ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
ಲಿನಕ್ಸ್ ನಲ್ಲಿ ತುಂಬಾ ಕಮಾಂಡ್ಸ್ ಇದೆ, ಹೆಂಗಪ್ಪಾ ಕಲಿಯೋದು ಅಂತ ಯೋಚನೆ ಆಗಿದೆಯಾ? ಅದಕ್ಕೋಸ್ಕರವೇ ಮ್ಯಾನುಯಲ್ ಪೇಜುಗಳಿವೆ. ನೀವು ಶೆಲ್ (ಟರ್ಮಿನಲ್)ನಲ್ಲಿ ವರ್ಕ್ ಮಾಡುತ್ತಿದ್ದರೆ man ಅಂತ ಟೈಪ್ ಮಾಡಿ ನಂತರ ಕಮಾಂಡಿನ ಹೆಸರು ಟೈಪ್ ಮಾಡಿ. ಉದಾಹರಣೆಗೆ ls ಅನ್ನೋ ಕಮಾಂಡು ಡೈರೆಕ್ಟರಿಯಲ್ಲಿನ ಕಂಟೆಂಟ್ ಅನ್ನು ಪ್ರಿಂಟ್ ಮಾಡುತ್ತೆ ಅನ್ನೋದು ಗೊತ್ತು ಆದರೆ ಅದರಿಂದ ಇನ್ನು ಹೆಚ್ಚು ಏನು ಮಾಡಬಹುದು ಅಂತ ತಿಳೀಬೇಕಿದ್ರೆ man ls ಅಂತ ಟೈಪ್ ಮಾಡಿ.
ಈಗ ಶೆಲ್ ನಲ್ಲಿ ಕೆಲಸ ಮಾಡಿ ಅಭ್ಯಾಸವಿಲ್ಲ , ಆದರೆ ಯಾವುದೋ ಒಂದು ಕಮಾಂಡ್ ಹೇಗೆ ಕೆಲಸ ಮಾಡುತ್ತೆ ಅಂತ ತಿಳಿಯಬೇಕಿದ್ರೆ
Alt + F2 ಒತ್ತಿ. Run Command ವಿಂಡೋ ಓಪನ್ ಆಗುತ್ತೆ. ಅದರಲ್ಲಿ ಈ ಕೆಳಗಿನಂತೆ ಬರೆಯಿರಿ.
man:ls (ಈ ಉದಾಹರಣೆ ls ಕಮಾಂಡ್ ಗೆ, ಬೇರೆ ಕಮಾಂಡ್ ಆದರೆ ls ಜಾಗದಲ್ಲಿ ಅದನ್ನು ಬರೆಯಿರಿ)
ಚೆಂದದ ಹೆಲ್ಪ್ ಫೈಲ್ ಓಪನ್ ಆಗುತ್ತೆ, ಆ ಕಮಾಂಡ್ ನ ಎಲ್ಲ ವಿವರಗಳು ಅದರಲ್ಲಿರುತ್ತೆ (ನೀವು KDE ಉಪಯೋಗಿಸುತ್ತಿದ್ದರೆ konqueror ನಲ್ಲಿ ಓಪನ್ ಆಗುತ್ತೆ, konquerorನ ಅಡ್ರೆಸ್ ಬಾರ್ ನಲ್ಲೇ man:ls ಅಂತ ಟೈಪ್ ಮಾಡಿದ್ರೂ ಆಗುತ್ತೆ. )
ಈಗ ಕಮಾಂಡ್ ಗಳ ಹೆಸ್ರೇ ಗೊತ್ತಿಲ್ಲಾ ಇನ್ನು ಅದ್ರ ಮ್ಯಾನುಯಲ್ ಪೇಜ್ ನೋಡೋದು ಹೇಗೆ ಅಂದುಕೊಳ್ತಿದೀರಾ? ಕೆಲವು ಸಿಂಪಲ್ ಕಮಾಂಡ್ ಗಳನ್ನ ತಿಳಿಯಲು ಸುಲಭದ ಉಪಾಯ ಇದೆ.
ಸಾಮಾನ್ಯವಾಗಿ ಕೆಲವನ್ನು ಊಹೆ ಮಾಡಬಹುದು
೧. ಪದಗಳ ಮೊದಲನೆ ಅಕ್ಷರ ಮತ್ತು ಮೂರನೇ ಅಕ್ಷರ
copy - cp
move - mv
make direcory - mkdir
list - ls
೨. ಎರಡು ಪದಗಳ ಮೊದಲನೆ ಅಕ್ಷರಗಳನ್ನು ಸೇರಿಸಿ
change directory - cd
process status - ps
ಬಳಸಲು ಪ್ರಾರಂಭ ಮಾಡಿದ್ಮೇಲೆ ಹೊಸ ಹೊಸ ಕಮಾಂಡ್ಸ್ ಗೊತ್ತಾಗ್ತಾ ಹೋಗುತ್ತೆ.

- Login or register to post comments
- 272 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
ಒಳ್ಳೆಯ ಲೇಖನ, ಅರವಿಂದ.
ಈ ಕಮ್ಯಾಂಡುಗಳು ನಮ್ಮ daily routine ಆಗಿದ್ದರೂ ಗಾಡಿ ಓಡಿಸುವಾಗ ಗೇರ್ ಹಾಕಿಯೂ ಮರೆತಂತೆ ಇವುಗಳನ್ನು ಬಳಸುತ್ತಲೇ ಮರೆತಂತೆ ನಡೆದಿರುತ್ತೇವೆ. ಆದರೆ ಈ ಕಮ್ಯಾಂಡುಗಳನ್ನ ಸರಿಯಾಗಿ ಬಳಸುವುದ ಕಲೆತುಕೊಳ್ಳುವುದು ಮುಖ್ಯ, ಗೇರ್ ಹಾಕಲು ಮೊದಲು ಕಲೆತಂತೆ, ಅಲ್ವ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
ಹೌದು, ಮೊನ್ನೆ ಯಾರೋ ವಿಐನಲ್ಲಿ ಏನನ್ನೋ ಹೇಗೆ ಮಾಡೋದು ಅಂತ ಕೇಳಿದರು. ನನಗೇನು ಗೊತ್ತು. ನನ್ನ ಬೆರಳನ್ನು ಕೇಳಿ ಅನ್ನಬೇಕಾಯಿತು...
ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
ನಾನು ಲಿನಕ್ಸ್ ಉಪಯೋಗಿಸಿಲ್ಲ. ವಿಂಡೋಸ್ ಜೊತೆಗೆ ಇನ್ಸ್ಟಾಲ್ ಮಾಡಬಹುದಾದ ಮತ್ತು ಯೂಸರ್ ಫ್ರೆಂಡ್ಲಿ ಆಗಿರುವ ಯಾವ ಲಿನಕ್ಸನ್ನು ಇನ್ಸ್ಟಾಲ್ ಮಾಡಬಹುದು ಸ್ವಲ್ಪ ಹೇಳ್ತೀರಾ?
ಕೀರ್ತಿ ಕಿರಣ್ ಎಂ
ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
ಲಿನಕ್ಸ್ ಕಮ್ಯಾಂಡ್ ಗಳನ್ನ ಕಲೀಲಿಕ್ಕೆ ಅವುಗಳ ಉಪಯೋಗ ಮಾಡೇ ತೀರ್ಬೇಕು. ಅದನ್ನ ಕಲಿಸ್ಬೇಕಂದ್ರೆ ಅದಕ್ಕೆ ಬೇಕಾದ ಸಂದರ್ಭವನ್ನ ಸೃಷ್ಟಿಸಿ ಕಲಿಸೋದ್ರಿಂದ ಪ್ರಾಕ್ಟಿಕಲ್ ಅನುಭವ ಮಾಡಿಸ್ಲಿಕ್ಕೆ ಸಾಧ್ಯವಾಗತ್ತೆ. ಇಲ್ಲಾಂದ್ರೆ ಪೇಪರ್ ಪರೀಕ್ಷಗೆ ಮಾತ್ರ ತಯಾರಾಗಿ ಬದುಕಿನ ಪರೀಕ್ಷೆಯಲ್ಲಿ ಕಷ್ಟಪಡುವ ಪಾಡಾಗತ್ತೆ ನಮ್ದು. ಅಲ್ಲೂ ಶಾರ್ಟ್ಕಟ್ ಬೇಕಂದ್ರೆ, ಗೂಗಲ್, TLDP.org ಇಂತಹವನ್ನ ಉಪಯೋಗಿಸೋದನ್ನ ಕಲಿಯೋದು (ಅಲ್ಲೂ ಪ್ರಾಕ್ಟಿಕಲ್ಲಾಗಿರ್ಬೇಕು
)
ಕೀರ್ತಿ ,
ಉಬುಂಟು ೮.೦೪ ಇನ್ಸ್ಟಾಲ್ ಮಾಡ್ಕೊಳ್ಳಿ. ವಿಂಡೋಸ್ ನಲ್ಲೇ ಇನ್ಸ್ಟಾಲ್ ಮಾಡ್ಕೋಬಹುದು.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಲಿನಕ್ಸ್ ಕಮಾಂಡ್ಸ್ ಗಳಿಗೆ ಸುಲಭದ ಮ್ಯಾನುಯಲ್
ಉಬುಂಟು ಇನ್ಸ್ಟಾಲ್ ಮಾಡಿದೆ. ಆದರೆ ಇಂಟರ್ ನೆಟ್ configure ಮಾಡಲು ತುಂಬಾ ಫಜೀತಿ ಆಯಿತು. ತುಂಬಾ ತಲೆ ಕೆರೆದುಕೊಂಡ ಮೇಲೆ ಈಗ ಅಂತರ್ಜಾಲ ಕೆಲಸ ಮಾಡುತ್ತಿದೆ.
ಕೀರ್ತಿ ಕಿರಣ್ ಎಂ