ಪ್ರೇಮ
ಪುಷ್ಪಕ ವಿಮಾನದ ಚೆಲುವೆ
October 8, 2008 - 4:14pm — Rakesh Shettyಮುಂಜಾನೆಯ ಮಂಜಿನಲಿ, ಚುಮು ಚುಮು ಚಳಿಯಲಿ
ಕುಳಿತಿದ್ದೆ ನಾ ಕಬ್ಬನ್ ಪಾರ್ಕಿನ ಬೆಂಚುಗಲ್ಲಿನ ಮೇಲೆ
ಹಕ್ಕಿಗಳ ಕಲರವದ ಗಾನ ಕಿವಿಯಲ್ಲಿ ಗುಯ್ಯ್ ಗುಡುತ್ತಿತ್ತು
ಆ ಚಿಲಿ ಪಿಲಿ ಗಾನದ ನಡುವೆಯೂ ಅದೆಂತದೋ ದಿವ್ಯ ಮೌನ
ತಂಗಾಳಿಯು ನನ್ನೆಡೆಗೆ ತೇಲಿ ಬಂದ ಅನುಭವ
ಕಣ್ಣೆತ್ತಿ ನೋಡಿದರೆ ಎದುರಿಗೆ ನಿಂತಿದ್ದಳು
ಮುಂಜಾನೆಯ ಮಂಜಿನಂತೆ ಕಂಗೊಳಿಸುತಿದ್ದಳು ಮುಂದೆ ಓದಿ »

- Rakesh Shetty ರವರ ಬ್ಲಾಗ್
- Login or register to post comments
- 150 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಅವಳ ಕಣ್ಣು
October 3, 2008 - 12:34pm — Rakesh Shettyದೂರದಿಂದಲೇ ಸೆಳೆದಿದ್ದವು ನನ್ನನ್ನು
ಅವಳ ಚೆಲುವ ನೀಲಿ ಕಣ್ಣುಗಳು.
ನೋಡು ನೋಡುತಿದ್ದಂತೆ ಬಂದೆ ಬಿಟ್ಟಳು ಹತ್ತಿರ
ಅವಳ ನೋಡಿದ ನನ್ನಲ್ಲಿ ಇರಲಿಲ್ಲ ಯಾವುದೇ ಉತ್ತರ.
ಮರುಕ್ಷಣವೇ ಏನೋ ಕಳೆದುಕೊಂಡ ಅನುಭವ ಮನದಲ್ಲಿ,
ಕಾಣೆಯಾಗಿದ್ದು ನನ್ನ 'ಪ್ರೀತಿಯ ಹೃದಯ'ವಾ ?
ಎಂದು ಯೋಚಿಸುವಷ್ಟರಲ್ಲಿ ಬಂದೆ ಬಿಟ್ಟಿತ್ತು ನನ್ನ ನಿಲ್ದಾಣ
ಇಳಿದು ಜೇಬು ತಡವಿದಾಗಲೇ ತಿಳಿದದ್ದು ಮುಂದೆ ಓದಿ »

- Rakesh Shetty ರವರ ಬ್ಲಾಗ್
- Login or register to post comments
- 142 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನಾನು ನನ್ನ ಪ್ರಿಯೆ
September 29, 2008 - 5:26pm — Rakesh Shettyನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ
ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ.
ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ.
ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ
ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ.
ಪ್ರೀತಿಯೆಂಬುದು '೨ ಹೃದಯಗಳ ವಿಷಯ' ಎಂದು ಹೇಳುತ್ತಾ
ನೀನು '೩ ನೆ ಹೃದಯ'ವ ಸದ್ದಿಲ್ಲದೆ ಹುಡುಕಿಕೊಂಡಿದ್ದೆ! ಮುಂದೆ ಓದಿ »

ಮುತ್ತು
September 25, 2008 - 5:48pm — meesehaidaಬಾರೇ ಗೆಳತಿ ತುಟಿಗಳ ಮೇಲೆ
ಒತ್ತುವೆ ಮುತ್ತಿನ ಮುದ್ರೆ
ಏನು ಮಾಡಿದರೂ ಬರುತಲೇ ಇಲ್ಲ
ರಾತ್ರಿಯೆಲ್ಲ ನಿದ್ರೆ
ಮಂಚಕೆ ಹಾರಿ ಮಧುವನು ಹೀರಿ
ಸೂರೆಗೈಯ್ಯೋಣ ಬಾರೆ
ಹಾಸಿಗೆ ಕಾದಿದೆ ಹೂಗಳ ಹಾಸಿದೆ
ಹುಡಿಗಿ ತಡವೇಕೆ ಬಾರೆ
ಕರೆಯುವೆ ಮುತ್ತಿನ ಮಳೆಯ
ತಡಮಾಡದೆ ನೀ ಬಾರೆ.

ನನ್ನೊಲವಿಗೆ....
August 25, 2008 - 9:12pm — ಪ್ರಶಾಂತ ಎಂ.ಸಿ.ನಾ ಚಿಗುರಾಗುವೆ
ಎನ್ನೊಳಗೆ ಲೀನವಾಗುವ
ಮುಂಜಾವದ ಮಂಜು
ನೀನಾಗಿ ಬರುವೆಯೆಂದು...
ನಾ ಹೂವಾಗುವೆ
ಈ ಪ್ರೀತಿ ಮಧುವ
ಹೀರ ಬರುವ ತುಂಬಿ
ನೀನಾಗಿ ಬರುವೆಯೆಂದು....
ನಾ ಹಣ್ಣಾಗುವೆ
ಈ ರುಚಿಯ ಸವಿಯ ಬರುವ
ಹೆಣ್ಣು ಗಿಳಿ
ನೀನಾಗಿ ಬರುವೆಯೆಂದು...
ನಾ ಮರವಾಗುವೆ
ಎನ್ನಪ್ಪಿ ಬೆಳೆವ
ಲಲಿತ ಲತೆ
ನೀನಾಗಿ ಬರುವೆಯೆಂದು...
ನಾ ಮರದ ಕೊಳಲಾಗುವೆ
ಒಳಗಣ್ಣಿನಿಂದುಸುರಿ ಬರುವ ಮುಂದೆ ಓದಿ »


RSS: