ಆಕಾಶ
ಅಳಿಯ, ಅನಿಷ್ಟ ಮತ್ತು ಗ್ರಹಚಾರ!
August 5, 2008 - 12:40am — hamsanandi
"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತಿರ್ಬೇಕು ಇದಂತೂ. ಆದ್ರೆ, ಏನು ಕೆಟ್ಟದಾದ್ರೂ, ಅದನ್ನ ’ಗ್ರಹಚಾರ’ - ಅಂದ್ರೆ, ಗ್ರಹಗಳ ಪ್ರಭಾವದಿಂದ ಅಂದುಬಿಡೋದೊಂದು ಕೆಟ್ಟ ರೂಢಿ ನಮ್ಮಲ್ಲಿ.
ಮುಂದೆ ಓದಿ »

ಗುರುಗ್ರಹ, ಅತಿ ಹತ್ತಿರದಲ್ಲಿ
July 10, 2008 - 4:48am — hamsanandiಇವತ್ತು ಜುಲೈ ೯, ೨೦೦೮.
ಭೂಮಿ ಮತ್ತು ಗುರುಗ್ರಹಗಳು ಅವುಗಳ ಹಾದಿಯಲ್ಲಿ ಸುತ್ತುತ್ತಿರುವಾಗ, ಅತಿ ಹತ್ತಿರಕ್ಕೆ ಬಂದಿವೆ ( ಇದಕ್ಕೆ planetary opposition ಎಂಬ ಹೆಸರಿದೆ - ಕನ್ನಡದಲ್ಲಿ ಏನು ಹೇಳುವುದೋ ತೋರಲಿಲ್ಲ).
ಹಾಗಾಗಿ, ಗುರುವು ಸೂರ್ಯ ಮುಳುಗುವ ವೇಳೆಗೆ ಹುಟ್ಟುತ್ತಾನೆ, ಹಾಗೂ ಸೂರ್ಯ ಹುಟ್ಟುವ ವೇಳೆಗೆ ಮುಳುಗುತ್ತಾನೆ. ಮುಂದೆ ಓದಿ »

ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
July 8, 2008 - 10:27pm — hamsanandiಸೂರ್ಯ ಸಿದ್ಧಾಂತ ಅನ್ನೋದು ಭಾರತದಲ್ಲಿನ ಹಳೆಯ ಖಗೋಳ ಶಾಸ್ತ್ರದ ಬಗ್ಗೆ ಬರೆದಿರುವ ಹೊತ್ತಗೆಗಳಲ್ಲೊಂದು.
ಅದರಲ್ಲಿ ಏನು ಹೇಳ್ತಾರೆ ಗೊತ್ತಾ?
ಭೂಮಿಯ ಉತ್ತರಾರ್ಧ ಗೋಳ ದೇವತೆಗಳ ಕಡೆ, ದಕ್ಷಿಣಾರ್ಧ ಗೋಳ ಅಸುರರದ್ದಂತೆ. ದೇವತೆಗಳಿಗೆ ಆರುತಿಂಗಳು ಹಗಲಾದಾಗ, ರಾಕ್ಷಸರಿಗೆ ಆರು ತಿಂಗಳು ರಾತ್ರಿ. ಮುಂದೆ ಓದಿ »

ಜಿ ಟಿ ಎನ್ ಹಾಗೂ ನೆನಪುಗಳು
June 27, 2008 - 10:26pm — hamsanandiನೆನ್ನೆ ಸಂಜೆ ಸಂಪದ ನೋಡಿದಾಗ ಕಂಡದ್ದು ಇದು.
ಇಸ್ಮಾಯಿಲ್ ಬರೆದ ಅತೀ ದುಃಖದ ಸಮಾಚಾರ.
ಜಿಟಿಎನ್ ಇನ್ನಿಲ್ಲ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನಲೇ? ಅದು ಕೇವಲ ಔಪಚಾರಿಕವಾಗುತ್ತೆ. ಅಷ್ಟೇ.
ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಎಂದಾಗ ಮೊತ್ತಮೊದಲು ಮನಸ್ಸಿಗೆ ಬರುವ ಹೆಸರೇ ಜಿಟಿನಾರಾಯಣರಾಯರದ್ದು. ಸುಧಾ ಮೊದಲಾದ ಪತ್ರಿಕೆಗಳಲ್ಲಿ ಅವರ ಹಲವು ಬರಹಗಳು ಬೆಳಕು ಕಾಣುತ್ತಿದ್ದವು.
ಆಗ ಪ್ರಕಟವಾಗುತ್ತಿದ್ದ ಕನ್ನಡ ವಿಶ್ವಕೋಶ ಸ್ವಂತಕ್ಕೆ ಕೊಳ್ಳಲು ಬೆಲೆ ಕೈಗೆಟುಕುವಂತಿರಲಿಲ್ಲ. ಲೈಬ್ರರಿಯಲ್ಲಿ ಸಿಗುವುದರ ಮಾತಂತೂ ಸ್ವಲ್ಪ ಕಷ್ಟವೇ! ಮತ್ತೆ ಐದನೇ ತರಗತಿಯವರೆಗೆ ಇಂಗ್ಲಿಷ್ ಕಲಿತಿಲ್ಲದ ಕಾರಣ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಅಂತಾಹವಂತೂ ನನಗೆ ಸ್ವಲ್ಪ ದೂರವೇ. ಇದೆಲ್ಲಾ ಸೇರಿ, ನಾನು ಜಿಟಿಎನ್ ಅವರ ಬರಹಗಳು ಎಲ್ಲಿ ಕಂಡರೂ ತುಂಬ ಆಸಕ್ತಿಯಿಂದ ಓದುತ್ತಿದ್ದೆ. ಮುಂದೆ ಓದಿ »






RSS: