ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು

July 22, 2008 - 10:53pm — narendra
Bannada Kaalu.jpg

ಗಾಳಿ ಮರದ ನೆಳಲು, ಸ್ವಪ್ನದೋಷ, ಟ್ರೈಸಿಕಲ್, ಬಿಡು ಬಿಡು ನಿನ್ನಯ, ಚೌತಿ ಚಂದ್ರ, ಬಣ್ಣದ ಕಾಲು, ಸೇವಂತಿ ಹೂವಿನ ಟ್ರಕ್ಕು ಮತ್ತು ಅಪರೂಪ ಕತೆಗಳು ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯವಾಗುತ್ತವೆ. ಗಾಳಿ ಮರದ ನೆಳಲು, ಸೇವಂತಿ ಹೂವಿನ ಟ್ರಕ್ಕು, ಬಣ್ಣದ ಕಾಲು ಮೂರೂ ಕತೆಗಳು ಭಿನ್ನ ಭಿನ್ನ ನೆಲೆಯಲ್ಲಿ, ಭಿನ್ನ ಭಿನ್ನ ವಯೋಮಾನದ ಪಾತ್ರಗಳ ಪಾತಳಿಯಲ್ಲಿ ಮಾನವನ ಆಂತರಿಕ ತುಮುಲಗಳ ಸುತ್ತ, ಅವನ ಅಂತಃಕರಣದ ಸೆಲೆಗಳ ಮೂಲ ಅರಸುತ್ತ ಬಿಚ್ಚಿಕೊಳ್ಳುತ್ತವೆ. ಆದರೆ ಮಾಸ್ತಿ ಕತೆಗಳ ನೆನಪು ತರುವ ಬಿಡುಬಿಡು ನಿನ್ನಯ ಕತೆಯಲ್ಲಿ ಮಾಸ್ತರರು ಘನಶ್ಯಾಮನನ್ನು ನೋಡಲು ಹೋಗದಿರುವ ನಿರ್ಧಾರಕ್ಕೆ ಬರುವುದು ಅಚ್ಚರಿ ಹುಟ್ಟಿಸುತ್ತದೆ. ಹಾಗಾಗಿ ಗಾಳಿ ಮರದ ನೆಳಲು ಕತೆಯ ನಾಗಮ್ಮನ ಔದಾರ್ಯವನ್ನು ಘನಶ್ಯಾಮನಲ್ಲಿ ಕಾಣಬಹುದಾದ ಸಾಧ್ಯತೆ ಇಲ್ಲಿಲ್ಲ. ಅದರೆದುರು ಘನಶ್ಯಾಮ ಮನಸ್ಸಿಗೆ ಹಿಂಸೆ ಮಾಡಿಕೊಂಡರೆ ಎಂಬ ಮಾಸ್ತರರ ತರ್ಕ ಸ್ವಲ್ಪ ಕಡಿಮೆಯದ್ದಕ್ಕೆ ರಾಜಿ ಮಾಡಿಕೊಂಡಂತೆಯೇ ಕಾಣುತ್ತದೆ! ಟ್ರೈಸಿಕಲ್ ಮತ್ತು ಅಪರೂಪ ಕತೆಗಳಲ್ಲೂ ಜಯಂತರ ಕಾಳಜಿ ಮನುಷ್ಯ ಸಂಬಂಧಗಳ ನಡುವೆ ದೃವಿಸುವ ಅಂತಃಕರಣದ ಅಪರೂಪದ ಕ್ಷಣಗಳನ್ನು ಕಟ್ಟಿಕೊಡುವುದೇ ಆಗಿದೆ. ಸ್ವಪ್ನದೋಷ ಕತೆ ಕೂಡ ಬಿಡು ಬಿಡು ನಿನ್ನಯ ಕತೆಯಂತೆಯೇ ಜಯಂತರ ಎಂದಿನ ಶೈಲಿ, ಆಶಯ ಮತ್ತು ನಿಲುವುಗಳಿಗೆ ಭಿನ್ನವಾಗಿ ಹೊಸತನವನ್ನು ತೋರುತ್ತವೆ. ಇದೇ ಮಾತು ನಿರೂಪಣೆಯ ವಿಧಾನದ ಮಟ್ಟಿಗೆ ಚೌತಿಚಂದ್ರ ಕತೆಗೂ ಅನ್ವಯಿಸುತ್ತದೆ.

೧೯೯೯ರಲ್ಲಿ ಬಂದ ಈ ಸಂಕಲನ ದ್ವಿತೀಯ ಮುದ್ರಣ ಕಂಡಿದೆ, ಅಂಕಿತದವರು ತಂದಿದ್ದಾರೆ.

  • ಪುಸ್ತಕ ವಿಮರ್ಶೆ
~.~
  • Login or register to post comments
  • 263 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 23, 2008 - 6:29am — cmariejoseph

ಉ: ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು

cmariejoseph's picture

"ಇಲ್ಲಿನ (ಗಾಳಿಮರದ ನೆಳಲು) ವಿವರಗಳು ಎಷ್ಟೊಂದು ಸೊಗಸಾಗಿವೆ ಎಂದರೆ, ವ್ಯಾನು ಬರುತ್ತೋ ಇಲ್ವೋ, ನಿಲ್ಲಿಸ್ತಾರೋ ಇಲ್ವೋ, ಅವನಿಗೆ ಇದೆಲ್ಲ ಇಷ್ಟವಾಗುತ್ತೋ ಇಲ್ವೋ ಎಂಬೆಲ್ಲ ಆತಂಕಗಳು ನಾಗಮ್ಮ, ತುಳಸಿಯರದ್ದಾಗದೆ ಓದುಗರದ್ದೇ ಆಗಿಬಿಡುತ್ತವೆ. ಇದನ್ನು ಸಾಧ್ಯವಾಗಿಸಿರುವುದು (ಜಯಂತರ) ಈ ಕತೆಯ ಯಶಸ್ವೀ ಅಂಶ . . ."

ಅದಕ್ಕಿಂತಲೂ ಯಶಸ್ವೀ ಅಂಶವೆಂದರೆ ಪತ್ನಿ ಸ್ಥಾನದಲ್ಲಿರುವ ನಾಗಮ್ಮ ಇಟ್ಟುಕೊಂಡವಳಾದ ಗೌರಿಯನ್ನೂ ತನ್ನಂತೆ ಪರಿಭಾವಿಸುವುದು.

ಜಯಂತರ ಎಲ್ಲ ಕತೆಗಳೂ ಚೆನ್ನ. ಅಂತೆಯೇ ನಿಮ್ಮ ವಿಮರ್ಶೆಯೂ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪರಮೇಶ್ವರ
  • ಎರಡು ಪುಟ್ಟಾತಿಪುಟ್ಟ ಕತೆಗಳು ..
  • ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್
  • ನಕ್ಕು ಬಿಡು !!
  • ಜುಂಪಾ ಲಾಹಿರಿಯವರ ಹೊಸ ಪುಸ್ತಕ
Syndicate content

ಲೇಖಕರು

narendra's picture

ಪೂರ್ಣ ಹೆಸರು
narendra

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ -ಮೆಕ್ಕೆಜೋಳ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 111 ಅತಿಥಿಗಳು ಆನ್ಲೈನ್ ಇರುವರು.


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator