ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ.

“ಒಲೆಗೆ ಉರುವಲು ಇಲ್ಲ ಎಂದು ಕಲ್ಪವೃಕ್ಷವನ್ನು ಕಡಿವರುಂಟೆ...?”
ಇಂಥದೊಂದು ಉದಾಹರಣೆ ಆ ಆಧುನಿಕ ಸಂದರ್ಭ ಕಾಣಬೇಕು ಎಂದರೆ ಕರ್ನಾಟಕಕ್ಕೆ ಬನ್ನಿ. ಬಜೆಟ್ ನೋಡಿ.
ರೈತರ ಅಧಿನಾಯಕನೆಂದೇ ಕರೆಸಿಕೊಳ್ಳಲು ಖುಷಿ ಪಡುವ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗೆ ಬಹುದೊಡ್ಡ ಬಳುವಳಿ ನೀಡಿದ ನೆಮ್ಮದಿಯಲ್ಲಿದ್ದಾರೆ. ಆದರೆ, ಅವರ ಈ ಆಶಯ ದೂರದೃಷ್ಟಿಯುಳ್ಳದ್ದೇ ಎಂಬುದು ನಿಜಕ್ಕೂ ವಿಚಾರ ಮಾಡಬೇಕಾದ ವಿಷಯ.
ನಿಜ, ರೈತರು ಕಷ್ಟದಲ್ಲಿದ್ದಾರೆ. ರೈತರಿಗೆ ನೆರವು ನೀಡಲೇಬೇಕು. ಮುಖ್ಯಮಂತ್ರಿಗಳ ಈ ಯೋಜನೆ ರೈತರ ಪರ ನಿಲುವೇನೋ ಸರಿ. ಆದರೆ, ಇದರ ದೂರಗಾಮಿ ಪರಿಣಾಮ ಜೀವ ವಿರೋಧಿಯೂ ಆಗಿರುವುದು ದುರಂತ. ಇಂದಿನ ಬವಣೆಗೆ ನೀಗಿಸಿಕೊಳ್ಳುವ ಭರದಲ್ಲಿ ಭವಿಷ್ಯದ ಬೊಕ್ಕಸಕ್ಕೆ ಬೊಕ್ಕೆ ಹಾಕುವುದು ಸರಿಯೇ? ಮುಖ್ಯಮಂತ್ರಿಗಳ ಈ ಕ್ರಮ ಭವಿಷ್ಯದ ರೈತಾಪಿ ಕುಲಕ್ಕೆ ಕಂಟಕವಾಗುವುದರಲ್ಲಿ ಸಂದೇಹವಿಲ್ಲ.
ಇಷ್ಟೆಲ್ಲಾ ಹೇಳಬೇಕಾಗಿ ಬಂದಿದ್ದು ರೈತರಿಗೆ ಉಚಿತ ವಿದ್ಯುತ್ತು ನೀಡಲು ಸರ್ಕಾರ ಮುಂದೆ ಬಂದಿದ್ದರಿಂದ.
ಈ ಯೋಜನೆ ಕಾರ್ಯಸಾಧುವಲ್ಲ, ಎಂಬುದು ಈಗಾಗಲೇ ಹಲವಾರು ಬಾರಿ, ಹಲವಾರು ರಾಜ್ಯಗಳಲ್ಲಿ –ನಮ್ಮ ರಾಜ್ಯವೂ ಸೇರಿದಂತೆ, ಸಾಬೀತಾಗಿದೆ. ಈ ಯೋಜನೆಯನ್ನು ವಿರೋಧಿಸುತ್ತಿರುವವರೂ, ವಿದ್ಯುತ್ ಸಮಸ್ಯೆ, ಬೊಕ್ಕಸಕ್ಕೆ ಭಾರ ಎಂದೆಲ್ಲಾ ಕಾರಣ ಕೊಡುತ್ತಿದ್ದಾರೆ. ಅದು ನಿಜವೂ ಇರಬಹುದು. ಆದರೆ, ಬಹುಮುಖ್ಯ ಮೂಲ ಕಾರಣವೊಂದು ಹಿನ್ನೆಲೆಯಲ್ಲೇ ಉಳಿದು ಬಿಟ್ಟಿದೆ. ಅದು ಅಂತರ್ಜಲ.
ಲೇಖನದ ಉಳಿದ ಭಾಗ ವಾಟರ್ ಪೋರ್ಟಲ್ಲಿನಲ್ಲಿದೆ. ಓದಲು ಕ್ಲಿಕ್ ಮಾಡಿ ».
("ಕನ್ನಡದಲ್ಲಿ ವಾಟರ್ ಪೋರ್ಟಲ್" ಯೋಜನೆ ಸಂಪದ ಫೌಂಡೇಶನ್ನಿನ ಸಹಯೋಗದಿಂದ ಮೂಡಿ ಬರುತ್ತಿದೆ.)

- Login or register to post comments
- 283 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ಉಚಿತ ಎಂದು ಹೇಳಿಕೆ ಅಷ್ಟೆ
ನಮ್ಮ ಊರಿನ ಕಥೆ ಹೇಳ್ತೀನಿ ಕೇಳಿ.
ವಿದ್ಯುತ್ ಉಚಿತವಿಲ್ಲದಿದ್ದಾಗಲೂ ದಿನಕ್ಕೆ 7 ಕ್ಕೂ ಹೆಚ್ಚು ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್, ಅಮೇಲೆ ಕೆಲವು ಸಮಯ ಸಿಂಗಲ್ ಫೇಸ್. ತೋಟಗಳಿಗೆ ನೀರುಣಿಸಲು ರಾತ್ರಿ ೧೦ ರ ನಂತರ 3 ಫೇಸ್ ವಿದ್ಯುತ್. ಪಂಪ್ ಏನಾದರೂ ಮನೆಯಿಂದ ದೂರ ಇದ್ದರೆ ಮುಗೀತು ಕಥೆ, ರಾತ್ರಿ ಅಲ್ಲಿಗೆ ಹೋಗಿ ಮೋಟರ್ ಆನ್ ಮಾಡಿ ಬರಬೇಕು. ಅಷ್ಟೇ ಅಲ್ಲ ಬೇರೆಯವರೆಲ್ಲಾ ಬೇಗ ಪಂಪ್ ಸ್ಟಾರ್ಟ್ ಮಾಡಿದ್ರೆ ನಮ್ಮನೆ ಪಂಪ್ ವೋಲ್ಟೇಜ್ ಲೋ ಅಂತ ಕುಳಿತು ಬಿಡಿತ್ತೆ.
ಇನ್ನು ಉಚಿತ ಅಂತ ಹೇಳಿದರೆ ಎಷ್ಟು ಗಂಟೆ ಲೋಡ್ ಶೆಡ್ಡಿಂಗೋ(24 ಗಂಟೆ ಮಾಡದಿದ್ರೆ ಸಾಕು
)
ಇನ್ನು ಮಳೆಗಾಲದಲ್ಲಿ ಯಾರೂ ತೋಟಕ್ಕೆ ನೀರು ಬಿಡೋಲ್ಲ ಅಂತ ಗೊತ್ತಿರೋದ್ರಿಂದ ಲೋಡ್ ಶೆಡ್ಡಿಂಗ್ ಕಡಿಮೆ ಇರುತ್ತೆ, ಆದರೆ ನಮ್ಮ ಗ್ರಹಚಾರಕ್ಕೆ ಕಾಡುಗಳ ಮಧ್ಯೆ ಪವರ್ ಲೈನ್ ಇರೋದ್ರಿಂದ ಮರಗಳು ಬಿದ್ದೋ ಅಥವ ಸಿಡಿಲು ಬಡಿದೊ ಕೈಕೊಡುತ್ತೆ. ಅಮೇಲೆ ಒಂದು ವಾರಕ್ಕೂ ಹೆಚ್ಚು ದಿನ ಅಲೀಬೇಕು ಸರಿಮಾಡಿಸಲು.
ಆದರೆ ಒಂದು ಮಾತು ಹೇಳಬೇಕೆನಿಸುತ್ತೆ, ಮಲೆನಾಡಿನ ಜರಿಗಳಲ್ಲಿ ಸಣ್ಣ ಸಣ್ಣ ವಿದ್ಯುತ್ ತಯಾರಿಕಾ ಕೇಂದ್ರ ಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಅಂತ.
ನಮ್ಮ ಹಳ್ಳಿಯಲ್ಲಿ ಸಿಗುವ ಮೊಬೈಲ್ ನೆಟ್ ವರ್ಕ್ ಸದ್ಯಕ್ಕೆ bsnl ಒಂದೇ ! .. (ಇನ್ನು ಅಂತರ್ಜಾಲ ಕನಸು)
ನಮ್ಮೂರಲ್ಲೂ ಮಳೆಕೊಯ್ಲು ಆರಂಬಿಸಿದಾರೆ ಕೆಲವರು, ನಮ್ಮ ಮನೆಯ ಕೆರೆಯಲ್ಲೂ ಮಳೆಕೊಯ್ಲಿಗೆ ಪ್ಲಾನ್ ಮಾಡಿದೀವಿ
ನಿಮ್ಮವನೇ,
ಅರವಿಂದ
ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ಅರವಿಂದ, interesting ಮಾಹಿತಿ ಮಾರಾಯ.
ಸೋಲಾರ್ ಬಳಸಿಕೊಳ್ಳುವ ಪ್ರಯೋಗಗಳೇನಾದ್ರೂ ಆಗಿವೆಯ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ನಮ್ಮಲ್ಲಿ ಉಚಿತ ಅನ್ದರೆ ಸದರ ಜಾಸ್ತಿ.ಮೌಲ್ಯ ಗೊತ್ತಿಲ್ಲ.ಸಿನ್ಗಲ್ ಫೇಸ್ ಇದ್ರೂ ಅದನ್ನು ಥ್ರೀ ಫೇಸ್ಗೆ ಬದಲಾಯಿಸಿ ವಿದ್ಯುತ್ ಬಳಸೋ ಜಾಣರಿರುವಾಗ ನೀರಿನ ಕೊರತೆ ಅಲ್ಲೂ ಕಾಡಬಹುದಲ್ಲವೆ?ಹಳ್ಳಿ ಅನ್ದ್ರೆ ಸ್ವಲ್ಪ ಅಲಕ್ಶ್ಯ.ಆದಾಯ ಕಮ್ಮಿ ಅನ್ತ ವಿದ್ಯುತ್ ಕಡಿತ ಮಾಡ್ತಾರೆ.ಅದೇ ರಾಜಧಾನಿಯಲ್ಲಿ ಅಳೆದೂ ಸುರಿದೂ ವಿದ್ಯುತ್ ಕಡಿತ ಶುರುವಾಯ್ತು(ದಿನಕ್ಕೆ ೫೦ ಲಕ್ಶ ಆದಾಯ ಕಡಿಮೆ ಆಗುತ್ತಲ್ಲ).ನಗರದವರಿಗೆ ತೊನ್ದರೆ ಆಗಬಾರದು ;ಹಳ್ಳಿ ಆದ್ರೆ ಪರವಾಗಿಲ್ಲ ಅನ್ನೋದು ಯಾವ ನ್ಯಾಯ?ಮೊದಲು ಕೇರಿಗೊನ್ದು ಬಾವಿ ಇತ್ತು;ಈಗ ಮನೆಗೊನ್ದು ಬಾವಿ ಇದೆ.ಹೀಗಾದರೆ ಅನ್ತರ್ಜೆಲದ ಕಥೆ ಏನು?ವಿದ್ಯುತ್ ನೀರು ಉಳಿಸಿ ಅನ್ದ್ರೆ ಜಿಪುಣಿ ಅನ್ತಾರೆ.ಬಿಲ್ ಕಟ್ತೀವಿ ಅನ್ತ ಬೇಕಾಬಿಟ್ಟಿ ಬಳಸಬಾರದುಅಲ್ವ?ಹಗಲೂ ಉರಿಯುವ ಬೀದಿ ದೀಪಗಳನ್ನು ಹಾಗೂ ಸರಕಾರಿ ಕಚೇರಿಗಲ್ಲಿ ವಿದ್ಯುತ್ ಪೋಲು ಆಗುವುದನ್ನು ತಡೆದರೆ ಬೇಕಾದಶ್ಟಾಯ್ತು.
ಉ: ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?
ನಿಜ ಹರಿಪ್ರಸಾದ್, ಇದೊಂದು ಬೋಗಸ್ ಯೋಜನೆ. ಏಕೆಂದರೆ, ಹಿಂದೆ ಕೂಡ ಇಂಥವೇ ’ಜನಪ್ರಿಯ’ ಯೋಜನೆಗಳನ್ನು ಘೋಷಿಸಲಾಗಿತ್ತು. ಆದರೆ, ಅವು ಸರಿಯಾಗಿ ಕೆಲಸ ಮಾಡದ ಉದಾಹರಣೆಗಳು ಕಣ್ಣ ಮುಂದೆಯೇ ಇವೆ.
ಇದೊಂದು ಮೂರ್ಖ ಯೋಜನೆಯೂ ಹೌದು. ಯಾವುದೇ ಸೌಲಭ್ಯ ಉಚಿತವಾಗಿ ಬಂದರೆ, ಅದರ ಮಹತ್ವ ಗೊತ್ತಾಗದಿರುವ ಸಂದರ್ಭಗಳೇ ಬಹಳ. ದುರ್ಬಳಕೆ ಹೆಚ್ಚು. ಅದನ್ನು ತಡೆಯುವುದು ಸುಲಭವಲ್ಲ. ಇಂತಹ ಯೋಜನೆಗಳಿಂದಾಗಿ ರೈತರು ಈಗಾಗಲೇ ಸರ್ಕಾರದ ಮೇಲೆ ಅವಶ್ಯಕತೆಗಿಂತ ಹೆಚ್ಚೇ ಅವಲಂಬಿತರಾಗಿದ್ದಾರೆ. ಅದರ ಪರಿಣಾಮವಾಗಿ, ಒಂದಿಷ್ಟು ಏರುಪೇರಾದರೂ ಸಹಿಸಿಕೊಳ್ಳಲಾಗದೇ ಆತ್ಮಹತ್ಯೆಯತ್ತ ಮುಖ ಮಾಡುತ್ತಾರೆ.
ಉಚಿತ ಅಥವಾ ಸಹಾಯಧನದಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಇತ್ಯಾದಿ ಕಾರ್ಯಕ್ರಮಗಳು ರೈತನನ್ನು ಪರಾವಲಂಬಿ ಮಾಡಿಯಾಗಿದೆ. ಅದರ ಸಾಲಿಗೆ ಉಚಿತ ವಿದ್ಯುತ್ತೂ ಸೇರಿಕೊಳ್ಳುತ್ತದೆ. ಇದು ವಿಫಲವಾಗುತ್ತದೆ. ಅಷ್ಟೇ ಅಲ್ಲ, ಅತ್ಯಂತ ದುಬಾರಿಯಾಗಿ ವಿಫಲವಾಗಲಿದೆ.
- ಚಾಮರಾಜ ಸವಡಿ