ಜ್ಞಾನವಾಹಿನಿ
ಅಳಿಯ, ಅನಿಷ್ಟ ಮತ್ತು ಗ್ರಹಚಾರ!
August 5, 2008 - 12:40am — hamsanandi
"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತಿರ್ಬೇಕು ಇದಂತೂ. ಆದ್ರೆ, ಏನು ಕೆಟ್ಟದಾದ್ರೂ, ಅದನ್ನ ’ಗ್ರಹಚಾರ’ - ಅಂದ್ರೆ, ಗ್ರಹಗಳ ಪ್ರಭಾವದಿಂದ ಅಂದುಬಿಡೋದೊಂದು ಕೆಟ್ಟ ರೂಢಿ ನಮ್ಮಲ್ಲಿ.
ಮುಂದೆ ಓದಿ »

ಮರದಂತಹ ಮನಸ್ಸು
August 2, 2008 - 2:55am — hamsanandi
ನೆರೆನಂಬಿದವರಿಗೆ ನೆರಳನ್ನೀಯುತ
ಬಿಸಿಲಲಿ ತಾವೇ ನವೆಯುತಲಿ
ತನಿವಣ್ಣುಗಳನೆಲ್ಲ ಇತರರಿಗೀಯುವ
ಮರಗಳಂತಲ್ಲವೆ ಅಗ್ಗಳರು?
ಸಂಸ್ಕೃತ ಮೂಲ:
ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ|
ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ||
-ಹಂಸಾನಂದಿ

ಪೂರ್ಣ ಸೂರ್ಯಗ್ರಹಣ- ಚೈನಾದಿಂದ ನೇರ ಪ್ರಸಾರ(ದ ಮುದ್ರಿಕೆ)
August 1, 2008 - 8:32pm — hamsanandiಇವತ್ತಿನ ಗ್ರಹಣದ ನೇರ ಪ್ರಸಾರದ ರೆಕಾರ್ಡಿಂಗ್ ಗಾಗಿ ಕೆಳಗಿನ ಕೊಂಡಿಯನ್ನು ಚಿಟಕಿಸಿ:
http://www.exploratorium.edu/eclipse/2008/index.html
ಕೃಪೆ: ನಾಸಾ ಗ್ರಹಣ ಪುಟ ಮತ್ತು ಎಕ್ಸ್‍ಪ್ಲೊರೇಟೇರಿಯಮ್
http://sunearthday.gsfc.nasa.gov/2008eclipse/
-ಹಂಸಾನಂದಿ

ಅರಿತವರ ತೆರ
July 31, 2008 - 3:34am — hamsanandi
ಕಲಿತವರ ದುಡಿಮೆಯನು
ಕಲಿತವರೇ ಬಲ್ಲರು.
ಹೆರದವಳು ಅರಿಯುವಳೆ
ಹೆರಿಗೆ ನೋವನ್ನು?
(ಸಂಸ್ಕೃತದಿಂದ ಅನುವಾದ)
ಮೂಲ ಹೀಗಿದೆ:
ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ
ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ
-ಹಂಸಾನಂದಿ





RSS: