ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಗೂಗಲ್ ಕ್ರೋಮ್ : ಮೊದಲ ನೋಟ

September 3, 2008 - 2:31am — hpn

Asterix ಕಾಮಿಕ್ಸ್ ಓದುವಾಗ ಬಹಳ ಸರಿ ಕೇಳಿ ಬರುವ ಒಂದು ಜೋಕು: ಕಥೆಯಲ್ಲಿ phoenician ವ್ಯಾಪಾರಿಯೊಬ್ಬನಿಗಿರುವ ಆಳುಗಳದ್ದು. ಅವರುಗಳು ಕಥೆಯಲ್ಲಿ ಈ ವ್ಯಾಪಾರಿಯ ಪಾರ್ಟ್ನರುಗಳಂತೆ, ಸರಿಯಾಗಿ ಓದಿಕೊಳ್ಳದೆ ಸಹಿ ಹಾಕಿ ಇವನಡಿ ಆಳುಗಳಂತೆ ದುಡಿಯುತ್ತಿರುತ್ತಾರೆ.

ಗೂಗಲ್ ನ ಯಾವುದೇ ಹೊಸ ಪ್ರಾಡಕ್ಟು ಟ್ರೈ ಮಾಡಲು ಹೊರಟ ನಾವುಗಳು ಇದೇ ವ್ಯಾಪಾರಿಯ ಪಾರ್ಟ್ನರುಗಳ ಥರಾ. ಪೇಜುಗಟ್ಟಲೆ ಟರ್ಮ್ಸ್ ಅಂಡ್ ಕಂಡೀಶನ್ಸ್ ಯಾರು ತಾನೆ ಓದಿಕೊಳ್ಳುತ್ತಾರೆ? ಜೊತೆಗೆ ಅದು ಯಾವಾಗ ಬೇಕಾದರೂ ಬದಲಾಗಬಹುದು ಎಂದು ಬೇರೆ ಅದರಲ್ಲೊಂದು clause ಇರುತ್ತದೆ!
ಇರಲಿ, ಹೀಗೆ ಟರ್ಮ್ಸಿಗೆ ಒಪ್ಪಿಕೊಂಡರೆ ಮಾತ್ರ ಮುಂದೆ ಹೋಗುವಂತೆ ಸುಮಾರು ಆನ್ಲೈನ್ ಸೇವೆಗಳು ನೋಡಿಕೊಳ್ಳುತ್ತವೆ. ಇದು ಅವುಗಳಿಗೆ ತೆಗೆದುಕೊಳ್ಳಲೇಬೇಕಾದ measuresಉ. ಆದರೆ "ಕಿಸೀಕೆ ಸಘೇ ನಹಿ ಹೋತೆ" ಎಂಬಂತಿರುವ ಮಲ್ಟಿನ್ಯಾಶನಲ್ಲುಗಳಲ್ಲಿ ನಂಬಿಕೆಯಿಡೋದು ಕಷ್ಟವೇ. ಇವೆಲ್ಲ ಮನಸ್ಸಿಗೆ ಬಂತು, ಬರೆದೆ. ಈಗ ಬದಿಗಿಡೋಣ. ಏಕೆಂದರೆ ಸ್ವಲ್ಪವೇ ಹೊತ್ತಿನ ಮುಂಚೆ ಸ್ವತಃ ಗೂಗಲ್ ರೆಡಿ  ಮಾಡಿರುವ ಬ್ರೌಸರ್ - ಗೂಗಲ್ ಕ್ರೋಮ್ (Google Chrome) ಬಿಡುಗಡೆಯಾಗಿದೆ. ಇದರ ಮೊದಲ ಇಣುಕುನೋಟ ಇಗೋ ನಿಮ್ಮ ಮುಂದೆ.

ಗೂಗಲ್ ನಿಂದ ಹೊರಬಂದ ಪ್ರಾಡಕ್ಟುಗಳಲ್ಲಿ ಎಂದಿನಂತೆ ಇದೂ ಬೀಟ!

ಡೌನ್ಲೋಡ್ ಕೂಡಲೆ ಆಗುವಷ್ಟು ಸಣ್ಣ ಫೈಲು - ತದನಂತರ ಮತ್ತೊಮ್ಮೆ ಇಂಟರ್ನೆಟ್ಟಿಗೆ ಕನೆಕ್ಟ್ ಆಗಿ ಮತ್ತಷ್ಟು ಡೌನ್ಲೋಡ್ ಮಾಡುತ್ತದೆ. ಆದರೆ ಇದು ಕೂಡ ಅತಿ ಶೀಘ್ರ.
ಬಹಳ Light weighted. (ಪುಟಗಳು ಬೇಗನೆ ತೆರೆದುಕೊಂಡಂತೆ ಭಾಸವಾಗುವಷ್ಟು).

ಮೆನುಗಳು ತಕ್ಷಣಕ್ಕೆ ಕಣ್ಣಿಗೆ ಬೀಳವು. ಐಕಾನಿನ ಕೆಳಗೆ ಹುದುಗಿಕೊಂಡಿವೆ (ಒಪೇರಾದಲ್ಲೂ ಹೀಗೇ ಅಲ್ಲವೆ?)

ಉಳಿದಂತೆ ಫೈರ್ ಫಾಕ್ಸ್ ಬಳಸಿದ ಅನುಭವವೇ. ಹೆಚ್ಚೆಂದರೆ ತುಂಬ ಟ್ಯಾಬುಗಳು ತೆರೆದಾಗ ಫೈರ್ ಫಾಕ್ಸಿನಷ್ಟು ಮೆಮೋರಿ ತಿನ್ನುತ್ತಿರುವ ಹಾಗೆ ಕಾಣಲಿಲ್ಲ. ಆದರೂ ಹೊಸತಾಗಿ ತೆರೆದ ಪುಟಗಳು ಲೋಡ್ ಆಗುವ ಸಮಯ ನಿಧಾನವಾಗುತ್ತ ಹೋಯಿತು.

ಅಡ್ರೆಸ್ ಬಾರಿನಲ್ಲಿ ಕನ್ನಡ ಸರಿಯಾಗಿ ಬರುತ್ತಿರುವಂತಿಲ್ಲ. ಬದಲಿಗೆ ಡಬ್ಬಗಳು ಬರುತ್ತಿವೆ. ಹೀಗಾಗಿ ಕನ್ನಡದಲ್ಲಿ ಸರ್ಚ್ ಮಾಡುವುದು ಸದ್ಯಕ್ಕೆ ಮರೀಚಿಕೆ!

ಎಲ್ಲ ಬ್ರೌಸರುಗಳಂತೆ ಇದರಲ್ಲೂ ಪಾಪ್-ಅಪ್ ಬ್ಲಾಕರ್ ಉಂಟು.

ಆದರೆ ಸದ್ಯಕ್ಕೆ ಜಾಹಿರಾತು ತಡೆಯುವ ಸಾಧನ ಏನೂ ಇದ್ದ ಹಾಗೆ ಇಲ್ಲ.

ನೀವು ಹೆಚ್ಚು ಭೇಟಿ ಕೊಟ್ಟ ಅಥವ ಕೊಡುತ್ತಿರುವ ಸೈಟುಗಳನ್ನು  thumbnails ಇಟ್ಟುಕೊಂಡು ಅಂದರೆ ಆಯಾ ಪುಟದ ಚಿಕ್ಕ ಚಿತ್ರ ಸೆರೆಹಿಡಿದು ಹೊಸ ಖಾಲಿ ಟ್ಯಾಬ್ ತೆರೆದಾಗ ತೋರಿಸುತ್ತದೆ. ಇದು ಉತ್ತಮ ಐಡಿಯ. ಆದರೆ ಭಾರವಾದ ಸವಲತ್ತಾಗುವ ಸಂಭವ ಹೆಚ್ಚು.

ಸ್ಟೇಟಸ್ ಬಾರ್ ಸ್ವಲ್ಪವೇ ಉದ್ದ ಕೊಟ್ಟಿರುವುದು ಒಳ್ಳೆಯ ಐಡಿಯ. ಉಳಿದ ಜಾಗ ನೋಡುತ್ತಿರುವ ಪುಟಕ್ಕೆ ಮೀಸಲಿಡಬಹುದು. ಹೆಚ್ಚಾಗಿ ಸ್ಟೇಟಸ್ ಬಾರಿನಲ್ಲಿ ಆ ಪ್ಲಗ್ಗಿನ್ನು ಈ ಪ್ಲಗ್ಗಿನ್ನು ಅಂತಲೇ ಉಪಯೋಗವಿಲ್ಲದ ಹಾಗೆ ಇಟ್ಟುಕೊಂಡಿರುತ್ತೇವಲ್ವೆ? (Firefox ಬಳಕೆದಾರರಿಗೆ ಇದು ಹೆಚ್ಚು ಸುಲಭವಾಗಿ ಅರ್ಥವಾಗುವುದು)

ಒಟ್ಟಾರೆ ಮೊದಲ ನೋಟಕ್ಕೆ ನನಗನಿಸಿದ್ದು "ಇನ್ನೂ ಕಾದು ನೋಡೋಣ" ಎಂಬುದು. ನನ್ನಂಥವರಿಗೆ ಈ ಬ್ರೌಸರ್ ನಿತ್ಯ  ಬಳಸುವುದರಿಂದ ದೂರವಿಡುವ ಸಮಸ್ಯೆಗಳು ಎರಡು:
೧) ಕನ್ನಡ ಅಡ್ರೆಸ್ ಬಾರ್ ನಲ್ಲಿ ಇನ್ನೂ ಸರಿಯಾಗಿ ಬರುತ್ತಿರುವಂತಿಲ್ಲ.
೨) ಗ್ನು/ಲಿನಕ್ಸ್ ಗೆ ಇನ್ನೂ ಈ ಬ್ರೌಸರ್ ಲಭ್ಯವಿಲ್ಲದಿರುವುದು.

ಈ ಬ್ರೌಸರ್ ಕುರಿತು ಮತ್ತಷ್ಟು ವಿವರ, observations ಮತ್ತೊಮ್ಮೆ... ಸಮಯವಾದರೆ!

  • ಜ್ಞಾನವಾಹಿನಿ
~.~
  • Login or register to post comments
  • 321 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 3, 2008 - 6:38am — ASHOKKUMAR

ಉ: ಗೂಗಲ್ ಕ್ರೋಮ್ : ಮೊದಲ ನೋಟ

ASHOKKUMAR's picture

ವಿವರವಾಗಿ ಬರೆದಿದ್ದೀರಿ. ಮಾಹಿತಿಪೂರ್ಣ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 7:43am — ASHOKKUMAR

ಉ: ಗೂಗಲ್ ಕ್ರೋಮ್ : ಮೊದಲ ನೋಟ

ASHOKKUMAR's picture

>>ಅಡ್ರೆಸ್ ಬಾರಿನಲ್ಲಿ ಕನ್ನಡ ಸರಿಯಾಗಿ ಬರುತ್ತಿರುವಂತಿಲ್ಲ
ಸಂಪದದಲ್ಲಿ ಬರಹ ಸೇರಿಸಲು,ಬರಹ ಡೈರೆಕ್ಟ್ ಬಳಸಿದಾಗಲೂ ಅಕ್ಷರ ಸರಿಯಾಗಿ ಮೂಡಲಿಲ್ಲ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 12:25am — hpn

ಉ: ಗೂಗಲ್ ಕ್ರೋಮ್ : ಮೊದಲ ನೋಟ

hpn's picture

ಒಮ್ಮೆ ಇನ್ನೂ ನೀಟಾಗಿ ಎಲ್ಲ ಇನ್ಪುಟ್ ಸಾಫ್ಟ್ವೇರುಗಳನ್ನು ಬಳಸಿ ಪ್ರಯತ್ನಿಸಿ ನೋಡಬೇಕು. ತೊಂದರೆ ಏನೆಂಬುದು ಗೊತ್ತಾಗುವುದು. ಆದರೆ ಸದ್ಯಕ್ಕೆ ನನಗೆ ವಿಂಡೋಸ್ ಎಕ್ಸ್ ಪಿ ಗೆ ರೀಬೂಟ್ ಮಾಡುವುದಕ್ಕಾಗುವುದು ಕಷ್ಟ - ವಾರಾಂತ್ಯವೇ ಇನ್ನು.

ನೀವೆಲ್ಲ ಪ್ರಯತ್ನಿಸಿ ನೋಡಿ ಮಾಹಿತಿ ಹಂಚಿಕೊಳ್ತೀರ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 11:59am — harshaperla

ಉ: ಗೂಗಲ್ ಕ್ರೋಮ್ : ಮೊದಲ ನೋಟ

harshaperla's picture

ನಂಗೆ ಅಡ್ರೆಸ್ ಬಾರಿನಲ್ಲಿ ಕನ್ನಡ ಸರಿಯಾಗಿ ಬಂತು. ಈ ಚಿತ್ರ ನೋಡಿ-
http://www.flickr.com/photos/9935686@N03/2824408458/

ಆದ್ರೆ ಸಂಪದಕ್ಕೆ ಪೋಸ್ಟ್ ಹಾಕುವಾಗ ಬರಹ ಡೈರೆಕ್ಟ್ ಸರಿಯಾಗಿ ಕೆಲಸ ಮಾಡಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 1:03pm — hpn

ಉ: ಗೂಗಲ್ ಕ್ರೋಮ್ : ಮೊದಲ ನೋಟ

hpn's picture

ಬಹುಶಃ ಬರಹ ಡೈರೆಕ್ಟಿನಲ್ಲಿರುವ ಬರಹ IMEಯಲ್ಲಿರುವ ಸಮಸ್ಯೆಯಿರಬಹುದು. ಏಕೆಂದರೆ ಮೈಕ್ರೋಸಾಫ್ಟ್ ಆಫೀಸ್ 2003ಯಲ್ಲಿ ಕೂಡ ಹೀಗೇ ಆಗುತ್ತಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 12:40pm — anil.ramesh

ಉ: ಗೂಗಲ್ ಕ್ರೋಮ್ : ಮೊದಲ ನೋಟ

anil.ramesh's picture

ಹರಿ,
ನಿಮ್ಮ ಸವಿವರ ಮಾಹಿತಿಗಾಗಿ ನನ್ನಿ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 12:26am — hpn

ಉ: ಗೂಗಲ್ ಕ್ರೋಮ್ : ಮೊದಲ ನೋಟ

hpn's picture

Smiling

ಏನ್ರಿ, ಹಬ್ಬಗಳಿಗೆ ರೆಡಿಯಾಗಿಬಿಟ್ಟಿದ್ದೀರಿ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 9:35am — anil.ramesh

ಉ: ಗೂಗಲ್ ಕ್ರೋಮ್ : ಮೊದಲ ನೋಟ

anil.ramesh's picture

Smiling

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 2:57pm — mahesha

ಉ: ಗೂಗಲ್ ಕ್ರೋಮ್ : ಮೊದಲ ನೋಟ

mahesha's picture

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 12:27am — hpn

ಉ: ಗೂಗಲ್ ಕ್ರೋಮ್ : ಮೊದಲ ನೋಟ

hpn's picture

Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮತ್ತೆ ಕೈಜೋಡಿಸಲು ಸಂಪದ ಬಳಗ
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ
  • ಬಿಗ್ ಬ್ಯಾಂಗ್ ಮತ್ತು ಮಾಧ್ಯಮ
  • ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ
  • 'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?
  • ಹಿರಿಯರ ಆಸೆ
  • ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
  • ಸ್ಥಿತಪ್ರಜ್ಞ
  • ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
  • ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?
  • ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಇತ್ತೀಚಿನ ಪ್ರತಿಕ್ರಿಯೆಗಳು

  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
  • kalpana
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:41am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 163 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator