ಪ್ರವಾಸ
ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.
September 28, 2008 - 11:13pm — sirisobagu ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಪೃಕೃತಿ ಪ್ರಿಯರಿಗಾಗಲಿ, ಸಮುದ್ರ ತೀರಗಳಾಗಲಿ,ದೇವಸ್ಥಾನಗಳಾಗಲೀ,
ಜಲಪಾತಗಳಾಗಲಿ ಯಾವುದೇ ಆದರೂ ಖಂಡಿತ ಪ್ರವಾಸಿಗರ ಮನತಣಿಸುವ ಜಿಲ್ಲೆ ವೈವಿದ್ಯಮಯವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಾಡುಗಳು
ಕಥೆ ಹೇಳುತ್ತವೆ. ಮೀನುಗಾರರು, ಹಾಲಕ್ಕಿಗಳು, ಕಲಾಕಾರರು ಎಲ್ಲವೂ ನೋಡುವಂತವೇ.
ನಾನಿಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ಸ್ಥಳಗಳನ್ನು ಗುರುತು ಹಾಕಿದ್ದೇನೆ. ಹತ್ತಿರದ ನಗರಗಳನ್ನೂ.
ಜಿಲ್ಲೆಗೆ ಬರುವ ಯಾರಾದರೂ ನೋಡಲೇ ಬೇಕಾದ ಸ್ಥಳಗಳು. ಮುಂದೆ ಓದಿ »

ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
September 4, 2008 - 4:25am — olnswamyಹೀಗೆ ಹೋಗಿ ಹಾಗೇ ಬಂದೆ
ಇದೊಂದು ಥರಾ ಪ್ರವಾಸ ಕಥನ. ಆಗಷ್ಟು ಈಗಷ್ಟು ಬರೆಯುತ್ತೇನೆ.
ಮನಸ್ಸು ಆಮೆಯಾಗುತ್ತಿರುವಾಗ, ವಯಸ್ಸಾಯಿತು ಎಂಬ ಅರಿವು ಮೈಯ
ಒಂದೊಂದು ಭಾಗಕ್ಕೂ ಆಗುತ್ತಿರುವಾಗ, ಏನೋ ಸಾಧಿಸಬೇಕು, ಇನ್ನೂ ಇನ್ನೂ ಸಂಪಾದಿಸಬೇಕು, ಈ ದರಿದ್ರ
ಇಂಡಿಯಾದ ನೆಲದಿಂದ ಮುಕ್ತನಾಗಿ ಆ ಯಾವುದಾದರೂ ಒಂದು ದೇಶದ ಪ್ರಜೆಯಾಗಿ ಸ್ವರ್ಗಸ್ಥನಂತೆ ಇರಬೇಕು,
ಅಥವಾ ಮಗಳ ಬಾಣಂತನ, ಮಗ ಕೊಂಡ ಹೊಸ ಮನೆಯ ಗೃಹಪ್ರವೇಶಕ್ಕೆ ಹಾಜರಿದ್ದು ಜನ್ಮ ಸಾರ್ಥಕವಾಯಿತು
ಎಂದು ಸಂಭ್ರಮಿಸಬೇಕು ಎಂಬಿತ್ಯಾದಿ ಯಾವ ಕಾರಣಗಳೂ ಇಲ್ಲದೆ--
ಕಂಡದ್ದೆಲ್ಲ ಅರ್ಥವಾಗುವಮೊದಲೇ ಅರಿವಿನ ಭಾಗವಾಗುವ ಎಳೆಯ
ಮನಸ್ಸಲ್ಲ; ಅಪ್ಪ ಅಮ್ಮ ಹೆಂಡತಿ, ನನ್ನ ಸುತ್ತಲ ಜನ, ನಾನು ಓದಿದ ಸ್ಕೂಲುಗಳು, ಕೇಳಿದ ಓದಿದ
ಕಥೆಗಳು ಎಲ್ಲರೂ ಎಲ್ಲವೂ ನನ್ನ ಭಾಷೆಯಲ್ಲಿ ಕೆತ್ತಿ ನಿಲ್ಲಿಸಿರುವ ವಿಗ್ರಹಗಳೇ ಮನಸ್ಸಿನ ತುಂಬ
ಕಿಕ್ಕಿರಿದಿವೆ; ಕೆಲವು ಚೆಲುವಾಗಿವೆ, ಕೆಲವು ವಿಕಾರವಾಗಿವೆ, ಇನ್ನು ಕೆಲವು ವಿಕಾರವಾಗಿವೆ;
ಅವನ್ನು ಪೂಜಿಸಲಾರದೆ, ವಿಸರ್ಜಿಸಲಾರದೆ, ಯಾಕೆ ಅವನ್ನೆಲ್ಲ ಇಟ್ಟುಕೊಂಡಿದ್ದೇನೆ ಎಂದು ಚಡಪದಿಸುತ್ತಾ
ನನಗೇ ವಿವರಿಸಿಕೊಳ್ಳುತ್ತಾ ಇರುವಾಗ ಬೇರೆ ದೇಶದ, ಬೇರೆ ಭಾಷೆಗಳ, ಬೇರೆ ಸಮಾಜಗಳ, ಬೇರೆ ಜನಗಳ,
ಬೇರೆ ಮನೆಗಳ ಒಳಹೊಕ್ಕು ಬಂದರೇನು ಬಂದೀತು; ನನ್ನ ವೃತ್ತಿಯಲ್ಲಿ ದುಡಿದು ಉಳಿಸಿದ್ದರಲ್ಲಿ
ಮುಕ್ಕಾಲು ಹಣ ಖರ್ಚುಮಾಡಿಕೊಳ್ಳುವುದು ಅವಿವೇಕವೋ ಹೇಗೆ-- ಮುಂದೆ ಓದಿ »

ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
July 22, 2008 - 7:50pm — keerthi2kiranಸಂಪದದಲ್ಲಿ ಒಮ್ಮೆ ಜಯಲಕ್ಷ್ಮಿಯವರು ಟ್ರೆಕಿಂಗ್ ಹೋಗೋದಕ್ಕೆ ಏನೇನು ಬೇಕಾಗತ್ತೆ ಅಂತ ಕೇಳಿದ್ದರು. ಇಲ್ಲಿ ಸುಮ್ನೆ ಟ್ರೆಕಿಂಗ್ ಹೋಗಕ್ಕೆ ಏನೇನು ಕಟ್ಕೋ ಬೇಕು ಅಂತ ನನ್ನ ಅನುಭವದಿಂದ ಬರೀತಿದೀನಿ. ಈ ಬರಹ ಪಶ್ಚಿಮ ಘಟ್ಟಗಳಲ್ಲಿ ಟ್ರೆಕಿಂಗ್ ಹೋಗಲು ಮಾತ್ರ. ಹಿಮಾಲಯಕ್ಕೆ ಇನ್ನೂ ಹೆಚ್ಚಿನ ಸಿದ್ಧತೆ ಬೇಕಾಗತ್ತೆ. ಮುಂದೆ ಓದಿ »

ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ
April 14, 2008 - 7:52pm — Prashanth H Jಮಲ್ಲಿಕಾ ಮಂದಿರದಲ್ಲಿ ತಿಂಡಿ, ಕೇವಲ ಇಡ್ಲಿಯ ಬಣ್ಣ ಹೋಟೆಲಿನ ಹೆಸರಿಗೆ ಹೋಲುತ್ತಿತ್ತು. ಹೋಟೆಲ್ ಮಾಣಿಗೆ ಕುದುರೆಮುಖಕ್ಕೆ ಹೋಗುವ ದಾರಿ ಕೇಳಿದೆ,
"ಸೀದಾ, ಲೆಫ್ಟ್, ರೈಟ್, ಸೀದಾ". ಅಂದ.
ಹತ್ತು-ಹದಿನೈದು ಕಿಲೋಮೀಟರ್ ಹೋಗುತ್ತಲೇ ಮತ್ತೆ ಪೋಲೀಸರ ಕಾಟ ಶುರುವಾಯಿತು.
ಪೋಲೀಸಪ್ಪ -
ಎಲ್ಲಿಗೆ?
ನನಗೆ ಹಿಂದಿನ ದಿನ ಇವರಿಂದ ಸೂರ್ಯಾಸ್ತ ಮಿಸ್ಸ್ ಆಗಿದ್ದರಿಂದಲೋ ಏನೋ, ಮುಂದೆ ಓದಿ »

- Prashanth H J ರವರ ಬ್ಲಾಗ್
- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: