ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?

October 12, 2008 - 12:46pm — vinayaka

ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧೀಜಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ! ಸೈದ್ಧಾಂತಿಕ ಪಿತ್ತ ನೆತ್ತಿಗೇರಿದ ಕೆಲ ಆರ್‌ಎಸ್‌ಎಸ್ ಮಂದಿ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಅನೇಕ ಕಾರಣ ಕೊಟ್ಟು ಸಮರ್ಥಿಸುತ್ತಾರೆ! ಆದರೆ ಒಬ್ಬನೇ ಒಬ್ಬ ಗಾಂಧಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಕುರಿತು ಯಾರೂ ಮಾತಾಡುವುದೇ ಇಲ್ಲ. ದೇಶದ ಎಲ್ಲಾ ಕ್ರಾಂತಿಕಾರಿಗಳನ್ನು ಎದುರುಹಾಕಿಕೊಂಡು ಕೊನೆಯುಸಿರಿರುವವರೆಗೂ ಅಹಿಂಸೆ ಮಂತ್ರ ಜಪಿಸಿದ ಮಹ್ಮಾತನ ಸಾಧನೆಯ ಕುರಿತು ಇಲ್ಲಿ ಚರ್ಚೆಯೇ ಆಗುವುದಿಲ್ಲ!
೧೩ ನೇ ವಯಸ್ಸಿನಲ್ಲಿ ಮಡದಿಯನ್ನು ಕಟ್ಟಿಕೊಂಡ, ತನ್ನ ೨೦ ನೇ ವಯಸ್ಸಿಗೆ ೪ ಮಕ್ಕಳನ್ನು ಪಡೆದು ಸಮಾಜದ ಸಾಮಾನ್ಯನಂತೆ ಬದುಕುತ್ತಿದ್ದ , ಬ್ಯಾರಿಸ್ಟರ್ ಪದವಿಗಾಗಿ ಹಪಹಪಿಸುತ್ತಿದ್ದ ಯುವಕನೊಬ್ಬ ಮುಂದೊಂದು ದಿನ ಆ ಪರಿ ಎತ್ತರಕ್ಕೇರುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ೧೮೯೦ರ ದಶಕದಲ್ಲಿ ಕಾನೂನು ಪದವಿ ಪಡೆಯಲು ದೂರದ ಇಂಗ್ಲೆಂಡ್‌ಗೆ ತೆರಳಿದ ಹುಡುಗನೊಬ್ಬ ದೇಶಕ್ಕೆ ಮರಳಿ, ಸಮುದ್ರದ ದಂಡೆಯಲ್ಲಿ ಕುಳಿತು ಸತ್ಯಾಗ್ರಹ ನಡೆಸುತ್ತಾನೆ, ಸತ್ಯ, ಶಾಂತಿ,ಅಂಹಿಸೆ ಎಂಬ ಮಂತ್ರ ಜಪಿಸಿಕೊಂಡು ದೇಶದುದ್ದಕ್ಕೂ ಸಂಚರಿಸುತ್ತಾನೆ…ಊಹುಂ ಬೇರೆಯವರು ಹಾಳಾಗಲಿ ಸ್ವತಃ ಅವರೇ ಇಂತಹದ್ದೊಂದು ಕನಸು ಕಂಡಿರಲಿಕ್ಕಿಲ್ಲ!
ಮೋಹನ್‌ದಾಸ ಕರಮ್‌ಚಂದ್ ಗಾಂಧಿ!!

ಈ ಹೆಸರನ್ನು ಕೇಳದವರ್‍ಯಾರಿದ್ದಾರೆ ಹೇಳಿ? ಮಹಾತ್ಮ, ರಾಷ್ಟ್ರಪಿತ, ಬಾಪು…ಅದೆಷ್ಟು ಅಕ್ಕರೆಯ ಅಡ್ಡ ಹೆಸರುಗಳು ಅವರಿಗೆ. ಅಂತಹ ಮಹಾತ್ಮ ತೀರಾ ಪಡ್ಡೆ ಹುಡುಗರ ತರಹ ತಮ್ಮ ಬಾಲ್ಯವನ್ನು ಕಳೆದವರು ಎಂದರೆ ಯಾರಿಗೂ ನಂಬಿಕೆ ಬರಲಿಕ್ಕಿಲ್ಲ. ತಮ್ಮ ೨೦ನೇ ವಯಸ್ಸಿನಲ್ಲೇ ಗಾಂಧೀಜಿ ೪ ಮಕ್ಕಳ ತಂದೆಯಾಗಿದ್ದರು ಎಂದರೆ ಅಚ್ಚರಿಯಾಗಬಹುದು. ೧೮೬೯ರ ಅ.೨ ರಂದು ಗುಜರಾತಿನ ಪೋರಬಂದರು ಎಂಬ ಪುಟ್ಟ ಪಟ್ಟಣದಲ್ಲಿ ಹುಟ್ಟಿದ ಗಾಂಧೀಜಿ ೧೮೮೮ ರಲ್ಲಿ ಕಾನೂನು ಪದವಿಗೋಸ್ಕರ ಲಂಡನ್‌ಗೆ ತೆರಳಿದರು. ಅಲ್ಲಿ ಅಧ್ಯಯನ ಪೂರೈಸಿದ ಗಾಂಧೀಜಿ ಮುಂಬಯಿಗೆ ಮರಳಿ ಮತ್ತೆ ವೃತ್ತಿ ಜೀವನಕೋಸ್ಕರ ೧೮೯೩ ರಲ್ಲಿ ದಕ್ಷಿಣಾಫ್ರಿಕಾದತ್ತ ಪಯಣ ಬೆಳೆಸಿದರು.
ಬಾಪುವಿನ ಸಾಧನಾ ಬದುಕು ಆರಂಭವಾಗುವುದೇ ಆಫ್ರಿಕಾದಿಂದ. ಪೀಟರ್ ಮ್ಯಾರಿಟ್ಸ್‌ಬರ್ಗ್ ಎಂಬ ನಗರದಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡು ರೈಲು ಪ್ರಯಾಣ ಮಾಡುತ್ತಿದ್ದ ಗಾಂಧೀಜಿಯನ್ನು ರೈಲಿನಿಂದ ಹೊರಹಾಕಲಾಯಿತು. ವರ್ಣಭೇದ ನೀತಿಯ ಫಲವಾಗಿ ರೈಲಿನಿಂದ ಹೊರಬಂದ ಬಾಪು ವರ್ಣಭೇದ ನಿತಿಯನ್ನು ದಕ್ಷಿಣಾಫ್ರಿಕಾದಿಂದ ಕಿತ್ತೆಸೆಯುತ್ತೇನೆಂದು ಆವತ್ತೇ ಪಣ ತೊಟ್ಟರು. ಅಲ್ಲಿನ ಅವಮಾನವೇ ಅವರನ್ನು ಸಾಮಾಜಿಕ ಚಟುವಟಿಕೆಯತ್ತ ಕರೆ ತಂದಿತು ಎಂದರೂ ತಪ್ಪಗಲಾರದು. ಆ ನಂತರವೂ ಅವರು ಸಾಕಷ್ಟು ಸಲ ಕೆಂಪುಮೂತಿ ಬ್ರಿಟಿಷರಿಂದ ಅವಮಾನ ಅನುಭವಿಸಿದರು. ದರ್ಬನ್ ನ್ಯಾಯಾಲಯ ಯಾವುದೋ ಕಾರಣಕ್ಕಾಗಿ ಒಮ್ಮೆ ಅವರು ಧರಿಸಿದ್ದ ಪೇಟ ಕಳಚುವಂತೆ ಆದೇಶ ನೀಡಿತ್ತು! ಅಲ್ಲಿನ ಸಾಕಷ್ಟು ಹೊಟೆಲ್‌ಗಳಲ್ಲಿ ಬಿಳಿಯರಲ್ಲದ ಬಾಪುವಿಗೆ ವರ್ಣಭೇದದ ರಾಜಮರ್ಯಾದೆ ದೊರೆಯುತಿತ್ತು!
ವರ್ಣಭೇದ ನೀತಿಯ ವಿರುದ್ಧ ಹೋರಾಡಲು, ಆಫ್ರಿಕಾದಲ್ಲಿನ ಭಾರತೀಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳಲು ನಿರ್ಧರಿಸಿದ ಗಾಂಧೀಜಿ, ೧೮೯೪ ರಲ್ಲಿ ನಟಾಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪಿಸಿದರು. ೧೯೦೬ರಲ್ಲಿ ಅಲ್ಲಿನ ಸರಕಾರ ಭಾರತೀಯ ನಿವಾಸಿಗಳಿಗೆ ವಿರುದ್ಧವಾದ ಕಾನೂನನ್ನು ಜಾರಿಗೆ ತಂದಿತು. ೧೯೦೬ರ ಸೆ.೧೧ ರಂದು ಗಾಂಧೀಜಿ ಈ ಕಾನೂನಿನ ವಿರುದ್ಧ ಶಾಂತಿಯುತ ಹೋರಾಟಕ್ಕೆ ಇಳಿದರು. ಸತ್ಯಾಗ್ರಹ ಸೂತ್ರವನ್ನು ಮೊದಲ ಬಾರಿಗೆ ಆ ಹೋರಾಟದಲ್ಲಿ ಪ್ರಯೋಗಿಸಿದರು. ಅಲ್ಲಿಂದ ನಂತರ ಸತ್ಯಾಗ್ರಹ ಬಾಪು ಹೋರಾಟದ ಅವಿಭಾಜ್ಯ ಅಂಗವಾಯಿತು. ಗಾಂಧೀಜಿ ನಡೆಸುವುದು ಹೋರಾಟವಲ್ಲ , ಅದು ಸತ್ಯಾಗ್ರಹ ಎನ್ನುವಷ್ಟರ ಮಟ್ಟಿಗೆ ಆ ಸೂತ್ರ ಯಶಸ್ಸು ಸಾಧಿಸಿತು. ಇದರಿಂದಾಗಿ ಗಾಂಧೀಜಿಗೆ ಸೆರೆಮನೆ ವಾಸದ ಸೌಭಾಗ್ಯ ಲಭಿಸಿತು! ಅಲ್ಲಿಂದ ಮುಂದೆ ಅವರಿಗೆ ಹೋರಾಟ ಎಂಬದು ದಿನಚರಿಯಾಯಿತು. ವರ್ಣಭೇದ ನೀತಿಯ ವಿರುದ್ಧ ನಿರಂತರವಾಗಿ ಸೆಣೆಸಿದ ಬಾಪು ೧೯೧೫ ರಲ್ಲಿ ಅಲ್ಲಿಂದ ಭಾರತಕ್ಕೆ ಮರಳಿದರು.
ಕ್ರಾಂತಿಕಾರಿಗಳ ಅಬ್ಬರ ಜೋರಾಗಿದ್ದ ಕಾಲವದು. ೧೮೫೭ ರ ದಂಗೆಯಿಂದ ಮಹತ್ತರ ಪಾಠ ಕಲಿತ ದೇಶದಲ್ಲಿನ ಕ್ರಾಂತಿಕಾರಿಗಳು ಬ್ರಿಟಿಷರನ್ನು ಮಟ್ಟ ಹಾಕಲು ಸರ್ವ ಸನ್ನದ್ಧರಾಗಿದ್ದರು. ಚಂದ್ರಶೇಖರ್ ಆಜಾದ್ ಬಣ ಒಂದೆಡೆ ಕ್ರಾಂತಿಯ ಕಿಚ್ಚು ಹತ್ತಿಸಲು ಪ್ರಯತ್ನಿಸುತ್ತಿದ್ದರೆ, ಸಾವರ್‌ಕರ್ ಸದ್ದುಗದ್ದಲವಿಲ್ಲದೇ ಯುದ್ಧಕ್ಕೊಂದು ವೇದಿಕೆ ನಿರ್ಮಿಸಲು ಅಣಿಯಾಗುತ್ತಿದ್ದರು. ಅಂತಹ ಸಂದರ್ಭದಲ್ಲಿ ದೇಶಕ್ಕೆ ಕಾಲಿಟ್ಟ ಗಾಂಧೀಜಿ ಶಾಂತಿ, ಉಪವಾಸ, ವನವಾಸದ ಮಂತ್ರ ಜಪಿಸಿದರೆ ಮೂಸಿ ನೋಡುವವರು ಇರಲಿಲ್ಲ ಬಿಡಿ!
ನೂರಾರು ಸಾವರ್‌ಕರ್‌ಗೆ ಎದುರಾಗಿ ಒಬ್ಬನೇ ಒಬ್ಬ ಬಾಪು, ಕುದಿಯುವ ಬಿಸಿ ರಕ್ತದ ಸಹಸ್ರಾರು ಯುವಕರಿಗೆ ಎದುರಾಗಿ ಒಬ್ಬನೇ ಒಬ್ಬ ಗಾಂಧಿ…ಆದರೂ ಅವರು ಸತ್ಯ, ಶಾಂತಿ, ಅಹಿಂಸೆ ಎಂಬ ಮಂತ್ರವನ್ನು ಬಿಡಲಿಲ್ಲ. ರಕ್ತ ಹರಿಸಿ ದೇಶದೆ ದಾಸ್ಯ ವಿಮುಕ್ತಿಗೊಳಿಸುವ ಸಿದ್ದಾಂತವನ್ನು ಒಪ್ಪಲಿಲ್ಲ. ವ್ಯಕ್ತಿಯ ತಾಕತ್ತು ಎಂತಹ ಸನ್ನಿವೇಶವನ್ನೂ ಬದಲಿಸಬಲ್ಲದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಆ ಕಾರಣಕ್ಕಾಗಿಯೇ ಜಗತ್ತು ಅವರಿಗೆ ಮಹಾತ್ಮ ಎಂಬ ಗೌರವ ನೀಡಿದ್ದು. ನಮ್ಮ ಬಾಪು ಎಲ್ಲರಿಗಿಂತ ಭಿನ್ನ ಅನ್ನಿಸಿಕೊಂಡಿದ್ದು.
ಆಫ್ರಿಕಾದಿಂದ ಮರಳಿದ ನಂತರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿಕೊಂಡರು. ೧೯೧೮ರ ಖೇಧಾ ಸತ್ಯಾಗ್ರಹ ಅವರ ಹೋರಾಟಕ್ಕೊಂದು ಹೊಸ ಖದರು ನೀಡಿತು. ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಗುಜರಾತ್‌ನ ಹಳ್ಳಿಗಳ ಅಭಿವೃದ್ಧಿಗೆ ಮುಂದಾದರು. ಅಲ್ಲಿನ ಜನರನ್ನು ಅದರಲ್ಲೂ ಮುಖ್ಯವಾಗಿ ಕೆಳವರ್ಗದ ಮಂದಿಯನ್ನು ಸಂಘಟಿಸುವ ಸಾಹಸಕ್ಕೆ ಕೈ ಹಾಕಿದರು. ತಮ್ಮ ಅನುಯಾಯಿಗಳಾಗಿ ಬಂದವರಿಗೆ ಸತ್ಯ, ಅಹಿಂಸೆ, ಶಾಂತಿಯ ಮಂತ್ರವನ್ನು ಉಪದೇಶಿಸಿದರು. ಅಲ್ಲೇ ಒಂದು ಆಶ್ರಮ ನಿರ್ಮಿಸಲು ಕೈಹಾಕಿದರು. ಗಾಂಧೀಜಿ ಎಂಬ ವ್ಯಕ್ತಿತ್ವ ಗುಜರಾತ್ ಪ್ರಾಂತ್ಯದ ಜನರಲ್ಲಿ ಅದ್ಯಾವ ಪರಿ ಅಚ್ಚಾಗಿತ್ತು ಅಂದರೆ, ಅವರನ್ನು ಬ್ರಿಟಿಷರು ಬಂಧಿಸಿದಾಗ ಸಹಸ್ರಾರು ಜನ ಜೈಲಿನ ಮುಂದೆ ಧರಣಿ ನಡೆಸಿದರು. ಅಲ್ಲಿಂದ ಮುಂದೆ ಗಾಂಧೀಜಿ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
೧೯೨೧ ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಾಯಕರಾಗಿ ಆಯ್ಕೆಯಾದರು. ೧೯೧೯ ರ ಜಲಿಯನ್ ವಾಲಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ನಡೆಸಿದ ಅಸಹಕಾರ ಚಳುವಳಿ, ಸುಮಾರು ೬೦,೦೦೦ ಕಾರ್ಯಕರ್ತರೊಂದಿಗೆ ಉಪ್ಪಿನ ಮೇಲೆ ತೆರಿಗೆ ವಿಧಿಸುವ ಬ್ರಿಟಿಷರ ನಿಲುವಿನ ವಿರುದ್ಧ ೧೯೩೦ ರಲ್ಲಿ ಆರಂಭಿಸಿದ ದಂಡಿ ಸತ್ಯಾಗ್ರಹ, ೧೯೪೨ ಕ್ವಿಟ್ ಇಂಡಿಯಾ ಚಳುವಳಿ, ವಿದೇಶಿ ವಸ್ತುಗಳ ಬಹಿಷ್ಕರಿಸಿ ಅದಕ್ಕೆ ಪರ್ಯಾಯವಾಗಿ ಹುಟ್ಟುಹಾಕಿದ ಸ್ವರಾಜ್ ಆಂದೋಲನ…ಹೀಗೆ ರಾಷ್ಟ್ರಪಿತ ಸಂಘಟಿಸಿದ ಚಳುವಳಿಗೆ ಲೆಕ್ಕವೇ ಇಲ್ಲ. ಅವರನ್ನು ಹಿಂಬಾಲಿಸಿ ಬಂದ ಮಂದಿಯೂ ಲೆಕಕ್ಕೇ ಸಿಗುವುದಿಲ್ಲ.
‘ಬಾಪು ಕುಟಿ’ ರಜನಿ ಭಕ್ಷಿ ಬರೆದ ಸುಂದರ ಪುಸಕ್ತವದು. ಗಾಂಧಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ಒಂದಿಷ್ಟು ಸಾಧಕರ ಕಥೆಯದು. ಬಾಪು ನೆಲೆಸಿದ ಕುಟಿಯಿಂದ ಆರಂಭವಾಗುವ ಕಥೆಯಲ್ಲೆಲ್ಲೂ ಬಾಪುವಿನ ಪಾತ್ರ ನೇರವಾಗಿ ಬರುವುದೇ ಇಲ್ಲ. ಬಾಪು ಚಿಂತನೆಗಳನ್ನು ಅಳವಡಿಸಿಕೊಂಡ ಪ್ರಾಧ್ಯಾಪಕರು, ವಿಜ್ಞಾನಿಗಳು…ಹೀಗೆ ಹಲವು ಪಾತ್ರಗಳ ಮೂಲಕ ಗಾಂಧೀಜಿಯನ್ನು, ಅವರ ತತ್ವಗಳ ಗಾಢತೆಯನ್ನು ಪರಿಚಯಿಸುವ ಅದ್ಬುತ ಪ್ರಯತ್ನವನ್ನು ಭಕ್ಷಿ ಮಾಡುತ್ತಾರೆ. ಅಂತಹವರ ಕಥೆಯನ್ನು ಕೇಳಿದಾಗಲೆಲ್ಲಾ ನನಗೆ ಬಾಪು ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ.
ಅಂತಹ ಶ್ರೇಷ್ಠರ ಕುರಿತಾಗಿ ಈ ತಲೆಮಾರಿನ ಯುವಕರಿಗೆ ಅಂದೆಹದ್ದೋ ಅಸಡ್ಡೆ! ಯಾವುದೇ ದುಶ್ಚಟವಿಲ್ಲದ ಒಬ್ಬ ವ್ಯಕ್ತಿಯನ್ನು ಗಾಂಧೀಜಿಗೆ ಹೋಲಿಸಿ ಅಪಹಾಸ್ಯ ಮಾಡುತ್ತಾರೆ ಇಂದಿನ ಯುವಕರು. ದುಶ್ಚಟವಿಲ್ಲದ ಮಂದಿಯ ಆದರ್ಶದ ಪ್ರತೀಕವಾಗಿ ಗಾಂಧೀಜಿ ನಿಲ್ಲುತ್ತಾರೆ ಎಂದರೆ ನಿಜಕ್ಕೂ ಅದು ಹೆಮ್ಮೆಯ ವಿಚಾರ. ಆದರೆ ಅಪಹಾಸ್ಯದ ಪ್ರತೀಕವಾಗಿ ಮಹಾತ್ಮನನ್ನು ಮುಂದೆ ನಿಲ್ಲಿಸುವುದು ನಿಜಕ್ಕೂ ಬೇಸರದ ಸಂಗತಿ. ಹಾಗಂತ ಗಾಂಧಿ ಮೇಲೆ ಗೂಬೆ ಕೂರಿಸುವ ಯತ್ನ ಇವತ್ತು ನಿನ್ನೆಯದ್ದೇನಲ್ಲ! ನಿರಂತರವಾಗಿ ನಡೆಯುತ್ತಲೇ ಬಂದಿದೆ. ಭಗತ್‌ಸಿಂಗ್‌ರನ್ನು ಬಿಡಿಸುವ ತಾಕತ್ತು ಗಾಂಧೀಜಿಗೆ ಇತ್ತು. ಆದರೂ ಅವರು ಬೇಕಂತಲೇ ಭಗತ್‌ರನ್ನು ಬಿಡಿಸಲಿಲ್ಲ ಎಂದು ಸಾರಿಕೊಂಡು ತಿರುಗಾಡುವ ಮಂದಿಗೆ ನಮ್ಮಲ್ಲಿ ಕೊರತೆಯಿಲ್ಲ!
ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ! ಸೈದ್ಧಾಂತಿಕ ಪಿತ್ತ ನೆತ್ತಿಗೇರಿದ ಕೆಲ ಆರ್‌ಎಸ್‌ಎಸ್ ಮಂದಿ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಅನೇಕ ಕಾರಣ ಕೊಟ್ಟು ಸಮರ್ಥಿಸುತ್ತಾರೆ! ಗಾಂಧೀಜಿಯನ್ನು ಸಮಾಜಘಾತುಕ ಎಂದು ಬಿಂಬಿಸಲು ಬೇಕಾದ ಸರ್ವಪ್ರಯತ್ನವನ್ನು ಮಾಡುತ್ತಾರೆ. ಗಾಂಧಿ ಹತ್ಯೆಯಿಂದ ಮಾಧವ್ ಸದಾಶಿವ ಗೊಳವಲ್ಕರ್ ಅವರಿಗಾದ ಅನ್ಯಾಯದ ಅಜ್ಜಿ ಕಥೆಗಳನ್ನು ಹೇಳುತ್ತಾರೆ!
ಇನ್ನೂ ಅಪ್ಪಟ ನೆಹರೂ ಸಿದ್ದಾಂತಕ್ಕೆ ಅಂಟಿಕೊಂಡು ಬಂದಿರುವ ಕೆಲ ಮೂಲಭೂತವಾದಿ ಕಮ್ಯೂನಿಸ್ಟರಿಗೂ ಗಾಂಧೀಜಿ ಅಂದರೆ ಅಲರ್ಜಿ! (ಎಷ್ಟಂದರೂ ಕಮ್ಯೂನಿಸಂ ಅನ್ನುವುದು ಆವತ್ತಿನ ಕಾಲದಿಂದಲೂ ನೆಹರೂ ಕುಟುಂಬ ಸಾಕಿಕೊಂಡ ಬಂದ … ಅಲ್ಲವೇ?!) ಇವರೆಲ್ಲರ ನಡುವೆಯೂ ಗಾಂಧಿ ತತ್ವಗಳನ್ನು ತಮ್ಮ ಪಾಡಿಗೆ ತಾವು ಅನುಸರಿಸಿಕೊಂಡು ಬದುಕುತ್ತಿರುವ ಬೆರಳೆಣಿಕೆಯಷ್ಟು ಮಂದಿ ಈಗಲೂ ಇದ್ದಾರೆ ಎಂಬುದು ಒಂಚೂರು ಸಮಾಧಾನದ ಸಂಗತಿ.
ಆದರೂ ನಾವು ಗಾಂಧಿಯನ್ನು ಅರ್ಥೈಸಿಕೊಳ್ಳಬೇಕಾದ ದಿಕ್ಕಿನಿಂದ ಅರ್ಥೈಸಿಕೊಳ್ಳುತ್ತಿಲ್ಲ. ನುಡಿದಂತೆ ಬದುಕಿನ ರಾಷ್ಟ್ರಪಿತನ ಶ್ರೇಷ್ಠ ಬದುಕನ್ನು ನೆನಪಿಸಿಕೊಳ್ಳುವುದಿಲ್ಲ. ಒಬ್ಬನೇ ಒಬ್ಬ ಗಾಂಧಿ ಬ್ರಿಟಿಷರ ವಿರುದ್ಧ ನಿಂತು ಹೋರಾಟ ಮಾಡಿದ ಕುರಿತು ಯಾರೂ ಮಾತಾಡುವುದೇ ಇಲ್ಲ. ದೇಶದ ಎಲ್ಲಾ ಕ್ರಾಂತಿಕಾರಿಗಳನ್ನು ಎದುರುಹಾಕಿಕೊಂಡು ಕೊನೆಯ ಉಸಿರಿರುವವರೆಗೂ ಅಹಿಂಸೆ ಮಂತ್ರ ಜಪಿಸಿದ ಮಹ್ಮಾತನ ಸಾಧನೆಯ ಕುರಿತು ಇಲ್ಲಿ ಚರ್ಚೆಯೇ ಆಗುವುದಿಲ್ಲ ಎಂದರೆ ನಾಚಿಕೆಯಾಗತ್ತೆ ಅಲ್ವಾ?

  • ಚಿಂತನೆ
~.~
  • Login or register to post comments
  • 245 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 13, 2008 - 12:11pm — gurubaliga

ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?

gurubaliga's picture

ಗಾಂಧೀ ತಮ್ಮೊಳಗೆ ತಾವೇ ಒಂದು ಚರ್ಚೆಯಾಗಿದ್ದುದರಿಂದ ಇವತ್ತೂ ಅವರ ಪುಸ್ತಕಗಳನ್ನು ಓದುವುದೇ ಒಂದು ಚರ್ಚೆಯಲ್ಲಿ ಪಾಲ್ಗೊಂಡ ಅನುಭವ.
ಗಾಂಧೀ ಯಾವತ್ತು ಜನಮಾನಸದಿಂದ ಮರೆಯಾಗಿಲ್ಲ. ಮತ್ತೆ ಮತ್ತೆ ಹೊಸ ರೂಪಿನಿಂದ ಹೊಸ ವಿವಾದಗಳು ಹುಟ್ಟಿಕೊಂಡಾಗ ಗಾಂಧೀ ಮುಂದೆ ಬರುತ್ತಾರೆ. ಪ್ರತಿ ಚರ್ಚೆಗಳಲ್ಲಿ ಅವರ ಉತ್ತರ ಏನು ಎಂದು ಹುಡುಕಲಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 5:09pm — prashy.mh

ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?

prashy.mh's picture

ಒಬ್ಬ ವ್ಯಕ್ತಿಯು ಮಾಡಿದ ಒಳ್ಳೆಯ ಕೆಲಸಗಳನ್ನು ಆ ಕ್ಷಣಕ್ಕೆ ಪ್ರಶಂಶಿಸಿ ಮರೆತುಬಿಡುತ್ತಾರೆ. ಅದೆ ಅವನು ಹೀಗೆ ಮಾಡಬಹುದಿತ್ತು, ಮಾಡಲಿಲ್ಲ ಎನ್ನುವ ಗೂಬೆ ಕೂರಿಸುವ ಕೆಲಸ ಎಂದಿಗೂ ನೆಡೆಯುತ್ತ ಇರುತ್ತದೆ. ಇದು ಯಾವ ಕಾಲಕ್ಕೂ ಸತ್ಯ, ಗಾಂಧಿಯ ವಿಷಯದಲ್ಲಿಯೂ ಇದೆ ಆಗಿದೆ. ನಾವು ಬೆರೆಯವರಿಂದ ಹೆಚ್ಚಿನದನ್ನು ಬಯಸುವುದರ ಬದಲು, ಅವರೇನು ಮಾಡಿದ್ದಾರೆ ಎಂದು ಅರಿತು ಬದುಕಿದರೆ ನಾವು ಈ ಸ್ಥಿತಿಗೆ ತಲುಪುವುದನ್ನು ತಡೆಯಬಹುದು.

ಪ್ರಸಾದ್ ಶೆಟ್ಟಿ ಬಿಲ್ಲಾಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 5:29pm — Rakesh Shetty

ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?

Rakesh Shetty's picture

ರಾಕೇಶ್ ಶೆಟ್ಟಿ

ಪ್ರೀತಿಯ ವಿನಾಯಕ
ಮಹಾತ್ಮಾ ನ ಬಗ್ಗೆ ಬರೆದಿರುವ ಲೇಖನ ಚೆನ್ನಾಗಿದೆ, ಆದರೆ ಒಂದು ವಿಷಯ ನನಗೆ ಅರ್ಥ ಆಗಲಿಲ್ಲ. 'ನಮ್ಮನ್ನು ನಾವು ಪ್ರೀತಿಸುವ ಬರದಲ್ಲಿ ಇನ್ನೊಬ್ಬರನ್ನು ದ್ವೇಷಿಸುವುದು ' ಸರಿಯೇ. ಬಹುಷಃ ಬಾಪುವನ್ನು ಕೊಂದ ಗೋಡ್ಸೆಯ ಮನಸ್ಥಿತಿ ನಿಮಗೆ ಅರ್ಥ ಆಗಿಲ್ಲ ಅನ್ನಿಸುತ್ತೆ, ಇರಲಿ ಗೋಡ್ಸೆಯನ್ನು ನಾನು ಸಮರ್ಥಿಸುವುದಿಲ್ಲ. ಒಂದು ಮಾತನ್ನು ಸ್ಪಷ್ಟ ಪಡಿಸುತ್ತೇನೆ ನಾನು ಆರೆಸ್ಸ್ಸಿಗನು ಅಲ್ಲ , ಎಡ ಪಂಥಿಯನು ಅಲ್ಲ. ಗಾಂಧೀಜಿಯವರು One Man Army ಎಂಬುದು ಸತ್ಯ . ಅದಕ್ಕೆ ಅಲ್ಲವೇ ಅವರನ್ನು ನಾವು 'ಮಹಾತ್ಮ' ಅಂತ ಹೇಳುವುದು. ಆದರೆ ಗಾಂಧೀಜಿಯವರ ಬಗ್ಗೆ ನನಗೆ ಕೆಲವು ವಿಷಯಗಳಲ್ಲಿ ಗೊಂದಲಗಳಿವೆ. ಅದಕ್ಕೆ ದಯವಿಟ್ಟು ನಿಮ್ಮ ಪ್ರತಿಕ್ರಿಯೆ ನೀಡುವಿರಾ....

೧.ಗಾಂಧೀಜಿ 'ಮಹಾತ್ಮಾ'ರೆ ಸರಿ , ಇಡಿ ಕಾಂಗ್ರೆಸ್ 'ಸರ್ದಾರ್ ವಲ್ಲಬಾಯ್ ಪಟೇಲ್'ರನ್ನು 'ಪ್ರಧಾನಿ' ಅಭ್ಯರ್ಥಿಯನ್ನಾಗಿ ಮಾಡಿದರು , ಗಾಂಧಿಜಿಯವರು 'ನೆಹರು' ಅಂತವರನ್ನು ಏಕೆ ಪ್ರಧಾನಿ ಮಾಡುವಂತೆ ರಚ್ಚೆ ಹಿಡಿದು ಕುಳಿತಿದ್ದರು? ಇದು ಮರೆತು ಬಿಡುವಂತ ತಪ್ಪೇನು?
೨.'ಸಮರ ಸೇನಾನಿ ' ಸುಭಾಷರನ್ನು ಕಾಂಗ್ರೆಸ್ಸ್ನಿಂದ ಹೊರ ಕಳಿಸಿದ್ದಾದರು ಯಾಕೆ?
೩. ಸುಭಾಷರು ಬದುಕಿದ್ದ ಸತ್ಯ ತಿಳಿದಿದ್ದರೂ 'ಸ್ವತಂತ್ರ ಭಾರತ' ಕ್ಕೆ ಅವರನ್ನೇಕೆ ಕರೆ ತರಲಿಲ್ಲ ?
೪ .ಇದೆ ನೆಹುರುರವರು ಬ್ರಿಟಿಷ್ ಅಧಿಕಾರಿಯೊಬ್ಬರಿಗೆ ಬರೆದ ಪತ್ರದಲ್ಲಿ 'ಭಾರತ ವಿಭಜನೆ'ಯಾಗುವವರೆಗೂ 'ಸುಭಾಷರನ್ನು' ಭಾರತಕ್ಕೆ ಬರಲು ಬಿಡಬೇಡಿ ಎಂದಿದ್ದರು ಎಂಬ ಮಾತಿದೆ , ಹಾಗೂ 'ಸುಭಾಷರ' "ಇಂಡಿಯನ್ ನ್ಯಾಷನಲ್ ಆರ್ಮಿ' ಬ್ರಿಟಿಷರ ವಿರುದ್ದ ಹೊರಡುವಾಗ , 'ನೆಹುರು'ರವರು 'ಸುಭಾಷರ ಸೈನ್ಯ ಭಾರತಕ್ಕೆ ಬಂದರೆ ನಾನೇ ಅವರ ವಿರುದ್ದ 'ಕತ್ತಿ ಹಿಡಿದು ಹೊರಡುವೆ' ಎಂಬ ಹೇಳಿಕೆ ಕೊಡುತ್ತಿದ್ದರು.ಇದೆಲ್ಲ 'ಮಹಾತ್ಮರಿಗೆ ' ತಿಳಿದಿರಲಿಲ್ಲವೇ?

ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ, ಇದನ್ನು ಬರೆಯುವಾಗ ನಾನು ಯಾವುದೇ ರೀತಿಯ ಪೂರ್ವಗ್ರಹ ಪೀಡಿತನಾಗಿ ಬರೆಯುತ್ತಿಲ್ಲ. ಗಾಂಧಿಜಿಯವರು ಯಾವಾಗಲು 'ಮಹಾತ್ಮ'ರೆ . ಆದರೆ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಅವರ ಮೇಲಿನ ಪ್ರೀತಿ ಇನ್ನು ಹೆಚ್ಚುತ್ತದೆ.

ಆದರೆ ಒಂದು ಮಾತು ಯಾವುದನ್ನು ಮರೆತರು 'ನೆಹುರು' ಅಂತಹ ಮಹಾ ಕೊಡುಗೆಯನ್ನು! ಮರೆಯಲು ಇಲ್ಲ ಇಲ್ಲ ಸಾದ್ಯವೇ ಇಲ್ಲ ......

ಜೈ ಹಿಂದ್,
ರಾಕೇಶ್ ಶೆಟ್ಟಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾಂಧಿ ಜಯಂತಿ
  • ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !
  • ಗಾಂಧಿ ಮತ್ತೆ ಹುಟ್ಟಿ ಬಾ...
  • ಮಹಾತ್ಮ ಗಾಂಧಿ - ೨
  • ಬಡತನ ಹೆಸರು ಚಿರಸ್ಥಾಯಿಯಾಗಿಸಲು ಪಣ
Syndicate content

ಲೇಖಕರು

vinayaka's picture

ಪೂರ್ಣ ಹೆಸರು
vinayaka

ಪರಿಚಯ

ಹುಟ್ಟಿದ್ದು ಮಲೆನಾಡಿನಲ್ಲಿ, ಓದಿದ್ದೆಲ್ಲಾ ತುಳುನಾಡಿನಲ್ಲಿ. ಜೀತ ಮಾಡ್ತಾ ಇರೋದು ಬೆಂಗಳೂರೆಂಬ ಅಪ್ಪಟ ಕಾಂಕ್ರೀಟು ಜಂಗಲ್ಲಿನಲ್ಲಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?
  • ಹಿರಿಯರ ಆಸೆ
  • ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
  • ಸ್ಥಿತಪ್ರಜ್ಞ
  • ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
  • ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?
  • ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಇತ್ತೀಚಿನ ಪ್ರತಿಕ್ರಿಯೆಗಳು

  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
  • kalpana
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:41am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 163 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator