ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ

ಪ್ರಿಯಹಿತವಚನ

March 3, 2006 - 11:37am — ಮಹೇಶ ಭೋಗಾದಿ

ಆವೃತ್ತಿ ೧.

ಮಾತಿನೊಳ್ ಪ್ರಿಯಹಿತವಚನಮಂ

ಜ್ಙಾತಿಜನರೊಳ್ ದಿಟಪೊಗಳಿಕೆಯಂ

ಮರುಳು ನೆಲದೊಳ್ ಬಿಡಿ ವಜ್ರಮಂ ಪಿಡಿದಿಟ್ಟಂತೆ (ಪುಟ್ಟಕಿಟ್ಟಲ್)|

ಆವೃತ್ತಿ ೨.

ಮಾತಿನಲಿ ಪ್ರಿಯಹಿತವಚನವನು

ಜ್ಙಾತಿಜನರಲಿ ನಿಜಹೊಗಳಿಕೆಯನು

ಮರುಳು ನೆಲದಲಿ ಬಿಡಿ ವಜ್ರವನು ಹುಡುಕಿದಂತೆ (ಪುಟ್ಟಕಿಟ್ಟಲ್)|

ಪ್ರಿಯಹಿತವಚನ: ನಮಗೆ ಒಳ್ಳೆಯದನ್ನು ಮಾಡುವ( ಹಿತ ತರುವ) ಮತ್ತು ನಮಗೆ ಹಿಡಿಸುವ( ಮನಸ್ಸಿಗೆ ಇಷ್ಟವಾಗುವ) ಮಾತು.

ಪುಟ್ಟಕಿಟ್ಟಲ್: ಕನ್ನಡದ ಮೊದಲ ನಿಘಂಟಿನ ಜನಕನು ಜಾನ್ ಕಿಟ್ಟಲ್ರ  ಗೌರವಾಗಿ. ಅಂಕಿತವು ಅನಿವಾರ್ಯವಲ್ಲ.

ಜ್ಙಾತಿ: ನೆಂಟರು

ಬಿಡಿ ವಜ್ರ :  ಏಕಾಂಗಿಯಾದ ವಜ್ರದ ಹರಳು(ಮಾಯಾಮೃಗ- "ಹೊಳೆಯುತ್ತಿದೆ ಕಣ್ಣಂತು ಬಿಡಿ ವಜ್ರದ ಹಾಗೆ")

ಮನವಿ: ದಯವಿಟ್ಟು ಆನಿಸಿಕೆಗಳನ್ನು, ದೋಷಗಳನ್ನು ತಿಳಿಸಿ.

  • ಕಾವ್ಯ ಮತ್ತು ಕವನ
~.~
  • Login or register to post comments
  • 1359 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2006 - 12:46pm — Sunil Jayaprakash

Re: ಪ್ರಿಯಹಿತವಚನ

Sunil Jayaprakash's picture

ಆವೃತ್ತಿ ೧.

ಮಾತಿನೊಳ್ ಪ್ರಿಯಹಿತವಚನಮಂ

ಆವೃತ್ತಿ ೨.

 

ಮಾತಿನಲಿ ಪ್ರಿಯಹಿತವಚನವನು

 

"ಮಾತಿನಲಿ' ಗಿಂತ "ಮಾತಿನೊಳು' ಎಂಬ ಪ್ರಯೋಗ ಹಿತವಾಗಿದೆ ಎನಿಸುತ್ತೆ. ನಿಮ್ಮ ಅಭಿಪ್ರಾಯವೇನು 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 2:04pm — ಮಹೇಶ ಭೋಗಾದಿ

ಮಾತಿನೊಳು

ಮಹೇಶ ಭೋಗಾದಿ's picture

ಆದರೆ ಹೊಸಗನ್ನಡದಲ್ಲಿ "ಮಾತಿನೊಳು" ಎನ್ನುವುದರ ಬದಲು "ಮಾತಿನಲಿ" ಎಂದು ಹೆಚ್ಚು ಬಳಕೆಯೆಂದು ನನ್ನ ಆನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 5, 2006 - 5:42pm — Sunil Jayaprakash

ಉ : ಪುಟ್ಟ ಕಿಟ್ಟೆಲ್

Sunil Jayaprakash's picture

ಮಹೇಶ್ ರವರೆ, ನಿಮ್ಮ ಪ್ರಿಯಹಿತವಚನಗಳು ಹೀಗೆಯೇ, ಮುಂದುವರೆಯಲಿ. ಪ್ರತಿಕ್ರಿಯಿಸಲು ನಾವೆಲ್ಲರೂ ಇದ್ದೇವೆ.

ಪ್ರತಿ ಬಾರಿ, ಮಹೇಶ್ ರವರು ಬರೆದಾಗಲೂ, ಕನ್ನಡದ ಹೊಸ(ಗೊತ್ತಿದ್ದೂ ಗೊತ್ತಿಲ್ಲದಂಥ) ವಿಷಯಗಳು ತಿಳಿಯುತ್ತಿವೆ. ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 2:01pm — ಮಹೇಶ ಭೋಗಾದಿ

ಪ್ರಿಯಹಿತವಚನ - ಒಂದು ಸಾಲು ಸೇರ್‍ಪಡೆ

ಮಹೇಶ ಭೋಗಾದಿ's picture

ಆವೃತ್ತಿ ೧.

ಮಾತಿನೊಳ್ ಪ್ರಿಯಹಿತವಚನಮಂ

ಜ್ಙಾತಿಜನರೊಳ್ ದಿಟಪೊಗಳಿಕೆಯಂ

ತಾಯ್ನುಡಿಯಿಂ ಬಂದ ಕೆಡಕುಮಂ

ಮರುಳು ನೆಲದೊಳ್ ಬಿಡಿ ವಜ್ರಮಂ ಪಿಡಿದಿಟ್ಟಂತೆ (ಪುಟ್ಟಕಿಟ್ಟಲ್)|

ಆವೃತ್ತಿ ೨.

ಮಾತಿನಲಿ ಪ್ರಿಯಹಿತವಚನವನು

ಜ್ಙಾತಿಜನರಲಿ ನಿಜಹೊಗಳಿಕೆಯನು

ತಾಯಿ ಮಾತಿನಿಂದಾದ ಕೆಡಕನು 

ಮರುಳು ನೆಲದಲಿ ಬಿಡಿ ವಜ್ರವನು ಹುಡುಕಿದಂತೆ (ಪುಟ್ಟಕಿಟ್ಟಲ್)|

ಪ್ರಿಯಹಿತವಚನ: ನಮಗೆ ಒಳ್ಳೆಯದನ್ನು ಮಾಡುವ( ಹಿತ ತರುವ) ಮತ್ತು ನಮಗೆ ಹಿಡಿಸುವ( ಮನಸ್ಸಿಗೆ ಇಷ್ಟವಾಗುವ) ಮಾತು.

ಪುಟ್ಟಕಿಟ್ಟಲ್: ಕನ್ನಡದ ಮೊದಲ ನಿಘಂಟಿನ ಜನಕನು ಜಾನ್ ಕಿಟ್ಟಲ್ರ ಗೌರವಾಗಿ. ಅಂಕಿತವು ಅನಿವಾರ್ಯವಲ್ಲ.

ಜ್ಙಾತಿ: ನೆಂಟರು ಬಿಡಿ ವಜ್ರ : ಏಕಾಂಗಿಯಾದ ವಜ್ರದ ಹರಳು(ಮಾಯಾಮೃಗ- "ಹೊಳೆಯುತ್ತಿದೆ ಕಣ್ಣಂತು ಬಿಡಿ ವಜ್ರದ ಹಾಗೆ")

ಮನವಿ: ದಯವಿಟ್ಟು ಆನಿಸಿಕೆಗಳನ್ನು, ದೋಷಗಳನ್ನು ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 4, 2006 - 6:35am — bhatpp

ಜ್ಞಾತಿಯರಲ್ಲಿ ದಿಟಪೊಗಳಿಕೆಯು ..

bhatpp's picture

ಮರುಳು ನೆಲದೊಳ್ ಬಿಡಿ ವಜ್ರಮಂ ಪಿಡಿದಿಟ್ಟಂತೆ .. ಮತ್ತು ಮರಳಿನಲ್ಲಿ ಬಿಡಿ ವಜ್ರವನ್ನು ಹುಡುಕಿದಂತೆ, ಇವೆರಡೂ ಸಮಾನರ್ಥಕವೆ?

ಪಿಡಿದಿಟ್ಟಂತೆ = ಹುಡುಕಿದಂತೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 5, 2006 - 5:39am — tvsrinivas41

ಹಿಡಿದಿಟ್ಟಂತೆ?

tvsrinivas41's picture

ಪಿಡಿದಿಟ್ಟಂತೆ ಅಂದ್ರೆ ಹಿಡಿದಿಟ್ಟಂತೆ ಅಂತಲ್ವೇ? ನನಗೆ ಹಳೆಗನ್ನಡ ಸರಿಯಾಗಿ ತಿಳಿಯದು. ಹುಡುಕುವುದುಕ್ಕೂ ಹಿಡಿದಿಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಮರಳಿನಲಿ ಹುದುಗಿಟ್ಟಿದ್ರೆ ಹುಡುಕುವುದು ಸುಲಭ, ಹಿಡಿದಿಟ್ಟಿದ್ರೆ ಹುಡುಕುವುದು ಸ್ವಲ್ಪ ಕಷ್ಟ. ಹಿಡಿದಿಡುವುದರಲ್ಲಿ ಹಿಡಿದಿರುವವನ ಕೈವಾಡ ಇರುತ್ತದೆ ಅಲ್ಲವೇ? ಮುಷ್ಟಿಯಲ್ಲಿ ವಜ್ರವನ್ನು ಹಿಡಿದು ಮರಳಿನಲಿ ಹುಡುಕು ಅಂದ್ರೆ ಸಿಗತ್ತಾ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 11:27am — ಮಹೇಶ ಭೋಗಾದಿ

ಮರಳು ನೆಲದೊಳ್ ಬಿಡಿವಜ್ರಮಂ

ಮಹೇಶ ಭೋಗಾದಿ's picture

ಮರಳು ನೆಲದೊಳ್ ಬಿಡಿವಜ್ರಮಂ ಪಿಡಿ/ಹುಡುಕು

ಅಂದರೆ,

ಮರಳು ರಾಶಿಯಲ್ಲಿ ಒಂದು ಚಿಕ್ಕ ಬಿಡಿ ವಜ್ರದ ಹರಳು ಸೇರಿಕೊಂಡರೆ ಅದನ್ನು ಆಯುವುದು ಕಷ್ಟಸಾಧ್ಯ.

ಅದಕ್ಕೆ ಕಾರಣ ಬಿಸಿಲಿಗೆ ಮರಳಿನ ಒಂದೊಂದು ಕಣವು ವಜ್ರದಂತೆ ಹೊಳೆಯುವುದು.

ಅರಿಕೆ: ವಜ್ರ ಸಮಾನವಾದ ಕನ್ನಡ ಪದವನ್ನು ತಿಳಿಯಸಿ. ರತ್ನ, ರನ್ನ, ಕೆಂಪು ಮುಂತಾದವು ವಜ್ರದ ಬಗೆಗಳು.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 10:14am — ಮಹೇಶ ಭೋಗಾದಿ

ನನಗೆ

ಮಹೇಶ ಭೋಗಾದಿ's picture

ನನಗೆ ಹಳೆಗನ್ನಡದಲ್ಲಿ "ಹುಡುಕು" ಪದಕ್ಕೆ ಸಮನಾದ ಪದವು ಸೂಜಿಸಲಿಲ್ಲ(?).

ದಯಮಾಡಿ ಈ ಪದದ ಹಳೆಗನ್ನಡ ಸಮಾನ ಪದವನ್ನು ತಿಳಿಸಿರಿ.

ಇಲ್ಲಿ ಪಿಡಿದು ಶಬ್ದವನ್ನು ಬಿಡಿ ಶಬ್ದಕ್ಕೆ ಅನುಪ್ರಾಸವಾಗಿ ಬಳಸಲಾಗಿದೆ(ತಲೆ ಪ್ರತಿಷ್ಠೆ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 3:12pm — ಮಹೇಶ ಭೋಗಾದಿ

ಮರುಳು(ದಡ್ದತನ) ಅಲ್ಲ - ಮರಳು(ಉಸುಕು)

ಮಹೇಶ ಭೋಗಾದಿ's picture

ಕ್ಷಮಿಸಿ!

ಮರುಳು ಅಂದರೆ ದಡ್ದತನ.

ಅದು ಮರಳು ಆಗಬೇಕು.

ಮರಳು - ಉಸುಕು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುರದ ಪಾಪಿಗಳು
  • 'ಜನಮತ' ಫಲಿತಾಂಶ
  • ಇನಿ ದನಿ
  • ಕಾಲೇಜು ಹುಡುಗರ ಕವನಗಳು
  • ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .
  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator