಹಿಟ್ಸ್ : 251

ಆಯ್ದ ಲೇಖನಗಳು

ಅಡ್ಡೂರು ಕೃಷ್ಣ ರಾವ್
(1 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
Addoor Shivashankar Rao
(1 ಪ್ರತಿಕ್ರಿಯೆ)
ಶ್ರೀಪತಿ ಮ. ಗೋಗಡಿಗೆ
(21 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)

ಪತ್ತೇದಾರಿ ಕಾದಂಬರಿಕಾರ ನರಸಿಂಹಯ್ಯನವರು

ಪತ್ತೇದಾರಿ ಕಾದಂಬರಿಕಾರ ನರಸಿಂಹಯ್ಯನವರು

ಇವತ್ತು ಬೆಳೆಗ್ಗೆ ದೂರದರ್ಶನದ ಚಂದನದಲ್ಲಿ ಪತ್ತೇದಾರಿ ಕಾದಂಬರಿಕಾರರಾದ ನರದಿಂಹಯ್ಯನವರ ಸಂದರ್ಶನ ಇತ್ತು. ಮೊದಲು ತಿಳಿದುಕೊಂಡ ವಿಷಯವೆಂದರೆ ಅವರು ೮೩ ವರ್ಷದ ವೃದ್ಧರು. ಎರಡನೆ ವಿಷಯ ಅಂದರೆ ಅವರ ವಿದ್ಯಾಭ್ಯಾಸ ಕನ್ನಡ ನಾಲ್ಕನೆಯ ತರಗತಿಯವರೆಗಷ್ಟೆ. ಸಾಹಿತ್ಯ ಕ್ಷೇತ್ರದ ಹಲವು ಮಹಾನ್ ವ್ಯಕ್ಟಿಗಳು ಶಾಲಾ, ವಿಶ್ವವಿದ್ಯಾಲಯಗಳ ಪದವಿ ಗಳಿಸಿದವರಲ್ಲವೆಂಬುದು ವಿಷೇಶವಲ್ಲ. ಅವರು ಎಷ್ಟು ನಿರಾಡಂಬರ ಮತ್ತು ಸಾಮಾನ್ಯರಂತೆ ಕಾಣುತ್ತಿದ್ದರು ಎಂಬುದಕ್ಕೆ ಒಂದು ನಿದರ್ಶನ ಅದೇ ಸಂದರ್ಶನದಲ್ಲಿ ಹೊರಬಂತು. ನರಸಿಂಹಯ್ಯನವರು ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಕಾಣಲು ಹೋಗಿದ್ದರಂತೆ. ನಾನು ಪತ್ತೆದಾರಿ ಕಾದಂಬರಿಕಾರ ನರಸಿಂಹಯ್ಯ ಎಂದು ಹೇಳಿಕೊಡಾಗ ಅರಸು ಅವರಿಗೆ ಸಂಶಯ ಬಂದು ಈಗ ಬಂದಿರುವ ಮನುಷ್ಯ ನರಸಿಂಹಯ್ಯನೆಂದು ಹೇಳಿಕೊಂಡು ಮೋಸಮಾಡುತ್ತಿದ್ದಾನೆಂದು ಅನುಮಾನ ಬಂದು ಪೋಲೀಸರನ್ನು ಕರೆಸುವ ಯೋಚನೆ ಮಾಡಿದ್ದರಂತೆ. ಆದರೆ ಅದು ನಡೆಯಲಿಲ್ಲವಂತೆ, ಏಕೆಂದರೆ ಆ ಸಮಯಕ್ಕೆ ಇಬ್ಬರಿಗೂ ಪರಿಚಯವಿದ್ದ ವ್ಯಕ್ತಿಯು ಬಂದರಂತೆ. ಅವರು "ಏನು ನರಸಿಂಹಯ್ಯನವರೇ ನೀವು ಇಲ್ಲಿ" ಎಂದು ಮಾತನಾಡಿಸಿದಾಗ ಅರಸು ಅವರ ಸಂಶಯ ನಿವಾರಣೆ ಆಯಿತಂತೆ. ಅವರ ಉತ್ತರಗಳು ಸರಳ ಆಡು ಭಾಷೆಯಲ್ಲಿದ್ದುದೂ ಅವರ ನಿರಾಡಂಬರತೆಯನ್ನು ಎತ್ತಿ ತೋರಿಸುತ್ತಿತ್ತು. ಈ ಇಳೀ ವಯಸ್ಸಿನಲ್ಲೂ ಅವರು ಚುರುಕಾದ ಉತ್ತರಗಳನ್ನು ಕೊಡುತ್ತಿದ್ದರು. ಅವರು ೫೦೦ಕ್ಕೂ ಮಿಗಿಲಿ ಪುಸ್ತಕಗಳನ್ನು ಬರೆದಿದ್ದಾರೆ. ಆಗಿನ ಕಾಲಕ್ಕೆ ಅವುಗಳು ಬಹು ಜನಪ್ರಿಯವಾಗಿದ್ದವು. ಅವರು ಪತ್ತೇದಾರಿ ಅಲ್ಲದೆ ಇತರ ಪ್ರಾಕಾರಗಲ್ಲೂ ಕೈ ಆಡಿಸಿದ್ದಾರೆ. ಅವರ ಕಾದಂಬರಿಗಳನ್ನು ದೇವರಾಜ ಅರಸರೂ ಒದುತ್ತಿದ್ದರಂತೆ. ಇವರೇ ನರಸಿಂಹಯ್ಯ ಎಂದು ಖಾತರಿಯಾದ ಮೇಲೆ ಅವರ ಆರ್ಥಿಕ ಬವಣೆ ನೋಡಿ ಸರಕಾರದಿಂದ ೫೦೦ ರುಪಾಯಿ ಮಾಸಾಶನವನ್ನು ಮುಂಜೂರು ಮಾಡಿದರಂತೆ. ಅವರ ಅಳಿಲು ಎಂದರೆ ಅವರ ಪತ್ತೇದಾರಿ ಜಾಡನ್ನು ಕೆಲವು ಸಿನಿಮಾಗಳಲ್ಲಿ ಉಪಯೋಗಿಸಿಕೊಂಡಿದ್ದರೂ ಗೌರವಧನ ಕೇಳಿದಾಗೆ ನಿರ್ಮಾಪಕರು ಅದು ತಮ್ಮದೇ ಕೃತಿಯೆಂದು ಹೇಳಿ ತಪ್ಪಿಸಿಕೊಂಡರಂತೆ. ನ್ಯಾಯಲಯದ ಕಟ್ಟೆ ಹತ್ತಲು ಹಣದ ಬೆಂಬಲವಿರಲಿಲ್ಲವೆಂದು ಅವರು ಹೇಳಿಕೊಂಡರು. ಈಗಿನ ಸಂದರ್ಭದಲ್ಲಿ ಪುಸ್ತಕಗಳ ಉಪಯುಕ್ತತೆ ಕಡಿಮೆಯಾಗುತ್ತಿರುವುದಕ್ಕೆ ಪುಸ್ತಕಗಳ ಹೆಚ್ಚಿರುವ ಬೆಲೆಯೇ ಕಾರಣವೆಂದು ಅಭಿಪ್ರಾಯ ಪಟ್ಟರು.
Average: 4 (1 vote)
501 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
shreekant.mishrikoti's picture
27
Oct
2008
11:45
ಈ ಕಾರ್ಯಕ್ರಮವನ್ನು ನಾನು ತಪ್ಪಿಸಿಕೊಂಡೆ . ಒಂದೆರಡೇ ನಿಮಿಷ ನೋಡಿದೆ . ಹೋದ ವರ್ಷ ದೀಪಾವಳಿ/ಯುಗಾದಿ ವಿಶೇಷಾಂಕದಲ್ಲಿ ಇವರ ಬಗ್ಗೆ ಬಂದಿತ್ತು . ನೂರಾರು ಕಾದಂಬರಿಗಳನ್ನು ಬರೆದಿದ್ದಾರೆ . ಕನ್ನಡ ಜನಕ್ಕೆ ಓದುವ ಹವ್ಯಾಸ ಅಂಟಿಸಿದವರೇ ಇವರು . ಇವರಿಂದಾಗಿ ಕನ್ನಡ ಉಳಿದದ್ದು . ಕಾದಂಬರಿಯನ್ನು ಕುಳಿತ ಏಟಿಗೆ ಬರೆಯುತ್ತಿದ್ದರಂತೆ . ಒಂದೂ ತಪ್ಪಿಲ್ಲದ ಬರಹ , ಎಲ್ಲಿಯೂ ಬರೆದದ್ದನ್ನು ಕಾಟು ಹಾಕದ ಹಾಗೆ ಬರೆಯುತ್ತಿದ್ದರಂತೆ . "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
mahesha's picture
27
Oct
2008
11:52
ಕಾದಂಬರಿಗಳ ಹೆಸರು ತಿಳಿಸಿದರೆ ನೆರವಾಗುವುದು....!
shreekant.mishrikoti's picture
27
Oct
2008
2:06
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ನೋಡಿದ್ದೆ ; ಅಲ್ಲಿ ಹುಡುಕಿ ಎನ್. ನರಸಿಂಹಯ್ಯ ಅವರ ಕಾದಂಬರಿ ಓದದ ಜನ ಇರಲಿಲ್ಲ ; ಆ ಕಾಲಕ್ಕೆ "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"