ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಬಾಲ್ಯ

ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

September 12, 2008 - 1:43am — hemashree

ಹೆಸರು ಕೇಳ್ದಾಗ್ಲೇ ನಂಗೆ ನಗು ಬರುತ್ತೆ. ಯಾಕಂದ್ರೆ ಅದ್ರ ಹಿಂದಿರೋ ಕತೆ ನಂಗೆ ಗೊತ್ತಲ್ವಾ. ನಿಮ್ಗೂ ಹೇಳ್ತೀನಿ.

ನಾನು ಒಂದು-ಎರಡು ವರ್ಷದ ಚಿಕ್ಕ - ಪುಟ್ಟ - ತುಂಟ ಹುಡುಗಿಯಾಗಿದ್ದಾಗಿನ ಕತೆ. ನಂಗೆ ಇದು ನಿಜಾನಾ ಅಂತ ನೆನಪಿಲ್ಲ. ಆದ್ರೆ ಅಮ್ಮ ಕೆಲವೊಮ್ಮೆ ನೆನಪಿಸ್ತಾರೆ.

1979-80ರ ಹೊತ್ತಿಗೆ ನಾವಿದ್ದದ್ದು ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ. ಅದು ನನ್ನ ದೊಡ್ಡಮ್ಮನ ಮನೆಗೂ ಹತ್ರ. ದೊಡ್ಡಮ್ಮ ಅಂದ್ರೆ ನನ್ನ ಅಜ್ಜಿ. ಯಾಕೆ ಅಜ್ಜಿಯನ್ನು ದೊಡ್ಡಮ್ಮ ಅಂತ ಕರೀತಿದ್ನೋ ಗೊತ್ತಿಲ್ಲ. ಬಹುಶಃ, ಆಕೆ ಆಗ ಅಜ್ಜಿ ತರಹ ಕಾಣಿಸ್ತಾ ಇರ್ಲಿಲ್ವೇನೋ. ದೊಡ್ಡಮ್ಮನ ಮನೆ ಕತೆಗಳೂ ಚೆನ್ನಾಗಿವೆ. ಇನ್ನೊಂದ್ಸಲ ಹೇಳ್ತೀನಿ. ಈಗ ಪತ ಪತ ಗುಡ್ಡೆ ಹತ್ತೋಣ.

ನಮ್ಮ ಹಳೇ ಮನೆ ಇದ್ದ ಜಾಗದಿಂದ ಸ್ವಲ್ಪವೇ ದೂರದಲ್ಲಿ ಈ ಪತ ಪತ ಗುಡ್ಡೆ ಇದ್ದದ್ದು. ಗುಡ್ಡ ಅಂದ್ರೆ ಅಂಥ ದೊಡ್ಡ ಗುಡ್ಡೆ ಏನಲ್ಲ. ಈಗ ಏನಾದ್ರೂ ಈ ಗುಡ್ಡೆ ನೋಡಿದ್ರೆ.... ಇದಾ.... ಗುಡ್ಡೆ ಅಂತ ಅನ್ನಿಸುತ್ತೆ. 25-30 ವರ್ಷಗಳ ಹಿಂದೆ ಅಲ್ಲಿ ಮನೇನೂ ಇರ್ಲಿಲ್ಲ. ರಸ್ತೆ ಕೂಡಾ ಇರ್ಲಿಲ್ಲ. ಖಾಲಿ ಜಾಗ ಇತ್ತು. ಈಗ ರಾಷ್ಟ್ರೀಯ ಹೆದ್ದಾರಿ 17 ಪಕ್ಕದಲ್ಲೇ ಇದೆ.  ಮುಂದೆ ಓದಿ »

  • ಅನುಭವ ಕಥನ
  • ಬಾಲ್ಯ
~.~
  • hemashree ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 204 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನೆನಪು ಚಿಗುರುವ ಸಮಯ

May 26, 2008 - 12:29pm — Chamaraj

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು.

ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲನ. ಅದು ರಂಗಸ್ಥಳವೇನೋ ಎಂಬಂತೆ ಮಳೆ ಹನಿಗಳು ಉಲ್ಲಾಸದಿಂದ ಸಿಡಿದು, ಚದುರಿ ಮಾಯವಾಗುತ್ತಿದ್ದ ಅಪೂರ್ವ ದೃಶ್ಯವನ್ನು ಗೌರಿ ತನ್ನ ಪುಟ್ಟ ಮನಸ್ಸಿನ ಕುತೂಹಲದಿಂದ ನೋಡಿದಳು.

ನನಗೆ ಊರು ನೆನಪಾಯಿತು.

ಮೇ ತಿಂಗಳಿನ ಈ ದಿನಗಳಲ್ಲಿ ಕೊಪ್ಪಳ ತಾಲ್ಲೂಕಿನ ನನ್ನೂರು ಅಳವಂಡಿಯಲ್ಲಿ ಕಡು ಬೇಸಿಗೆ. ಫೆಬ್ರುವರಿ ತಿಂಗಳಿಂದಲೇ ಚುಚ್ಚತೊಡಗುವ ಬಿಸಿಲಿಗೆ ಮಾರ್ಚ್‌ ತಿಂಗಳ ಹೊತ್ತಿಗೆ ತುಂಬು ಪ್ರಾಯ. ಏಪ್ರಿಲ್‌-ಮೇ ತಿಂಗಳಲ್ಲಂತೂ ಕಡು ಬೇಸಿಗೆ. ಎಂಥಾ ಮಳೆಯನ್ನೂ ಮೊಗೆದು ಕುಡಿದು ಮತ್ತೆ ಒಣಗಿ ನಿಲ್ಲುವ ಬಿಸಿಲ ಬಯಲುಗಳು. ಕಾಲಿನ ಮೀನಖಂಡದವರೆಗೂ ನುಂಗಬಲ್ಲ, ಕಪ್ಪು ಮಣ್ಣಿನ ಬಿರುಕುಗಳು. ಮಸಾರಿ (ಕೆಂಪು) ಹೊಲದ ಬೆಣಚುಕಲ್ಲುಗಳು ಕಾಯ್ದು ಹೆಂಚಿನಂತೆ ಧಗಿಸುತ್ತವೆ. ನಮ್ಮ ಬಡಬಾಲ್ಯದ ಬರಿಗಾಲನ್ನು ಅವು ಅದೆಷ್ಟು ಸಾರಿ ಸುಟ್ಟು ಬೊಬ್ಬೆ ಏಳಿಸಿದ್ದವೋ!  ಮುಂದೆ ಓದಿ »

  • ಬಾಲ್ಯ
  • ಬಿಸಿಲು
  • ಬೆಂಗಳೂರು
  • ಮಳೆ
  • ವೈಯಕ್ತಿಕ
~.~
  • Chamaraj ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 278 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಬಾಲ್ಯದ ನಂಟಿನ ನೆನಪು

February 28, 2008 - 2:38pm — Sunil Jayaprakash

ಈ ದಿನ ಅದೇಕೋ ಆಫೀಸಿಗೆ ಬರುವಾಗ ಜನರೇ ಇಲ್ಲ ಅನಿಸಿತು. ಸಾಗುತ್ತಾ ಮುನ್ನಡೆದೆ. ಒಂದು ಕಡೆ ಸಿಗ್ನಲಿನಲ್ಲಿ ನಿಂತಿರುವಾಗ, ಠಪ್ಪ್ ಅಂತ ತಲೆಗೇರಿಸಿದ್ದ ಹೆಲ್ಮೆಟ್ಟಿನ ಮೇಲೆ ಅದೇನೋ ಬಿತ್ತು. ತಲೆ ಎತ್ತಿನೋಡಿದೆ ತುಂಬಾ ಸಂತೋಷವಾಯಿತು. ನನ್ನ ಬಾಲ್ಯದಲ್ಲಿ ತುಂಬಾ ಅಂದರೆ ತುಂಬಾ ಅಂಟಿಕೊಂಡಿದ್ದ ಮರ ಇದು. ನನಗೆ ಟ್ರಾಫಿಕ್ಕಿನಲ್ಲಿದ್ದಷ್ಟು ಹೊತ್ತು ಹಿನ್ನೆಪ್ಪು(ನಾಸ್ಟಾಲ್ಜಿಯಾ) ಕಾಡಹತ್ತಿತು. ಕೈಲಿದ್ದ ಮೊಬೈಲಿನ ಕ್ಯಾಮೆರಾದಲ್ಲಿ ಮರದ ಒರೆಯಂಚುಗಳನ್ನು ಕ್ಲಿಕ್ಕಿದೆ.  ಮುಂದೆ ಓದಿ »

  • ಬಾಲ್ಯ
~.~
  • Sunil Jayaprakash ರವರ ಬ್ಲಾಗ್
  • 7 ಪ್ರತಿಕ್ರಿಯೆಗಳು
  • 365 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ತುಡಿತ

January 4, 2008 - 3:51pm — arunasirigere

ತುಡಿತ

ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು?
ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು.
ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ?
ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ
ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು...

ಅಕ್ಕ, ನೆನಪಿದಯಾ, ನಾವಿಬ್ಬರು ಅಪ್ಪನಿಂದ ಒದೆ ತಿಂದದ್ದು,  ಮುಂದೆ ಓದಿ »

  • ಕನ್ನಡ
  • ಕವನ
  • ತುಡಿತ
  • ಬಾಲ್ಯ
~.~
  • arunasirigere ರವರ ಬ್ಲಾಗ್
  • Login or register to post comments
  • 166 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 14, 2008 - 9:43am
  • mahesha
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 14, 2008 - 9:42am
  • savithasr
    ಉ: ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
    October 14, 2008 - 9:33am
  • roshan_netla
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 14, 2008 - 9:22am
  • ASHOKKUMAR
    ಉ: ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
    October 14, 2008 - 9:13am
  • anil.ramesh
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 14, 2008 - 8:51am
  • savithasr
    ಉ: ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
    October 14, 2008 - 8:17am
  • mahesha
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 14, 2008 - 8:14am
  • mahesha
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 14, 2008 - 8:12am
  • savithasr
    ಉ: ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
    October 14, 2008 - 8:03am
ಇನ್ನಷ್ಟು


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator