ಕರಿಸಿರಿಯಾನ

ಕರಿಸಿರಿಯಾನ

ಪುಸ್ತಕದ ಲೇಖಕ/ಕವಿಯ ಹೆಸರು
ಕೇ ಎನ್ ಗಣೇಶಯ್ಯ
ಪ್ರಕಾಶಕರು
ಸಾಹಿತ್ಯ ಭ೦ಡಾರ, ಬಳೇಪೇಟೆ, ಬೆ೦ಗಳೂರು - 560 053
ಪುಸ್ತಕದ ಬೆಲೆ
156

ಸುಮಾರು ಎರಡು ವಾರಗಳಿಂದ ಓದುತಿದ್ದ, ಕೇ ಎನ್ ಗಣೇಶಯ್ಯರವರ 'ಕರಿಸಿರಿಯಾನ' ಎನ್ನುವ ಪುಸ್ತಕವನ್ನು ಇಂದು ಓದಿ ಮುಗಿಸಿದೆ. ಇದೊಂದು ಐತಿಹಾಸಿಕ ಸುಂದರ ಕಾದಂಬರಿ.  ೧೫೬೫ರ ರಕ್ಕಸತಂಗಡಿ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಸೋತ ನಂತರ, ಅಳಿಯ ರಾಮರಾಯನ ತಮ್ಮ ತಿರುಮಲನು ವಿಜಯನಗರ ಸಾಮ್ರಾಜ್ಯದ ಖಜಾನೆಯಲ್ಲಿದ್ದ ಸಂಪೂರ್ಣ ನಿಧಿಯನ್ನೆಲ್ಲ ಸುಮಾರು ೧೫೦೦ ಆನೆಗಳಲ್ಲಿ ಸಾಗಿಸುತ್ತಾನೆ. ಆ ನಿಧಿ ವಿಜಯನಗರವನ್ನು ಬಿಟ್ಟ ಮೇಲೆ ಎಲ್ಲಿ ಹೋಯಿತು? ತಿರುಪತಿ ಸೇರಿತೆ? ಅಥವಾ ವಿಜಯನಗರ ಸಾಮ್ರಾಜ್ಯದ ಎರಡನೆಯ ರಾಜಧನಿಯಾದ ಪೆನುಕೊಂಡವನ್ನು ಸೇರಿತೇ? ಅಥವಾ ಚಂದ್ರಗಿರಿಯನ್ನು ಸೇರಿತೇ? ಅಥವಾ ಯಾವುದೋ ಕಳ್ಳ ಕಾಕರರ ಪಾಲಾಯಿತೇ? ಅಥವಾ ವಿರೋಧಿಗಳ ಪಾಲಾಯಿತೇ? ತಿರುಪತಿ ಏಕೆ ಅಷ್ಟೊಂದು ಶ್ರೀಮಂತ ದೇವಸ್ಥಾನವಾಯಿತು? ವಿಜಯನಗರ ದೊರೆ ಕ್ರಷ್ಣದೇವರಾಯನ ಮಾತ್ರ್ಭ ಭಾಷೆ ಯಾವುದು? ತೆಲುಗೇ? ತೆಲುಗುಅಲ್ಲದಿದ್ದರೆ ಏಕೆ ತೆಲುಗುನಿಲ್ಲಿ ತನ್ನ ಕೃತಿಗಳನ್ನು ರಚಿಸಿದ? ವಿಜಯನಗರದ ರಾಜಧಾನಿಯಾದ ಹಂಪಿಯ ಕಟ್ಟಡಗಳ ವಿನ್ಯಾಸಗಳಿಗು ಖಗೋಳ ವಿಜ್ನಾನಕ್ಕೂ ಏನಾದರೂ ಸಂಭಂದವಿತ್ತೇ? ಹೀಗೆ ಹಲವಾರು ಐತಿಹಾಸಿಕ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಕೊಳ್ಳಬಹುದು.  

 

ಇಂತಹ ಸುಂದರವಾದ ಕಾದಂಬರಿಯನ್ನು ಕನ್ನಡಕ್ಕೆ ಕೊಟ್ಟ ಕೇ ಎನ್ ಗಣೇಶಯ್ಯರನ್ನು ಎಷ್ಟು ಹೊಗಳಿದರು ಸಾಲದು. ಈ ಪುಸ್ತಕವನ್ನು ಓದದೇ ಇದ್ದವರು ಈ ಕಾದಂಬರಿ ಸಿಕ್ಕಲ್ಲಿ ಒಮ್ಮೆ ಕೊಂಡು ಓದಿ.