ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

October 1, 2008 - 1:12pm — madhava_hs

ಮೊನ್ನೆ ಸ್ನೇಹಿತರೊಬ್ಬರು ಪ್ರತಾಪ ಸಿಂಹರು ಬರೆದಿರುವ ಈ ಪುಸ್ತಕದ ಲಿಂಕು ಕೊಟ್ಟರು. ಅಲ್ಪ ಕಾಲದಲ್ಲಿ ತಮ್ಮ ಸಾಧನೆಯಿಂದ ಬಹಳಷ್ಟು ಜನಪ್ರಿಯತೆ ಗಳಿಸಿದ್ದ ಈ ವ್ಯಕ್ತಿಯಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೂ ಇತ್ತು. ಅವರ ಜೀವನದ ಬಗ್ಗೆ ಬರೆದಿರುವುದನ್ನು ಓದುತ್ತಾ ಹೋದಂತೆ ಕುತೂಹಲ ಮೂಡಿಸುತ್ತದೆ. . ದೇಶಸೇವೆ ಮಾಡಲು ೫ ನೇ ತರಗತಿಯಲ್ಲಿದ್ದಾಗಲೇ ಸೈನ್ಯಕ್ಕೆ ಅರ್ಜಿ ಹಾಕಿದ್ದರಂತೆ. ಬಾಲ್ಯದಲ್ಲೇ ಪಾರಮಾರ್ಥಿಕ ಸತ್ಯದ ಅನ್ವೇಷಣೆಗಾಗಿ ಮನೆ ಬಿಟ್ಟುಹೋಗಿ ಹಿಮಾಲಯದತ್ತ ಹೊರಟಿದ್ದು. ನಂತರ ಕೊಲ್ಕತ್ತಾ ದಲ್ಲಿ ರಾಮಕೃಷ್ಣ ಮಿಷನ್ ಕೆಲಕಾಲ ಇದ್ದದ್ದು. ಅಲ್ಲಿಂದ ಹಿಮಾಲಯದತ್ತ ಹೊರಡಲಣಿಯಾದಾಗ ಸರಿಯಾದ ಮಾರ್ಗದರ್ಶಕರು ಇಲ್ಲದೆ ಎರಡುವರ್ಷಗಳ ನಂತರ ಅಂದರೆ ೧೯೭೦ರಲ್ಲಿ ಮನೆಗೆ ವಾಪಸಾದರಂತೆ.

ಅವರು ಮುಖ್ಯಮಂತ್ರಿಯಾಗಿದ್ದೇ ಬಹಳ ಅಚಾನಕ್ಕಾಗಿ. ಪಕ್ಷದ ಕೆಲವರ ವಿರೋಧ ಇದ್ದಾಗ ಯಾವುದೇ ಹುದ್ದೆ ಬೇಡವೆಂದರೂ ಕೆಲವರು ವರಿಷ್ತರ ಆದೇಶದಿಂದ ಆ ಪದವಿ ಒಪ್ಪಿಕೊಂಡರು.

ಇನ್ನು ಅಭಿವೃದ್ಧಿಕಾರ್ಯಗಳಲ್ಲೂ ಬಹಳಷ್ಟು ಸಾಧಿಸಿದ್ದಾರೆ. ಒಂದು ಕಾರು ಓಡಾಡುವಷ್ಟು ಗಾತ್ರದ ಪೈಪನ್ನು ೭೦೦ ಕಿ.ಮೀ ದೂರದ ಉತ್ತರ ಗುಜರಾತ್ ಗೆ ಜೋಡಿಸಿ ನೀರು ಸರಬರಾಜು ವ್ಯವಸ್ಥೆಯನ್ನು ಅತ್ಯಲ್ಪ ಕಾಲಾವಧಿಯಲ್ಲಿ ಪೂರೈಸಿದ್ದಾರೆ. ೨೦೦೪ ರಲ್ಲಿ ೫೫,೦೦೦ ಕೋಟಿ ಬಂಡವಾಳ ಹರಿದುಬರುವಂತೆ ಮಾಡಿದ್ದು. ಹೀಗೆ ಅನೇಕ ಕೆಲಸಗಳನ್ನು ಹಠಯೋಗಿಯಂತೆ ಮಾಡುತ್ತಿದ್ದಾರೆ. ೨೦೦೪ರ ವೇಳೆಗೆ ದೇಶದ ರಪ್ತಿನಲ್ಲಿ ಶೇ ೨೧ ರಷ್ಟು ಗುಜಾರಾತ್ ನ ಕೊಡುಗೆಇತ್ತಂತೆ. ೨೨,೦೦೦ ಕ್ಕೂ ಹೆಚ್ಚು ಚೆಕ್ ಡ್ಯಾಂ ನ ನಿರ್ಮಾನ ಮಾಡಿದ್ದಾರೆ. ೨೦೧೦ ರ ವೇಳೆಗೆ ೧,೧೬,೦೦೦ ಕೋಟಿ ಬಂಡವಾಳದ ಅನಿಲಸ್ಠಾವರ ಸ್ಥಾಪನೆ ಇವು ಸರ್ಕಾರದ ಯೋಜನೆಗಳಂತೆ.

ಇನ್ನು ಪ್ರತಿ ಹೆಜ್ಜೆಗೂ ಹೇಗೆ ಇಂಗ್ಲೀಷ್ ಮೀಡಿಯಾದವರು ಕಾಲೆಳೆಯಲು ಯತ್ನಿಸಿದ್ದು ಇವನ್ನೆಲ್ಲಾ ಪತ್ರಿಕೆ, ಪತ್ರಕರ್ತರ ಹೆಸರಿನ ಮೂಲಕ ವಿವರಿಸಿದ್ದಾರೆ. ನವರಾತ್ರಿಯ ದಿನಗಳಲ್ಲಿ ಕೇವಲ ನೀರೇ ಆಹಾರ, ಚಾತುರ್ಮಾಸ್ಯದ ೪ ತಿಂಗಳು ದಿನಕ್ಕೊಂದೇ ಊಟ, ಹೀಗೆ ಬಹಳ ಸರಳ ಸಾತ್ವಿಕ ಜೀವನ ಅವರದ್ದು ಎಂದು ಹೇಳಿದ್ದಾರೆ. ಕುತೂಹಲ ಇದ್ದವರು ಕೆಳಗಿನ ಕೊಂಡಿಯ ಮೂಲಕ ಪೂರ್ಣ ಪುಸ್ತಕವನ್ನೋದಬಹುದು.

http://pratapsimha.com/books/narendra-modi.pdf

  • ಪುಸ್ತಕ ವಿಮರ್ಶೆ
~.~
  • Login or register to post comments
  • 366 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 1, 2008 - 7:54pm — ASHOKKUMAR

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

ASHOKKUMAR's picture

ನಾನು ಕೊಂಡುಕೊಳ್ಳಬೇಕೆಂದಿದ್ದ ಪುಸ್ತಕದ ಉಚಿತ ಕೊಂಡಿ ನೀಡಿ,ಒಂದು ಪ್ರತಿ ಮಾರಾಟವಾಗುತ್ತಿದುದನ್ನು ತಪ್ಪಿಸಿದ ಪುಣ್ಯ ನಿಮಗೆ ಸಿಗಲಿದೆ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 10:04am — madhava_hs

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

madhava_hs's picture

ಅಕೌಂಟು ನೋಡಿದೆ. ಈಗಷ್ಟೇ ಪುಣ್ಯ ಜಮೆಯಾಗಿದೆ Smiling

ಹಲವಾರು ಕಾರಣಗಳಿಂದ ಇಂತಹ ಪುಸ್ತಕಗಳನ್ನು ಹಲವರಿಗೆ ಕೊಂಡು ಓದಲು ಆಗಿರುವುದಿಲ್ಲ. ಅಂತಹವರಿಗೆ ಈ ರೀತಿ ಪುಸ್ತಕಗಳು ಲಭಿಸಿದರೆ ಉತ್ತಮ ಅಲ್ಲವೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:16am — ASHOKKUMAR

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

ASHOKKUMAR's picture

ಬರಹಗಾರ,ಪ್ರಕಾಶಕರೇನು ಮಾಡಬೇಕು? ಮೋದಿಯವರ ಪುಸ್ತಕವನ್ನು ಪರಿವಾರದವರು ಪ್ರಾಯೋಜಿಸುತ್ತಾರೇನೋ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:20pm — madhava_hs

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

madhava_hs's picture

ಇವಾಗ ಹತ್ತು ಹಲವು ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಾಗುವ ಕಾಲ ಸರ್. ಸಿನಿಮಾ/ಪುಸ್ತಕಗಳು ಮೊದಲ ಕೆಲ ತಿಂಗಳು ಮಾರಾಟವಾದನಂತರ ಸಾಮಾನ್ಯವಾಗಿ ಅಂತರ್ಜಾಲದಲ್ಲಿ ಲಭ್ಯವಾಗುತ್ತವೆ. ಅಂತ ಹ್ಯಾರಿ ಪಾಟರ್ ಪುಸ್ತಕವನ್ನೇ ಬಿಟ್ಟಿಲ್ಲ, ಅಂತರ್ಜಾಲದಲ್ಲಿ ಹಾಕಿದ್ದಾರಂತೆ.

ಹೆಚ್ಚು ಜನರಿಗೆ ತಲುಪಿದರೆ ಲೇಖಕರ ಶ್ರಮ ಸಾರ್ಥಕವಾದಂತೆ ಎಂದು ನನ್ನ ಅಭಿಪ್ರಾಯ. ಪುಸ್ತಕವನ್ನು ಯಾರಾದರೂ ಪ್ರಾಯೋಜಿಸಲಿ ಬಿಡಿ, ನಮಗೇನು Smiling ಉಂಡ್ಯಾ ಮಗನೇ ಅಂದರೆ ಅಕ್ಕಿ ಬೆಳೆದೋರು ಯಾರು ಅಂದ್ನಂತೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 4:41pm — vijendra

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

vijendra's picture

ಮಾಧವ ಅವ್ರೆ ತುಂಬಾ ಚೆನ್ನಾದ ಪುಸ್ತಕ ... ಕೊಂಡಿಯನ್ನು ಒದಗಿಸಿದಕ್ಕೆ ನನ್ನಿ (ಸಂಪದ ಸ್ಟೈಲ್) Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 5:36pm — veena

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

veena's picture

veena.

ಹ್ಯಾರಿ ಪಾಟರ್ ಅನ್ನು ಕೊಂಡು ಓದುವವರೂ ಬೇಕಾದಷ್ಟು ಇರುತ್ತಾರೆ. ಆದರೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ನಮ್ಮಲ್ಲಿ ಕಡಿಮೆ ಇದೆ. ನಾನು ಅಂತರ್ಜಾಲದಲ್ಲಿ ಈ ಪುಸ್ತಕವನ್ನು ಬೇಕೆಂದೇ ಓದಲಿಲ್ಲ. ಈ ವಾರ ಅದನ್ನು ಕೊಂಡುಕೊಳ್ಳುವ ಇರಾದೆ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 7, 2008 - 11:46am — Aravind M.S

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

Aravind M.S's picture

ಲಿಂಕ್ ಗಾಗಿ ಧನ್ಯವಾದಗಳು ಹರೀಶ್ ರವರೇ,

ಮೋದಿಯವರ ಪಾದರಸದಂತಹ ವ್ಯಕ್ತಿತ್ವ ಅನುಕರಣೀಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 7, 2008 - 11:50am — Aravind M.S

ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

Aravind M.S's picture

ಮಾಧವರೇ, ಮೇಲಿನ ಪ್ರತಿಕ್ರಿಯೆಯಲ್ಲಿ ಹೆಸರು ತಪ್ಪಾದರ ಕ್ಷಮೆಯಿರಲಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ.
  • ಮನಮೋಹನ ಸಿಂಗ್
  • ನನ್ನದೊ೦ದು ವಿಚಿತ್ರ ಪ್ರಶ್ನೆ
  • ಷಡ್ಯಂತ್ರ
  • ನಾ ಮೆಚ್ಚಿದ ಪುಸ್ತಕ: "ಶ್ರೀ ಕರ್ನಾಟಕ ಭಕ್ತ ವಿಜಯ"
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂಬೈನ, ಟಾಜ್, ಒಬೆರಾಯ್ ಹೋಟೆಲ್ ಗಳು, ನಾರಿಮನ್ ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆಸ್ಪತ್ರೆ,ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ಪಾಠಕ
  • ಹಿರಿಯರ ಆಸೆ
  • ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
  • ಸ್ಥಿತಪ್ರಜ್ಞ
  • ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
  • ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?
  • ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಇತ್ತೀಚಿನ ಪ್ರತಿಕ್ರಿಯೆಗಳು

  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
  • kalpana
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:41am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 164 ಅತಿಥಿಗಳು ಆನ್ಲೈನ್ ಇರುವರು.


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator