ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

’ಕೊಲಂಬಿಯ ಪೋಸ್ಟ್ ಆಫೀಸ್’

September 5, 2008 - 4:57am — venkatesh
HPIM4209.jpg

ಅಮೆರಿಕದಲ್ಲಿ ಬಂದು ಎರಡು ತಿಂಗಳಾಗಿವೆ. ನಾನು ಒಮ್ಮೆ ಮಿಸ್ಸೂರಿ ರಾಜ್ಯದ ’ಬೂನ್ ಕೌಂಟಿ,’ ಯಲ್ಲಿರುವ, ಒಂದು ಅಂಚೆ-ಕಚೇರಿಯ ದರ್ಶನಮಾಡಿ, ಸುಮಾರು ಎರಡುಗಂಟೆ ಅಲ್ಲೇ ಕುಳಿತು ವಿದ್ಯಮಾನಗಳನ್ನೆಲ್ಲಾ ವೀಕ್ಷಿಸುತ್ತಿದ್ದೆ. ಅದರ ಒಂದು ಸಮೀಕ್ಷೆ ಹೀಗಿದೆ, ನೋಡಿ.

ಕೊಲಂಬಿಯ ಹಳ್ಳಿಯ ಅಂಚೆ ಕಚೇರಿಯ ಕಟ್ಟಡವನ್ನು ೧೯೬೬ ರಲ್ಲಿ ಲಿಂಡನ್. ಬಿ. ಜಾನ್ಸನ್ ರವರು ಉದ್ಘಾಟಿಸಿದರು. ಅಂಚೆಕಚೇರಿಯನ್ನು ನೋಡಿದಾಗ ಆದ ಆನಂದ, ವಿಸ್ಮಯದಿಂದ ನನಗೆ ಒಮ್ಮೆಲೇ ದೀರ್ಘವಾದ ಉಸಿರುಬಿಟ್ಟಂತಾಗಿತ್ತು. ಕಾರಣ ಇಷ್ಟೆ. ನಾನು ನಮ್ಮ ಮುಂಬೈ ನ ಘಾಟ್ಕೋಪರಿನ ಅಂಚೆ ಕಚೇರಿಯನ್ನು ಇದಕ್ಕೆ ಹೋಲಿಸಿದಾಗ, ನಾಚಿಗೆಯಾಯಿತು. ಕೊಲಂಬಿಯ ಒಂದು ಹಳ್ಳಿ. ಎಂತಹ ಅಚ್ಚುಕಟ್ಟು. ಒಂದು ಯಾವುದೋ ನವ-ಬ್ಯಾಂಕಿಗೆ ಹೋದಂತಹ ಅನುಭವ ! ಅಲ್ಲಿನ ಕೌಂಟರಿನಲ್ಲಿ ಕುಳಿತ ನೌಕರರು ಎಷ್ಟು ವಿನಯ, ಹಾಗೂ ಪ್ರೀತಿಗಳಿಂದ ಎಲ್ಲರೊಡನೆ ನಡೆದುಕೊಳ್ಳುವ ರೀತಿ ಅದ್ಭುತವಾಗಿತ್ತು. ಅಲ್ಲಿನ ವ್ಯವಸ್ಥೆಗಳನ್ನು ನಾವು ಮೆಚ್ಚಲೇಬೇಕು. ಪೋಸ್ಟ್ ಆಫೀಸ್ ಎಂದು ಯಾರೂ ಅದರ ವ್ಯವಸ್ಥೆಯನ್ನು ಅಲ್ಲಗಳೆಯುವುದಿಲ್ಲ. ಎಲ್ಲರೂ ಸುಮಾರು ನಮ್ಮದೇಶದಷ್ಟೇ ಹಳೆಯ ಪೋಸ್ಟ್ ಆಫೀಸ್ ನ್ನು ಆದರಿಸಿ ಗೌರವಿಸುತ್ತಾರೆ. ತಮ್ಮಕೆಲಸದ ಬಗ್ಗೆ ಆತ್ಮವಿಶ್ವಾಸ ಹಾಗೂ ಗೌರವವಿದೆ. ಕೆಲವು ಶಾಖೆಗಳನ್ನು ಉತ್ತಮಗೊಳಿಸಿದ್ದಾರೆ. ಎಲ್ಲೆಲ್ಲಿ ತೊಂದರೆಯಿದೆಯೋ ಅದನ್ನು ಸುಲಲಿತಗೊಳಿಸಲು, ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ಬಗ್ಗೆ ಅಲ್ಲಿ ಕೆಲಸಮಾಡುವ ನೌಕರರು ತಮ್ಮ ಸ್ವಬುದ್ಧಿಯಿಂದ ಕೆಲಸಗಳನ್ನು ನಿರ್ವಹಿಸುತ್ತಾರೆ. ಬೇರೆ ಖಾಸಗೀ ಸಂಸ್ಥೆಗಳಿಗೆ ಹೋಲಿಸಿದರೆ, ಕಟ್ಟಡ ಅಷ್ಟೇನೂ ಆಧುನಿಕವಾಗಿಲ್ಲ. ಎಷ್ಟು ಅಚ್ಚುಕಟ್ಟು, ಶುಚಿ. ಏನಾದರೂ ಸಹಾಯಮಾಡಲು ಕಾತುರರಾಗಿರುವ ಸಿಬ್ಬಂದಿವರ್ಗ. ನನ್ನ ಕೆಲಸಮುಗಿಯಿತು. ಬೇರೆ ಕೌಂಟರ್ ಗೆ ಹೋಗಿ ಯೆನ್ನುವ ಮಾತೇಇಲ್ಲ. ಕ್ಯೂನಲ್ಲಿನ ಜನರೆಲ್ಲಾ ಹೋದಮೇಲೆ, ತಮ್ಮ ಗೆಳೆಯ/ಗೆಳತಿಗೆ ತಮ್ಮ ಮುಂದಿನಕೆಲಸದ ಬಗ್ಗೆ ಪೂರ್ಣ ಮಾಹಿತಿಕೊಟ್ಟು ಜವಾಬ್ದಾರಿಯನ್ನು ಒಪ್ಪಿಸಿ, ತಾವು ಮನೆಗೆ ಹೋಗುವ ದೃಷ್ಯವನ್ನು ಕಂಡಾಗ, ನಮಗೆ ಅಮೆರಿಕನ್ ಕಾರ್ಯ-ವೈಖರಿಯ ಸೂಕ್ಷ್ಮ ಪರಿಚಯವಾಗುತ್ತದೆ. ಯಾವ ವಲಯದಲ್ಲಾದರೂ ಅಮೆರಿಕನ್ ಕೆಲಸದ ವಾತಾವರಣ ಎಂತಹವರಿಗೂ ಸ್ಪೂರ್ಥಿದಾಯಕ.

ಇದೇ ವಿಷಯವನ್ನು ಮುಂದುವರೆಸಿ ಹೇಳಬಹುದಾದರೆ, ನಮ್ಮ ’ಅಕ್ಕ ವಿಶ್ವಕನ್ನಡ ಸಮ್ಮೇಳನ,’ ವನ್ನೇ ತೆಗೆದುಕೊಳ್ಳಿ. ಮೊದಲನೆಯದಿನ, ಆಗಸ್ಟ್, ೨೯ ರ ಸಾಯಂಕಾಲ, ಅಲ್ಲಿ ಹುಡುಕಿದರೂ ಕಾರ್ಯಕ್ರಮಗಳ ವೇಳಾಪಟ್ಟಿಗಳು ಸಿಕ್ಕಲಿಲ್ಲ. ಅದನ್ನು ನಾವು ಅಧಿಕಾರಿಗಳ ಗಮನಕ್ಕೆ ತಂದೆವು. ಮಾರನೆಯದಿನವೇ ಬಗ್ಗೆ ವ್ಯವಸ್ಥೆ ಮಾಡಿ ಅದು ಎಲ್ಲರಿಗೂ ಲಭ್ಯವಾಗುವಂತೆ ಎಚ್ಚರಿಕೆ ವಹಿಸಿದ್ದರು. ಆಗಸ್ಟ್, ೩೦ ನೇ ತಾರೀಖು ಬೆಳಿಗ್ಯೆ ’ಬಫೆ ಪದ್ಧತಿ,’ ಯಲ್ಲಿ ನಾವೇ ಬಡಿಸಿಕೊಂಡು ತಿಂಡಿಯ ತಟ್ಟೆಗಳನ್ನು ಹಿಡಿದು ಬಂದಾಗ ವಿಶಾಲವಾದ ಹಾಲಿನಲ್ಲಿ ಸಾಮಾನ್ಯವಾಗಿ ಮುಂಭಾಗದಲ್ಲೇ ಜನರೆಲ್ಲಾ ಕೂಡುವ ಪದ್ಧತಿ. ಹಾಗಾಗಿ, ನಂತರ ಬಂದವರಿಗೆ ಕೂಡಲು ಜಾಗ ಸಿಗದೇ ಹೋಯಿತು. ಇದರ ಅರಿವು ಯಾರಿಗೂ ಮೊದಲು ಆಗಲಿಲ್ಲ. ಮತ್ತೆ ಎರಡನೆಯ ಪಂಕ್ತಿಯಲ್ಲಿ ತಿಂಡಿಯ ಸಮಯದಲ್ಲಿ ಸ್ವಯಂಸೇವಕ/ಕಿಯರು ಸಾಲಾಗಿ ಬಂದು ಕೂಡುವ ವ್ಯವಸ್ಥೆಯನ್ನು ಅಚುಕಟ್ಟಾಗಿ ಅವರು ನಿರ್ವಹಿಸಿದರು. ಇಂತಹ ಮಾರ್ಪಾಟುಗಳು, ಬದಲಾವಣೆಗಳೂ ನಮಗೆ ಸಾಧ್ಯ. ಆದರೆ ಭಾರತದಲ್ಲಿ ಪ್ರತಿಯೊಂದೂ ಸಮಸ್ಯೆಯೇ ! ಕೆಲಸಮಾಡಲು ಮನಸ್ಸಿಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಇತ್ಯಾದಿ ಇತ್ಯಾದಿಗಳು, ಪರ್ವತದಷ್ಟು ಅಗಾಧವಾಗುತ್ತವೆ. ನಮಗೂ ಇಂತಹ ವಾತಾವರಣಕ್ಕೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ, ನಮ್ಮ ಕೆಲಸದಲ್ಲಿ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಿದೆ.

  • ಪ್ರವಾಸ ಕಥನ
~.~
  • Login or register to post comments
  • 269 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 5, 2008 - 8:53am — Sunil Jayaprakash

ಉ: ’ಕೊಲಂಬಿಯ ಪೋಸ್ಟ್ ಆಫೀಸ್’

Sunil Jayaprakash's picture

ಮತ್ತೊಬ್ಬರ ಆದರ್ಶ, ಏಳಿಗೆಯನ್ನು ಕಂಡರೆ ನಮಗೆ ಆಗೋಲ್ಲ !!! ವೀ ಆರ್ ಲೀಸ್ಟ್ ಬಾದರ್ಡ್ ಅಬೋಟ್ ದ ಆಸ್ಪೆಕ್ಟ್ ಆಫ್ ಮ್ಯೂಚುವಲ್ ರೆಸ್ಪೆಕ್ಟ್ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 11:18am — ASHOKKUMAR

ಉ: ’ಕೊಲಂಬಿಯ ಪೋಸ್ಟ್ ಆಫೀಸ್’

ASHOKKUMAR's picture

ಮಳೆಗಾಲದಲ್ಲಿ ಅಂಚೆ ಕಚೇರಿಯಲ್ಲಿ ವಿದ್ಯುತ್ ಇಲ್ಲದಿರುವ ಹೊತ್ತು ಮೋಂಬತ್ತಿ ಹೊತ್ತಿಸಿ ಕೆಲಸ ಮಾಡುವ ಪರಿಸ್ಥಿತಿ, ಉಡುಪಿಯ ಹೊರವಲಯದ ಅಂಚೆ ಕಚೇರಿಯಲ್ಲಿದೆ ಎಂದರೆ ನಮ್ಮಲ್ಲಿನ ಪರಿಸ್ಥಿತಿ ಸ್ಪಷ್ಟವಾಗಬಹುದು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಅಯ್ಯೊ ಇದೇನಾ ಪೋಸ್ಟ್ ಆಫೀಸು ? !
  • ಅಮೆರಿಕದ ಸಾರ್ವಜನಿಕ ಸೇವಾಸಂಸ್ಥೆಗಳು-೧
  • ಭಾರತಕ್ಕೆ ವಾಪಸ್ ಬರುವಾಗ, ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಿಂದ, ಮುಂಬೈನಗರಕ್ಕೆ ಆಗಮಿಸಿದೆವು !
  • ಬೆಂಗಳೂರಿನ, ಡಾ. ಶ್ರೀನಾಥ್ ಮತ್ತು ಉಮಾಶ್ರೀನಾಥ್ ರವರ ಆತಿಥ್ಯ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?
  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
  • ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
  • ಮಕ್ಕಳ ಹಾಡು
  • ಉಗ್ರವಾದ - ಇದೊಂದು ಹಳೇ ಉದ್ಯೋಗ
  • ಹೀಗೊ೦ದು ರಸಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • lsiddappa
    ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
    December 4, 2008 - 4:02am
  • lsiddappa
    ಉ: ಭಯೋತ್ಪಾದಕರಿಗೆ ಜೈ
    December 4, 2008 - 3:36am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಒಗಟು - ಬಿಡಿಸಿ!!!!!!!!
    December 4, 2008 - 3:30am
  • lsiddappa
    ಉ: ಸಾವಿನ ಹತ್ತಿರ
    December 4, 2008 - 3:23am
  • lsiddappa
    ಉ: ಮಕ್ಕಳ ಹಾಡು
    December 4, 2008 - 3:06am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:25am
  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 4, 2008 - 2:23am
  • rasikathe
    ಉ: ಗಾದೆಗಳು!!!
    December 4, 2008 - 2:08am
  • vini.mysore
    ಉ: ನೋದಿಪ್ಪ
    December 4, 2008 - 2:00am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 126 ಅತಿಥಿಗಳು ಆನ್ಲೈನ್ ಇರುವರು.


ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator