ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಸಂಗೀತ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

October 7, 2008 - 9:33pm — hamsanandi

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ,ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು.ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ. ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು, ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ. ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ. ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ, ಕೊಳದಪ್ಪಲೆಯೋ, ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು. ಹಾಗೇನಾದ್ರೂ ಕೊಟ್ಟಾಗ, ನಾನೂ ಕಲಾಯದ ಮನುಷ್ಯ ತವರ ಕಾಸೋದು, ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ. ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು.  ಮುಂದೆ ಓದಿ »

  • ಅರಸ
  • ಒಡೆಯರು
  • ದಸರಾ
  • ನವರಾತ್ರಿ
  • ನಾಗವಲ್ಲಿ
  • ಬನ್ನಿ
  • ಮಾರ್ನೋಮಿ
  • ಮೈಸೂರು
  • ಸಂಗೀತ
  • ಹರಟೆ
~.~
  • hamsanandi ರವರ ಬ್ಲಾಗ್
  • 2 ಪ್ರತಿಕ್ರಿಯೆಗಳು
  • 80 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

October 3, 2008 - 9:42pm — hamsanandi

 ಮುಂದೆ ಓದಿ »

  • ಕಲ್ಯಾಣಿ
  • ಗಣೇಶ್
  • ದಸರಾ
  • ನವರಾತ್ರಿ
  • ನಾಗವಲ್ಲಿ
  • ರಾಗ
  • ರಾಗಮಾಲಿಕೆ
  • ಶತಾಧಾನಿ
  • ಸಂಗೀತ
  • ಹಬ್ಬ
~.~
  • hamsanandi ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 115 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

October 2, 2008 - 10:07pm — hamsanandi

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು!

ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!!

..

..

..

..

..

(ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!)

ದೇವಿಯ ಬೇರೆ ಹೆಸರುಗಳಾದ ಪಾರ್ವತಿ,ಶೈಲಜಾ,ಶಂಕರಿ,ಕಾಳಿ, ದುರ್ಗಾ,ಗೌರಿ ಮೀನಾಕ್ಷಿ,ವಿಶಾಲಾಕ್ಷಿ ಇಂತಹವೆಲ್ಲ ಒಂದೋ ದೇವಿಯು ಪರ್ವತರಾಜನ ಮಗಳು, ಶಿವನ ಹೆಂಡತಿ ಎನ್ನುವುದನ್ನೋ, ಅಥವಾ ಅವಳ ಬಣ್ಣವನ್ನೋ, ಕಣ್ಣನ್ನೋ ವರ್ಣಿಸುತ್ತವೆ. ಆದರೆ ಅವಳ ಎಲ್ಲ ಗುಣಗಳನ್ನೂ ಒಟ್ಟುಸೇರಿಸುವಂತಹ ಒಂದು ಹೆಸರಿದ್ದರೆ, ಅದು ಲಲಿತಾ ಎಂಬ ಹೆಸರೇ ಆಗಿರಬೇಕು.  ಮುಂದೆ ಓದಿ »

  • ಅನುವಾದ
  • ಕರ್ನಾಟಕ ಸಂಗೀತ
  • ದಸರಾ
  • ನವರಾತ್ರಿ
  • ಮೈಸೂರು
  • ಲಲಿತ
  • ಲಲಿತ ಪ್ರಬಂಧ
  • ಲಲಿತಾ
  • ಶಾಮಾಶಾಸ್ತ್ರ್ರಿ
  • ಸಂಗೀತ
~.~
  • hamsanandi ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 167 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಏನೀ ಮಹಾನಂದವೇ? ಓ ಭಾಮಿನಿ!

September 26, 2008 - 5:24am — hamsanandi

ಕೆಲವು ದಿನಗಳ ಹಿಂದೆ 'ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?

ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್‍ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.

ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ.  ಮುಂದೆ ಓದಿ »

  • ಕರ್ನಾಟಕ ಸಂಗೀತ
  • ಡಿವಿಜಿ
  • ತ್ಯಾಗರಾಜ
  • ನಾಗವಲ್ಲಿ
  • ಬಾಲಮುರಳಿಕೃಷ್ಣ
  • ವಿದ್ಯಾಭೂಷಣ
  • ಸಂಗೀತ
  • ಹಿಂದೋಳ
~.~
  • hamsanandi ರವರ ಬ್ಲಾಗ್
  • 10 ಪ್ರತಿಕ್ರಿಯೆಗಳು
  • 283 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಧರ್ಮವೆ ಜಯವೆಂಬ ದಿವ್ಯ ಮಂತ್ರ

September 24, 2008 - 6:01am — hamsanandi

 

ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ

ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು
ಮೋಸ ಮಾಡುವವನ ಹೆಸರ ಮಗನಿಗಿಡಬೇಕು ! 

   ಮುಂದೆ ಓದಿ »

  • ಅನುವಾದ
  • ಉತ್ತರ ಕ್ಯಾಲಿಫೋರ್ನಿಯಾ ಕನ್ಡಡ ಕೂಟ
  • ದಿನ-ಪ್ರತಿದಿನ
  • ಪ್ರಚಲಿತ
  • ರಾಘವನ್ ಮಣಿಯನ್
  • ಸಂಗೀತ
~.~
  • hamsanandi ರವರ ಬ್ಲಾಗ್
  • 6 ಪ್ರತಿಕ್ರಿಯೆಗಳು
  • 223 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
1234567ಮುಂದಿನ ›ಕೊನೆಯ »
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:10pm
  • Deeparavishankar
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:01pm
  • savithasr
    ಉ: ಸ್ವಾತಂತ್ರ್ಯ ಮತ್ತು ಸ್ವರಾಜ್ಯ
    October 8, 2008 - 2:51pm
  • mahesha
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:37pm
  • venkatesh
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:17pm
  • girish.rajanal
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:08pm
  • Deeparavishankar
    ಉ: ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
    October 8, 2008 - 1:59pm
  • venkatesh
    ಉ: ವಿಮಾನದಿಂದ ಕೆಳಗೆ ಕಾಣುವ ಚಿತ್ರ !
    October 8, 2008 - 1:55pm
  • Deeparavishankar
    ಉ: ನನ್ನ ಮನಸ್ಸಿನ ಅಜ್ಞಾನ
    October 8, 2008 - 1:55pm
  • Deeparavishankar
    ಉ: ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
    October 8, 2008 - 1:50pm
ಇನ್ನಷ್ಟು


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator