ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !

July 25, 2008 - 5:46am — venkatesh
HPIM1348.jpg

ಡಿಸ್ನಿಲ್ಯಾಂಡ್ ನ ಮೇನ್ ಸ್ಟ್ರೀಟ್ ಯು.ಎಸ್.ಎ, ನಲ್ಲಿ ಹಾಗೇ ಅಡ್ಡಾಡುತ್ತಾ ಹೋದರೆ, ವಾಲ್ಟ್ ಡಿಸ್ನೆ ಚೌಕವನ್ನು ತಲುಪುತ್ತೇವೆ. ನೇರವಾಗಿ ಹೋದರೆ, ಫ್ಯಾಂಟಸಿ ಲ್ಯಾಂಡ್, ಕೊನೆಗೆ, ಮಿಕಿಸ್ ’ಟೂನ್ ಟೌನ್’ ಸಿಗುತ್ತದೆ. ಚೌಕದ ಬಲಭಾಗದಲ್ಲಿ, ಟುಮಾರೊ ಲ್ಯಾಂಡ್, ಸಿಗುತ್ತದೆ. ಅಲ್ಲಿ " ಸ್ಪೇಸ್ ಮೌಂಟೆನ್" ಇದೆ. ಅದೇ ಯೆಲ್ಲರೂ ಸುಮಾರು ೧ ಗಂಟೆಗೂ ಮಿಗಿಲಾಗಿ ಲೈನಿನಲ್ಲಿ ನಿಂತು ’ರೋಲರ್ ಕೋಸ್ಟರ್ ’ ನ ಸವಿಪ್ರಯಾಣಕ್ಕಾಗಿ ಕಾತುರದಿಂದ ಕಾಯುತ್ತಿರುವ ಆಕರ್ಷಕ ತಾಣ !

ರೋಲರ್ ಕೋಸ್ಟರ್ ಬಗ್ಗೆ ಓದಿದ್ದೆವು. ಕೇಳಿದ್ದೆವು. ಆದರೆ ಆ ಮೈನವಿರೇಳಿಸುವ ಅದ್ಭುತ ಅನುಭವ ನಮ್ಮ ಜೀವಿತದುದ್ದಕ್ಕೂ ನೆನೆಪಿನ ಪದರಗಳಲ್ಲಿ ಉಳಿಯುವುದು ಖಂಡಿತ ! ಸ್ವಲ್ಪ ವಯಸ್ಸಾದ ನನ್ನಂತಹವರಿಗೆ ಅದು ಉಸುರುಸಿಕ್ಕಿಹಾಕಿಕೊಳ್ಳುವ, ಒಮ್ಮಿಂದೊಮ್ಮೆ ಏದುಸಿರುಪಡುವ, ’ಓಹ್ ” ಎಂದು ನಿಟ್ಟಿಸುರುಪಡುವ, ಮಿಶ್ರ ಅನುಭವ ! ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿ, ಗಣೇಶನ ಜಪವನ್ನು ಮಾಡಲಾರಂಭಿಸಿದೆ. ಸದ್ಯ, ಈಗ ಅಲ್ಲಿ ಲೈಟ್ ಹಾಕಲ್ಲ. ಎಲ್ಲ ಪರಿಪಾಟಲುಗಳೆಲ್ಲಾ ಕತ್ತಲಿನಲ್ಲಿ ! ಏಕ್ದಮ್ ಎತ್ತರದಿಂದ ಕೆಳಗೆ ದಿಢೀರನೆ ಇಳಿದುಬರುವಾಗ ರಕ್ತ ’ಝುಂ’ ಎಂದು ರಕ್ತ-ನಾಳಗಳಲ್ಲಿ ಹರಿಯುವುದನ್ನು ಅನುಭವಿಸುತ್ತೇವೆ. ಇಷ್ಟರಲ್ಲೇ ನಮ್ಮ ಪುಟ್ಟವಾಹನ, ಪಕ್ಕದಲ್ಲಿ ಅತಿಯಾಗಿ ಎಷ್ಟೋ ಡಿಗ್ರಿಯಲ್ಲಿ ವಾಲುತ್ತಲೇ ನುಗ್ಗಿ, ಒಮ್ಮೆಲೇ ಗಬಗಬನೆ ಮೇಲೇ ಏರುತ್ತದೆ. ಗಡ-ಗಡ ಅಲ್ಲಾಡುತ್ತಾ ನಾಗಾಲೋಟದ ಓಟದಲ್ಲಿ ಮಗ್ನವಾಗುತ್ತದೆ. ಹೋ ಎಂದು ಕೂಗುವ ಮಕ್ಕಳ, ಯುವಕ-ಯುವತಿಯರ ಕೇಕೋತ್ಸಾಹ, ಆನಂದ, ಸಂಭ್ರಮ, ರೆಕಾರ್ಡೆಡ್ ಅಬ್ಬರದ ಸಂಗೀತದ ಪ್ರವಾಹದಲ್ಲಿ ತೇಲಿಹೋಗುತ್ತವೆ.

ಹಾ... ! ಸದ್ಯ, ಹೊರಟ ಜಾಗ ಬಂತು. ನನಗೋ ತಲೆನೋವು ! ಹೆಂಡತಿ, ಮಗನ ಮುಖದಲ್ಲಿ ವಿಜಯೋತ್ಸಾಹ, ಮಂದಹಾಸ ! ನಾನು ಕಾಲು ನೋವು, ತಲೆ ನೋವಿನಿಂದ ಮುಲುಗುತ್ತಿದ್ದೆ. ಕಾಲುಗಳು, ನಡುಗುತ್ತಿದ್ದವು. ಮುಖಬೆವರಿನಿಂದ ಕಪ್ಪಿಟ್ಟುಹೋಗಿತ್ತು. ಹೊರಗೆ ಬೆಂಚಿನಮೇಲೆ ೧೫ ನಿಮಿಷ ಸುಧಾರಿಸಿಕೊಂಡೆ ! , ಹೆಂಡತಿ ನನಗೆ ಸಮಾಧಾನಮಾಡುತ್ತಿದ್ದಳು. ಮಗ ಅಲ್ಲಿನ ಗ್ಯಾಲರಿಯಲ್ಲಿ ನಮ್ಮ ೩ ಜನರ ಫೋಟೋಗಳನ್ನು ನೋಡಿ ಆನಂದಿಸುತ್ತಿದ್ದ ! ಈ ಫೋಟೊಗಳು ೫-೮ ನಿಮಿಷ ನೋಡಲು ಮಾತ್ರ ಲಭ್ಯ !

ಖಂಡಿತವಾಗಿ, ನೀವು ಕೂಡ, ಈ ಅನೌಖಿಕ ಅನುಭವವನ್ನು ಪಡೆಯಲು ಮರೆಯದಿರಿ !!

  • ಅನುಭವ ಕಥನ
~.~
  • Login or register to post comments
  • 109 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫೈರ್ ಎಂಜಿನ್, ನಲ್ಲಿ ಪ್ರಯಾಣ ! ಡಿಸ್ನಿಲ್ಯಾಂಡ್ ನ ಪ್ರಾರಂಭಿಕ, ಮೇನ್ ಸ್ಟ್ರೀಟ್, ಯು.ಎಸ್.ಎ .ನಲ್ಲಿ ಪದೇ-ಪದೇ ಕಾಣಿಸುವ ದೃಷ್ಯ.
  • ಮೊಟ್ಟೆಯನ್ನು ಬೇಯಿಸುವ ಮೊಬೈಲ್!
  • ಮೊಹೆಂಜೋದಾರೋ ನಲ್ಲಿ ಭೂಮಿಯನ್ನು ಅಗಿದಾಗ ಅಲ್ಲಿನ ಒಂದು ವಾಝಿನ ಕೆಳಗೆ ಆಂಟಿಕೊಂಡಿದ್ದ ವಸ್ತು, ಹತ್ತಿ ಬಟ್ಟೆ ಎಂದು ತಿಳಿದುಬಂತು !
  • ಬೆಂಗಳೂರು ಅಂದ್ರೆ... ಏನೋ ಅಂದುಕೊಂಡಿದ್ದೆ
  • "ನಮ್ಮ ಸುನಿ," ಗುರುವಾರ, (ಭಾರತೀಯ ಕಾಲಮಾನದ ರೀತಿ ) ಭೂಮಿಗೆ ಮರಳುತ್ತಿದ್ದಾಳೆ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 130 ಅತಿಥಿಗಳು ಆನ್ಲೈನ್ ಇರುವರು.


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator