ಕಾದಂಬರಿ ತೊಡಗುವುದೇ ’ಹಂದಿಗೋಣ’ ಎಂಬ ಹಂದಿಯೂ ಅಲ್ಲದ ಕೋಣವೂ ಅಲ್ಲದ ವಿಚಿತ್ರವಾದೊಂದು ಹೆಸರಿನ ಊರಿನಿಂದ , ಗೋಕರ್ಣದ ಸಮೀಪದ ಆ ಊರಿಗೆ ಮೂರೂರಿನ ರಾಮಕೃಷ್ಣಯ್ಯನವರ ತಂಗಿಯನ್ನು ಕೊಟ್ಟಿರುತ್ತದೆ . ತಂಗಿಯ ಮಕ್ಕಳ ಉಪನಯನಕ್ಕೆ ರಾಮಕೃಷ್ಣಯ್ಯ ಆ ಊರಿಗೆ ಬಂದಿರುತ್ತಾರೆ .ಉಪನಯನದ ಊಟ ಮುಗಿದು ಎಲ್ಲರೂ ಚಾವಡಿಯಲ್ಲಿ ವಿರಾಮವಾಗಿ ಕುಳಿತಿದ್ದಾಗ , ಗೋಕರ್ಣದ ’ದೇವರುಹೆಗಡೆ’ ಎಂಬ ಹೆಸರಿನ ಮೇಧಾವಿಗೆ ತನ್ನ ಹಸ್ತಸಾಮುದ್ರಿಕ ವಿದ್ಯೆಯಲ್ಲಿನ ಪ್ರಾವೀಣ್ಯವನ್ನು ಪ್ರದರ್ಶಿಸುವ ಚಪಲವಾಗುತ್ತದೆ .ಆಲ್ಲಿ ಆಡುತ್ತಿದ್ದ ಹುಡುಗರಲ್ಲಿ ಒಬ್ಬನನ್ನು ಕರೆದು ಅವನ ಕೈ ನೋಡಿ ಇಂತಹ ಕೈಯಿ ಈ ಜಗತ್ತಿನಲ್ಲಿಯೇ ಇಲ್ಲ ಎಂದು ಘೋಷಿಸಿಬಿಡುತ್ತಾನೆ . ಮೂರೂರು ರಾಮಕೃಷ್ಣಯ್ಯನವರಿಗೆ ಬೇಸರವಾಗುವುದು ದೇವರು ಹೆಗಡೆಯ ಸಾಮುದ್ರಿಕ ಶಾಸ್ತ್ರಕ್ಕಿಂತ ಆ ವ್ಯಕ್ತಿಯ ಗತ್ತು ಮತ್ತು ಅಹಂಕಾರದ ಬಗ್ಗೆ . " ಎಂದೋ ಈ ಹುಡುಗ ಮಹಾರಾಜನಾಗುವುದನ್ನು ಕಾದು ಕುಳಿತು ಕಂಡು ಹಿಡಿಯುವವರಾದರೂ ಯಾರು? ಈಗ ಯಾವ ಬೊಗಳೆ ಬಿಟ್ಟರೆ ಯಾರು ಕೇಳುತ್ತಾರೆ ? " ಎಂದುಕೊಂಡ ರಾಮಕೃಷ್ಣಯ್ಯ ಅಲ್ಲಿಯೇ ಆಡುತ್ತಿದ್ದ ತಮ್ಮ ತಂಗಿಯ ಮಗ ಗಣೇಶನನ್ನು ಕರೆದು ಅವನ ಕೈ ನೋಡಲು ಹೇಳುತ್ತಾರೆ . ಆ ಹುಡುಗ ಕೈ ತೋರಿಸಿದ ರೀತಿ ರಾಮಕೃಷ್ಣಯ್ಯನವರ ಮಾತಿನ ಧಾಟಿ ಎರಡೂ ದೇವರು ಹೆಗಡೆಗೆ ಒಂದು ರೀತಿಯ ಸವಾಲಿನಂತೆ ಭಾಸವಾಗಿ , ತಾತ್ಸಾರವಾಗಿ ಅವನ ಕೈ ನೋಡಿದಂತೆ ನಟಿಸುತ್ತಾ " ಇಂತಹ ಕಳಪೆಯ ಕೈ ತಮ್ಮ ಜೀವಮಾನದಲ್ಲಿಯೇ ನೋಡಿಲ್ಲ ,ಇಂತಹ ಭವಿಷ್ಯವಿಲ್ಲದ ಕೈಯ್ಯನ್ನು ನೋಡಲೂಬಾರದು" ಎನ್ನುವ ಧಾಟಿಯಲ್ಲಿ ಮಾತಾಡಿಬಿಡುತ್ತಾನೆ. ಇಲ್ಲಿಗೆ ಇಂದ್ರನ ಸಭೆಯ ವಶಿಷ್ಟ ವಿಶ್ವಾಮಿತ್ರರ ವಾಗ್ವಾದದ ತರಹ ಆದ ದೇವರು ಹೆಗಡೆ , ರಾಮಕೃಷ್ಣಯ್ಯ ಇವರ ವಾದದಿಂದ, ರಾಮಕೃಷ್ಣಯ್ಯನವರಲ್ಲಿ ಹಠದ ಬೀಜವೊಂದು ಬೆಳೆದು , ತಂಗಿಯ ಮಗನ ಜೀವನವನ್ನು ಅಭಿವೃದ್ದಿಗೊಳಿಸಲೇಬೇಕು ಎಂಬ ಹಠಕ್ಕೆ ಬಿದ್ದು , ಅವನನ್ನು ತಮ್ಮ ಊರಿಗೇ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸುತ್ತಾರೆ . ತಂಗಿಗೆ ಬಹಳ ಮಕ್ಕಳಿದ್ದುದರಿಂದ ಅವಳು ಅಣ್ಣನ ಇಷ್ಟದಂತೆ ಅವನ ಊರಿಗೆ ಮಗನನ್ನು ಕಳುಹಿಸುತ್ತಾಳೆ . ಮುಂದೆ ರಾಮಕೃಷ್ಣಯ್ಯನವರು ತಮ್ಮ ಹೆತ್ತ ಮಕ್ಕಳಿಗಿಂತಲೂ ಈ ತಂಗಿಯ ಮಗನ ಶ್ರೇಯಸ್ಸಿಗೆ ಶ್ರಮಿಸುತ್ತಾರೆ.
ಗಣೇಶ ಅಲ್ಪ ತೃಪ್ತನಾದ ಹುಡುಗ ಅಲ್ಲ , ಸೋದರಮಾವನ ಆಸರೆಯಿಂದ ಮಾವನ ಊರಿನ ಶಿಕ್ಷಣ ಮುಗಿದ ಮೇಲೆ ತನ್ನ ಭವಿಷ್ಯವನ್ನು ಅರಸಿ ಹೋಗಿಬಿಡುತ್ತಾನೆ .
******** ********* ********* *********
ಮುಂಬಯಿ ನಗರದಲ್ಲಿ ಕಾಸರಕ ಅವರ ಹೆಸರು ತುಂಬಾ ಪರಿಚಿತವಾದುದು . ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಹೆಸರೆಂದರೆ ಕಾಸರಕರೇ . ಅವರ ಪತ್ನಿ ಸುನಾಲಿನಿ ಆಮ್ಲಾಡಿ ಪ್ರಸಿದ್ದ ಆಧ್ಯಾಪಕಿ ; ಅವಳಿರುವ ಮಾಣಿಕ್ ಚಂದ್ ಮಹಿಳಾ ಪ್ರೌಢಶಾಲೆಯಲ್ಲಿ ಅವಳೇ ಮುಖ್ಯ ಆಧ್ಯಾಪಕಿ . ನಂತರ ಆಕೆ ಪ್ರೊಫೆಸರಳೂ ಆಗುತ್ತಾಳೆ . ಸುನಾಲಿನಿಯವರು ಕೆಲಸ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ಅವರ ಪಾತ್ರ ಪ್ರಧಾನವಾದುದು . ಅಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಸುನಾಲಿನಿಯವರ ಭಾಗವಹಿಸುವಿಕೆ ಇದ್ದೇ ಇರುತ್ತದೆ .
ಸುನಾಲಿನಿಗೆ ಆಮ್ಲಾಡಿ ಎಂಬ ಹೆಸರು ಬಂದುದು ಅವರ ಮೊದಲ ಪತಿ ಗಂಗಾಧಾರ ಆಮ್ಲಾಡಿಯವರಿಂದ . ಗಂಗಾಧರರು ಹೆಸರಾಂತ ನ್ಯಾಯಾಧೀಶರು , ಆದರೂ ಅಭಿರುಚಿಗಳಲ್ಲಿ ಪತಿ ಪತ್ನಿಯರ ನಡುವೆ ಯಾವುದೋ ಒಂದು ಕಂದಕ ಇಣುಕುತ್ತಲೇ ಇತ್ತು . ಸುನಾಲಿನಿಯ ಸಮೀಪದ ಬಂಧು ಮಂಕಿ ಭವಾನಿ ಶಂಕರನಿಂದಾಗಿ ಪರಿಚಿತನಾಗಿ , ಈ ದಂಪತಿಗಳಿಗೆ ಹತ್ತಿರದ ಮಿತ್ರನಾದವನು ಕಾಸರಕ . ಸುನಾಲಿನಿಗೆ ಕಾಸರಕರ ನಡವಳಿಕೆ ನಂಬಿಕಸ್ಥವಾಗಿರುತ್ತದೆ . ಅದರಿಂದಾಗಿಯೇ ಗಂಗಾಧರ ಆಮ್ಲಾಡಿ ಅನಿರೀಕ್ಷಿತವಾಗಿ ಹೃದಯಾಘಾತದಿಂದ ತೀರಿಕೊಂಡಾಗ ಸುನಾಲಿನಿ ತಮ್ಮ ಬಂಧುಗಳಿಗಿಂತ ತಕ್ಷಣ ನೆಚ್ಚಿ ಕರೆಸಿಕೊಂಡಿದ್ದು ಕಾಸರಕರನ್ನು . ನಂತರ ಆಸ್ತಿ ಹಣಕಾಸುಗಳ ವಿಷಯದಲ್ಲಿ ಸುನಾಲಿನಿಯವರ ಅಣ್ಣ ದುರಾಲೋಚನೆಗಳನ್ನು ಹೊಂದಿರುವುದು ಸುನಾಲಿನಿಯವರ ಗಮನಕ್ಕೆ ಬರುತ್ತದೆ ; ಆಗ ಸುನಾಲಿನಿ ತಮ್ಮ ಆಸರೆಗೆ ನಂಬಿದ್ದು ಕಾಸರಕರನ್ನು . ಅವರನ್ನೇ ತಮ್ಮನ್ನು ಮದುವೆಯಾಗುವಂತೆ ಸೂಚ್ಯವಾಗಿ ಕೇಳಿಕೊಳ್ಳುತ್ತಾಳೆ . ವಯಸ್ಸು ನಲವತ್ತರ ಸಮೀಪಕ್ಕೆ ಬಂದಿದ್ದರೂ ಕಾಸರಕರಿಗೆ ಮದುವೆಯ ಬಗ್ಗೆ ಯೋಚಿಸುವಷ್ಟು ವ್ಯವಧಾನವಿರಲಿಲ್ಲ . ಸುನಾಲಿನಿಗೂ ಹೆಚ್ಚು ಕಡಿಮೆ ಅದೇ ಪ್ರಾಯ . ಈಗ ಸುನಾಲಿನಿಯ ಕೋರಿಕೆ ಅವರಿಗೆ ಸೂಕ್ತವೆನಿಸುತ್ತದೆ . ಅಭಿರುಚಿಯ ದೃಷ್ಟಿಯಿಂದ , ತಮಗೆ ಹಿಡಿಸಿದ ಸಂಸ್ಕೃತಿಯ ದೃಷ್ಟಿಯಿಂದ ಕಾಸರಕರು ಸುನಾಲಿನಿಯ ಕೋರಿಕೆಯನ್ನು ಮನ್ನಿಸುತ್ತಾರೆ . ಇದು ಕೆಲವರ ಅಸಮಾಧಾನಕ್ಕೂ ಕಾರಣವಾಗುತ್ತದೆ . ವಯಸ್ಸು, ವಿಧವೆ ಎನ್ನುವುದರ ಜೊತೆಗೆ ಕಾಸರಕರು ಹವ್ಯಕರಾದರೆ ಸುನಾಲಿನಿ ಚಿತ್ರಾಪುರದ ಸಾರಸ್ವತರು . ಈ ಕುಲದ ಅಂತರ ಮುಂಬಯಿ ಹವ್ಯಕರಿಗೆ , ಸಾರಸ್ವತರಿಗೆ ಇಬ್ಬರಿಗೂ ಬೇಸರದ ವಿಷಯವಾಗುತ್ತದೆ . ’ ಈ ಮನುಷ್ಯನಿಗೆ ನಮ್ಮಲ್ಲೇ ಕನ್ಯೆ ದೊರಕುವುದು ಕಷ್ಟವಾಗುತ್ತಿರಲಿಲ್ಲ ’ ಎಂಬ ಮಾತುಗಳೂ ಕೇಳಿಬರುತ್ತವೆ .ಆದರೆ ಬೌದ್ದಿಕವಾಗಿ ಸುನಾಲಿನಿ , ಕಾಸರಕರ ದಾಂಪತ್ಯಜೀವನ ಪ್ರೌಢವಾಗಿರುತ್ತದೆ

- Login or register to post comments
- 285 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಸಿ ಸೋಮಶೇಖರಯ್ಯ
ಪರಿಚಯ
ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ಕೆಲವು ಪುಸ್ತಕಗಳು ಪ್ರಕಟವಾಗಿವೆ.
ಇತ್ತೀಚಿನ ಪ್ರತಿಕ್ರಿಯೆಗಳು
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am



RSS: